Short News

ಬೆಂಗಳೂರಿನಲ್ಲಿ ಬಿಡುಗಡೆಯಾಯ್ತು ‘ಬಿಎಂಡಬ್ಲ್ಯು’ 6 ಸಿರೀಸ್ ಕಾರು

ಬೆಂಗಳೂರಿನಲ್ಲಿ ಬಿಡುಗಡೆಯಾಯ್ತು ‘ಬಿಎಂಡಬ್ಲ್ಯು’ 6 ಸಿರೀಸ್ ಕಾರು

ಜರ್ಮನಿಯ ಐಶಾರಾಮಿ ಕಾರು ತಯಾರಿಕಾ ಸಂಸ್ಥೆ ‘ಬಿಎಂಡಬ್ಲ್ಯು'ದ 6 ಸಿರೀಸ್ ಗ್ರ್ಯಾನ್ ಟುರಿಸ್ಮೊ ಸ್ಪೋರ್ಟ್ಸ ಲೈನ್‌ ಅನ್ನು ಬೆಂಗಳೂರಿನಲ್ಲಿ ಬಿಡುಗಡೆಗೊಳಿಸಿದೆ. ಭಾರತದಲ್ಲೇ ತಯಾರಿಸಿರುವ ಈ ಪೆಟ್ರೋಲ್‌ ಚಾಲಿತ ಕಾರಿನ ಬುಕಿಂಗ್‌ ಕೂಡ ಆರಂಭವಾಗಿದ್ದು, ಇದರ ಎಕ್ಸ್‌ ಶೋ ರೂಂ ಬೆಲೆ 58.90 ಲಕ್ಷ. ಡೀಸೆಲ್‌ ಚಾಲಿತ ಕಾರು ಕೆಲ ತಿಂಗಳ ನಂತರ ಮಾರುಕಟ್ಟೆಗೆ ಬರಲಿದೆ. 250 ಎಚ್‌ಪಿ ಸಾಮರ್ಥ್ಯದ ಈ ಕಾರು 6.3 ಸೆಕೆಂಡುಗಳಲ್ಲಿ ಪ್ರತಿ ಗಂಟೆಗೆ 0 ದಿಂದ 100 ಕಿ. ಮೀ ದೂರ ಕ್ರಮಿಸುವ ಸಾಮರ್ಥ್ಯ ಹೊಂದಿದೆ.
ರಾಜಕೀಯದ ಬಗ್ಗೆ ರಾಕಿಂಗ್ ಸ್ಟಾರ್ ನೇರ ಮಾತು

ರಾಜಕೀಯದ ಬಗ್ಗೆ ರಾಕಿಂಗ್ ಸ್ಟಾರ್ ನೇರ ಮಾತು

ಯಶೋಮಾರ್ಗ ಸಂಸ್ಥೆ ಮೂಲಕ ಜನರ ಸೇವೆಗೆ ನಿಂತಿರುವ ರಾಕಿಂಗ್ ಸ್ಟಾರ್ ಯಶ್ ಈ ಚುನಾವಣೆಯಲ್ಲಿ ಯಾರ ಪರವಾಗಿ ಪ್ರಚಾರ ಮಾಡುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದೆ. ಸ್ಪರ್ಶ ರೇಖಾ ನಿರ್ಮಾಣದ ಡೆಮೋಪೀಸ್ ಚಿತ್ರ ದ ಮುಹೂರ್ತ ದ ಸಂದರ್ಭದಲ್ಲಿ ಭಾಗಿ ಆಗಿದ್ದ ಯಶ್ "ನಾನು ಯಾವುದೇ ರಾಜಕೀಯ ಪಕ್ಷದ ಪರ ಪ್ರಚಾರಕ್ಕೆ ಹೋಗಿತ್ತಿಲ್ಲ. ಪಕ್ಷದ ಅಭ್ಯರ್ಥಿಗಳು ಸ್ನೇಹಿತರಾಗಿರಬೇಕು, ಇಲ್ಲವೇ ನನಗೆ ಅಂತವರ ಬಗ್ಗೆ ಗೋತ್ತಿರಬೇಕು. ಆದರೆ, ರಾಜಕೀಯದಲ್ಲಿ ನನಗೆ ಯಾರೂ ಗೊತ್ತಿಲ್ಲ. ರಾಜಕೀಯದ ನಂಟು ಇಲ್ಲ.ಪಕ್ಷದ ಪ್ರಚಾರಕ್ಕೆ ಹೋಗುವುದು ನನಗೆ ವೈಯುಕ್ತಿಕವಾಗಿ ಇಷ್ಟವೇ ಇಲ್ಲ". ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.
ಅತ್ಯುತ್ತಮ ಸ್ನೇಹಿತರಾಗಬಲ್ಲ ವ್ಯಕ್ತಿಗಳು ಇವರು

