Short News

ಕಾರು ಚಾಲನೆ ವೇಳೆ ಇನ್‌ಸ್ಟಾಗ್ರಾಮ್‌ ಲೈವ್‌ ಮಾಡುತ್ತಿದ್ದಾಗ ಅಪಘಾತ

ಕಾರು ಚಾಲನೆ ವೇಳೆ ಇನ್‌ಸ್ಟಾಗ್ರಾಮ್‌ ಲೈವ್‌ ಮಾಡುತ್ತಿದ್ದಾಗ ಅಪಘಾತ

ಕಾರು ಚಾಲನೆ ಮಾಡುತ್ತಿದ್ದಾಗ ಇನ್‌ಸ್ಟಾಗ್ರಾಮ್‌ ಲೈವ್ ಮಾಡುತ್ತಿದ್ದ ಯುವಕನೊಬ್ಬ ದುರಂತವಾಗಿ ಸಾನ್ನಪ್ಪಿರುವ ಘಟನೆ ಪುಣೆಯ ಚಿಂಚವಾಡ ಬಳಿ ನಡೆದಿದೆ. ಲಾಂಗ್ ರೈಡ್‌ಗೆ ಅಂತಾ ತನ್ನ ಸ್ನೇಹಿತನೊಂದಿಗೆ ಕಾರಿನಲ್ಲಿ ಹೊರಟಿದ್ದ ಪುಣೆ ಮೂಲದ ಶುಭಂ ಜಾಧವ್(20) ಎಂಬಾತ ಇನ್‌ಸ್ಟಾಗ್ರಾಮ್‌‌ನಲ್ಲಿ ಲೈವ್‌ ಸ್ಟ್ರಿಮಿಂಗ್ ಮಾಡುತ್ತಿದ್ದಾಗ ಕಾರು ನಿಯಂತ್ರಣ ತಪ್ಪಿದ್ದು, ಪರಿಣಾಮ ಡಿವೈಡರ್‌ಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿ ಇನ್‌ಸ್ಟಾಗ್ರಾಮ್‌ ಲೈವ್‌ ಮಾಡುತ್ತಿದ್ದ ಶುಭಂ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಜೊತೆ ಪ್ರಯಾಣಿಸುತ್ತಿದ್ದ ಕೃಷ್ಣ ಪವಾರ್‌ಗೆ ಗಂಭೀರ ಪ್ರಮಾಣದ ಗಾಯಗಳಾಗಿದೆ.    
ಮುದ್ರಾ ಯೋಜನೆ: ಸಾಲ ಒದಗಿಸಲು ಇ-ಕಾಮರ್ಸ್ ಸಂಸ್ಥೆಗಳೊಂದಿಗೆ ಒಪ್ಪಂದ

ಮುದ್ರಾ ಯೋಜನೆ: ಸಾಲ ಒದಗಿಸಲು ಇ-ಕಾಮರ್ಸ್ ಸಂಸ್ಥೆಗಳೊಂದಿಗೆ ಒಪ್ಪಂದ

  • ಪ್ರಧಾನ ಮಂತ್ರಿ ಮುದ್ರಾ ಯೋಜನೆ (ಪಿಎಂಎಂವೈ) ಅಡಿಯಲ್ಲಿ ಸಣ್ಣ ಉದ್ಯಮಿಗಳಿಗೆ ಸುಲಭದ ಹಣಕಾಸು ಒದಗಿಸುವ ಸಲುವಾಗಿ ಅಮೆಜಾನ್, ಫ್ಲಿಪ್ಕಾರ್ಟ್, ಒಲಾ ಮತ್ತು ಉಬರ್ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಇ-ಕಾಮರ್ಸ್ ಸಂಸ್ಥೆಗಳೊಂದಿಗೆ ಹಣಕಾಸು ಇಲಾಖೆ ಕೈ ಜೋಡಿಸಿದೆ.

  • ಸಣ್ಣ ಉದ್ಯಮಿಗಳಿಗೆ ರೂ. 10 ಲಕ್ಷಗಳವರೆಗೆ ಸಾಲ ಒದಗಿಸುವುದು ಮುದ್ರಾ ಯೋಜನೆಯ ಗುರಿಯಾಗಿದೆ. ಬ್ಯಾಂಕುಗಳು, ಸಣ್ಣ ಹಣಕಾಸು ಬ್ಯಾಂಕುಗಳು, ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು (NBFCs) ಮತ್ತು ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸಾಲವನ್ನು ಒದಗಿಸುತ್ತವೆ.

