Short News

ಬೆಂಗಳೂರಿನಲ್ಲಿ ಒಂದೇ ದಿನಕ್ಕೆ 12 ಹೊಸ ಎಕ್ಸ್‌ಸಿ40 ಎಸ್‌ಯುವಿ ಮಾರಾಟ ಮಾಡಿದ ವೊಲ್ವೊ

ಬೆಂಗಳೂರಿನಲ್ಲಿ ಒಂದೇ ದಿನಕ್ಕೆ 12 ಹೊಸ ಎಕ್ಸ್‌ಸಿ40 ಎಸ್‌ಯುವಿ ಮಾರಾಟ ಮಾಡಿದ ವೊಲ್ವೊ

ಕಳೆದ ವಾರವಷ್ಟೇ ಹೊಸ ನಮೂನೆಯ ಎಕ್ಸ್‌ಸಿ40 ಐಷಾರಾಮಿ ಎಸ್‌ಯುವಿ ಕಾರುಗಳು ಬಿಡುಗಡೆಯಾಗಿದ್ದು, ಬೆಂಗಳೂರಿನಲ್ಲಿ ಒಂದೇ ದಿನ ಬರೋಬ್ಬರಿ 12ಹೊಸ ಕಾರುಗಳು ಮಾರಾಟಗೊಂಡಿವೆ. ಬೆಂಗಳೂರಿನ ಕೊರಮಂಗಲದಲ್ಲಿರುವ ಮಾರ್ಷಿಯಲ್ ಡೀಲರ್ಸ್ ಯಾರ್ಡ್‌ನಲ್ಲಿ ನಡೆದ ಸರಳ ಸಮಾರಂಭದಲ್ಲಿ ತನ್ನ ನೆಚ್ಚಿನ ಗ್ರಾಹಕರಿಗೆ ಎಕ್ಸ್‌ಸಿ40 ಕಾರಿನ ಕೀ ಗಳನ್ನು ಹಸ್ತಾಂತರ ಮಾಡಲಾಯ್ತು. ಬಿಡುಗಡೆಗೊಂಡ ಹೊಸ ವೊಲ್ವೊ ಎಕ್ಸ್‌ಸಿ40 ಕಾರುಗಳು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ.39.9ಲಕ್ಷಕ್ಕೆ ಬೆಲೆ ನಿಗದಿಪಡಿಸಲಾಗಿದ್ದು, ಈ ಕಾರು ಕೇವಲ ಎರಡು ವೇರಿಯಂಟ್‍‍ನಲ್ಲಿ ಮಾತ್ರ ಲಭ್ಯವಿದೆ. ಜೊತೆಗೆ ಕೆಂಪು, ಬಿಳಿ ಮತ್ತು ನೀಲಿ ಬಣ್ಣಗಳಲ್ಲಿ ಖರೀದಿಸಬಹುದಾಗಿದೆ.
ರಿಸರ್ವ್ ಬ್ಯಾಂಕ್ ನಿಂದ ಶೀಘ್ರದಲ್ಲೇ ಹೊಸ 100 ರೂ. ಬಿಡುಗಡೆ

ರಿಸರ್ವ್ ಬ್ಯಾಂಕ್ ನಿಂದ ಶೀಘ್ರದಲ್ಲೇ ಹೊಸ 100 ರೂ. ಬಿಡುಗಡೆ

ಭಾರತೀಯ ರಿಸರ್ವ್ ಬ್ಯಾಂಕ್ ಈ ಹಿಂದೆ ಹಳೆಯ 500 ರೂ. ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಿ ಹೊಸ 500 ರೂ. ಮತ್ತು 2000 ರೂ. ನೋಟಗಳನ್ನು ಬಿಡುಗಡೆ ಮಾಡಿತ್ತು. ನಂತರ 50, 10, 20, ನೋಟುಗಳನ್ನು ಹೊಸ ರೂಪದಲ್ಲಿ ಬಿಡುಗಡೆ ಮಾಡಿತ್ತು. ಈಗ ಅದರಂತೆ ಭಾರತೀಯ ರಿಸರ್ವ್ ಬ್ಯಾಂಕ್ 100 ರೂಪಾಯಿಯ ಹೊಸ ನೋಟುಗಳ ಮುದ್ರಣ ಶುರು ಮಾಡಿದೆ. ಆಗಸ್ಟ್ ಕೊನೆಯೊಳಗೆ ಹೊಸ ನೋಟು ಮಾರುಕಟ್ಟೆಗೆ ಲಗ್ಗೆಯಿಡಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕಾನೂನು ಹೊರಾಟಕ್ಕೆ ಮುಂದಾದ ಶಿರೂರು ಮಠದ ಶ್ರೀ ಲಕ್ಷ್ಮೀವರತೀರ್ಥ ಶ್ರೀಗಳು

