Short News

ಟಿಕೆಟ್ ದರದಲ್ಲಿ ಭಾರೀ ರಿಯಾಯಿತಿ  ಘೋಷಿಸಿದ ಏರ್ ಏಷ್ಯಾ

ಟಿಕೆಟ್ ದರದಲ್ಲಿ ಭಾರೀ ರಿಯಾಯಿತಿ ಘೋಷಿಸಿದ ಏರ್ ಏಷ್ಯಾ

ಏರ್ ಏಷ್ಯಾ ಇಂಡಿಯಾ ಕಂಪನಿ ವಿಮಾನ ಪ್ರಯಾಣಿಕರಿಗೆ ಭಾರೀ ರಿಯಾಯಿತಿ ಘೋಷಿಸಿದೆ. ಪ್ರಮೋಷನಲ್ ಸೇಲ್ ಆಫರ್ ಅಡಿಯಲ್ಲಿ ಡೊಮೆಸ್ಟಿಕ್ ಪ್ರಯಾಣದ ಟಿಕೆಟ್ ಬೆಲೆಯನ್ನು ಕಡಿತಗೊಳಿಸಿದೆ. 2018ರ ಅಕ್ಟೋಬರ್ 22ರವರೆಗೂ ಈ ಕೊಡುಗೆ ದೊರೆಯಲಿದ್ದು, ಟಿಕೆಟ್ ಬುಕ್ಕಿಂಗ್ ಕೂಡ ಓಪನ್ ಇರಲಿದೆ. ಬುಕ್ಕಿಂಗ್ ಮಾಡಿದ ಪ್ರಯಾಣಿಕರು ಅಕ್ಟೋಬರ್ 31ರೊಳಗೆ ಪ್ರಯಾಣಿಸಬಹುದು. Airasia.com ವೆಬ್ ಸೈಟ್ ನಲ್ಲಿ ಟಿಕೆಟ್ ಬುಕ್ಕಿಂಗ್ ಮಾಡಬಹುದು. ಮ್ಯಾನೇಜ್ ಮೈ ಬುಕ್ಕಿಂಗ್ ಮೂಲಕ ಆಯ್ದುಕೊಂಡ ಅಥವಾ ಅಪ್ ಗ್ರೇಡ್ ಮಾಡಿದ ಸೀಟುಗಳಿಗೆ ಈ ಆಫರ್ ಅನ್ವಯವಾಗುವುದಿಲ್ಲ.
ಜಿಯೋ ಬಗ್ಗೆ ಐಡಿಯಾ ಕೊಟ್ಟಿದ್ದು ಯಾರು ಗೊತ್ತಾ? ಇಲ್ಲಿದೆ ಇಂಟರೆಸ್ಟಿಂಗ್ ಸ್ಟೋರಿ!

ಜಿಯೋ ಬಗ್ಗೆ ಐಡಿಯಾ ಕೊಟ್ಟಿದ್ದು ಯಾರು ಗೊತ್ತಾ? ಇಲ್ಲಿದೆ ಇಂಟರೆಸ್ಟಿಂಗ್ ಸ್ಟೋರಿ!

2011ರಲ್ಲಿ ನನ್ನ ಮಗಳು ಇಶಾ ಮೊದಲ ಬಾರಿ ಜಿಯೋ ಕಲ್ಪನೆಯನ್ನು ನೀಡಿದಳು ಎಂದು ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಹೇಳಿದ್ದಾರೆ. ರಜೆಗಾಗಿ ಮನೆಗೆ ಬಂದ ಇಶಾ ಕೋರ್ಸ್ ವರ್ಕ್ ಸಬ್ಮಿಟ್ ಮಾಡಬೇಕಾಗಿತ್ತು. ಮನೆಯಲ್ಲಿ ನೆಟ್ವರ್ಕ್ ತುಂಬಾ ನಿಧಾನಗತಿಯಾಗಿದೆ ಎಂದು ಬೇಸತ್ತ ಇಶಾ ತಂದೆಗೆ ದೂರನ್ನು ನೀಡಿದಳು. ದೇಶದಲ್ಲಿ ಅಂತರ್ಜಾಲ ವೇಗ ತುಂಬಾ ನಿಧಾನಗತಿಯಲ್ಲಿದೆ ಎಂಬುದನ್ನರಿತೆ. ಮಗ ಆಕಾಶ್ "ಡಿಜಿಟಲ್ ಜಗತ್ತನ್ನು" ಕುರಿತು ತಿಳಿಸಿದರು. ಅಂಬಾನಿ ತನ್ನ ಮಗನೊಂದಿಗಿನ ಚಾಟ್ ಮಾಡುವಾಗಿನ ಘಟನೆಯನ್ನು ನೆನಪಿಸಿಕೊಂಡು, "ಡ್ಯಾಡ್, ನಿಮ್ಮ ಪೀಳಿಗೆಯು ಅದನ್ನು ಪಡೆಯುವುದಿಲ್ಲ" ಎಂದು ಆಕಾಶ್ ಹೇಳಿರುವುದನ್ನು ಉಲ್ಲೇಖಿಸಿದ್ದಾರೆ.
ಟೈಮ್ಸ್ ನೌ ಸಮೀಕ್ಷೆ: ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ

ಟೈಮ್ಸ್ ನೌ ಸಮೀಕ್ಷೆ: ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ

ಕರ್ನಾಟಕ ವಿಧಾನಸಭೆ ಚುನಾವಣೆ 2018ರಲ್ಲಿ ರಾಜ್ಯದಲ್ಲಿ ಅತಿ ದೊಡ್ಡ ಪಕ್ಷ ಕಾಂಗ್ರೆಸ್ ಆಗಲಿದೆಯಾದರೂ ಅತಂತ್ರ ಸರ್ಕಾರ ನಿರ್ಮಾಣವಾಗುತ್ತದೆ ಎಂದು ಟೌಮ್ಸ್ ನೌ ವಾಹಿನಿಯ ನಡೆಸಿರುವ ಸಮೀಕ್ಷೆ ಹೇಳುತ್ತಿದೆ. ಟೈಮ್ಸ್ ನೌ ಸುದ್ದಿ ವಾಹಿನಿಯು ಕರ್ನಾಟಕ ಚುನಾವಣೆಯ ಕುರಿತು ಮಾಡಿರುವ ಸಮೀಕ್ಷೆಯ ಪ್ರಕಾರ ಕಾಂಗ್ರೆಸ್‌ಗೆ 91ಸೀಟುಗಳು ದೊರಕುತ್ತಿದ್ದರೆ, ಬಿಜೆಪಿ 89ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಹಾಗೂ 4ಕ್ಷೇತ್ರಗಳಲ್ಲಿ ಪಕ್ಷೇತರ ಅಭ್ಯರ್ಥಿ ಗೆಲವು ಸಾಧಿಸಲಿದ್ದಾರೆ. ಇಂದೇ ಎಬಿಪಿ ನ್ಯೂಸ್ ಸಿಎಸ್‌ಡಿಎಸ್ ಸಮೀಕ್ಷೆ ಸಹ ಹೊರಬಿದ್ದಿದ್ದು ಆ ಸಮೀಕ್ಷೆಯ ಪ್ರಕಾರವೂ  ಅತಂತ್ರ ವಿಧಾನಸಭೆ ನಿರ್ಮಾಣವಾಗುವ ಸಾಧ್ಯತೆ ಹೆಚ್ಚಿದೆ.
ಆರೋಗ್ಯಕರ ಹೃದಯಕ್ಕಾಗಿ, ಹೃದ್ರೋಗಶಾಸ್ತ್ರಜ್ಞರಿಂದ 8 ಸಲಹೆಗಳು!

ಆರೋಗ್ಯಕರ ಹೃದಯಕ್ಕಾಗಿ, ಹೃದ್ರೋಗಶಾಸ್ತ್ರಜ್ಞರಿಂದ 8 ಸಲಹೆಗಳು!

ಸಾಮಾನ್ಯವಾಗಿ ಹೆಚ್ಚಿನ ಜನ, ಅಧಿಕ ತೂಕ ಹೊಂದಿದವರು ಅಥವಾ ಬೊಜ್ಜು ಹೊಂದಿದವರು ಹೃದಯದ ಕಾಯಿಲೆಗೆ ಒಳಗಾಗುತ್ತಾರೆ ಮತ್ತು ಅದಕ್ಕೆ ಕಾರಣ, ಹೃದಯದಲ್ಲಿ ಶೇಕರಣೆಯಾದ ಹೆಚ್ಚಿನ ಕೊಬ್ಬು ಮತ್ತು ಹೆಚ್ಚಿನ ಕೊಲೆಸ್ಟರಾಲ್ ಎಂದು ನಂಬಿದ್ದಾರೆ. ಇದಕ್ಕೆ ಪುರಾವೆಗಳೂ ಇವೆ, ಆದರೆ ಇದು ಖಂಡಿತಾ ಸುಳ್ಳು. ಜನರ ಅನಾರೋಗ್ಯಕರ ಜೀವನಶೈಲಿ, ಆನುವಂಶಿಕವಾಗಿ ಅಥವಾ ಕೆಲವು ಹೃದಯದ ಹೊಂದಾಣಿಕೆಯ ಕಾಯಿಲೆಗಳನ್ನು ಹೊಂದಿದ್ದರೆ ಹೃದ್ರೋಗ ಬರಬಹುದು ಎಂದು ಹೃದಯಶಾಸ್ತ್ರಜ್ಞರು ಸ್ಪಷ್ಟಪಡಿಸುತ್ತಾರೆ. ಹೃದಯದ ಕಾಯಿಲೆಗಳ ಅಪಾಯದಲ್ಲಿ ತೆಳ್ಳಗಿನ ಶರೀರದವರು ಸಹ ಇರಬಹುದು. ಆದ್ದರಿಂದ, ಯಾವಾಗಲೂ ಎಚ್ಚರವಾಗಿರುವುದು ಉತ್ತಮ.