Short News

ಎಕ್ಸ್-ಮೋಷನ್ ಕಾನ್ಸೆಪ್ಟ್ ಎಸ್‌ಯುವಿ ಪ್ರದರ್ಶನ ಮಾಡಿದ ಎಂಜಿ ಮೋಟಾರ್ಸ್

ಎಕ್ಸ್-ಮೋಷನ್ ಕಾನ್ಸೆಪ್ಟ್ ಎಸ್‌ಯುವಿ ಪ್ರದರ್ಶನ ಮಾಡಿದ ಎಂಜಿ ಮೋಟಾರ್ಸ್

ಚೀನಾ ಮೂಲದ ಸೈಕ್ ಸಂಸ್ಥೆಯ ಅಧೀನದಲ್ಲಿರುವ ಬ್ರಿಟನ್ ಮೂಲದ ಎಂಜಿ ಮೋಟಾರ್ ಸಂಸ್ಥೆಯು ಮೊದಲ ಬಾರಿಗೆ ಭಾರತೀಯ ಮಾರುಕಟ್ಟೆಯ ಪ್ರವೇಶ ಪಡೆಯುತ್ತಿದ್ದು, ಮೊದಲ ಹಂತದಲ್ಲೇ ಜನಪ್ರಿಯ ಹ್ಯುಂಡೈ ಕ್ರೇಟಾ ಹಿಂದಿಕ್ಕಬಲ್ಲ ಝೆಡ್ಎಸ್ ಎಸ್‌ಯುವಿ ಮಾದರಿಯನ್ನು ಬಿಡುಗಡೆಗೊಳಿಸುತ್ತಿದೆ. ಹೀಗಿರುವಾಗಲೇ ಎಂಜಿ ಮೋಟಾರ್ಸ್ ಸಂಸ್ಥೆಯು ಎಕ್ಸ್-ಮೋಷನ್ ಎನ್ನುವ ಮತ್ತೊಂದು ವಿನೂತ ಎಸ್‌ಯುವಿ ಮಾದರಿಯ ಟೀಸರ್ ಬಿಡುಗಡೆಗೊಳಿಸಿದ್ದು, ಈ ಕಾರು ಮಾದರಿ ಕೂಡಾ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಮುಂಬರುವ ಬಿಜೀಂಗ್ ಮೋಟಾರ್ ಶೋನಲ್ಲಿ ಹೊಸ ಕಾರುನ್ನು ಬಿಡುಗಡೆ ಮಾಡಲಿವೆ.
ಶಾಂತಿ, ನೆಮ್ಮದಿಯ ಕರ್ನಾಟಕ ನಮ್ಮದಾಗಬೇಕು : ಪೂರ್ಣಿಮಾ ಶ್ರೀನಿವಾಸ್

ಶಾಂತಿ, ನೆಮ್ಮದಿಯ ಕರ್ನಾಟಕ ನಮ್ಮದಾಗಬೇಕು : ಪೂರ್ಣಿಮಾ ಶ್ರೀನಿವಾಸ್

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪೂರ್ಣಿಮಾ ಶ್ರೀನಿವಾಸ್ ಅವರು 2018ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ನಾವು ಹೊರದೇಶಗಳಿಗೆ ಹೋಗಿ ಬಂದು ಕರ್ನಾಟಕವನ್ನು ನೋಡಿದಾಗ ನಿಜವಾಗಲೂ ತುಂಬಾ ಬೇಸರವಾಗುತ್ತದೆ. ನಮ್ಮಲ್ಲಿ ಒಳ್ಳೆಯ ಬಜೆಟ್ ಮಂಡನೆಯಾಗುತ್ತದೆ. ಉತ್ತಮವಾದ ಅಧಿಕಾರಿಗಳು ಇದ್ದಾರೆ. ಜನರಿಗಾಗಿ ಮಾಡಿದ ಯೋಜನೆಗಳು ನೇರವಾಗಿ ಅವರನ್ನು ತಲುಪುವ ಕಾರ್ಯಗಳು ಆಗಬೇಕಾಗಿದೆ. ಎಲ್ಲೂ ಕೋಮುಗಲಭೆ ಆಗಬಾರದು. ಶಾಂತಿ ನೆಲೆಸಬೇಕು ಎಂಬ ಆಸೆ ಇದೆ. ಭಾರತೀಯ ಜನತಾಪಾರ್ಟಿ ಮೂಲಕ ಈ ಆಸೆ ನೇರವೇರಲಿದೆ ಎಂದರು.
ಚುನಾವಣಾ ಆಯೋಗ ಕೆಂಗಣ್ಣು, 732 ಬಾರ್ ಗಳಿಗೆ ಬೀಗ

