Short News

ಕೈಗಟ್ಟುವ ಬೆಲೆಯಲ್ಲಿ ಕಾರುಗಳನ್ನು ಪರಿಚಯಿಸಲಿದೆ ಆಡಿ..

ಕೈಗಟ್ಟುವ ಬೆಲೆಯಲ್ಲಿ ಕಾರುಗಳನ್ನು ಪರಿಚಯಿಸಲಿದೆ ಆಡಿ..

ಜರ್ಮನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಆಡಿ ಭಾರತದಲ್ಲಿ ಮಧ್ಯಮ ವರ್ಗದ ಗಾರಹಕರನ್ನು ಸೆಳೆಯಲು ಹೊಸ ಯೋಜನೆಯನ್ನು ಮಾಡಿದ್ದು,ಭವಿಷಯದ ದಿನಗಳಲ್ಲಿ ಗ್ರಾಹಕರಿಗೆ ಕೈಗಟ್ಟುವ ಬೆಲೆಯ ಕಾರುಗಳನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಲಿದೆ. ಭಾರತದಲ್ಲಿ ಮರ್ಸಿಡಿಸ್ ಬೆಂಝ್ ಹಾಗು ಬಿಎಂಡಬ್ಲ್ಯೂ ಸಂಸ್ಥೆಗಳಿಗಿಂತ ಆಡಿ ಸಂಸ್ಥೆಯು ಭಾರತದ ಮಾರುಕಟ್ಟೆಯಲ್ಲಿ ಕಳಪೆ ಮಾರಾಟವನ್ನು ಹೊಂದಿದ್ದು,ಈ ನಿಟ್ಟಿನಲ್ಲಿ ತಮ್ಮ ಎ3 ಹಾಗು ಕ್ಯೂ3 ಕಾರುಗಳ ನಡುವೆಯ ಬೆಲೆಯಲ್ಲಿ ಹೊಸ ಕಾರುಗಳನ್ನು ಪರಿಚಯಿಸಲು ಮುಂದಾಗಿದೆ.  ಮುಂದಿನ 2-3ವರ್ಷಗಳಲ್ಲಿ ಪರಿಚಯಿಸುತ್ತೇವೆಂದು ಆಡಿ ಇಂಡಿಯಾದ ಮುಖ್ಯಸ್ಥರಾದ ರಾಹಿಲ್ ಅನ್ಸಾರಿಯವರು ಹೇಳಿದ್ದಾರೆ.
ನಿಮ್ಮ ಇಂದಿನ (ಎಪ್ರಿಲ್ 26) ಹನ್ನೆರಡು ರಾಶಿಗಳ ದಿನ ಭವಿಷ್ಯ

ನಿಮ್ಮ ಇಂದಿನ (ಎಪ್ರಿಲ್ 26) ಹನ್ನೆರಡು ರಾಶಿಗಳ ದಿನ ಭವಿಷ್ಯ

ಮೇಷ:ವಿದ್ಯಾರ್ಥಿಗಳು ಓದಿನಲ್ಲಿ ಪ್ರಗತಿ ಸಾಧಿಸಲಾರರು. ವೃಷಭ:ಪತ್ನಿ ಕಡೆಯಿಂದ ತೊಂದರೆ ಉಂಟಾಗಲಿದೆ. ಮಿಥುನ:ಸ್ನೇಹಿತರು ನಿಮ್ಮನ್ನು ಅವಮಾನ ಮಾಡಬಹುದು. ಕಟಕ:ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯುತ್ತವೆ. ಸಿಂಹ:ಷೇರುಪೇಟೆಯಲ್ಲಿ ಹಣ ಹೂಡುವುದರಿಂದ ನಷ್ಟವಾಗುವ ಸಾಧ್ಯತೆಗಳಿವೆ. ತುಲಾ:ಅತ್ತಿಗೆ-ನಾದಿನಿ ಯರು ನಿಮ್ಮ ವಿರುದ್ಧ ತಿರುಗಿ ಬೀಳುವ ಸಾಧ್ಯತೆಗಳಿವೆ. ವೃಶ್ಚಿಕ:ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದಿಲ್ಲ. ಧನುಸ್ಸು:ಕುಟುಂಬದಲ್ಲಿ ಆಸ್ತಿ ವಿಚಾರವಾಗಿ ಕಲಹಗಳು ಸಂಭವಿಸಬಹುದು. ಮಕರ:ಸಹೋದರರಿಂದ ತೊಂದರೆಯಾಗಲಿದೆ. ಕುಂಭ:ಕೆಲವರಿಗೆ ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆಯಿದೆ. ಮೀನ:ಪ್ರೇಮಿಗಳಿಗೆ ತೊಂದರೆಯಾಗಲಿದೆ.
ನಮೋ ಆ್ಯಪ್ ಮೂಲಕ ಕರ್ನಾಟಕ ಬಿಜೆಪಿ ಜೊತೆ ಮೋದಿ ಸಂವಾದ

