Short News

ಮರ್ಸಿಡಿಸ್ ಬೆಂಝ್ ಎಸ್ ಕ್ಲಾಸ್ ಫೇಸ್‌ಲಿಫ್ಟ್ ಕಾರಿನ ಬಿಡುಗಡೆ ಮಾಹಿತಿ ಇಲ್ಲಿದೆ..

ಮರ್ಸಿಡಿಸ್ ಬೆಂಝ್ ಎಸ್ ಕ್ಲಾಸ್ ಫೇಸ್‌ಲಿಫ್ಟ್ ಕಾರಿನ ಬಿಡುಗಡೆ ಮಾಹಿತಿ ಇಲ್ಲಿದೆ..

ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆ ಮರ್ಸಿಡಿಸ್ ಬೆಂಝ್ ನವೀಕೃತ ಎಸ್ ಕ್ಲಾಸ್ ಸೆಡಾನ್ ಕಾರು ಆವೃತ್ತಿಯು ಭಾರತದಲ್ಲಿ ಭಾರೀ ನೀರಿಕ್ಷೆ ಹುಟ್ಟುಹಾಕಿದ್ದು, ಇದೇ ತಿಂಗಳು 26ರಂದು ಮಾರುಕಟ್ಟೆಗೆ ಲಗ್ಗೆಯಿಡುವುದು ಖಚಿತವಾಗಿದೆ. ಹೊಸ ಎಸ್ ಕ್ಲಾಸ್ ಕಳೆದ ಜುಲೈನಲ್ಲೇ ಯುರೋಪಿಯನ್ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಿದ್ದು, ಇದೀಗ ಈ ಹೊಸ ಸೆಡಾನ್ ಫೇಸ್ ಲಿಫ್ಟ್ ಆವೃತಿಯನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಸಜ್ಜಾಗಿದೆ.

ಆರ್‌ಸಿಬಿ-ಸಿಎಸ್‌ಕೆ: ಅಂಕಿ ಅಂಶದಲ್ಲಿ ಯಾರು ಮುಂದೆ ಗೊತ್ತೇ?

ಆರ್‌ಸಿಬಿ-ಸಿಎಸ್‌ಕೆ: ಅಂಕಿ ಅಂಶದಲ್ಲಿ ಯಾರು ಮುಂದೆ ಗೊತ್ತೇ?

ಐದು ಪಂದ್ಯಗಳಲ್ಲಿ ಚೆನ್ನೈ ನಾಲ್ಕರಲ್ಲಿ ಗೆದ್ದು ಎರಡನೆಯ ಸ್ಥಾನದಲ್ಲಿದ್ದರೆ, ಅಷ್ಟೇ ಪಂದ್ಯಗಳನ್ನು ಆಡಿರುವ ಆರ್‌ಸಿಬಿ ಎರಡರಲ್ಲಿ ಮಾತ್ರ ಗೆದ್ದು ಆರನೇ ಸ್ಥಾನದಲ್ಲಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆಯುವ ಹೈವೋಲ್ಟೇಜ್ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ. ಭಾರತ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ಮತ್ತು ಹಾಲಿ ನಾಯಕ ವಿರಾಟ್ ಕೊಹ್ಲಿ ಮಧ್ಯೆ ಯಾರು ಶ್ರೇಷ್ಠ ಎಂಬುದನ್ನು ಈ ಪಂದ್ಯದ ಮೂಲಕ ನಿರ್ಣಯಿಸಲು ಉಭಯ ತಂಡಗಳ ಅಭಿಮಾನಿಗಳು ಕಾತರರಾಗಿದ್ದಾರೆ. ಹಾಗೆ ನೋಡಿದರೆ ಎರಡೂ ತಂಡಗಳು ಶಕ್ತಿಯುತವಾಗಿದೆ. ಆದರೆ, ಅಂಕಿಅಂಶಗಳ ಪುಟ ತಿರುವಿಹಾಕಿದರೆ ಬಲಿಷ್ಠವಾಗಿ ಕಾಣುವುದು ಚೆನ್ನೈ ತಂಡ.
ಬಿಬಿಸಿ ವಾಹಿನಿಯಲ್ಲಿ ಬಾಲಿವುಡ್ ನ ಕರಾಳ ಮುಖ ಬಿಚ್ಚಿಡಲಿದ್ದಾರೆ ನಟಿಯರು.!

ಬಿಬಿಸಿ ವಾಹಿನಿಯಲ್ಲಿ ಬಾಲಿವುಡ್ ನ ಕರಾಳ ಮುಖ ಬಿಚ್ಚಿಡಲಿದ್ದಾರೆ ನಟಿಯರು.!

