Short News

ಭಾರತದಲ್ಲಿ ಟಾಟಾ ನ್ಯಾನೋ ಕಾರುಗಳು ಇನ್ಮುಂದೆ ನೆನಪು ಮಾತ್ರ..!?

ಭಾರತದಲ್ಲಿ ಟಾಟಾ ನ್ಯಾನೋ ಕಾರುಗಳು ಇನ್ಮುಂದೆ ನೆನಪು ಮಾತ್ರ..!?

ಸತತ ಕುಸಿತ ಹಾಗೂ ಗ್ರಾಹಕರಿಂದ ಬೇಡಿಕೆ ಕೊರತೆ ಹಿನ್ನೆಲೆ ಟಾಟಾ ಸಂಸ್ಥೆಯು 'ನ್ಯಾನೊ' ಕಾರಿಗೆ ಗುಡ್ ಬೈ ಹೇಳಲು ಸಜ್ಜಾಗಿದ್ದು, ಸದ್ಯದಲ್ಲೇ ನ್ಯಾನೊ ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಲಿದೆ ಎನ್ನಲಾಗಿದೆ. ಇದಕ್ಕೆ ಪೂರಕ ಎನ್ನುವಂತೆ ಕಳೆದ ತಿಂಗಳು ಟಾಟಾ ಮೋಟಾರ್ಸ್ ಸಂಸ್ಥೆಯು ಕೇವಲ 1 ನ್ಯಾನೊ ಕಾರು ಮಾತ್ರ ಮಾರಾಟ ಮಾಡಿದೆ ಎಂದ್ರೆ ನೀವು ನಂಬಲೇಬೇಕು. ಕಳೆದ ಕೆಲ ತಿಂಗಳಿನಿಂದ ಅತ್ಯಂತ ಕಡಿಮೆ ಉತ್ಪಾದನೆಯಾಗುವ ಕಾರುಗಳ ಪೈಕಿ ನ್ಯಾನೊ ಕೂಡಾ ಒಂದಾಗಿದ್ದು, ಗುಜರಾತ್ ನ ಸನದ್ ಘಟಕದಲ್ಲಿ ದಿನಕ್ಕೆ ಕೇವಲ ಒಂದೋ ಅಥವಾ ಎರಡು ನ್ಯಾನೊ ಕಾರುಗಳಷ್ಟೆ ನಿರ್ಮಾಣ ಮಾಡಲಾಗುತ್ತಿರುವುದು ಟಾಟಾ ಸಂಸ್ಥೆಗೆ ಹೊರೆಯಾಗಿ ಪರಿಣಮಿಸಿದೆ.
ಬೆಂಗಳೂರು ರೈಲು ವೀಲ್ ಫ್ಯಾಕ್ಟರಿಯಲ್ಲಿ 10 ನೇ ತರಗತಿ ಆದವರಿಂದ ಅರ್ಜಿ ಆಹ್ವಾನ!

ಬೆಂಗಳೂರು ರೈಲು ವೀಲ್ ಫ್ಯಾಕ್ಟರಿಯಲ್ಲಿ 10 ನೇ ತರಗತಿ ಆದವರಿಂದ ಅರ್ಜಿ ಆಹ್ವಾನ!

ರೈಲು ವೀಲ್ ಫ್ಯಾಕ್ಟರಿ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಟ್ರೇಡ್ ಅಪ್ರೆಂಟೀಸ್ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಆಗಸ್ಟ್ 13, 2018 ಕೊನೆಯ ದಿನಾಂಕ. ಅರ್ಜಿ ಸಲ್ಲಿಕೆಗೆ ಜುಲೈ 8, 2018 ಆರಂಭ ದಿನಾಂಕ. ಐಟಿಐ ಜತೆ 10ನೇ ಕ್ಲಾಸ್ ತೇರ್ಗಡೆಯಾಗಿರುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಹಾಗೇ ಯಾವುದೇ ಅನುಭವ ಇರದ ಫ್ರೆಶರ್ಸ್ ಕೂಡಾ ಅಪ್ಲೈ ಮಾಡಬಹುದು. ಹುದ್ದೆ ಬಗೆಗಿನ ಹೆಚ್ಚಿನ ಮಾಹಿತಿಗೆ http://rwf.indianrailways.gov.in/ ಗೆ ಭೇಟಿ ನೀಡಿ.
ನರೇಂದ್ರ ಮೋದಿ ಸರ್ಕಾರದ 19 ಸಚಿವಾಲಯಗಳಲ್ಲಿ 1,179 ಕೋಟಿ ಅವ್ಯವಹಾರ!