ನಮೋ ಆ್ಯಪ್ ಮೂಲಕ ಕರ್ನಾಟಕ ಬಿಜೆಪಿ ಜೊತೆ ಮೋದಿ ಸಂವಾದ

ಕರ್ನಾಟಕದ ಬಿಜೆಪಿ ಘಟಕದ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಿಗ್ಗೆ ಸಂವಾದ ನಡೆಸಲಿದ್ದಾರೆ. ತಮ್ಮ ವಿಶಿಷ್ಟ ನಮೋ ಆ್ಯಪ್ ಮೂಲಕ ಅವರು ಸಂವಾದ ನಡೆಸಲಿದ್ದಾರೆ. ಬಿಜೆಪಿಯ ಎಲ್ಲಾ ಅಭ್ಯರ್ಥಿಗಳು, ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಪಕ್ಷದ ಕಾರ್ಯಕರ್ತರ ಜೊತೆಗೆ ಅವರು ಸಂವಾದ ನಡೆಸಲಿದ್ದಾರೆ. ಸಂವಾದದ ಸಂದರ್ಭದಲ್ಲಿ ಅವರು ಪಕ್ಷದ ಕಾರ್ಯಕರ್ತರಿಗೆ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಳ್ಳುವಂತೆ ಹುರಿದುಂಬಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಪಕ್ಷದ ಹಿರಿಯ ನಾಯಕರು, ಸಂಸದರು ಮತ್ತು ಶಾಸಕರಿಗೆ ಅವರು ಸಲಹೆ, ಮಾರ್ಗದರ್ಶನವನ್ನೂ ನೀಡಲಿದ್ದಾರೆ.
ಎಲ್ಲದರ ಮಧ್ಯೆ ಹೊಳೆಯುತ್ತಿದೆ ಡೆಲ್ ಎಕ್ಸ್‌ಪಿಎಸ್ 13(2018)!

ಎಲ್ಲದರ ಮಧ್ಯೆ ಹೊಳೆಯುತ್ತಿದೆ ಡೆಲ್ ಎಕ್ಸ್‌ಪಿಎಸ್ 13(2018)!

ಡೆಲ್ ಕಂಪನಿಯು ಎಕ್ಸ್‍ಪಿಎಸ್ 13(2018) ನ ಮೂಲಕ ಎಲ್ಲವನ್ನೂ ಸರಿ ಮಾಡಿದೆ. ಈ ನೋಟ್‍ಬುಕ್ ನಲ್ಲಿ ತಪ್ಪು ಕಂಡು ಹಿಡಿಯುವುದಾದರೆ ಯಾರೊ ಮಹಾನ್ ಬಳಕೆದಾರನೇ ಇರಬೇಕು. ಎಕ್ಸ್‍ಪಿಎಸ್ ನಲ್ಲಿ ಹೊಸ ಉತ್ಪನ್ನ ಸೇರ್ಪಡೆಯಾಗಿ ಸ್ಪರ್ಧೆಯಲ್ಲಿ ಈಗ ಮುಂಚೂಣಿಯಲ್ಲಿದೆ. ಇದರಲ್ಲಿ ಸಂತಸದ ವಿಷಯವೆಂದರೆ ಆಪಲ್ ನ ಮ್ಯಾಕ್‍ಬುಕ್ ಹಾಗೆ ಕಾಣಲು ಪ್ರಯತ್ನಿಸಿಲ್ಲಾ. ಮೊದಲಿಗಿಂತ ಇನ್ನೂ ಉತ್ತಮವಾದದ್ದನ್ನು ನೀಡಿದೆ ಎಂದೆನಿಸುತ್ತದೆ. ಏನೇ ಆದರೂ ದುಡ್ಡು ಖರ್ಚು ಮಾಡಿದಕ್ಕೂ ಸಾರ್ಥಕ ಎನಿಸುತ್ತದೆ.