ಕಾನೂನು ಹೊರಾಟಕ್ಕೆ ಮುಂದಾದ ಶಿರೂರು ಮಠದ ಶ್ರೀ ಲಕ್ಷ್ಮೀವರತೀರ್ಥ ಶ್ರೀಗಳು

ಶಿರೂರು ಮಠದ ಪಟ್ಟದ ದೇವರಾದ ಅನ್ನ ವಿಠ್ಠಲನ ವಿಗ್ರಹವನ್ನು ನನಗೆ ಹಿಂತಿರುಗಿಸದೆ ಹೋದಲ್ಲಿ ನ್ಯಾಯಾಲಯದಲ್ಲಿ ಕ್ರಿಮಿನಲ್‌ ಮೊಕದ್ದಮೆ ಹೂಡುತ್ತೇನೆ ಎಂದು ಉಡುಪಿ ಶಿರೂರು ಮಠದ ಶ್ರೀ ಲಕ್ಷ್ಮೀವರತೀರ್ಥ ಶ್ರೀಗಳು ಎಚ್ಚರಿಕೆ ನೀಡಿದ್ದಾರೆ. ಸುದ್ದಿಗಾರರೊಡನೆ ಮಾತನಾಡಿದ ಸ್ವಾಮೀಜಿ ಅನ್ನ ವಿಠ್ಠಲ ನನ್ನ ದೇವರು. ಅವನು ನನ್ನ ಸ್ವತ್ತು. ಕೃಷ್ಣ ಮಠದ ಕೃಷ್ಣನಾಗಲಿ, ಪಲಿಮಾರು ಮಠದ ರಾಮನಾಗಲಿ ನನ್ನ ಸ್ವತ್ತಲ್ಲ ಹೀಗಾಗಿ ನನ್ನ ಸ್ವಂತದ್ದಾದ ವಿಠ್ಠಲನನ್ನು ನಾನು ಹೇಗೆ ಪಡೆಯಬೇಕೆಂದು ನನಗೆ ತಿಳಿದಿದೆ ಎಂದಿದ್ದಾರೆ.
ಶೀಘ್ರದಲ್ಲೇ ರೂ. 100 ಹೊಸ ನೋಟು ಮಾರುಕಟ್ಟೆಗೆ!

ಶೀಘ್ರದಲ್ಲೇ ರೂ. 100 ಹೊಸ ನೋಟು ಮಾರುಕಟ್ಟೆಗೆ!

  • ರೂ. 100 ಹೊಸ ಮುಖಬೆಲೆಯ ನೋಟುಗಳ ಮುದ್ರಣವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಆರಂಭಿಸಿದೆ. ಹೊಸ ಮುಖಬೆಲೆಯ ನೋಟುಗಳು ಮಾರುಕಟ್ಟೆಗೆ ಬರುತ್ತಿದ್ದಂತೆಯೇ ಹಳೆಯ ರೂ. ೧೦೦ ನೋಟು ಸ್ಥಗಿತವಾಗಲಿದೆ.
  • ಕೇಂದ್ರ ಸರ್ಕಾರ ಈಗಾಗಲೇ ಬಿಡುಗಡೆ ಮಾಡಿರುವ ರೂ. 20, 50, 500, 2000 ಮುಖಬೆಲೆಯ ನೋಟುಗಳು ಚಾಲನೆಗೆ ಬಂದಿರುವುದು ನಿಮಗೆಲ್ಲಾ ತಿಳಿದಿದೆ.
  • ಹೊಸ ರೂ. ೧೦೦ ಮುಖಬೆಲೆಯ ನೋಟಿನ ಮುದ್ರಣ ಕಾರ್ಯ ದೇವಾಸ್ ಬ್ಯಾಂಕ್ ನೋಟ್ ಪ್ರೆಸ್ ನಲ್ಲಿ ಆರಂಭವಾಗಿದೆ. ಹೋಶಂಗಾಬಾದ್ ನ ಸೆಕ್ಯೂರಿಟಿ ಪೇಪರ್ ಮಿಲ್ ನ ಹೊಸ ನೋಟುಗಳು ಮುದ್ರಣವಾಗುತ್ತಿವೆ.

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more