Short News

ಬಿಡುಗಡೆಗೊಂಡ ಬಿಎಮ್‍‍ಡಬ್ಲ್ಯೂ 3 ಸಿರೀಸ್ ಗ್ರ್ಯಾನ್ ಟೂರಿಸ್ಮೊ ಸ್ಪೋರ್ಟ್ ಕಾರು

ಬಿಡುಗಡೆಗೊಂಡ ಬಿಎಮ್‍‍ಡಬ್ಲ್ಯೂ 3 ಸಿರೀಸ್ ಗ್ರ್ಯಾನ್ ಟೂರಿಸ್ಮೊ ಸ್ಪೋರ್ಟ್ ಕಾರು

ಜರ್ಮನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಬಿಎಮ್‍‍ಡಬ್ಲ್ಯೂ ತಮ್ಮ ನೂತನ 3 ಸಿರೀಸ್ ಗ್ರ್ಯಾನ್ ಟೂರಿಸ್ಮೊ ಕಾರಿನ 320ಡಿ ಜಿಟಿ ಸ್ಪೋರ್ಟ್ ಬೇಸ್ ವೇರಿಯಂಟ್ ಸೆಡಾನ್ ಕಾರನ್ನು ಬಿಡುಗಡೆಗೊಳಿಸಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 46.60 ಲಕ್ಷಕ್ಕೆ ನಿಗದಿಪಡಿಸಲಾಗಿದೆ. ಬಿಎಮ್‍ಡಬ್ಲ್ಯೂ 320ಡಿ ಜಿಟಿ ಸ್ಪೋರ್ಟ್ ಕಾರಿನಲ್ಲಿ ಆಪಲ್ ಕಾರ್ ಪ್ಲೇ ಸಪೋರ್ಟ್ ಮಾಡುವ 22.3 ಸೆಂಟಿ ಮೀಟರ್‍‍ನ ಕಲರ್ ಡಿಸ್ಪ್ಲೇ, ಡಿವಿಡಿ ಡ್ರೈವ್ ಮತ್ತು 20ಜಿಬಿಯಷ್ಟು ಇಂಟಿಗ್ರೇಟೆಡ್ ಹಾರ್ಡ್ ಡ್ರೈವ್ 3ಡಿ ಮ್ಯಾಪ್‍‍ನೊಂದಿಗೆ ನ್ಯಾವಿಗೇಷನ್ ಸಿಸ್ಟಮ್ ಪ್ರೊಫೆಷನಲ್, ಎಂಬ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ.
ಸೂಪರ್ ಸಾನಿಕ್ ಬ್ರಹ್ಮೊಸ್ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿ

ಸೂಪರ್ ಸಾನಿಕ್ ಬ್ರಹ್ಮೊಸ್ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿ

ಇಂದು ಉಡಾಯಿಸಲಾದ ಸೂಪರ್ ಸಾನಿಕ್ ಬ್ರಹ್ಮೊಸ್ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ. ಒಡಿಶಾದ ಚಂಡೀಪುರದಲ್ಲಿನ ಪರೀಕ್ಷಾ ಕೇಂದ್ರದಿಂದ ಈ ಪ್ರಯೋಗ ನಡೆಸಲಾಗಿದ್ದು, ಯಶಸ್ವಿಯಾಗಿದೆ. ಇಂದು ಬೆಳಿಗ್ಗೆ 10-15 ರಸುಮಾರಿನಲ್ಲಿ ಉಡಾಯಿಸಲಾದ ಕ್ಷಿಪಣಿ ನಿಗದಿತ ಗುರಿ ಸಾಧಿಸುವಲ್ಲಿ ಯಶಸ್ವಿಯಾಗಿದೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ದಿ ಸಂಸ್ಥೆಯ ಮೂಲಗಳು ಹೇಳಿಕೆ ನೀಡಿವೆ. ಡಿಆರ್ ಡಿ ಒ ಹಾಗೂ ರಷ್ಯಾದ ಎನ್ ಪಿಓಎಂ ಜಂಟಿ ಸಹಭಾಗಿತ್ವದಲ್ಲಿ ಈ ಕ್ಷಿಪಣಿಯನ್ನು ಅಭಿವೃದ್ದಿಪಡಿಸಲಾಗಿದ್ದು, ಭಾರತೀಯ ಸೇನೆ, ಭಾರತೀಯ ನೌಕೆ ಹಾಗೂ ವಾಯುಪಡೆಯ ಕಾರ್ಯಾಚರಣೆಗಳಲ್ಲಿ ಇದನ್ನು ಬಳಸಬಹುದಾಗಿದೆ.
ಅಮೆಜಾನ್ ಪ್ರೈಮ್ ಡೇ ಸೇಲ್: ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 8 ಕೇವಲ 38,333  ರೂ..

