Short News

ಆಮದು ಸುಂಕ ತಗ್ಗಿಸಿದ ಭಾರತ, ಗರಂ ಆದ ಟ್ರಂಪ್

ಆಮದು ಸುಂಕ ತಗ್ಗಿಸಿದ ಭಾರತ, ಗರಂ ಆದ ಟ್ರಂಪ್

ಹಾರ್ಲೆ ಡೇವಿಡ್ಸನ್ ಬೈಕಿನ ಮೇಲೆ ಹೆಚ್ಚು ಆಮದು ಸುಂಕ ಹೇರಿರುವ ಭಾರತದ ವಿರುದ್ಧ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಕಿಡಿಕಾರಿದ್ದಾರೆ.

ಆದರೆ, ವಿದೇಶಗಳಿಂದ ಆಮದು ಮಾಡಿಕೊಳ್ಳುವ ದುಬಾರಿ ಬೆಲೆಯ ದ್ವಿಚಕ್ರವಾಹನಗಳ ಮೇಲೆ ಅಬಕಾರಿ ಸುಂಕವನ್ನು ಶೇ50ರಷ್ಟು ಕೇಂದ್ರ ಸರ್ಕಾರ ತಗ್ಗಿಸಿದೆ.

800 ಸಿಸಿ ಸಾಮರ್ಥ್ಯದ ತನಕದ ಬೈಕುಗಳ ಆಮದು ಮೇಲಿನ ಸುಂಕವನ್ನು ಶೇ 60ರಷ್ಟು ಹಾಗೂ 800 ಸಿಸಿಗಿಂತ ಹೆಚ್ಚಿನ ಸಾಮರ್ಥ್ಯಗಳ ಐಕಿಗಳ ಮೇಲೆ ಶೇ 75ರಷ್ಟು ಸುಂಕ ವಿಧಿಸಲಾಗಿತ್ತು. 

ಟೀಂ ಇಂಡಿಯಾದ ಮೂವರಿಗೆ ಪ್ರತಿಷ್ಠಿತ ಕ್ರಿಕ್​ಇನ್ಫೋ ಪ್ರಶಸ್ತಿ

ಟೀಂ ಇಂಡಿಯಾದ ಮೂವರಿಗೆ ಪ್ರತಿಷ್ಠಿತ ಕ್ರಿಕ್​ಇನ್ಫೋ ಪ್ರಶಸ್ತಿ

ಕ್ರಿಕೆಟ್​ನ ಪ್ರತಿಷ್ಠಿತ ವೆಬ್​ಸೈಟ್​ ಇಎಸ್​ಪಿಎನ್​ ಅತ್ಯುತ್ತಮ ಪ್ರದರ್ಶನ ತೋರಿರುವ ಆಟಗಾರರಿಗೆ ಕ್ರಿಕ್​ಇನ್ಫೋ ಪ್ರಶಸ್ತಿ ನೀಡುತ್ತಾ ಬರುತ್ತಿದ್ದು,2017ರ ಪ್ರಶಸ್ತಿಗಳಿಸಿರುವವರ ಪಟ್ಟಿಯನ್ನು ಪ್ರಕಟಿಸಿದೆ. ಭಾರತದ 3ಜನ ಈ ಪ್ರಶಸ್ತಿಗೆ ಆಯ್ಜೆಯಾಗಿದ್ದು,ಯಜುವೀಂದ್ರ್​ ಚಹಲ್​ ಅತ್ಯುತ್ತಮ ಟಿ20 ಬೌಲರ್, ಕುಲ್​ದೀಪ್​ ಯಾದವ್​ ಡೆಬ್ಯು ಕ್ರಿಕೆಟರ್​ ಆಗಿ ಹೊರಹೊಮ್ಮಿದ್ದಾರೆ. ಇನ್ನು ವರ್ಷದ ಬ್ಯಾಟಿಂಗ್​ ಪರ್ಫಾರ್ಮರ್​ ಆಗಿ ಹರ್ಮನ್​ಪ್ರೀತ್​ ಕೌರ್​ ಪ್ರಶಸ್ತಿ ಪಡೆದಿದ್ದಾರೆ. ಒಟ್ಟು 12 ಪ್ರಶಸ್ತಿಗಳಲ್ಲಿ 3 ಜನ ಭಾರತೀಯರಿದ್ದು, ಅತಿ ಹೆಚ್ಚು ಪ್ರಶಸ್ತಿ ಪಡೆದ ದೇಶ ಎಂಬ ಹೆಗ್ಗಳಿಕೆ ಭಾರತದ ಪಾಲಾಗಿದೆ.
ಮಾಲಿವುಡ್​ ನ ಸ್ಟಾರ್ ನಟನನ್ನು ಭೇಟಿಯಾದ ಕಿಚ್ಚ ದಂಪತಿ!

