Short News

'ಜಾನಿ' ಸೆಟ್ ನಲ್ಲಿ ವಿಜಿ ಮತ್ತು ರಂಗಾಯಣ ರಘು, ರಚಿತಾ ರಾಮ್!

'ಜಾನಿ' ಸೆಟ್ ನಲ್ಲಿ ವಿಜಿ ಮತ್ತು ರಂಗಾಯಣ ರಘು, ರಚಿತಾ ರಾಮ್!

ಕನಕ ಚಿತ್ರ ಮುಗಿಸಿರುವ ದುನಿಯಾ ವಿಜಯ್ ಮಾತ್ರ ಸೈಲಾಂಟ್ ಆಗಿ 'ಜಾನಿ ಜಾನಿ ಎಸ್ ಪಪ್ಪಾ' ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ.
ಪ್ರೀತಮ್ ಗುಬ್ಬಿ ನಿರ್ದೇಶನ ಮಾಡುತ್ತಿರುವ 'ಜಾನಿ ಜಾನಿ ಎಸ್ ಪಪ್ಪಾ' ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ದುನಿಯಾ ವಿಜಯ್, ರಂಗಾಯಣ ರಘು ಶೂಟಿಂಗ್ ನಲ್ಲಿ ಭಾಗವಹಿಸಿದ್ದಾರೆ. ಇಬ್ಬರು ಶೂಟಿಂಗ್ ನಲ್ಲಿರುವ ಫೋಟೋ ಈಗ ಹರಿದಾಡುತ್ತಿದೆ. ಇನ್ನು ರಚಿತಾ ರಾಮ್ ಈ ಚಿತ್ರದ ನಾಯಕಿಯಾಗಿದ್ದು,ಶೂಟಿಂಗ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಬೆಂಗಳೂರು-ಮಂಗಳೂರು ರೈಲು ಸಂಚಾರ ಮಾರ್ಗ ಬದಲಾವಣೆ

ಬೆಂಗಳೂರು-ಮಂಗಳೂರು ರೈಲು ಸಂಚಾರ ಮಾರ್ಗ ಬದಲಾವಣೆ

ಬೆಂಗಳೂರು-ಕಣ್ಣೂರು ಹಾಗೂ ಬೆಂಗಳೂರು-ಕಾರವಾರ ರೈಲಿನ ಮಾರ್ಗ ಬದಲಾವಣೆಯಾಗಿದೆ. ಶ್ರವಣಬೆಳಗೊಳ ಮಾರ್ಗವಾಗಿ ರೈಲು ಸಂಚಾರ ನಡೆಸಲಿದೆ. ಯಶವಂತಪುರ-ಶ್ರವಣಬೆಳಗೊಳ ಮಾರ್ಗ ಸಿದ್ಧಗೊಂಡಿದ್ದು 2018ರ ಫೆಬ್ರವರಿ 10ರಿಂದ ಈ ಮಾರ್ಗದಲ್ಲಿ ಸಂಚಾರ ನಡೆಸಲಿದೆ ಎಂದು ರೈಲ್ವೆ ಇಲಾಖೆಯ ಪ್ರಕಟಣೆ ತಿಳಿಸಿದೆ.
ಬೆಂಗಳೂರು-ಕಣ್ಣೂರು ಹಾಗೂ ಬೆಂಗಳೂರು-ಕಾರವಾರ ರೈಲು ವಾರದಲ್ಲಿ 4 ದಿನ ಯಶವಂತಪುರ-ಶ್ರವಣಬೆಳಗೊಳ ಹಾಗೂ ವಾರದಲ್ಲಿ ಮೂರು ದಿನ ಮೈಸೂರು ಮಾರ್ಗದಲ್ಲಿ ಸಂಚಾರ ನಡೆಸಲಿದೆ.
2018ರ ಫೆಬ್ರವರಿಯಲ್ಲಿ ಬೆಂಗಳೂರು-ಶ್ರವಣಬೆಳಗೊಳ-ಮಂಗಳೂರು ರೈಲು ಸಂಚಾರ ಆರಂಭವಾಗಲಿದೆ.

