Short News

ಆಫರ್ ಹೆಸರಿನಲ್ಲಿ ಏರ್‌ಟೆಲ್‌ ಮಹಾ ಮೋಸ...!

ಆಫರ್ ಹೆಸರಿನಲ್ಲಿ ಏರ್‌ಟೆಲ್‌ ಮಹಾ ಮೋಸ...!

ದೇಶಿಯ ಪ್ರತಿಷ್ಠಿತ IPL ಕ್ರಿಕೆಟ್ ಪಂದ್ಯಾವಳಿಗಳು ಶುರುವಾದ ಹಿನ್ನಲೆಯಲ್ಲಿ ಏರ್‌ಟೆಲ್ 'ಸಿಸನ್ ಪಾಸ್' ಹೆಸರಿನಲ್ಲಿ ಆಫರ್ ವೊಂದನ್ನು ನೀಡಿತ್ತು. ಇದರಲ್ಲಿ 4G ಸಿಮ್ ಪಡೆಯಿರಿ ಉಚಿತವಾಗಿ IPL ನೋಡಿ ಎಂದು ಹೇಳಿತ್ತು. ಆದರೆ ಈ ಕುರಿತು ರಿಲಯನ್ಸ್ ಜಿಯೋ ಕೋರ್ಟ್ ಮೇಟ್ಟಿಲು ಏರಿತ್ತು. ಈ ಮೂಲಕ ದರ ಸಮರವನ್ನು ಕಾನೂನು ಮೂಲಕ ನಡೆಸಲು ಮುಂದಾಗಿತ್ತು. ಜಿಯೋ ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಏರ್‌ಟೆಲ್ ಸತ್ಯ ಬಯಲಾಗಿದ್ದು, ‘ಲೈವ್ ಮತ್ತು ಫ್ರೀ ಅಕ್ಸೆಸ್' ಆಫರ್ ಕುರಿತಂತೆ ಪ್ರಸಾರ ಮಾಡುತ್ತಿರುವ ಜಾಹೀರಾತನ್ನು ಬದಲಾವಣೆ ಮಾಡುವುದಾಗಿ ಏರ್ಟೆಲ್ ಕೋರ್ಟ್ ಗೆ ಹೇಳಿದೆ.
ಕನ್ನಡಿಗ ಕೆ. ಗೌತಮ್ ಆಟಕ್ಕೆ ಅಪಾರ ಮೆಚ್ಚುಗೆ: ಅದ್ಭುತ ಆಟ ಎಂದರು ವಾರ್ನ್

ಕನ್ನಡಿಗ ಕೆ. ಗೌತಮ್ ಆಟಕ್ಕೆ ಅಪಾರ ಮೆಚ್ಚುಗೆ: ಅದ್ಭುತ ಆಟ ಎಂದರು ವಾರ್ನ್

ಮುಂಬೈ ತಂಡದ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ರಾಜಸ್ಥಾನಕ್ಕೆ ರೋಚಕ ಗೆಲುವು ತಂದಿತ್ತ ಕನ್ನಡಿಗ ಕೆ. ಗೌತಮ್ ಬಗ್ಗೆ ಎಲ್ಲೆಡೆ ಮೆಚ್ಚುಗೆಯ ಮಾತು ಕೇಳಿಬರುತ್ತಿದೆ. ತಂಡದ ಗೆಲುವಿಗೆ 17 ಎಸೆತಗಳಲ್ಲಿ 35 ರನ್ ಬೇಕಿದ್ದಾಗ ಕೆ. ಗೌತಮ್ ಕ್ರೀಸ್‌ಗೆ ಇಳಿದಿದ್ದರು. ತಂಡ ಆಗಲೇ 6 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ತವರಿನ ಅಂಗಳದಲ್ಲಿ ಸತತ ಎರಡನೆಯ ಸೋಲು ಕಾಣುವ ಭೀತಿ ಎದುರಾಗಿತ್ತು. ಪ್ರಮುಖ ಬ್ಯಾಟ್ಸ್‌ಮನ್‌ಗಳೆಲ್ಲರೂ ವಿಕೆಟ್ ಒಪ್ಪಿಸಿದ್ದರಿಂದ ಮುಂಬೈ ತಂಡಕ್ಕೆ ಸುಲಭದ ಗೆಲುವು ಸಿಗಲಿದೆ ಎಂದು ಎಲ್ಲರೂ ಭಾವಿಸಿದ್ದರು. ಈ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿದ್ದು ಕೆ. ಗೌತಮ್.
ಕರ್ನಾಟಕದಲ್ಲಿ ಹಿಗ್ಗುತ್ತಿದೆ ಅರಣ್ಯ ಪ್ರದೇಶ: ದೇಶದಲ್ಲೇ ಆಂಧ್ರ ಪ್ರಥಮ