ಅತ್ಯುತ್ತಮ ಸ್ನೇಹಿತರಾಗಬಲ್ಲ ವ್ಯಕ್ತಿಗಳು ಇವರು

ಸ್ನೇಹಿತರಿಲ್ಲದ ಜಗತ್ತನ್ನು ನಾವು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಪ್ರತಿಯೊಂದು ಹಂತದಲ್ಲೂ ಸ್ನೇಹಿತರು ಎನ್ನುವವರು ಇರಲೇಬೇಕು. ಜೀವನದಲ್ಲಿ ಅದೆಷ್ಟೋ ಬಾರಿ ಸಂಬಂಧಿಕರು ಅಥವಾ ರಕ್ತ ಸಂಬಂಧಿಗಳು ಎನಿಸಿಕೊಂಡವರು ಸಹಾಯ ಮಾಡದಿದ್ದರೂ ಸ್ನೇಹಿತರಾದವರು ಸಹಾಯ ಮಾಡುತ್ತಾರೆ. ಹಾಗಾಗಿ ಜೀವನದಲ್ಲಿ ಏನೂ ಇಲ್ಲದಿದ್ದರೂ ಸರಿ ಒಬ್ಬ ಆತ್ಮೀಯ ಸ್ನೇಹಿತರನ್ನು ಹೊಂದಿರಬೇಕು ಎನ್ನುತ್ತಾರೆ. ವಂಚನೆಯಿಂದ ಕೂಡಿರುವ ಈ ಜಗತ್ತಿನಲ್ಲಿ ಸ್ನೇಹಿತರು ಎಂದು ಹೇಳಿಕೊಂಡು ಮೋಸ ಮಾಡುವವರನ್ನು ಸಹ ನಾವು ನೋಡಬಹುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಚಕ್ರದವರು ಅತ್ಯುತ್ತಮ ರೀತಿಯಲ್ಲಿ ತಮ್ಮ ಸ್ನೇಹವನ್ನು ನಿಭಾಯಿಸುತ್ತಾರೆ.

ಆರಂಭಿಕ ವಹಿವಾಟಿನಲ್ಲಿ 471 ಅಂಕ ಕುಸಿದ ಸೆನ್ಸೆಕ್ಸ್

ಆರಂಭಿಕ ವಹಿವಾಟಿನಲ್ಲಿ 471 ಅಂಕ ಕುಸಿದ ಸೆನ್ಸೆಕ್ಸ್

ಇಂದಿನ ಮುಂಬೈ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 471.44 ಅಂಕ ಭಾರೀ ಕುಸಿತಕ್ಕೆ ಗುರಿಯಾಗಿ 33,000 ಅಂಕಗಳಿಗಿಂತ ಕೆಳ ಮಟ್ಟಕ್ಕೆ ಜಾರಿತು. ಹಾಗೇ ನಿಫ್ಟಿ ಸೂಚ್ಯಕ 153.45 ಅಂಕ ನಷ್ಟಕ್ಕೆ ಗುರಿಯಾಗಿ 9,961.30 ಅಂಕ ಮಟ್ಟಕ್ಕೆ ಕುಸಿಯಿತು. ಬೆಳಗ್ಗೆ 10.30ರ ಹೊತ್ತಿಗೆ ಸೆನ್ಸೆಕ್ಸ್‌ 412 ಅಂಕ ನಷ್ಟದೊಂದಿಗೆ 32,594.27 ಅಂಕ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 132 ಅಂಕ ನಷ್ಟದೊಂದಿಗೆ 9,982.80 ಅಂಕ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.