Short News

ಅಲಾಯ್ ಚಕ್ರದ ಜೊತೆ ಬ್ರಿಡ್ಜ್‌ಸ್ಟೋನ್ ಟೈರ್ ಪಡೆದಿದೆ ಟಾಟಾ ಹ್ಯಾರಿಯರ್

ಅಲಾಯ್ ಚಕ್ರದ ಜೊತೆ ಬ್ರಿಡ್ಜ್‌ಸ್ಟೋನ್ ಟೈರ್ ಪಡೆದಿದೆ ಟಾಟಾ ಹ್ಯಾರಿಯರ್

ಟಾಟಾ ಮೋಟಾರ್ಸ್ ಸಂಸ್ಥೆಯು ಸದ್ಯದಲ್ಲೇ ತನ್ನ ಬಹುನೀರಿಕ್ಷಿತ ಗೇಮ್ ಚೇಂಜರ್ ಕಾರುಗಳನ್ನು ಬಿಡುಗಡೆಗೊಳಿಸುತ್ತಿದ್ದು, ಇದರಲ್ಲಿ ಹ್ಯಾರಿಯರ್ ಹೆಸರಿನ ವಿನೂತನ ಎಸ್‌ಯುವಿ ಮಾದರಿಯೊಂದು ಟಾಟಾ ಸಂಸ್ಥೆಯನ್ನು ಮತ್ತಷ್ಟು ಜನಪ್ರಿಯಗೊಳಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಕಾರಿನ ಎಂಜಿನ್ ವೈಶಿಷ್ಟ್ಯತೆ, ಕಾರಿನ ವಿನ್ಯಾಸಗಳ ಆಧಾರದ ಮೇಲೆ ಟಾಟಾ ಹೊಸ ಕಾರಿಗೆ ಹ್ಯಾರಿಯರ್ ಎಂದು ನಾಮಕರಣ ಮಾಡಲಾಗಿದ್ದು, ಹೊಸ ಕಾರುಗಳಲ್ಲಿ ವಿಶ್ವದರ್ಜೆಯ ಸೌಲಭ್ಯಗಳನ್ನ ಒದಗಿಸುವ ಬಗ್ಗೆ ಟಾಟಾ ಸುಳಿವು ನೀಡಿದೆ. 2019ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಲಗ್ಗೆಯಿಡಲಿದ್ದು, ಹೊಸ ಕಾರಿನ ಬೆಲೆ ರೂ.12ಲಕ್ಷದಿಂದ ರೂ.15ಲಕ್ಷ ವೆಂದು ಅಂದಾಜಿಸಲಾಗಿದೆ.
ಸೇತುವೆ ಕುಸಿದು ಬಲಿಯಾದವರ ಸಂಖ್ಯೆ 38ಕ್ಕೆ ಏರಿಕೆ

ಸೇತುವೆ ಕುಸಿದು ಬಲಿಯಾದವರ ಸಂಖ್ಯೆ 38ಕ್ಕೆ ಏರಿಕೆ

ಇಟಲಿ ಜಿನೋವಾದಲ್ಲಿ ಸೇತುವೆ ಕುಸಿದು ಬಿದ್ದು ಬಲಿಯಾದವರ ಸಂಖ್ಯೆ 38ಕ್ಕೆ ಏರಿಕೆಯಾಗಿದೆ. ಇಟಲಿ ಗೃಹ ಸಚಿವರು ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ. ಮಂಗಳವಾರ 650 ಅಡಿ ಉದ್ದದ ಉತ್ತರ ಫೋರ್ಡ್ ಮೋರಂಡಿ ಮೋಟರ್ವೇ ಸೇತುವೆ ಕುಸಿದು ಬಿದ್ದು, 30ಕ್ಕೂ ಹೆಚ್ಚು ಕಾರು, ಟ್ರಕ್ ಸೇರಿ ಅನೇಕ ವಾಹನಗಳು ಕೆಳಗೆ ಬಿದ್ದಿತ್ತು. ಸೇತುವೆ ಕುಸಿತಕ್ಕೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಸೇತುವೆ ನಿರ್ಮಾಣದಲ್ಲಿ ನಡೆದ ಕೆಲ ನ್ಯೂನ್ಯತೆಯೇ ಈ ದುರ್ಘಟನೆಗೆ ಕಾರಣ ಎನ್ನಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಕಂಡುಬಂದಿದೆ.
ಒಂದೊಳ್ಳೆ ಕಾರಣಕ್ಕಾಗಿ ಗಾಂಧಿ ಬಜಾರ್ ನಲ್ಲಿ ಹೂ ಮಾರಿದ ಪ್ರಿಯಾಂಕಾ ಉಪೇಂದ್ರ.!