ಕರ್ನಾಟಕದಲ್ಲಿ ಹಿಗ್ಗುತ್ತಿದೆ ಅರಣ್ಯ ಪ್ರದೇಶ: ದೇಶದಲ್ಲೇ ಆಂಧ್ರ ಪ್ರಥಮ

ಕಳೆದ 2 ವರ್ಷಗಳ ಅವಧಿಯಲ್ಲಿ ದೇಶದಲ್ಲಿ 6,779 ಚದರ ಕಿ.ಮೀ ಗಳಷ್ಟು ಅರಣ್ಯ ಪ್ರದೇಶ ಹೆಚ್ಚಾಗಿದೆ. ಈ ಹೆಚ್ಚಳದಲ್ಲಿ ಆಂಧ್ರ ಪ್ರದೇಶ, ಕರ್ನಾಟಕ ಮತ್ತು ಕೇರಳ ರಾಜ್ಯಗಳ ಕೊಡುಗೆ ದೊಡ್ಡದು ಎಂದು ಭಾರತೀಯ ಅರಣ್ಯ ಸರ್ವೇಕ್ಷಣಇಲಾಖೆ (ಎಫ್‌ಎಸ್ಐ) ಹೇಳಿದೆ. ಈಗಾಗಲೇ ಗುರುತುಪಡಿಸಲಾಗಿರುವ ಅರಣ್ಯ ಪ್ರದೇಶದ ಒಳಗೆ ಮತ್ತು ಹೊರಗೆ ಹೊಸ ಗಿಡಗಳ ನೆಡುವಿಕೆ ಮತ್ತು ಇರುವ ಅರಣ್ಯದ ಸಂರಕ್ಷಣೆಯಿಂದ ಈ ಪ್ರಗತಿ ಸಾಧ್ಯವಾಗಿದೆ ಎಂದು ಎಫ್ ಎಸ್ ಐ ಮಹಾ ನಿರ್ದೇಶಕ ಸೈಬಾಲ್ ದಾಸ್ ಗುಪ್ತಾ ಹೇಳಿದ್ದಾರೆ. ರಿಸೋರ್ಸ್ ಸ್ಯಾಟ್ -2 ಉಪಗ್ರಹದ ಮೂಲಕ ಪಡೆದ ಮಾಹಿತಿಗಳನ್ನು ಆಧರಿಸಿ ಅರಣ್ಯ ಪ್ರಮಾಣ ಹೆಚ್ಚಳವನ್ನು ಗುರುತಿಸಲಾಗಿದೆ.
ಎಚ್ ಡಿ ಕೋಟೆಯಲ್ಲಿ ಫಲಿಸೀತೇ ಸಿದ್ದರಾಮಯ್ಯ ತಂತ್ರ?

ಎಚ್ ಡಿ ಕೋಟೆಯಲ್ಲಿ ಫಲಿಸೀತೇ ಸಿದ್ದರಾಮಯ್ಯ ತಂತ್ರ?

ಮೈಸೂರು ಜಿಲ್ಲೆಯ ತಾಲೂಕು ಕೇಂದ್ರಗಳ ಪೈಕಿ ಹೆಚ್.ಡಿ.ಕೋಟೆಯನ್ನು ಹಿಂದುಳಿದ ತಾಲೂಕು ಹಣೆಪಟ್ಟಿಯನ್ನು ಕಟ್ಟಿಕೊಂಡು ಬರಲಾಗುತ್ತಿದೆ. ಇಲ್ಲಿ ಹೆಚ್ಚಾಗಿ ಕೂಲಿ ಕಾರ್ಮಿಕರು, ಬುಡಕಟ್ಟು ಜನಾಂಗದವರಿದ್ದು, ತಾಲೂಕನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಇದುವರೆಗೆ ಹೇಳಿಕೊಳ್ಳುವ ಕಾರ್ಯಗಳು ಮಾತ್ರ ನಡೆದಿಲ್ಲ.

ಹಾಗೆಂದು ರಾಜಕಾರಣ ಮಾತ್ರ ಇಲ್ಲಿ ಯಾವತ್ತೂ ಹಿಂದುಳಿದಿಲ್ಲ. ಒಂದಷ್ಟು ನಾಯಕರು ಇಲ್ಲಿಂದಲೇ ತಮ್ಮ ಛಾಪು ಮೂಡಿಸಿದ್ದಾರೆ. ಸಚಿವರೂ ಆಗಿದ್ದಾರೆ. ಆದರೆ ಹಿಂದುಳಿದ ಎಂಬ ಹಣೆಪಟ್ಟಿಯಿಂದ ಬಿಡುಗಡೆ ಮಾಡುವ ಯತ್ನವನ್ನು ಮಾಡುವ ಯತ್ನಗಳಂತು ಆಗಲೇ ಇಲ್ಲ.