Short News

ಪ್ರತಿ ಚಾರ್ಜ್‌ಗೆ 300ಕಿಮಿ ಮೈಲೇಜ್ ನೀಡಲಿದೆ ಟಾಟಾ ಸಂಸ್ಥೆಯ ಈ ಹೊಸ ಇವಿ ಕಾರು

ಪ್ರತಿ ಚಾರ್ಜ್‌ಗೆ 300ಕಿಮಿ ಮೈಲೇಜ್ ನೀಡಲಿದೆ ಟಾಟಾ ಸಂಸ್ಥೆಯ ಈ ಹೊಸ ಇವಿ ಕಾರು

ಟಾಟಾ ಮೋಟಾರ್ಸ್ ಸಂಸ್ಥೆಯು ಇದೀಗ ಅತಿ ಹೆಚ್ಚು ಮೈಲೇಜ್ ನೀಡಬಲ್ಲ ಹೊಸ ಕಾರು ಮಾದರಿಯೊಂದನ್ನು ಅಭಿವೃದ್ಧಿ ಮಾಡುತ್ತಿದ್ದು, ಜಿನೆವಾದಲ್ಲಿ ನಡೆಯುತ್ತಿರುವ 2018ರ ಆಟೋ ಮೇಳದಲ್ಲಿ ಪ್ರದರ್ಶನಗೊಳಿಸುವ ಮೂಲಕ ಇತರೆ ಕಾರು ಉತ್ಪಾದನಾ ಸಂಸ್ಥೆಗಳಲ್ಲಿ ಕುತೂಹಲ ಹುಟ್ಟುಹಾಕಿದೆ. ಜಿನೆವಾ ಆಟೋ ಮೇಳದಲ್ಲಿ ಟಾಟಾ ಸಂಸ್ಥೆಯು ಪ್ರದರ್ಶನಗೊಳಿಸಿರುವ ಎಲೆಕ್ಟ್ರಿಕ್ ಕಾರು ಕಾಲ್ಪನಿಕ ಸೆಡಾನ್ ಮಾದರಿಯಾಗಿದ್ದು, OMEGAಆರ್ಕಿಟೆಕ್ಚರ್ ವಿನ್ಯಾಸದೊಂದಿಗೆ ಸಿದ್ದಗೊಳ್ಳುತ್ತಿದೆ. ಟಾಟಾ ಕಾರುಗಳಲ್ಲಿ ಪ್ರತಿ ಚಾರ್ಜಿಂಗ್‌ಗೆ 400ಕಿಮಿ ಮೈಲೇಜ್ ಒದಗಿಸಬಲ್ಲ ಬ್ಯಾಟರಿ ಆವಿಷ್ಕಾರ ಬಗ್ಗೆಯೂ ಸುಳಿವು ನೀಡಿದೆ.
ಮೈಸೂರು-ಬೆಂಗಳೂರಿನ ವೊಡಾಫೋನ್ ಬಳಕೆದಾರರಿಗೆ ಸಂತಸದ ಸುದ್ದಿ..!

ಮೈಸೂರು-ಬೆಂಗಳೂರಿನ ವೊಡಾಫೋನ್ ಬಳಕೆದಾರರಿಗೆ ಸಂತಸದ ಸುದ್ದಿ..!

ವೊಡಾಫೋನ್ ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ 4G VoLTE ಯನ್ನು ನೀಡುವ ಯೋಜನೆಯನ್ನು ರೂಪಿಸಿದೆ. ಇದೇ ಹಿನ್ನಲೆಯಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ರಾಜಧಾನಿ ಬೆಂಗಳೂರಿನಲ್ಲಿ 4G VoLTEಸೇವೆಯನ್ನು ವೊಡಾಫೋನ್ ಶುರು ಮಾಡಿದೆ. ಇದಲ್ಲದೇ ಮೈಸೂರು ಮತ್ತು ಬೆಳಗಾವಿಯಲ್ಲಿಯೂ 4G VoLTEಸೇವೆಯನ್ನು ಆರಂಭ ಮಾಡುತ್ತಿದೆ. ಸದ್ಯ ವೋಡಾಫೋನ್ 4G VoLTE ಸೇವೆಯೂ ಮುಂಬೈ, ದೆಹಲಿ, ಗುಜರಾತ್, ರಾಜಸ್ಥಾನ, ಪಶ್ವಿಮ ಬಂಗಾಳ, ಮಹಾರಾಷ್ಟ್ರ, ಗೋವಾ, ಹರಿಯಾಣ, ತಮಿಳುನಾಡು, ಉತ್ತರ ಪ್ರದೇಶದ ಹಲವು ನಗರಗಳಲ್ಲಿ ಲಭ್ಯವಿದ್ದು, ಶೀಘ್ರವೇ ಪ್ಯಾನ್ ಇಂಡಿಯಾದಲ್ಲಿ ತನ್ನ ಸೇವೆಯನ್ನು ಆರಂಭಿಸಲು ವೊಡಾಫೋನ್ ಯೋಜನೆಯನ್ನು ಹಾಕಿಕೊಂಡಿದೆ.
ರಾಜಕೀಯದ ಬಗ್ಗೆ ರಾಕಿಂಗ್ ಸ್ಟಾರ್ ನೇರ ಮಾತು

