Short News

ಬಿಡುಗಡೆಗೊಂಡ ಬಿಎಮ್‍‍ಡಬ್ಲ್ಯೂ 3 ಸಿರೀಸ್ ಜಿಟಿ ಸ್ಪೋರ್ಟ್ ಕಾರು..

ಬಿಡುಗಡೆಗೊಂಡ ಬಿಎಮ್‍‍ಡಬ್ಲ್ಯೂ 3 ಸಿರೀಸ್ ಜಿಟಿ ಸ್ಪೋರ್ಟ್ ಕಾರು..

ಜರ್ಮನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಬಿಎಮ್‍‍ಡಬ್ಲ್ಯೂ ತಮ್ಮ ನೂತನ 3 ಸಿರೀಸ್ ಗ್ರ್ಯಾನ್ ಟೂರಿಸ್ಮೊ ಕಾರಿನ 320ಡಿ ಜಿಟಿ ಸ್ಪೋರ್ಟ್ ಬೇಸ್ ವೇರಿಯಂಟ್ ಸೆಡಾನ್ ಕಾರನ್ನು ಬಿಡುಗಡೆಗೊಳಿಸಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 46.60 ಲಕ್ಷಕ್ಕೆ ನಿಗದಿಪಡಿಸಲಾಗಿದೆ. ಈ ಹೊಸ ಕ್ರೀಡಾ ಆವೃತ್ತಿಯ ಪರಿಚಯದೊಂದಿಗೆ, ನಾವು ತಮ್ಮ ವಾಹನಗಳಲ್ಲಿ ಚೈತನ್ಯ ಮತ್ತು ಭಾವೋದ್ರಿಕ್ತ ಆಕಾಂಕ್ಷೆಗಳ ಭಾವನೆಗಳ ಅನುಭವವನ್ನು ಬಯಸುವ ಗ್ರಾಹಕರಿಗೆ ಆಕರ್ಷಕವಾದ ಆಯ್ಕೆಯನ್ನು ಒದಗಿಸುತ್ತಿದ್ದೇವೆ. ಎಂದು ಬಿಎಮ್‍ಡಬ್ಲ್ಯೂ ಗ್ರೂಪ್ ಇಂಡಿಯಾದ ಅಧ್ಯಕ್ಷರಾದ ವಿಕ್ರಮ್ ಪವಾಹ್ ಹೇಳಿಕೊಂಡಿದ್ದಾರೆ.

ಐಷಾರಾಮಿ ಕಾರುಗಳ ಲೋಗೋ ಕಳ್ಳತನ ಪ್ರಕರಣ: ಐವರ ಬಂಧನ

ಐಷಾರಾಮಿ ಕಾರುಗಳ ಲೋಗೋ ಕಳ್ಳತನ ಪ್ರಕರಣ: ಐವರ ಬಂಧನ

ಪಾರ್ಕ್ ಮಾಡಿದ ಐಷಾರಾಮಿ ಕಾರುಗಳ ಲೋಗೊಗಳನ್ನು ಕದಿಯುತ್ತಿದ್ದ ತಂಡವನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಿ.ಎಂ.ಡಬ್ಯು, ಜಗ್ವಾರ್, ಆಡಿ ಸೇರದಂತೆ ಇನ್ನಿತರ ಅತೀ ದುಬಾರಿ ಕಾರುಗಳ ಲೋಗೊ ಗಳಿಗೆ ಒಳ್ಳೆಯ ಬೆಲೆ ಇದೆ. ಈ ಹಿನ್ನಲೆಯಲ್ಲಿ ಈ ಐಷಾರಾಮಿ ಕಾರುಗಳ ಲೋಗೋ ಗಳನ್ನು ಕದಿಯುವುದೇ ದಂಧೆ ಯಾಗಿಸಿ ಕೊಂಡಿದ್ದ 5ಮಂದಿ ಯುವಕರನ್ನು ಕದ್ರಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಪಚ್ಚನಾಡಿ ನಿವಾಸಿ ವಿಶಾಲ್ ನಾಯಕ್(18), ಪಡವಿನಂಗಡಿ ನಿವಾಸಿ ಅಭಿಷೇಕ್ ಪೂಜಾರಿ(18), ತಲಪಾಡಿ ನಿವಾಸಿ ಅಬ್ದುಲ್ ಸಿನಾನ್(25),ಬಜಾಲ್ ನಿವಾಸಿ ಮಹಮ್ಮದ್ ನವಾದ್(26), ಸುರತ್ಕಲ್ ನಿವಾಸಿ ಸಾದಕ್ ತುಲಾ(30)ಎಂದು ಗುರುತಿಸಲಾಗಿದೆ.
ಸದ್ಗುರು ಜಗ್ಗಿ ವಾಸುದೇವ್‌ಗೆ ನರ್ತಿಸಲು ಬರುತ್ತದೆಯೇ?

