Short News

ವಾಹನಗಳಲ್ಲಿ ಜೀವರಕ್ಷಕ ಏರ್ ಬ್ಯಾಗ್ ಅವಿಷ್ಕಾರ ಮಾಡಿದವರು ಯಾರು?

ವಾಹನಗಳಲ್ಲಿ ಜೀವರಕ್ಷಕ ಏರ್ ಬ್ಯಾಗ್ ಅವಿಷ್ಕಾರ ಮಾಡಿದವರು ಯಾರು?

 1941ನೇ ಇಸವಿಯಲ್ಲಿ ಜರ್ಮನಿಯ ಎಂಜಿನಿಯರ್ ವಾಲ್ಟರ್ ಲಿಂಡೆರರ್ (Walter Linderer)ಮತ್ತು ಅಮೆರಿಕದ ಕೈಗಾರಿಕೋದ್ಯಮ ಎಂಜಿನಿಯರ್ ಜಾನ್ ಡಬ್ಲ್ಯು ಹೆಟ್ರಿಕ್ (John W. Hetrick)ಎಂಬವರು ಮೊದಲು ವಿನ್ಯಾಸಗೊಳಿಸಿದ್ದರು. ಈ ಪೈಕಿ ವಾಲ್ಟರ್ 1951ಅಕ್ಟೋಬರ್ 6ರಂದು ಹಕ್ಕುಪತ್ರಕ್ಕಾಗಿ(patent)ಅರ್ಜಿ ಸಲ್ಲಿಸಿದರೂ 1953ನವೆಂಬರ್ 12ರಂದು ಅನುಮತಿ ದೊರಕಿತ್ತು. ಇದಾದ 3ತಿಂಗಳಲ್ಲೇ ಹೆಟ್ರಿಕ್ ಕೂಡಾ ಪೇಟೆಂಟ್(1953ಆಗಸ್ಟ್ 18)ಗಿಟ್ಟಿಸಿಕೊಂಡಿದ್ದರು. ಯಾವಾಗ ಅಲೆನ್ ಕೆ ಬ್ರೀಡ್ ಎಂಬವರು ಮೆಕ್ಯಾನಿಕಲ್ ಸೆನ್ಸಾರ್ ಆಳವಡಿಸಿದರೂ ಅಂದಿನಿಂದ ಏರ್ ಬ್ಯಾಗ್ ನೈಜ ಯಶಸ್ಸು ಆರಂಭವಾಯಿತು.
ಇಐಎಲ್ ನಲ್ಲಿ 67 ಟ್ರೈನೀ ಹುದ್ದೆಗೆ ಅರ್ಜಿ ಆಹ್ವಾನ... ಬಂಪರ್ ಸ್ಯಾಲರಿ ಆಫರ್!

ಇಐಎಲ್ ನಲ್ಲಿ 67 ಟ್ರೈನೀ ಹುದ್ದೆಗೆ ಅರ್ಜಿ ಆಹ್ವಾನ... ಬಂಪರ್ ಸ್ಯಾಲರಿ ಆಫರ್!

ಇಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ ನೇಮಕಾತಿಯ ಪ್ರಕಟಣೆ ಹೊರಡಿಸಿದೆ. ಒಟ್ಟು 67ಟ್ರೈನೀ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಮೇ2. ಅಭ್ಯರ್ಥಿಗಳ ಆಯ್ಕೆಯಾದ ಬಳಿಕ ಒಂದು ವರ್ಷ ಟ್ರೈನಿಂಗ್ ನೀಡಲಾಗುವುದು ಈ ಟೈಂನಲ್ಲಿ ಅಭ್ಯರ್ಥಿಗಳಿಗೆ ವಸತಿ ಹಾಗೂ ಸಾರಿಗೆಯನ್ನ ಹೊರತುಪಡಿಸಿ, 35,000 ರೂ ವೇತನ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಟ್ರೈನಿಂಗ್ ಮುಗಿದ ಬಳಿಕ 60,000 ರೂ ಯಿಂದ 180000ರೂ ವೇತನ ನೀಡಲಾಗುವುದು. ಆಸಕ್ತ ಇಂಜಿನಿಯರ್ ಅಭ್ಯರ್ಥಿಗಳು ಹಾಗೂ ಈಗಷ್ಟೇ ಕೊನೆ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. 
ಶಾಂತಿ, ನೆಮ್ಮದಿಯ ಕರ್ನಾಟಕ ನಮ್ಮದಾಗಬೇಕು : ಪೂರ್ಣಿಮಾ ಶ್ರೀನಿವಾಸ್