ರಾಜಕೀಯದ ಬಗ್ಗೆ ರಾಕಿಂಗ್ ಸ್ಟಾರ್ ನೇರ ಮಾತು

ಯಶೋಮಾರ್ಗ ಸಂಸ್ಥೆ ಮೂಲಕ ಜನರ ಸೇವೆಗೆ ನಿಂತಿರುವ ರಾಕಿಂಗ್ ಸ್ಟಾರ್ ಯಶ್ ಈ ಚುನಾವಣೆಯಲ್ಲಿ ಯಾರ ಪರವಾಗಿ ಪ್ರಚಾರ ಮಾಡುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದೆ. ಸ್ಪರ್ಶ ರೇಖಾ ನಿರ್ಮಾಣದ ಡೆಮೋಪೀಸ್ ಚಿತ್ರ ದ ಮುಹೂರ್ತ ದ ಸಂದರ್ಭದಲ್ಲಿ ಭಾಗಿ ಆಗಿದ್ದ ಯಶ್ "ನಾನು ಯಾವುದೇ ರಾಜಕೀಯ ಪಕ್ಷದ ಪರ ಪ್ರಚಾರಕ್ಕೆ ಹೋಗಿತ್ತಿಲ್ಲ. ಪಕ್ಷದ ಅಭ್ಯರ್ಥಿಗಳು ಸ್ನೇಹಿತರಾಗಿರಬೇಕು, ಇಲ್ಲವೇ ನನಗೆ ಅಂತವರ ಬಗ್ಗೆ ಗೋತ್ತಿರಬೇಕು. ಆದರೆ, ರಾಜಕೀಯದಲ್ಲಿ ನನಗೆ ಯಾರೂ ಗೊತ್ತಿಲ್ಲ. ರಾಜಕೀಯದ ನಂಟು ಇಲ್ಲ.ಪಕ್ಷದ ಪ್ರಚಾರಕ್ಕೆ ಹೋಗುವುದು ನನಗೆ ವೈಯುಕ್ತಿಕವಾಗಿ ಇಷ್ಟವೇ ಇಲ್ಲ". ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.
ಅತ್ಯುತ್ತಮ ಸ್ನೇಹಿತರಾಗಬಲ್ಲ ವ್ಯಕ್ತಿಗಳು ಇವರು

ಅತ್ಯುತ್ತಮ ಸ್ನೇಹಿತರಾಗಬಲ್ಲ ವ್ಯಕ್ತಿಗಳು ಇವರು

ಸ್ನೇಹಿತರಿಲ್ಲದ ಜಗತ್ತನ್ನು ನಾವು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಪ್ರತಿಯೊಂದು ಹಂತದಲ್ಲೂ ಸ್ನೇಹಿತರು ಎನ್ನುವವರು ಇರಲೇಬೇಕು. ಜೀವನದಲ್ಲಿ ಅದೆಷ್ಟೋ ಬಾರಿ ಸಂಬಂಧಿಕರು ಅಥವಾ ರಕ್ತ ಸಂಬಂಧಿಗಳು ಎನಿಸಿಕೊಂಡವರು ಸಹಾಯ ಮಾಡದಿದ್ದರೂ ಸ್ನೇಹಿತರಾದವರು ಸಹಾಯ ಮಾಡುತ್ತಾರೆ. ಹಾಗಾಗಿ ಜೀವನದಲ್ಲಿ ಏನೂ ಇಲ್ಲದಿದ್ದರೂ ಸರಿ ಒಬ್ಬ ಆತ್ಮೀಯ ಸ್ನೇಹಿತರನ್ನು ಹೊಂದಿರಬೇಕು ಎನ್ನುತ್ತಾರೆ. ವಂಚನೆಯಿಂದ ಕೂಡಿರುವ ಈ ಜಗತ್ತಿನಲ್ಲಿ ಸ್ನೇಹಿತರು ಎಂದು ಹೇಳಿಕೊಂಡು ಮೋಸ ಮಾಡುವವರನ್ನು ಸಹ ನಾವು ನೋಡಬಹುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಚಕ್ರದವರು ಅತ್ಯುತ್ತಮ ರೀತಿಯಲ್ಲಿ ತಮ್ಮ ಸ್ನೇಹವನ್ನು ನಿಭಾಯಿಸುತ್ತಾರೆ.