ಭಾರತೀಯ ಚಿತ್ರರಂಗದ 'ಕಾಸ್ಟಿಂಗ್ ಕೌಚ್' ವಿವಾದದ ಕುರಿತಾಗಿ BBCವಾಹಿನಿ ಒಂದು ಡಾಕ್ಯುಮೆಂಟರಿ ಚಿತ್ರೀಕರಿಸಿದೆ. ಬಾಲಿವುಡ್ ನಲ್ಲಿ ನಟಿಯರು ಅನುಭವಿಸಿರುವ ಲೈಂಗಿಕ ಕಿರುಕುಳದ ಬಗೆಗಿನ ಡಾಕ್ಯುಮೆಂಟರಿ ಇದೇ ವಾರಾಂತ್ಯದಲ್ಲಿ BBCಯಲ್ಲಿ ಪ್ರಸಾರವಾಗಲಿದೆ. ಈ ಡಾಕ್ಯುಮೆಂಟರಿಯಲ್ಲಿ ನಟಿ ರಾಧಿಕಾ ಆಪ್ಟೆ, ಉಷಾ ಜಾದವ್ ಸೇರಿ ಹಲವು ನಟಿಯರು ಬಾಲಿವುಡ್ ನ ಕರಾಳ ಮುಖವನ್ನು ಬಿಚ್ಚಿಟ್ಟಿದ್ದಾರೆ. ಅವರು ಎಷ್ಟು ಪ್ರಭಾವಿ ಅಂದ್ರೆ, ನನ್ನ ಮಾತುಗಳು ಯಾರ ಮೇಲೂ ಪರಿಣಾಮ ಬೀರುವುದಿಲ್ಲ. ಒಂದು ವೇಳೆ ನಾನು ಅವರ ವಿರುದ್ಧ ಮಾತನಾಡಿದರೆ, ನನ್ನ ವೃತ್ತಿ ಜೀವನ ಹಳ್ಳ ಹಿಡಿಯುತ್ತೆ ಎಂದು ಬಿಬಿಸಿ ವಾಹಿನಿಗೆ ರಾಧಿಕಾ ಆಪ್ಟೆ ಹೇಳಿದ್ದಾರೆ.
ಎಚ್1ಬಿ ವೀಸಾ ಅವಲಂಬಿತ ಭಾರತೀಯರಿಗೆ ಟ್ರಂಪ್ ಆಘಾತ!

ಎಚ್1ಬಿ ವೀಸಾ ಅವಲಂಬಿತ ಭಾರತೀಯರಿಗೆ ಟ್ರಂಪ್ ಆಘಾತ!

ಎಚ್-1ಬಿ ವೀಸಾ ಪ್ರಕ್ರಿಯೆಯನ್ನು ಇನ್ನಷ್ಟು ಬಿಗಿಗೊಳಿಸಲು ಡೊನಾಲ್ಡ್ ಟ್ರಂಪ್ ಸರ್ಕಾರ ಮುಂದಾಗಿದ್ದು ಉನ್ನತ ಕೌಶಲ ಹೊಂದಿರುವ, ಅಮೆರಿಕದಲ್ಲಿ ನೆಲೆಸಿರುವ ಎಚ್ 1ಬಿ ವೀಸಾ ಹೊಂದಿರುವ ಬಾಳಸಂಗಾತಿಗಳು ಅಮೆರಿಕದಲ್ಲಿ ಕೆಲಸ ಹುಡುಕುವುದು ಕಷ್ಟವಾಗಲಿದೆ. ಅಮೆರಿಕದಲ್ಲಿ ನುರಿತ ಉದ್ಯೋಗಿಗಳ ಸಂಖ್ಯೆ ಕಡಿಮೆ ಇರುವ ಸ್ಥಳಗಳಲ್ಲಿ ಭಾರತ ಸೇರಿದಂತೆ ವಿದೇಶಗಳ ನಿಪುಣ ವೃತ್ತಿಪರರನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದ್ದ ಕಂಪನಿಗಳಿಗೆ ಹೊಸ ನೀತಿಯಿಂದ ಭಾರಿ ಹೊಡೆತ ಬೀಳಲಿದೆ. ಹಿಂದಿನ ಒಬಾಮ ಸರ್ಕಾರವು ವೀಸಾ ನಿಯಮ ಸಡಿಲಿಸಿ ಸುಮಾರು 71,000 ಎಚ್-1ಬಿ ವೀಸಾ ಪಡೆದ ಸಂಗಾತಿಗಳಿಗೆ ನೆರವಾಗಿತ್ತು.