ಚುನಾವಣಾ ಆಯೋಗ ಕೆಂಗಣ್ಣು, 732 ಬಾರ್ ಗಳಿಗೆ ಬೀಗ

ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಕೇವಲ ರಾಜಕಾರಣಿಗಳು ಮಾತ್ರವಲ್ಲದೆ ಜನಸಾಮಾನ್ಯರಿಗೂ ಬಿಸಿ ಮುಟ್ಟಿಸುತ್ತಿದೆ. ಸಮಯ ಮೀರಿ ಕಾರ್ಯನಿರ್ವಹಿಸುವ 700ಕ್ಕೂ ಅಧಿಕ ಬಾರ್ ಹಾಗೂ ರೆಸ್ಟೋರೆಂಟ್ ಗಳಿಗೆ ಚುನಾವಣಾ ಆಯೋಗದ ನೀತಿ ಸಂಹಿತೆಯಡಿ ಬೀಗ ಜಡಿಯಲಾಗಿದೆ. ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ 752 ಬಾರ್, ಪಬ್ ಗಳಲ್ಲಿ ಚಟುವಟಿಕೆಗಳು ಮಂಕಾಗಿವೆ. ನಿಗದಿತ ವೇಳೆಗಿಂತ ಹೆಚ್ಚಿನ ಸಮಯ ಬಾರ್, ಪಬ್ ಗಳು ಕಾರ್ಯನಿರ್ವಹಣೆ ಮಾಡಿದ ಅಥವಾ ಸಂಹಿತೆ ಉಲ್ಲಂಘಿಸಿದ ಒಟ್ಟು 752 ಬಾರ್, ಪಬ್ ಗಳನ್ನು ಅಬಕಾರಿ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಚುನಾವಣಾ ಆಯೋಗದ ಅಧಿಕಾರಿಗಳು ಬಂದ್ ಮಾಡಿಸಿದ್ದಾರೆ.
ಪಾಕ್ ನಲ್ಲಿ ನಾಪತ್ತೆಯಾಗಿದ್ದ ಸಿಕ್ಖ್ ವ್ಯಕ್ತಿ ಇಂದು ತವರಿಗೆ

ಪಾಕ್ ನಲ್ಲಿ ನಾಪತ್ತೆಯಾಗಿದ್ದ ಸಿಕ್ಖ್ ವ್ಯಕ್ತಿ ಇಂದು ತವರಿಗೆ

ಬೈಶಾಖೀ ಉತ್ಸವಕ್ಕೆಂದು 24ರ ಹರೆಯದ ಅಮರ್‌ಜಿತ್‌ ಸಿಂಗ್‌ ಭಾರತೀಯ ಸಿಕ್ಖ್ ವ್ಯಕ್ತಿ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿ ನಾಪತ್ತೆಯಾಗಿದ್ದ. ಸದ್ಯ ಈತನ ಗುರುತು ಪತ್ತೆಯಾಗಿದ್ದು, ಪಾಕಿಸ್ತಾನದ ಲಾಹೋರಿನಲ್ಲಿ ಆತನ ಪೇಸ್‌ ಬುಕ್‌ ಫ್ರೆಂಡ್‌ ಮನೆಯಲ್ಲಿ ಇರುವುದಾಗಿ ತಿಳಿದು ಬಂದಿದೆ. ಇಂದು ಈತನನ್ನು ವಾಘಾ ಗಡಿಯಲ್ಲಿ ಭಾರತೀಯ ಅಧಿಕಾರಿಗಳ ವಶಕ್ಕೆ ಒಪ್ಪಿಸಲಾಗುವುದು ಎಂದು ವರದಿಯಾಗಿದೆ. ಇಟಿಪಿಬಿ ಪಾಕ್‌ ಒಳಾಡಳಿತ ಸಚಿವಾಲಯದ ವಿಶೇಷಾನುಮತಿ ಸಿಕ್ಕ ನಂತರ ಅಮರ್‌ಜಿತ್‌ ಸಿಂಗ್‌ ನನ್ನು ವಾಘಾ ಗಡಿಯಲ್ಲಿ BSF ಅಧಿಕಾರಿಗಳ ವಶಕ್ಕೆ ಒಪ್ಪಿಸುವರು ಎಂದು ಇಟಿಪಿಬಿ ವಕ್ತಾರ ಆಮೀರ್‌ ಹಾಶ್ಮೀ ಮಾಧ್ಯಮಕ್ಕೆ ತಿಳಿಸಿದರು.