2017 ನೇ ವಿಶ್ವಸುಂದರಿಯಾಗಿ ಮಾನುಷಿ  ಛಿಲ್ಲಾರ್ , 17 ವರ್ಷಗಳ ಬಳಿಕ ಭಾರತಕ್ಕೆ ಒಲಿದ ಗರಿ

2017 ನೇ ವಿಶ್ವಸುಂದರಿಯಾಗಿ ಮಾನುಷಿ ಛಿಲ್ಲಾರ್ , 17 ವರ್ಷಗಳ ಬಳಿಕ ಭಾರತಕ್ಕೆ ಒಲಿದ ಗರಿ

ಹರ್ಯಾಣದ ವೈದ್ಯಕೀಯ ವಿದ್ಯಾರ್ಥಿನಿ,ಮಿಸ್ ಇಂಡಿಯಾ ಮಾನುಷಿ ಛಿಲ್ಲಾರ್ 2017ರ ವಿಶ್ವಸುಂದರಿ ಪಟ್ಟ ಅಲಂಕರಿಸಿದ್ದಾರೆ. ಈ ಮೂಲಕ 17ವರ್ಷಗಳ ನಂತರ ಭಾರತಕ್ಕೆ ವಿಶ್ವಸುಂದರಿ ಪಟ್ಟ ಲಭಿಸಿದೆ.
2016ರ ವಿಶ್ವ ಸುಂದರಿ ಸ್ಟಿಫೇನಿ ಡೆಲ್ ವಲ್ಲೆ, ಮಾನುಷಿಗೆ ವಿಶ್ವಸುಂದರಿ ಕಿರೀಟ ತೊಡಿಸಿದರು. 1966ರಲ್ಲಿ ಭಾರತದ ರೀಟಾ ಫರಿಯಾ ವಿಶ್ವಸುಂದರಿಯ ಪಟ್ಟಕ್ಕೇರುವ ಮೂಲಕ ಏಷ್ಯಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 1994ರಲ್ಲಿ ಐಶ್ವರ್ಯಾ ರೈ ಮತ್ತು 2000ರಲ್ಲಿ ಪ್ರಿಯಾಂಕ ಚೋಪ್ರಾ ಗೆದ್ದಿದ್ದರು..

ಗಡಿಯಲ್ಲಿ ಉಗ್ರರ ದಾಳಿ: 6 ಮಂದಿ ಲಷ್ಕರ್ ಉಗ್ರರ ಹತ್ಯೆ , ಓರ್ವ ಯೋಧ ಹುತಾತ್ಮ

ಗಡಿಯಲ್ಲಿ ಉಗ್ರರ ದಾಳಿ: 6 ಮಂದಿ ಲಷ್ಕರ್ ಉಗ್ರರ ಹತ್ಯೆ , ಓರ್ವ ಯೋಧ ಹುತಾತ್ಮ

2008ರ ಮುಂಬೈ ಉಗ್ರರ ದಾಳಿಯ ಮಾಸ್ಟರ್ ಮೈಂಡ್ ಝಕಿರ್-ಉಲ್​-ರೆಹಮಾನ್ ಲಖ್ವಿಯ ಸೋದರಳಿಯ ಒವೈದ್ ಸೇರಿದಂತೆ 6 ಮಂದಿ ಲಷ್ಕರ್ ಉಗ್ರರನ್ನು ಭಾರತೀಯ ವಾಯುಸೇನೆ ಯೋಧರು ಜಮ್ಮು-ಕಾಶ್ಮೀರದ ಬಂಡಿಪೋರ ಗಡಿಯಲ್ಲಿ ಸದೆಬಡಿದಿದ್ದಾರೆ. ಕಾರ್ಯಾಚರಣೆಯಲ್ಲಿ ಭಾರತೀಯ ವಾಯುಪಡೆಗೆ ಸೇರಿದ ಗರುಡ ಕಮಾಂಡೊ ಪಡೆಯ ಯೋಧರೊಬ್ಬರು ಹುತಾತ್ಮರಾಗಿದ್ದು, ಮತ್ತೊಬ್ಬ ಸೈನಿಕನಿಗೆ ಗಾಯವಾಗಿದೆ.