Short News

ಐಷಾರಾಮಿ ಕಲಿನಿಯನ್ ಎಸ್‌ಯಿವಿ ಕಾರಿಗಾಗಿ ಭಾರತದಿಂದ ಮೊದಲ ಬುಕ್ಕಿಂಗ್..

ಐಷಾರಾಮಿ ಕಲಿನಿಯನ್ ಎಸ್‌ಯಿವಿ ಕಾರಿಗಾಗಿ ಭಾರತದಿಂದ ಮೊದಲ ಬುಕ್ಕಿಂಗ್..

ಜಗತ್ತಿನ ಆಟೋ ಉದ್ಯಮದಲ್ಲಿ ಭಾರೀ ಕುತೂಹಲ ಹುಟ್ಟುಹಾಕಿರುವ ರೋಲ್ಸ್ ರಾಯ್ಸ್ ಮೊದಲ ಎಸ್‌ಯುವಿ ಮಾದರಿಯಾದ ಕಲಿನಿಯನ್ ಕಾರುಗಳ ಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು, ಹೊಸ ಕಾರಿನ ಖರೀದಿಗಾಗಿ ಭಾರತೀಯ ಮೂಲದ ಮಹಿಳೆಯೊಬ್ಬರು ಮೊದಲ ಬಾರಿಗೆ ಬುಕ್ಕಿಂಗ್ ಮಾಡಿರುವುದು ಚರ್ಚೆಗೆ ಕಾರಣವಾಗಿದೆ. ಭಾರತೀಯ ಮೂಲದ ಅಭಿನಿ ಸೋಹಾನ್ ಎನ್ನುವವರು ಅತಿ ದುಬಾರಿ ಬೆಲೆಯ ಕಲಿನಿಯನ್ ಎಸ್‌ಯಿವಿ ಕಾರಿಗಾಗಿ ಮುಂಗಡ ಹಣ ಪಾವತಿಸಿ ಬುಕ್ ಮಾಡಿದ್ದಾರೆ. ಈ ಹೊಸ ಕಾರಿನ ಬೆಲೆಯು ಎಕ್ಸ್‌ಶೋರಂ ಪ್ರಕಾರ ರೂ.6 ಕೋಟಿಯಿಂದ ರೂ.8 ಕೋಟಿ ಇರಬಹುದೆಂದು ಅಂದಾಜಿಸಲಾಗಿದೆ.
ಆಂಡ್ರಾಯ್ಡ್ ಮತ್ತು iOSಗಳಲ್ಲಿ ವಾಟ್ಸ್ಆಪ್ ಶೀಘ್ರವೇ ಸ್ಥಗಿತ..!

ಆಂಡ್ರಾಯ್ಡ್ ಮತ್ತು iOSಗಳಲ್ಲಿ ವಾಟ್ಸ್ಆಪ್ ಶೀಘ್ರವೇ ಸ್ಥಗಿತ..!

ಈಗಾಗಲೇ ವಾಟ್ಸ್ಆಪ್ ಹಲವು ಮಾದರಿಯಲ್ಲಿ ಬದಲಾವಣೆಯನ್ನು ಹೊಂದಿದ್ದು, ಹೊಸ ಹೊಸ ಆಯ್ಕೆಯನ್ನು ಪಡೆದುಕೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ಕೇಲವು ಸ್ಮಾರ್ಟ್ ಫೋನ್ ಗಳು ವಾಟ್ಸ್ಆಪ್ ಆಯ್ಕೆಯನ್ನು ಸಪೋರ್ಟ್ ಮಾಡುತ್ತಿಲ್ಲ. ಈ ಹಿನ್ನಲೆಯಲ್ಲಿ ಕೇಲವು ಸ್ಮಾರ್ಟ್ ಫೋನ್ ಗಳಿಗೆ ತನ್ನ ಸೇವೆಯನ್ನು ನಿಲ್ಲಿಸಲು ಮುಂದಾಗಿದೆ. ಈ ಹಿನ್ನಲೆಯಲ್ಲಿ ಬಳಕೆದಾರರು ಗಮನಿಸಲೇ ಬೇಕಾದ ಮಾಹಿತಿಯೂ ಮುಂದಿದೆ. ನಿಮ್ಮ ಸ್ಮಾರ್ಟ್ ಫೋನ್ ಸಹ ಈ ಕೆಳಗಿನ ಫೋನ್ ಗಳ ಪಟ್ಟಿಯಲ್ಲಿ ಇದ್ದರೆ ನೀವು ಸಹ ವಾಟ್ಸ್ ಆಪ್ ಬಳಕೆಯಿಂದ ವಂಚಿತರಾಗುವಿರಿ.