ಸದ್ಗುರು ಜಗ್ಗಿ ವಾಸುದೇವ್‌ಗೆ ನರ್ತಿಸಲು ಬರುತ್ತದೆಯೇ?

ಐಐಎಂನ ಹಳೆ ವಿದ್ಯಾರ್ಥಿ ಸಂಘ ಆಯೋಜಿಸಿರುವ ಐಐಎಂಬ್ಯು 2018 ನಾಯಕತ್ವ ಸಮ್ಮೇಳನದಲ್ಲಿ ಶನಿವಾರ ಈಶಾ ಫೌಂಡೇಷನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಮತ್ತು ಬಾಲಿವುಡ್ ನಟ ರಣವೀರ್ ಸಿಂಗ್ ನಡುವಣ ಸಂವಾದ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು. ಯಾವುದೇ ನಿರ್ದಿಷ್ಟ ರೀತಿ ರಿವಾಜಿನಲ್ಲಿ ಸಿಲುಕದೆ ಚರ್ಚೆ ನಡೆದಿದ್ದು ಇಬ್ಬರೂ ತಂತ್ರಜ್ಞಾನದಿಂದ ಹಿಡಿದು ಜೀವನದ ಸಮಸ್ಯೆಗಳನ್ನು ಎದುರಿಸುವ ಮಾರ್ಗಗಳ ಕುರಿತು ಪ್ರಸ್ತಾಪಿಸಿದ್ದು ಆಸಕ್ತಿ ಹೆಚ್ಚಿಸಿತು. ಲವಲವಿಕೆ, ದುಡುಕುತನ, ಉತ್ಸಾಹದ ಯುವಕನಾಗಿ ರಣವೀರ್ ಭಾಗವಹಿಸಿದರೆ, ಸದ್ಗುರು ಶಾಂತ, ಸಾವಧಾನದಿಂದ ಪ್ರತಿ ಮಾತುಗಳನ್ನೂ ಅಳೆದು ತೂಗಿ ಆಡುತ್ತಿದ್ದರು.
ಚಿಲ್ಲಂ' ಚಿತ್ರಕ್ಕಾಗಿ ರಾಘಣ್ಣ ಬದಲಿಗೆ ಬಂದ ಮತ್ತೊಬ್ಬ 'ಸ್ಟಾರ್' ನಟ.!

ಚಿಲ್ಲಂ' ಚಿತ್ರಕ್ಕಾಗಿ ರಾಘಣ್ಣ ಬದಲಿಗೆ ಬಂದ ಮತ್ತೊಬ್ಬ 'ಸ್ಟಾರ್' ನಟ.!

ಮನೋರಂಜನ್ ಅಭಿನಯಿಸುತ್ತಿರುವ 'ಚಿಲ್ಲಂ' ಚಿತ್ರದಲ್ಲಿ ನಟ ರಾಘವೇಂದ್ರ ರಾಜ್ ಕುಮಾರ್ ಅಭಿನಯಿಸಬೇಕಿತ್ತು. ಆರಂಭದಲ್ಲಿ ಸಿನಿಮಾದಲ್ಲಿ ನಟಿಸುವ ಒಲವು ಹೊಂದಿದ್ದ ರಾಘಣ್ಣ ಈಗ 'ಚಿಲ್ಲಂ' ಚಿತ್ರಕ್ಕೆ ನೋ ಎಂದಿದ್ದಾರೆ. ಇದೀಗ, ಚಿಲ್ಲಂ ಚಿತ್ರದಲ್ಲಿ ರಾಘವೇಂದ್ರ ರಾಜ್ ಕುಮಾರ್ ಬಿಟ್ಟ ಪಾತ್ರವನ್ನ ನಿಭಾಯಿಸಲು ಮತ್ತೊಬ್ಬ ಸ್ಟಾರ್ ನಟ ಎಂಟ್ರಿ ಕೊಟ್ಟಿದ್ದಾರೆ. ತೆಲುಗು ಸ್ಟಾರ್ ನಟ ಜಗಪತಿ ಬಾಬು ಅವರನ್ನು ಕರೆತರಲು ಪ್ರಯತ್ನ ನಡೆದಿದೆ ಎಂದು ತಿಳಿದುಬಂದಿದೆ. ಇನ್ನು ವಿಲನ್ ಪಾತ್ರವನ್ನ ಮಾಡದಂತೆ ಅಭಿಮಾನಿಗಳು ಒತ್ತಾಯಿಸಿದ ಕಾರಣ ಈ ಪ್ರಾಜೆಕ್ಟ್ ನಿಂದ ದೂರು ಉಳಿದಿರುವುದಾಗಿ ರಾಘಣ್ಣ ತಿಳಿಸಿದ್ದಾರೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more