Short News

ಸ್ಕೋಡಾ ಒಕ್ಟಿವಿಯಾ ಮತ್ತು ಹೋಂಡಾ ಸಿವಿಕ್‌ಗೆ ಟಾಂಗ್ ನೀಡಲಿದೆ ಕಿಯಾ ಆಪ್ಟಿಮಾ

ಸ್ಕೋಡಾ ಒಕ್ಟಿವಿಯಾ ಮತ್ತು ಹೋಂಡಾ ಸಿವಿಕ್‌ಗೆ ಟಾಂಗ್ ನೀಡಲಿದೆ ಕಿಯಾ ಆಪ್ಟಿಮಾ

ದಕ್ಷಿಣ ಕೊರಿಯಾದ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಯಾದ ಕಿಯಾ ಮೋಟಾರ್ಸ್ ಸದ್ಯದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಹೊಸ ಕಾರು ಉತ್ಪನ್ನಗಳನ್ನು ಬಿಡುಗಡೆಗೊಳಿಸುತ್ತಿದ್ದು, ಇದರಲ್ಲಿ ಮೊದಲ ಹಂತವಾಗಿ ಬಹುನೀರಿಕ್ಷಿತ ಎಸ್‌ಪಿ ಕಾನ್ಸೆಪ್ಟ್ ಎಸ್‌ಯುವಿ ಬಿಡುಗಡೆಯೊಂದಿಗೆ ಇನ್ನು ಹಲವು ಮಾದರಿ ಕಾರುಗಳನ್ನು ಬಿಡುಗಡೆಗೊಳಿಸುವ ಇರಾದೆಯಲ್ಲಿದೆ. ಸದ್ಯ ವಿದೇಶಿ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿರುವ ಆಪ್ಟಿಮಾ ಕಾರುಗಳು 2.4-ಲೀಟರ್, 1.6-ಲೀಟರ್ ಮತ್ತು 2.0-ಲೀಟರ್ ಪೆಟ್ರೋಲ್ ಮಾದರಿಗಳನ್ನು ಹೊಂದಿದ್ದು, ಡಿಸೇಲ್ ಆವೃತ್ತಿಯಲ್ಲಿ 2.0-ಲೀಟರ್ ಮತ್ತು 1.6-ಲೀಟರ್ ಎಂಜಿನ್ ಆಯ್ಕೆ ಪಡೆದಿವೆ.
ಹಾಕಿ ಆಡಲು ಹೆತ್ತವರು ಅನುಮತಿ ನಿರಾಕರಿಸಿದ್ದರು: ರಾಣಿ ಕಣ್ಣೀರು!

ಹಾಕಿ ಆಡಲು ಹೆತ್ತವರು ಅನುಮತಿ ನಿರಾಕರಿಸಿದ್ದರು: ರಾಣಿ ಕಣ್ಣೀರು!

ಲಂಡನ್ ನಲ್ಲಿ ನಾಳೆ(ಜು. 21)ಯಿಂದ ಆರಂಭಗೊಳ್ಳಲಿರುವ ವನಿತಾ ಹಾಕಿ ವಿಶ್ವಕಪ್ ಪಂದ್ಯಾಟದ ಪ್ರಚಾರಾರ್ಥವಾಗಿ ಲಂಡನ್ ನ ಥೀಮ್ಸ್ ನದಿ ದಡದಲ್ಲಿ, ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ 16 ರಾಷ್ಟ್ರಗಳ ಧ್ವಜಗಳ ಮಧ್ಯೆ ನಿಂತು ಫೋಟೋ ಕ್ಲಿಕ್ಕಿಸಿಕೊಳ್ಳುವಾಗ ಭಾರತದ ನಾಯಕಿ ರಾಣಿ ರಾಂಪಾಲ್ ಕಣ್ಣಲ್ಲಿ ನೀರಾಡಿತು; ಆದರದು ಖುಷಿಯ ಕಣ್ಣೀರು. ರಾಣಿ ರಾಂಪಾಲ್ ತನ್ನ ಬಾಲ್ಯದ ದಿನಗಳನ್ನು ನೆನೆದುಕೊಂಡು ಕಣ್ಣೀರಿತ್ತರು. ಅದರಲ್ಲೂ ತನ್ನ ಮೊದಲ ಕೋಚ್ ಬಲದೇವ್ ಸಿಂಗ್ ಅವರನ್ನು ನೆನೆದು ಹೆಚ್ಚು ಭಾವುಕರಾದರು. ಯಾಕೆಂದರೆ ಬಾಲ್ಯದ ದಿನಗಳಲ್ಲಿ ತನ್ನ ಸಾಧನೆಗೆ ಹೆಚ್ಚು ಬೆಂಗಾವಲಾಗಿ ನಿಂತವರು ಬಲದೇವ್ ಎಂದು ರಾಣಿ ತಿಳಿಸಿದರು.
ಜು.22 ರಂದು 'ವೃತ್ತಿಪರ ಕಂಪ್ಯೂಟರ್ ಸಾಕ್ಷರತೆ' ಪುಸ್ತಕ ಬಿಡುಗಡೆ