ಯೋಗದಿನ: ಡೆಹ್ರಾಡೂನ್ ನಲ್ಲಿ ನರೇಂದ್ರ ಮೋದಿ ಯೋಗಾಚರಣೆ

ಯೋಗದಿನ: ಡೆಹ್ರಾಡೂನ್ ನಲ್ಲಿ ನರೇಂದ್ರ ಮೋದಿ ಯೋಗಾಚರಣೆ

ಅಂತಾರಾಷ್ಟ್ರೀಯ ಯೋಗ ದಿನದ ನಿಮಿತ್ತ ಉತ್ತರಾಖಂಡದ ಡೆಹ್ರಾಡೂನ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಯೋಗಾಚರಣೆಯೊಂದಿಗೆ ಸಂಭ್ರಮ ಆಚರಿಸುತ್ತಿದ್ದಾರೆ.ಡೆಹ್ರಾಡೂನಿನ ಫಾರೆಸ್ಟ್ ರೀಸರ್ಚ್ ಇನ್ಸ್ಟಿಟ್ಯೂಟ್ ನಲ್ಲಿ ನಡೆಯುತ್ತಿರುವ ನಾಲ್ಕನೇ ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಸುಮಾರು 55 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿರುವುದು ವಿಶೇಷ.ಪ್ರಧಾನಿಗಳೂ ಈ ಕಾರ್ಯಕ್ರಮದಲ್ಲಿ ಆಗಮಿಸಿರುವ ಕಾರಣ 6 ಸಾವಿರ ಪೊಲೀಸರನ್ನು ನಿಯೋಜಿಸಿ, ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. 2015 ಜೂನ್ 21 ರಿಂದ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.  
ದ್ವಾದಶ ರಾಶಿಗಳ (ಜೂನ್ 21) ಇಂದಿನ ದಿನಭವಿಷ್ಯ

ದ್ವಾದಶ ರಾಶಿಗಳ (ಜೂನ್ 21) ಇಂದಿನ ದಿನಭವಿಷ್ಯ

ಮೇಷ:ದಾಂಪತ್ಯ ಜೀವನ ವಿರಸದಿಂದ ಕೂಡಿರುತ್ತದೆ.  ವೃಷಭ:ಕೆಲವು ಶುಭ ಕಾರ್ಯಗಳನ್ನು ಮುಂದೂಡಬೇಕಾಗುತ್ತದೆ.  ಮಿಥುನ:ಎದುರಾಳಿಗಳಿಂದ ಹಲವಾರು ಸಮಸ್ಯೆ. ಕಟಕ:ಜ್ಯೋತಿಷಿಗಳಿಗೆ ಉತ್ತಮ ಆದಾಯವಿರುತ್ತದೆ. ಸಿಂಹ:ಆಪ್ತರ ಸಹಾಯದಿಂದ ಪ್ರಗತಿ ಸಾಧಿಸುವಿರಿ. ಕನ್ಯಾ:ಧರ್ಮಕಾರ್ಯಕ್ಕಾಗಿ ಹೆಚ್ಚು ಹಣ ಖರ್ಚು ಮಾಡುವಿರಿ. ತುಲಾ:ವಿದ್ಯಾರ್ಥಿಗಳು ಓದಿನ ಕಡೆ ಗಮನ ಕೊಡುವುದಿಲ್ಲ. ವೃಶ್ಚಿಕ:ಆದಾಯದಲ್ಲಿ ಸ್ವಲ್ಪವಾದರೂ ದಾನ ಮಾಡುವಿರಿ. ಧನುಸ್ಸು:ಸಮಾಜ ಸೇವಕರಿಗೆ ಪ್ರಶಸ್ತಿ ಲಭಿಸುವುದು. ಮಕರ:ಸ್ನೇಹಿತರು ತೊಂದರೆಯಲ್ಲಿ ಸಿಲುಕಿಸುವರು. ಕುಂಭ:ಹಣವನ್ನು ದುರ್ಬಳಕೆ ಮಾಡುವಿರಿ. ಮೀನ:ವಾಹನ ಚಾಲನೆ ಮಾಡುವಾಗ ಜಾಗ್ರತೆ ಇರಲಿ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more