ನರೇಂದ್ರ ಮೋದಿ ಸರ್ಕಾರದ 19 ಸಚಿವಾಲಯಗಳಲ್ಲಿ 1,179 ಕೋಟಿ ಅವ್ಯವಹಾರ!

ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ 19ಸಚಿವಾಲಯಗಳಲ್ಲಿ 1,179ಕೋಟಿ ರೂಪಾಯಿ ಅವ್ಯವಹಾರ ನಡೆದಿರುವುದನ್ನು ಕಂಟ್ರೋಲರ್ ಮತ್ತು ಆಡಿಟರ್ ಜನರಲ್(ಸಿಎಜಿ) ವರದಿಯಿಂದ ಜಗಜ್ಜಾಹೀರು ಆಗಿದೆ. ನವೆಂಬರ್ 4ರಂದು ಬಿಡುಗಡೆ ಮಾಡಿರುವ ಸಿಎಜಿ ವರದಿಯಲ್ಲಿ ಈ ಅವ್ಯವಹಾರದ ಬಗ್ಗೆ ಉಲ್ಲೇಖವಿದ್ದು, "ಜನಸತ್ತಾ" ಎಂಬ ಹಿಂದಿ ಸುದ್ದಿ ಜಾಲತಾಣ ವರದಿ ಪ್ರಕಟಿಸಿದೆ. ವರದಿಯಲ್ಲಿ 78 ಪ್ರಕರಣಗಳ ಬಗ್ಗೆ ವಿವರಣೆ ಇದ್ದು, 19 ಸಚಿವಾಲಯಗಳು ಮತ್ತು ಅವುಗಳ ಆಡಳಿತ ನಿಯಂತ್ರಣದಲ್ಲಿರುವ ಸ್ವಾಯತ್ತ ಸಂಸ್ಥೆಗಳ ಬಗ್ಗೆ ಉಲ್ಲೇಖವಿದೆ. ಬಹಳಷ್ಟು ಲೋಪಗಳು ಸಂಭವಿಸಿರುವುದು ಮಾನವ ಸಂಪಪನ್ಮೂಲ ಮತ್ತು ಅಭಿವೃದ್ಧಿ ಸಚಿವಾಲಯದಲ್ಲಿ ಎಂದೂ ಉಲ್ಲೇಖವಿದೆ.
ಶಿರಾಡಿಘಾಟ್‌: ದುರಸ್ತಿ ಅಪೂರ್ಣ, ಭಾರಿ ವಾಹನಗಳಿಗೆ ನಿರ್ಬಂಧ

ಶಿರಾಡಿಘಾಟ್‌: ದುರಸ್ತಿ ಅಪೂರ್ಣ, ಭಾರಿ ವಾಹನಗಳಿಗೆ ನಿರ್ಬಂಧ

ಸಕಲೇಶಪುರ ಸುತ್ತಮುತ್ತಲು ಭಾರಿ ಮಳೆಯಿಂದಾಗಿ ಶಿರಾಡಿಘಾಟ್‌ನ ಕೆಲವು ಕಡೆ ಮಣ್ಣು ಕುಸಿದಿತ್ತು, ಹೀಗಾಗಿ ಭಾರಿ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ, ಆದರೂ ವಾಹನಗಳು ಸಂಚರಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಪ್ರತಿ ಮಳೆಗಾಲದ ಸಂದರ್ಭದಲ್ಲೂ ಪ್ರಯಾಣಿಕರಿಗೆ ಭಾರೀ ಸಮಸ್ಯೆ ಕೊಡುತ್ತಿದ್ದ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿಘಾಟ್ ರಸ್ತೆಗೆ ಕಾಂಕ್ರೀಟ್ ಕಾಮಗಾರಿ ಮಾಡುವ ಕೊನೆಯ ಹಂತಕ್ಕೆ ತಲುಪಿದೆ. ಶಿರಾಡಿಘಾಟ್ ನ 26 ಕಿಲೋಮೀಟರ್ ರಸ್ತೆಗೆ ಕಾಂಕ್ರೀಟ್ ಕಾಮಗಾರಿಗಾಗಿ ಕೇಂದ್ರ ಸರಕಾರ ಸುಮಾರು 183 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಯೋಜನೆಯನ್ನು ಹಮ್ಮಿಕೊಂಡಿತ್ತು.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more