ಜಯನಗರ ಚುನಾವಣೆ : ನಾಮಪತ್ರ ಸಲ್ಲಿಸಿದ ಬಿ.ಎನ್.ಪ್ರಹ್ಲಾದ್

ಜಯನಗರ ಚುನಾವಣೆ : ನಾಮಪತ್ರ ಸಲ್ಲಿಸಿದ ಬಿ.ಎನ್.ಪ್ರಹ್ಲಾದ್

ಬೆಂಗಳೂರಿನ ಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಎನ್.ಪ್ರಹ್ಲಾದ್ ನಾಮಪತ್ರವನ್ನು ಸಲ್ಲಿಸಿದರು. ಜೂನ್ 11ರಂದು ಜಯನಗರ ಕ್ಷೇತ್ರದ ಚುನಾವಣೆ ನಡೆಯಲಿದ್ದು, ಜೂನ್ 16ರಂದು ಫಲಿತಾಂಶ ಪ್ರಕಟವಾಗಲಿದೆ. ಶುಕ್ರವಾರ ಬಿ.ಎನ್.ಪ್ರಹ್ಲಾದ್ ಅವರು ಕೇಂದ್ರ ಸಚಿವ ಅನಂತ್ ಕುಮಾರ್, ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್ ಮುಂತಾದ ನಾಯಕರ ಜೊತೆ ಬಿಬಿಎಂಪಿ ಕಚೇರಿಗೆ ತೆರಳಿ ನಾಮಪತ್ರವನ್ನು ಸಲ್ಲಿಸಿದರು. ಜಯನಗರದ ಬಿಜೆಪಿ ಅಭ್ಯರ್ಥಿಯಾಗಿದ್ದ ಬಿ.ಎನ್.ವಿಜಯ್ ಕುಮಾರ್ ಅವರ ನಿಧನದಿಂದಾಗಿ ಜಯನಗರ ಕ್ಷೇತ್ರದ ಚುನಾವಣೆ ಮುಂದೂಡಲಾಗಿತ್ತು.
ಟಿ20 ಟೂರ್ನಿಯ ಎರಡನೇ ಕ್ವಾಲಿಫೈಯರ್ : ಗೆದ್ದು ಫೈನಲ್ ಗೆ ಎಂಟ್ರಿಯಾಗೋದು ಯಾರು?

ಟಿ20 ಟೂರ್ನಿಯ ಎರಡನೇ ಕ್ವಾಲಿಫೈಯರ್ : ಗೆದ್ದು ಫೈನಲ್ ಗೆ ಎಂಟ್ರಿಯಾಗೋದು ಯಾರು?

ಕೋಲ್ಕತ್ತಾದ ಈಡನ್ ಗಾರ್ಡನ್ಸ್ ನಲ್ಲಿ ಇಂದು ಟಿ20 ಟೂರ್ನಿಯ ಎರಡನೇ ಕ್ವಾಲಿಫೈಯರ್ ಪಂದ್ಯ ನಡೆಯಲಿದ್ದು, ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಪೈನಲ್ ಗಾಗಿ ಸೆಣೆಸಲಿದೆ. ಈ ಪಂದ್ಯದಲ್ಲಿ ಜಯಿಸುವ ತಂಡವು 27ರಂದು ಮುಂಬೈನಲ್ಲಿ ನಡೆಯುವ ಫೈನಲ್‌ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಕೋಲ್ಕತ್ತಾದಲ್ಲಿ ಪಂದ್ಯ ನಡೆಯಲಿದ್ದು, ಸಹಜವಾಗಿ ತವರು ತಂಡ ಕೋಲ್ಕತ್ತಾಗೆ ಲಾಭದಾಯಕವಾಗಿದೆ. ದಿನೇಶ್‌ ಕಾರ್ತಿಕ್ ನಾಯಕತ್ವದ ಕೆಕೆಆರ್ ಮತ್ತು ಕೇನ್ ವಿಲಿಯಮ್ಸನ್ ನಾಯಕತ್ವದ ಹೈದರಾಬಾದ್ ತಂಡದಲ್ಲಿ ಯಾರು ಗೆದ್ದು ಫೈನಲ್ ಗೆ ಹೋಗುತ್ತಾರೆ ಎಂದು ಕಾದು ನೋಡಬೇಕಿದೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more