Short News

ಏಷಿಯನ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಯಾರಿಸ್‌ಗೆ 5 ಸ್ಟಾರ್ ರೇಟಿಂಗ್

ಏಷಿಯನ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಯಾರಿಸ್‌ಗೆ 5 ಸ್ಟಾರ್ ರೇಟಿಂಗ್

ಇದೇ ತಿಂಗಳು 18ಕ್ಕೆ ಭಾರತದಲ್ಲಿ ಟೊಯೊಟಾ ಸಂಸ್ಥೆಯ ಹೊಸ ಸೆಡಾನ್ ಕಾರು ಯಾರಿಸ್ ಬಿಡುಗಡೆಯಾಗುತ್ತಿದ್ದು, ಅದಕ್ಕೂ ಮುನ್ನ ಹೊಸ ಕಾರುಗಳು ಏಷಿಯನ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅತ್ಯುತ್ತಮ ಸುರಕ್ಷಾ ಕೌಶಲ್ಯಗಳನ್ನು ಪ್ರದರ್ಶಿಸುವ ಮೂಲಕ 5ಸ್ಟಾರ್ ರೇಟಿಂಗ್ ಪಡೆದಿದೆ. ಹೊಸ ಕಾರುಗಳಲ್ಲಿ ಒದಗಿಸಲಾಗಿರುವ ಸುರಕ್ಷಾ ವಿಚಾರವಾಗಿ ನಡೆಸಲಾಗುವ ಏಷಿಯನ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಟೊಯೊಟಾ ಯಾರಿಸ್ ಸೆಡಾನ್ ಕಾರುಗಳು ಪೂರ್ಣ ಪ್ರಮಾಣದ ಸುರಕ್ಷಾ ರೇಟಿಂಗ್ ಪಡೆದುಕೊಂಡಿದ್ದು, ರಸ್ತೆ ಅಪಘಾತಗಳ ಸಂದರ್ಭದಲ್ಲಿ ಕಾರು ಪ್ರಯಾಣಿಕರಿಗೆ ಗರಿಷ್ಠ ಮಟ್ಟದ ಸುರಕ್ಷೆ ನೀಡುವ ಬಗ್ಗೆ ಭರವಸೆ ಹುಟ್ಟುಹಾಕಿವೆ.
ಕುಮಾರಸ್ವಾಮಿ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು

ಕುಮಾರಸ್ವಾಮಿ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು

ಎಚ್.ಡಿ.ಕುಮಾರಸ್ವಾಮಿ ಅವರು ಇಂದು ರಾಜ್ಯದ 25 ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಬಾಗಲಕೋಟೆಯ ವಿದ್ಯಾಗಿರಿಯಲ್ಲಿ ಕುಮಾರಸ್ವಾಮಿ ಅಭಿಮಾನಿಗಳು ಕುಮಾರಸ್ವಾಮಿ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿದರು. ಅಷ್ಟೇ ಅಲ್ಲ ರಾಜು ಶೆಲ್ಲಿಕೇರಿ ಎಂಬ ಅಭಿಮಾನಿ 10 ಕೆಜಿ ಉಪ್ಪಿಟ್ಟು, 10 ಕೆಜಿ ಶಿರಾ ವಿತರಣೆ ಮಾಡಿದರು. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಬೇಕು ಎಂದು ಒಂದು ತಿಂಗಳವರೆಗೆ ಪಾದರಕ್ಷೆ ಧರಿಸದೇ ಹರಕೆ ಹೊತ್ತಿದ್ದ ರಾಜು ಇಂದು ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದಕ್ಕೆ ಬಹಳ ಸಂತೋಷ ವ್ಯಕ್ತಪಡಿಸಿದ್ದಾರೆ.
ಎಲ್ಲಾ ಕಳ್ಳರು ಸೇರಿ ಸರ್ಕಾರ ರಚಿಸುತ್ತಿದ್ದಾರೆ: ಸಂಜಯ ಪಾಟೀಲ್