ಅಮೆಜಾನ್ ಪ್ರೈಮ್ ಡೇ ಸೇಲ್: ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 8 ಕೇವಲ 38,333 ರೂ..

ಅಮೇಜಾನ್ ಪ್ರೈಮ್ ಡೇ ಸೇಲ್ ಆರಂಭಗೊಂಡಾಯ್ತು. ಗ್ರಾಹಕರಿಗೆ ಕೊಡುಗೆಗಳ ಸುರಿಮಳೆಯೂ ಆಗಿದೆ. ಅಂತಹ ಬೆಸ್ಟ್ ಆಫರ್ ಗಳ ಪಟ್ಟಿಯಲ್ಲಿ ಇದೂ ಕೂಡ ಒಂದು. ಹಲವಾರು ಸ್ಯಾಮ್ ಸಂಗ್ ಪ್ರೊಡಕ್ಟ್ ಗಳ ಮೇಲೆ ಭಾರೀ ರಿಯಾಯಿತಿ ಇದ್ದು ಕೆಲವರ ಪಾಲಿನ ಕನಸಿನ ಮೊಬೈಲ್ ಎಂದೆನಿಸುವ ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 8 ನ ಬೆಲೆಯಲ್ಲಿ ಹೆಚ್ಚುಕಡಿಮೆ 18,000 ರುಪಾಯಿ ರಿಯಾಯಿತಿ ಲಭ್ಯವಾಗುತ್ತಿದೆ. ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 8 ಒಂದು ಅತ್ಯತ್ತುಮವಾದ ಸ್ಮಾರ್ಟ್ ಫೋನ್ ಆಗಿದ್ದು ಉತ್ತಮ ಡಿಸ್ಪ್ಲೇ, ಕ್ಯಾಮರಾ ಮತ್ತು ಇತರೆ ವೈಶಿಷ್ಟ್ಯೆತೆಗಳನ್ನು ಹೊಂದಿರುವ ಸ್ಯಾಮ್ ಸಂಗ್ ಕಂಪೆನಿಯ ಫೋನ್ ಗಳಲ್ಲಿ ಒಂದೆನಿಸಿದೆ.

ಶಿರಾಡಿ ಘಾಟ್ ರಸ್ತೆಯಲ್ಲಿ ಭಾರೀ ವಾಹನಗಳಿಗೆ ನಿಷೇಧ

ಶಿರಾಡಿ ಘಾಟ್ ರಸ್ತೆಯಲ್ಲಿ ಭಾರೀ ವಾಹನಗಳಿಗೆ ನಿಷೇಧ

ಕಾಂಕ್ರೀಟ್ ರಸ್ತೆ ಕಾಮಗಾರಿ ಬಳಿಕ ಶಿರಾಡಿ ಘಾಟ್ ಮಾರ್ಗ ವಾಹನಗಳಿಗೆ ಮುಕ್ತವಾಗಿದೆ. ಆದರೆ, ಲಘು ವಾಹನಗಳು ಮಾತ್ರ ಸಂಚಾರ ನಡೆಸಬಹುದು. ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅಭಿವೃದ್ಧಿಗೊಂಡಿರುವ ಶಿರಾಢಿ ಘಾಟ್ ರಸ್ತೆಯನ್ನು ಉದ್ಘಾಟಿಸಿದ್ದಾರೆ. ಭಾನುವಾರ ಮಧ್ಯಾಹ್ನ 3ಗಂಟೆಯಿಂದ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಮೊದಲ ದಿನ ಸಾವಿರಕ್ಕೂ ಅಧಿಕ ವಾಹನಗಳು ಕಾಂಕ್ರೀಟ್‌ರಸ್ತೆಯಲ್ಲಿ ಸಂಚಾರ ನಡೆಸಿದವು. ಮೊದಲ ದಿನ ಕಾರು, ಬಸ್, ಕಂಟೈನರ್ ಸೇರಿದಂತೆ ಎಲ್ಲಾ ವಿಧದ ವಾಹನಕ್ಕೆ ಅವಕಾಶ ನೀಡಲಾಯಿತು. ಆದರೆ, ರಸ್ತೆಯ ಕೆಲಭಾಗದಲ್ಲಿ ತಡೆಗೋಡೆ ಕುಸಿತಗೊಂಡಿದೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more