Short News

ಬಿಡುಗಡೆಗೊಂಡ ಹೊಸ ಬಿಎಂಡಬ್ಲ್ಯು ಎಕ್ಸ್6 ಎಕ್ಸ್ ಡ್ರೈವ್35ಐ

ಬಿಡುಗಡೆಗೊಂಡ ಹೊಸ ಬಿಎಂಡಬ್ಲ್ಯು ಎಕ್ಸ್6 ಎಕ್ಸ್ ಡ್ರೈವ್35ಐ

ಜರ್ಮನ್ ಮೂಲದ ವಾಹನ ತಯಾರಿಕಾ ಸಂಸ್ಥೆ ಬಿಎಂಡಬ್ಲ್ಯು ತನ್ನ ಹೊಸ ಎಕ್ಸ್6 ಎಕ್ಸ್ ಡ್ರೈವ್35ಐ ಕಾರನ್ನು ಬಿಡುಗಡೆಗೊಳಿಸಿದ್ದು, ಕಾರಿನ ಬೆಲೆಯನ್ನು ದೆಹಲಿ ಎಕ್ಸ್ ಶೋರಂ ಪ್ರಕಾರ ರೂ. 94.15 ಲಕ್ಷಕ್ಕೆ ನಿಗದಿಪಡಿಸಲಾಗಿದೆ. ಬಿಎಂಡಬ್ಲ್ಯು ಎಕ್ಸ್6 ಎಕ್ಸ್ ಡ್ರೈವ್35ಐ ಕಾರು ಸ್ಪೋರ್ಟ್ಸ್ ಆವೃತ್ತಿಯಾಗಿದ್ದು, 6.4 ಸೆಕೆಂಡಿಗೆ 0-100kph ಮತ್ತು 240kph ಟಾಪ್ ಸ್ಪೀಡ್ ಹೊಂದಿದ್ದು, ಲಾಂಚ್ ಕಂಟ್ರೋಲ್ ಸಿಸ್ಟಮ್ ಅಳವಡಿಸಲಾಗಿದೆ. ಬಿಎಂಡಬ್ಲ್ಯು ಎಕ್ಸ್6 ಎಕ್ಸ್ ಡ್ರೈವ್ 35ಐ ಎಂ ಸ್ಪೋರ್ಟ್ ಬಿಎಂಡಬ್ಲ್ಯು ಎಕ್ಸ್ 6 SUV ಕೂಪೆ ಕ್ರಾಸ್ಒವರ್ ಪೆಟ್ರೋಲ್ ರೂಪಾಂತರವಾಗಿದೆ.
ಚಳಿಗಾಲದ ಒಲಿಂಪಿಕ್ಸ್‌ : ಸ್ಪರ್ಧೆಯ ವೇಳೆ ನೃತ್ಯಗಾರ್ತಿಯ ಮೇಲುಡುಪು ಸಡಿಲಗೊಂಡು ಕಳಚಿ ಬಿತ್ತು

ಚಳಿಗಾಲದ ಒಲಿಂಪಿಕ್ಸ್‌ : ಸ್ಪರ್ಧೆಯ ವೇಳೆ ನೃತ್ಯಗಾರ್ತಿಯ ಮೇಲುಡುಪು ಸಡಿಲಗೊಂಡು ಕಳಚಿ ಬಿತ್ತು

ಚಳಿಗಾಲದ ಒಲಿಂಪಿಕ್ಸ್‌ ಐಸ್‌ ಫಿಗರ್ ಸ್ಕೇಟಿಂಗ್‌ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಫ್ರಾನ್ಸ್‌ನ ಗ್ಯಾಬ್ರಿಯೆಲಾ ಪಾಪ್‌ಡಕಿನ್ಸ್‌ ಅವರ ಮೇಲುಡುಪಿನ ಒಂದು ಭಾಗ ಕಳಚಿತು. ಇದರಿಂದಾಗಿ ಗ್ಯಾಬ್ರಿಯೆಲಾ ಮತ್ತು ಅವರ ಜೊತೆಗಾರ ಗಲೆಮ್ ಸಿಜೋರ್ ಜೋಡಿಯು ಚಿನ್ನದ ಪದಕ ಗೆಲ್ಲುವ ಆಸೆ ಕೈಗೂಡಲಿಲ್ಲ. ಆರಂಭದಿಂದಲೂ ಉತ್ತಮ ಫ್ರದರ್ಶನ ನೀಡಿದ್ದ ಜೋಡಿ ಕೊನೆಯ ಹಂತದಲ್ಲಿ ಗ್ಯಾಬ್ರಿಯೆಲಾ ಎದೆಯ ಎಡಭಾಗದ ಪೋಷಾಕು ಕಳಚಿತು. ಇದು ಟಿವಿಯ ನೇರಪ್ರಸಾರದಲ್ಲಿಯೂ ಕಂಡುಬಂತು. ಇದರ ಅರಿವಿದ್ದರೂ ಗ್ಯಾಬ್ರಿಯೆಲಾ ಜೋಡಿಯು ಶಾಂತಚಿತ್ತದಿಂದಲೇ ಸ್ಪರ್ಧೆಯನ್ನೂ ಪೂರ್ತಿಗೊಳಿಸಿದರು.
ರೊಟೊಮ್ಯಾಕ್ ಪೆನ್ಸ್ 3,695 ಕೋಟಿ ವಂಚನೆ ಎಷ್ಟು ವ್ಯವಸ್ಥಿತವಾಗಿದೆಯೋ!