ಎಲ್ಲಾ ಕಳ್ಳರು ಸೇರಿ ಸರ್ಕಾರ ರಚಿಸುತ್ತಿದ್ದಾರೆ: ಸಂಜಯ ಪಾಟೀಲ್

ಕಾಂಗ್ರೆಸ್, ಜೆಡಿಎಸ್ ಲವ್ ಮ್ಯಾರೇಜ್ ಆಗುತ್ತಿದ್ದು, ಈ ಮ್ಯಾರೇಜ್ ಅನಧಿಕೃತವಾಗಿದೆ ಎಂದು ಮಾಜಿ ಶಾಸಕ ಸಂಜಯ ಪಾಟೀಲ್ ಬೆಳಗಾವಿಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದು ತಂದೆ, ತಾಯಿ ಒಪ್ಪಿಗೆ ಇಲ್ಲದ ಲವ್ ಮ್ಯಾರೇಜ್ ಎಂದು ವ್ಯಂಗ್ಯವಾಡಿರುವ ಅವರು ಕರ್ನಾಟಕದ ಜನತೆಗೆ ಈ ಮೈತ್ರಿ ಸರ್ಕಾರ ಒಪ್ಪಿಗೆ ಇಲ್ಲ. ಕುಮಾರಸ್ವಾಮಿ ವಚನ ಭ್ರಷ್ಟ, ಸಿದ್ದರಾಮಯ್ಯ ಮೋಸಗಾರ ಎನ್ನುವುದು ಇಡೀ ಜಗತ್ತಿಗೆ ಗೊತ್ತಿದೆ ಎಂದು ಆರೋಪಿಸಿದ್ದಾರೆ. ಡಿ.ಕೆ.ಶಿವಕುಮಾರ್ ಅಂತಹ ದೊಡ್ಡ ಕಳ್ಳ ದೇಶದಲ್ಲಿ ಯಾರು ಇಲ್ಲ. ಇವತ್ತು ಎಲ್ಲಾ ಕಳ್ಳರು ಸೇರಿ ಬಿಜೆಪಿ ದೂರವಿಟ್ಟು ಸರ್ಕಾರ ರಚನೆ ಮಾಡುತ್ತಿದ್ದಾರೆ ಎಂದಿದ್ದಾರೆ.
ದುನಿಯಾ ವಿಜಯ್ ಕಂದನ ಕಸರತ್ತು ನೋಡಿ

ದುನಿಯಾ ವಿಜಯ್ ಕಂದನ ಕಸರತ್ತು ನೋಡಿ

ದುನಿಯಾ ವಿಜಯ್ ಅವರ ಮಗ ಸಾಮ್ರಾಟ್ ಚಿತ್ರರಂಗಕ್ಕೆ ಪ್ರವೇಶ ಮಾಡುತ್ತಿದ್ದು, ಅದಕ್ಕೂ ಮುನ್ನ ಸಾಮ್ರಾಟ್ ತಯಾರಿ ನೋಡುತ್ತಿದ್ದರೆ ಎಂಥವರಿಗೂ ಆಶ್ಚರ್ಯ ಆಗುತ್ತಿದೆ. ಕಳೆದ ನಾಲ್ಕು ತಿಂಗಳಿಂದ ಸಾಮ್ರಾಟ್ ವರ್ಕ್ ಔಟ್, ಜಿಮ್ಯಾಸ್ಟಿಕ್, ಕುಸ್ತಿ ತರಬೇತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಈ ಬಾರಿ ಬೇಸಿಗೆ ರಜೆಯ ಸಂಪೂರ್ಣ ಸಮಯ ಇದಕ್ಕಾಗಿಯೇ ಮೀಸಲಿಟ್ಟಿದ್ದಾರೆ. ಅಂತರಾಷ್ಟ್ರೀಯ ಮಟ್ಟದ ಬಾಡಿ ಬಿಲ್ಡರ್ ಪ್ರಸಾದ್ ಸಾಮ್ರಾಟ್ ಫಿಟ್ ನೆಸ್ ನೋಡಿಕೊಳ್ಳುತ್ತಾರೆ. ಲೋಕೇಶ್ ಜಿಮ್ಯಾಸ್ಟಿಕ್ ಟ್ರೈನಿಂಗ್ ಮಾಡಿಸುತ್ತಿದ್ದಾರೆ. ದಾವಣಗೆರೆ ಮೂಲದ ಕಾರ್ತಿಕ್ ಕಾಟೆ,ಅಪ್ಪಾಸಿ ತೇರದಾಳ್,ಬೀರೇಶ್ ಕುಸ್ತಿ ತರಬೇತಿ ಕೊಡುತ್ತಿದ್ದಾರೆ.