Short News

ಕೇವಲ 10 ಕೆ.ಜಿ ತೂಕ ಇರುವ ಈ ಎಲೆಕ್ಟ್ರಿಕ್ ಬೈಕ್ ಅನ್ನು ಫೋಲ್ಡಿಂಗ್ ಕೂಡಾ ಮಾಡ್ಬಹುದು..!

ಕೇವಲ 10 ಕೆ.ಜಿ ತೂಕ ಇರುವ ಈ ಎಲೆಕ್ಟ್ರಿಕ್ ಬೈಕ್ ಅನ್ನು ಫೋಲ್ಡಿಂಗ್ ಕೂಡಾ ಮಾಡ್ಬಹುದು..!

ವಿಶ್ವಾದ್ಯಂತ ಸ್ಮಾಟ್ ವಾಹನಗಳ ಹಾವಳಿ ಹೆಚ್ಚುತ್ತಿದ್ದು, ಇದೀಗ ಬ್ರಿಟಿಷ್ ಸೈಕಲ್ ಉತ್ಪಾದನಾ ಸಂಸ್ಥೆಯಾದ ಹಮಿಂಗ್‌ಬರ್ಡ್ ಕೂಡಾ ವಿನೂತನ ಮಾದರಿಯ ಎಲೆಕ್ಟ್ರಿಕ್ ಬೈಕ್ ಮಾದರಿಯೊಂದನ್ನು ಅಭಿವೃದ್ದಿ ಮಾಡಿದೆ. ಕೇವಲ 10 ಕೆ.ಜಿ 300 ಗ್ರಾಂ ತೂಕವನ್ನು ಹೊಂದಿರುವ ಈ ಬೈಕ್ ನೋಡಲು ಸೈಕಲ್ ರೀತಿಯಲ್ಲೇ ಕಂಡರೂ ಉತ್ತಮ ಚಾಲನಾ ಕೌಶಲ್ಯವನ್ನು ಪಡೆದುಕೊಂಡಿರುವುದೇ ಈ ವಾಹನದ ವಿಶೇಷ. ಹಮಿಂಗ್‌ಬರ್ಡ್ ಸಂಸ್ಥೆಯು ಹಗುರದಾಯಕ ಸೈಕಲ್ ಮತ್ತು ಬೈಕ್ ಮಾದರಿಗಳನ್ನು ಅಭಿವೃದ್ಧಿಗೊಳಿಸುವುದರಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಹೊಂದಿದ್ದು, 2017ರಲ್ಲೇ 6.9 ಕೆ.ಜಿ ತೂಕದ ಸಣ್ಣ ಎಲೆಕ್ಟ್ರಿಕ್ ಬೈಕ್‌ವೊಂದನ್ನು ಅಭಿವೃದ್ಧಿಪಡಿಸಿತ್ತು.
ತಪ್ತ ಮುದ್ರಾಧಾರಣೆ: ಶೀರೂರು ಮಠದ ಭಕ್ತರಲ್ಲಿ ಮಡುಗಟ್ಟಿದ ದುಃಖ

ತಪ್ತ ಮುದ್ರಾಧಾರಣೆ: ಶೀರೂರು ಮಠದ ಭಕ್ತರಲ್ಲಿ ಮಡುಗಟ್ಟಿದ ದುಃಖ

ಇಂದು ಸೋಮವಾರ ತಪ್ತ ಮುದ್ರಾಧಾರಣೆ. ಇತಿಹಾಸದಲ್ಲೇ ಮೊದಲ ಏಕಾದಶಿಗೆ ಅಷ್ಟಮಠಗಳಿಗೆ ಸಂಭ್ರಮ. ಎಲ್ಲಾ ಕಡೆಗಳಿಂದ ಭಕ್ತರು ಮುದ್ರಧಾರಣೆಗೆ ಆಗಮಿಸುತ್ತಾರೆ. ಪ್ರತೀ ಬಾರಿ ಉಡುಪಿಯಲ್ಲಿ ಮುದ್ರಾಧಾರಣೆ ಅದ್ದೂರಿಯಾಗಿ ನಡೆಯುತ್ತದೆ. ಆದರೆ ಶೀರೂರು ಶ್ರೀ ಅಸಹಜ ಸಾವಿನ ಹಿನ್ನಲೆಯಲ್ಲಿ ಶೀರೂರು ಮಠದಲ್ಲಿ ಮಾತ್ರ ಮುದ್ರಾಧಾರಣೆ ಸ್ಥಗಿತಗೊಳಿಸಲಾಗಿದೆ. ವಿಷ್ಣುವಿನ ಆಯುಧಗಳಾದ ಶಂಖ ಹಾಗೂ ಚಕ್ರದ ಮುದ್ರೆಯನ್ನು ಯತಿಗಳು ಮುದ್ರಿಸುತ್ತಾರೆ.
ಬಿಸಿಸಿಐ ಪ್ರಕಾರ ಟೀಂ ಇಂಡಿಯಾದ ನಾಯಕ ಎಂ.ಎಸ್.ಧೋನಿ