ರೊಟೊಮ್ಯಾಕ್ ಪೆನ್ಸ್ 3,695 ಕೋಟಿ ವಂಚನೆ ಎಷ್ಟು ವ್ಯವಸ್ಥಿತವಾಗಿದೆಯೋ!

ರೊಟೊಮ್ಯಾಕ್ ಪೆನ್ಸ್ ನಿಂದ ಆಗಿರುವುದು 3,695 ಕೋಟಿ ವಂಚನೆ ಎಂದು ಸಿಬಿಐ ಲೆಕ್ಕಾಚಾರ ಹಾಕಿದೆ. ಏನಿದು ವಂಚನೆ, ಹೇಗೆ ಮಾಡಿದ್ದಾರೆ ಇಷ್ಟೊಂದು ದೊಡ್ಡ ಪ್ರಮಾಣದ ಮೋಸ ಎಂಬುದು ಕೂಡ ಆಸಕ್ತಿಕರವಾಗಿದೆ.

ರಫ್ತು ಮಾಡುವ ಸಲುವಾಗಿ ಸರಕು ಖರೀದಿಗೆ ಎಂದು ಬ್ಯಾಂಕ್ ಗಳಿಂದ ಸಾಲ ಪಡೆದಿರುವ ರೊಟೊಮ್ಯಾಕ್, ಆ ಹಣವನ್ನು ವಿದೇಶಿ ಕಂಪೆನಿಗಳಿಗೆ ವರ್ಗಾಯಿಸಿ, ಪುನಃ ಆ ಹಣವನ್ನೆ ಕಾನ್ಪುರದ ಕಂಪೆನಿಯೊಂದಕ್ಕೆ ವರ್ಗಾವಣೆ ಮಾಡಿರುವುದು ಗಮನಕ್ಕೆ ಬಂದಿದೆ.

ಅಸಲಿಗೆ ರೊಟೊಮ್ಯಾಕ್ ಕಂಪೆನಿಯಿಂದ ರಫ್ತು ಮಾಡೇ ಇಲ್ಲ. ಅಂಥ ಯಾವ ಆರ್ಡರ್ ಕೂಡ ಬಂದಿಲ್ಲ. ಬ್ಯಾಂಕ್ ನಿಂದ ಸಾಲ ಪಡೆದು ಅದನ್ನು ಬೇರೆ ವ್ಯವಹಾರಗಳಿಗೆ ಬಳಸಿರುವುದು ಕಂಡುಬಂದಿದೆ.

ಐ20 ಫೇಸ್‌ಲಿಫ್ಟ್ v/s ಮಾರುತಿ ಬಲೆನೊ.. ಇವುಗಳಲ್ಲಿ ಯಾವುದು ಬೆಸ್ಟ್?

ಐ20 ಫೇಸ್‌ಲಿಫ್ಟ್ v/s ಮಾರುತಿ ಬಲೆನೊ.. ಇವುಗಳಲ್ಲಿ ಯಾವುದು ಬೆಸ್ಟ್?

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿನ ಕಾರುಗಳ ಮಾರಾಟ ಪ್ರಕ್ರಿಯೆ ಜೋರಾಗಿಯೇ ನಡೆದಿದ್ದು, ಅದರಲ್ಲೂ ಹ್ಯಾಚ್‌ಬ್ಯಾಕ್ ಆವೃತ್ತಿಗಳಿಗೆ ವಿಶೇಷ ಬೇಡಿಕೆಯಿದೆ. ಹೀಗಾಗಿ ಕಾರು ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ ಹ್ಯುಂಡೈ ಐ20 ಫೇಸ್‌ಲಿಫ್ಟ್ ಹಾಗೂ ಮಾರುತಿ ಸುಜುಕಿ ಬಲೆನೊ ಕಾರುಗಳ ಬಗೆಗೆ ಇಲ್ಲಿ ಚರ್ಚಿಸಲಾಗಿದ್ದು, ಗ್ರಾಹಕರ ಆಯ್ಕೆ ಯಾವುದು ಸೂಕ್ತ ಎನ್ನುವ ವಿವರಣೆ ಇಲ್ಲಿದೆ. ಜೊತೆಗೆ ಹ್ಯಾಚ್‌ಬ್ಯಾಕ್ ಪ್ರಿಯರ ಹಾಟ್ ಫೇವರಿಟ್ ಎನಿಸಿರುವ ಐ20 ಫೇಸ್‌ಲಿಫ್ಟ್ ಮತ್ತು ಬಲೆನೊ ಬೆಲೆ, ತಾಂತ್ರಿಕ ಅಂಶಗಳು, ವಿನ್ಯಾಸಗಳು, ಗ್ರಾಹಕ ಸ್ನೇಹಿ ಕಾರಿನ ಸೌಲಭ್ಯಗಳ ಬಗೆಗೆ ಇಲ್ಲಿ ಚರ್ಚಿಸಲಾಗಿದೆ.