ಶಾಂತಿ, ನೆಮ್ಮದಿಯ ಕರ್ನಾಟಕ ನಮ್ಮದಾಗಬೇಕು : ಪೂರ್ಣಿಮಾ ಶ್ರೀನಿವಾಸ್

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪೂರ್ಣಿಮಾ ಶ್ರೀನಿವಾಸ್ ಅವರು 2018ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ನಾವು ಹೊರದೇಶಗಳಿಗೆ ಹೋಗಿ ಬಂದು ಕರ್ನಾಟಕವನ್ನು ನೋಡಿದಾಗ ನಿಜವಾಗಲೂ ತುಂಬಾ ಬೇಸರವಾಗುತ್ತದೆ. ನಮ್ಮಲ್ಲಿ ಒಳ್ಳೆಯ ಬಜೆಟ್ ಮಂಡನೆಯಾಗುತ್ತದೆ. ಉತ್ತಮವಾದ ಅಧಿಕಾರಿಗಳು ಇದ್ದಾರೆ. ಜನರಿಗಾಗಿ ಮಾಡಿದ ಯೋಜನೆಗಳು ನೇರವಾಗಿ ಅವರನ್ನು ತಲುಪುವ ಕಾರ್ಯಗಳು ಆಗಬೇಕಾಗಿದೆ. ಎಲ್ಲೂ ಕೋಮುಗಲಭೆ ಆಗಬಾರದು. ಶಾಂತಿ ನೆಲೆಸಬೇಕು ಎಂಬ ಆಸೆ ಇದೆ. ಭಾರತೀಯ ಜನತಾಪಾರ್ಟಿ ಮೂಲಕ ಈ ಆಸೆ ನೇರವೇರಲಿದೆ ಎಂದರು.
ಚುನಾವಣಾ ಆಯೋಗ ಕೆಂಗಣ್ಣು, 732 ಬಾರ್ ಗಳಿಗೆ ಬೀಗ

ಚುನಾವಣಾ ಆಯೋಗ ಕೆಂಗಣ್ಣು, 732 ಬಾರ್ ಗಳಿಗೆ ಬೀಗ

ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಕೇವಲ ರಾಜಕಾರಣಿಗಳು ಮಾತ್ರವಲ್ಲದೆ ಜನಸಾಮಾನ್ಯರಿಗೂ ಬಿಸಿ ಮುಟ್ಟಿಸುತ್ತಿದೆ. ಸಮಯ ಮೀರಿ ಕಾರ್ಯನಿರ್ವಹಿಸುವ 700ಕ್ಕೂ ಅಧಿಕ ಬಾರ್ ಹಾಗೂ ರೆಸ್ಟೋರೆಂಟ್ ಗಳಿಗೆ ಚುನಾವಣಾ ಆಯೋಗದ ನೀತಿ ಸಂಹಿತೆಯಡಿ ಬೀಗ ಜಡಿಯಲಾಗಿದೆ. ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ 752 ಬಾರ್, ಪಬ್ ಗಳಲ್ಲಿ ಚಟುವಟಿಕೆಗಳು ಮಂಕಾಗಿವೆ. ನಿಗದಿತ ವೇಳೆಗಿಂತ ಹೆಚ್ಚಿನ ಸಮಯ ಬಾರ್, ಪಬ್ ಗಳು ಕಾರ್ಯನಿರ್ವಹಣೆ ಮಾಡಿದ ಅಥವಾ ಸಂಹಿತೆ ಉಲ್ಲಂಘಿಸಿದ ಒಟ್ಟು 752 ಬಾರ್, ಪಬ್ ಗಳನ್ನು ಅಬಕಾರಿ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಚುನಾವಣಾ ಆಯೋಗದ ಅಧಿಕಾರಿಗಳು ಬಂದ್ ಮಾಡಿಸಿದ್ದಾರೆ.