ಮಾಲಿವುಡ್​ ನ ಸ್ಟಾರ್ ನಟನನ್ನು ಭೇಟಿಯಾದ ಕಿಚ್ಚ ದಂಪತಿ!

ಮಲಯಾಳಂನ ಖ್ಯಾತ ನಟ ಮಮ್ಮುಟಿ ಸದ್ಯ ಮಾಮಾಗಂ ಅನ್ನೋ ಬಹುಕೋಟಿ ವೆಚ್ಚದ ಸಿನಿಮಾದಲ್ಲಿ ನಟಿಸುತ್ತಿದ್ದು, ಕಳೆದೊಂದು ವಾರದಿಂದ ಚಿತ್ರದ ಶೂಟಿಂಗ್ ಗಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸುಬ್ರಹ್ಮಣ್ಯದಲ್ಲಿದ್ದಾರೆ. ಇದೇ ವೇಳೆ ಕಿಚ್ಚ ಸುದೀಪ್​ ದಂಪತಿ ಕೂಡ ಮಮ್ಮುಟಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಮಮ್ಮುಟಿ ಜೊತೆಗಿರುವ ಫೋಟೋವನ್ನು ಪ್ರಿಯಾ ಸುದೀಪ್​ ಟ್ವೀಟ್ ಮಾಡಿದ್ದಾರೆ. ಪ್ರಿಯಾ ಸುದೀಪ್​ ಮೂಲತಃ ಕೇರಳದವರು. ಹಾಗಾಗಿಯೇ, ಮಮ್ಮುಟಿ ಅಂದ್ರೆ, ತುಂಬಾ ಅಭಿಮಾನ.
ಬರಿಗೈಲಿ ಕೆಂಡ ತೂರುವ ಕೂಡ್ಲಿಗಿಯ 'ಗುಗ್ಗರಿ ಹಬ್ಬ' ನೋಡಿದ್ರಾ!

ಬರಿಗೈಲಿ ಕೆಂಡ ತೂರುವ ಕೂಡ್ಲಿಗಿಯ 'ಗುಗ್ಗರಿ ಹಬ್ಬ' ನೋಡಿದ್ರಾ!

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬೊಗ್ಗಲು ಓಬಳೇಶ್ವರ ಜಾತ್ರೆ ಅಂದರೆ ಬಹಳ ವಿಶೇಷ ಹಾಗೂ ವಿಶಿಷ್ಟ. ನಿಗಿನಿಗಿ ಕೆಂಡವನ್ನು ಬರಿಗೈಲಿ ತೆಗೆದುಕೊಂಡು ಇಲ್ಲಿ ಭಕ್ತರು ಒಬ್ಬರ ಮೇಲೊಬ್ಬರು ತೂರಾಡುತ್ತಾರೆ.

ಪ್ರತಿ ಮೂರು ವರ್ಷಕ್ಕೆ ಒಮ್ಮೆ ಈ ಆಚರಣೆ ನಡೆಯುತ್ತದೆ. ವಾಲ್ಮೀಕಿ ಜನಾಂಗದವರೇ ಹೆಚ್ಚಿನ ಸಂಖ್ಯೆಯಲ್ಲಿರುವ ಈ ಗ್ರಾಮದಲ್ಲಿ 'ಬೇಡ ಸಂಸ್ಕೃತಿ'ಯ ಆಚರಣೆ ಇಂದಿಗೂ ನಡೆದುಬರುತ್ತಿದೆ.

ಒಂದು ವೇಳೆ ಇದನ್ನು ಮಾಡದಿದ್ದರೆ ಕೆಡುಕು ಉಂಟಾಗುತ್ತದೆ ಎಂಬುದು ಸ್ಥಳೀಯರ ನಂಬಿಕೆ. ಅಂದಹಾಗೆ ಕೆಂಡ ತೂರಿದರೂ ಯಾರಿಗೂ ಸುಟ್ಟ ಗಾಯಗಳಾಗುವುದಿಲ್ಲ. ಅದು ಕೂಡ ದೇವರ ಮಹಿಮೆ ಎಂಬುದು ನಂಬಿಕೆ.