ಒಂದೊಳ್ಳೆ ಕಾರಣಕ್ಕಾಗಿ ಗಾಂಧಿ ಬಜಾರ್ ನಲ್ಲಿ ಹೂ ಮಾರಿದ ಪ್ರಿಯಾಂಕಾ ಉಪೇಂದ್ರ.!

ಬರೀ ಮನರಂಜನೆ ನೀಡುವುದು ಮಾತ್ರ ಅದರ ಜೊತೆಗೆ ಜನರಿಗೆ ಸಹಾಯ ಹಸ್ತ ಚಾಚುವುದು ಉದಯ ವಾಹಿನಿಯ ಉದ್ದೇಶ. ಈ ನಿಟ್ಟಿನಲ್ಲಿ ರೂಪುಗೊಂಡ ಕಾರ್ಯಕ್ರಮವೇ 'ಸದಾ ನಿಮ್ಮೊಂದಿಗೆ'.ಲೋಕೇಶ್ ಪ್ರೊಡಕ್ಷನ್ಸ್ ಮೂಲಕ ರೆಡಿ ಆಗುತ್ತಿರುವ 'ಸದಾ ನಿಮ್ಮೊಂದಿಗೆ' ಶೋ ಪ್ರತಿ ವಾರಾಂತ್ಯದಲ್ಲಿ ಉದಯ ಟಿವಿಯಲ್ಲಿ ಪ್ರಸಾರ ಆಗುತ್ತಿದೆ. ಇದೇ ಕಾರ್ಯಕ್ರಮಕ್ಕಾಗಿ ನಟಿ ರಶ್ಮಿಕಾ ಮಂದಣ್ಣ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡಿದ್ದರು.ರೈತರ ಕುಟುಂಬಕ್ಕೆ ಸಹಾಯ ಆಗಲಿ ಅಂತ ರೋರಿಂಗ್ ಸ್ಟಾರ್ ಶ್ರೀಮುರಳಿ ಕಬ್ಬಿನ ಹಾಲು ಮಾರಿದ್ದರು. ಇದೀಗ ಈ ಕಾರ್ಯಕ್ರಮಕ್ಕಾಗಿ ಗಾಂಧಿ ಬಜಾರ್ ನಲ್ಲಿ ಹೂವಿನ ವ್ಯಾಪಾರ ಮಾಡಿದ್ದಾರೆ ನಟಿ ಪ್ರಿಯಾಂಕಾ ಉಪೇಂದ್ರ.
ದರ್ಶನ್ ನೋಡಲು ಜನವೋ ಜನ, ಲಾಠಿ ರುಚಿ ಕಂಡ ಅಭಿಮಾನಿಗಳು

ದರ್ಶನ್ ನೋಡಲು ಜನವೋ ಜನ, ಲಾಠಿ ರುಚಿ ಕಂಡ ಅಭಿಮಾನಿಗಳು

ರೇಷ್ಮೆನಗರಿ ರಾಮನಗರದಲ್ಲಿ ಇಂದು ಬುಧವಾರ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಎಂಎಸ್ ಗೋಲ್ಡ್ ಅಂಡ್ ಡೈಮಂಡ್ಸ್ ನೂತನ ಆಭರಣ ಮಳಿಗೆಯನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ನೆಚ್ಚಿನ ನಟನನ್ನು ನೋಡಲು ಜಿಲ್ಲೆಯ ಹಲವೆಡೆಗಳಿಂದ ಸಾವಿರಾರು ಅಭಿಮಾನಿಗಳು ಆಗಮಿಸಿದ್ದರು. ದರ್ಶನ್ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರಿಂದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕೆಲ ಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ಇದೇ ವೇಳೆ ಹೆದ್ದಾರಿಗೆ ನುಗ್ಗಿದ ಅಭಿಮಾನಿಗಳನ್ನು ತಡೆಯಲು ಹರಸಾಹಸ ಪಟ್ಟ ಪೊಲೀಸರು ಕಡೆಗೆ ಲಘುಲಾಠಿ ಪ್ರಹಾರ ನಡೆಸಿ ಜನರನ್ನು ಚದುರಿಸಿದರು.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more