ಬಿಸಿಸಿಐ ಪ್ರಕಾರ ಟೀಂ ಇಂಡಿಯಾದ ನಾಯಕ ಎಂ.ಎಸ್.ಧೋನಿ

ಕ್ರಿಕೆಟಿಗ ಎಂ.ಎಸ್.ಧೋನಿ ಟೀಂ ಇಂಡಿಯಾದ ನಾಯಕತ್ವದಿಂದ ಹೊರಬಂದು ವರ್ಷಗಳೇ ಕಳೆದಿವೆ. ಆದ್ರೆ ಬಿಸಿಸಿಐ ಪ್ರಕಾರ ಇನ್ನೂ ಕೂಡ ಟೀಂ ಇಂಡಿಯಾ ಕ್ಯಾಪ್ಟನ್ ಎಂ.ಎಸ್.ಧೋನಿಯವರೇ ಆಗಿದ್ದಾರೆ. ಹೌದು ಇದು ನಿಜಕ್ಕೂ ಅಚ್ಚರಿಯ ವಿಚಾರವೇ. ಏಕೆಂದರೆ, ಬಿಸಿಸಿಐ ಅಧಿಕೃತ ಆಪ್ ನಲ್ಲಿನ ಮಾಹಿತಿಯ ಪ್ರಕಾರ, ಇಂದಿಗೂ ಟೀಮ್ ಇಂಡಿಯಾದ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅಂತಾನೇ ಹೇಳ್ತಿದೆ. ಸದ್ಯ ಈ ವಿಚಾರ ಟ್ವಿಟ್ಟರ್ ನಲ್ಲಿ ಭಾರೀ ಚರ್ಚೆಗೆ ಒಳಗಾಗ್ತಿದೆ. ಬಿಸಿಸಿಐ ಆಪ್ ನಲ್ಲಿ ಮಹೇಂದ್ರ ಸಿಂಗ್ ಧೋನಿ ಪ್ರೊಫೈಲ್ ಓಪನ್ ಮಾಡಿದ್ರೆ ಅವರು ಟೀಮ್ ಇಂಡಿಯಾದ ಕ್ಯಾಪ್ಟನ್ ಅನ್ನೋ ಮಾಹಿತಿ ಇದೆ.
ಮೂರು ಸಿಂಹಗಳ ಬಾಯಿಯಿಂದ ತನ್ನ ಮಾಲೀಕನನ್ನು ರಕ್ಷಸಿದ ಶ್ವಾನ

ಮೂರು ಸಿಂಹಗಳ ಬಾಯಿಯಿಂದ ತನ್ನ ಮಾಲೀಕನನ್ನು ರಕ್ಷಸಿದ ಶ್ವಾನ

ಇಲ್ಲೊಂದು ಶ್ವಾನ ಮೂರು ಸಿಂಹಗಳ ಬಾಯಿಯಿಂದ ತನ್ನ ಮಾಲೀಕನನ್ನು ರಕ್ಷಿಸಿಕೊಂಡಿದೆ. ಗುಜರಾತ್​ನ ಅಮ್ರೇಲಿಯ ಅಂಬಾರ್ಡಿ ಗ್ರಾಮದಲ್ಲಿ ಸಿಂಹಗಳ ದಾಳಿಗೆ ಒಳಗಾದ ಮಾಲೀಕನ ಜೊತೆಗಿದ್ದ ಶ್ವಾನ ಆತನನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ತಿಂಗಳ 21ರಂದು 25 ವರ್ಷದ ಭಾವೇಶ್ ಹಮೀರ್ ಭರ್ವಾದ್ ಎಂಬಾತ ಕುರಿಗಳನ್ನು ಮೇಯಿಸಲು ಹೋಗಿದ್ದಾಗ ಮೂರು ಸಿಂಹಗಳು ಕುರಿಗಳ ಮೇಲೆ ದಾಳಿ ಮಾಡಿ 3 ಕುರಿಗಳನ್ನು ಕೊಂದಿವೆ. ನಂತರ ಭಾವೇಶ್ ಮೇಲೆ ದಾಳಿಗೆ ಮುಂದಾಗಿದ್ದು, ಈ ವೇಳೆ ಶ್ವಾನ ಜೋರಾಗಿ ಬೋಗಳಲು ಶುರು ಮಾಡಿದೆ. ಆಗ ಜನ ಸೇರಿದ್ದು, ಇದರಿಂದ ಹೆದರಿದ ಸಿಂಹಗಳು ಅಲ್ಲಿಂದ ಕಾಲ್ಕಿತ್ತಿವೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more