ಜು.22 ರಂದು 'ವೃತ್ತಿಪರ ಕಂಪ್ಯೂಟರ್ ಸಾಕ್ಷರತೆ' ಪುಸ್ತಕ ಬಿಡುಗಡೆ

ಕಂಪ್ಯೂಟರ್ ಬಳಕೆ ಎಂಬುದು ಹೊಸ ತಲೆಮಾರಿನ 'ಅತ್ಯವಶ್ಯಕ'ಗಳಲ್ಲೊಂದಾಗಿರುವ ಈ ಹೊತ್ತಲ್ಲಿ, ಕಂಪ್ಯೂಟರ್ ಸಾಕ್ಷರತೆ ಪ್ರತಿಯೊಬ್ಬರಿಗೂ ಅನಿವಾರ್ಯ. ಅದಕ್ಕೆಂದೇ ಕಂಪ್ಯೂಟರ್ ಕುರಿತು ಕನ್ನಡ ಭಾಷೆಯಲ್ಲಿಯೇ ಸಮಗ್ರ ಮಾಹಿತಿ ನೀಡುವ ಪ್ರಯತ್ನವಾಗಿ 'ವೃತ್ತಿಪರ ಕಂಪ್ಯೂಟರ್ ಸಾಕ್ಷರತೆ' ಎಂಬ ಪುಸ್ತಕವನ್ನು ವೃತ್ತಿಯಲ್ಲಿ ಉಪನ್ಯಾಸಕರಾದ ಪ್ರೊ.ಮಹದೇವಯ್ಯ ಅವರು ಹೊರತರುತ್ತಿದ್ದಾರೆ. ಜುಲೈ 22, ಭಾನುವಾರದಂದು ಬೆಳಿಗ್ಗೆ 10:30 ಕ್ಕೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣ ರಾಜ ಪರಿಷನ್ಮಂದಿರದಲ್ಲಿ (ಚಾಮರಾಜಪೇಟೆ) ಪುಸ್ತಕ ಬಿಡುಗಡೆಗೊಳ್ಳಲಿದೆ.
ಉಡುಪಿ: ಶಿರೂರು ಶ್ರೀಗಳ ಸಾವಿನ ಹಿಂದೆ ಲ್ಯಾಂಡ್ ಮಾಫಿಯಾ?

ಉಡುಪಿ: ಶಿರೂರು ಶ್ರೀಗಳ ಸಾವಿನ ಹಿಂದೆ ಲ್ಯಾಂಡ್ ಮಾಫಿಯಾ?

ವಿಧಿವಶರಾದ ಶಿರೂರು ಶ್ರೀ ಗಳ ಅಕಾಲಿಕ ಸಾವು ಹಲವಾರು ಸಂಶಯಗಳಿಗೆ, ಊಹಾಪೋಹ ಹರಡಲು ಕಾರಣವಾಗಿದೆ. ಶ್ರೀರೂರು ಶ್ರೀ ಗಳ ಪೂರ್ವಾಶ್ರಮದ ಸೋದರ ಪ. ಲಾತವ್ಯ ಆಚಾರ್ಯ ಇದೊಂದು ವಿಷಪ್ರಾಶನ ಪ್ರಕರಣ ಎಂದು ಆರೋಪಿಸಿದ್ದಾರೆ. ಆದರೆ ಈ ನಡುವೆ ಶಿರೂರು ಶ್ರೀಗಳ ಅಕಾಲಿಕ ನಿಧನ ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರಕಿದೆ. ಶ್ರೀ ಗಳ ನಿಧನದ ರಹಸ್ಯ ಬಿಚ್ಚಿಟ್ಟ ಶ್ರೀಗಳ ಆಪ್ತರೋರ್ವರು ಶಿರೂರು ಶ್ರೀ ಗಳ ನಿಧನದ ರಹಸ್ಯ ಬಿಚ್ಚಿಟ್ಟಿದ್ದಾರೆ. ಶ್ರೀಗಳ ಆಪ್ತರೋರ್ವ ಸ್ಫೋಟಕ ಮಾಹಿತಿ ಬಹಿರಂಗ ಪಡಿಸಿದ್ದು, ಈ ಹಿನ್ನೆಲೆಯಲ್ಲಿ ಶಿರೂರು ಶ್ರೀ ಗಳ ಅಸಹಜ ಸಾವಿನ ಹಿಂದೆ ಲ್ಯಾಂಡ್ ಮಾಫಿಯಾ ಇದೆಯಾ ಎಂಬ ಸಂಶಯ ಮೂಡಲಾರಂಭಿಸಿದೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more