Short News

ಏಪ್ರಿಲ್ 16ರಿಂದ ಚಿನ್ನದ ಬಾಂಡ್ ಯೋಜನೆ ಆರಂಭ

ಏಪ್ರಿಲ್ 16ರಿಂದ ಚಿನ್ನದ ಬಾಂಡ್ ಯೋಜನೆ ಆರಂಭ

ನರೇಂದ್ರ ಮೋದಿ ಸರ್ಕಾರದ ಮಹತ್ವದ ಯೋಜನೆಗಳ ಪೈಕಿ ಒಂದೆನಿಸಿರುವ ಚಿನ್ನದ ಬಾಂಡ್ ಯೋಜನೆಯ ಪ್ರಸಕ್ತ ಸಾಲಿನ ಮೊದಲ ಕಂತು ಏಪ್ರಿಲ್ 16 ರಿಂದ ಆರಂಭವಾಗಲಿದೆ. ಏಪ್ರಿಲ್ 16 ರಿಂದ 20 ರ ವರೆಗೆ ಚಿನ್ನದ ಬಾಂಡ್ ಗೆ ಅರ್ಜಿ ಸಲ್ಲಿಸಬಹುದಾಗಿದೆ. ಮೇ 4 ರಂದು ಬಾಂಡ್ ವಿತರಿಸಲಾಗುತ್ತದೆ. ಬ್ಯಾಂಕ್ ಗಳು, ಪೋಸ್ಟ್ ಆಫೀಸ್ ಮೊದಲಾದ ಕಡೆಗಳಲ್ಲಿ ಚಿನ್ನದ ಬಾಂಡ್ ವಿತರಿಸಲಾಗುತ್ತದೆ. ಕನಿಷ್ಟ 1 ಗ್ರಾಂ ನಿಂದ ಗರಿಷ್ಠ 4 ಕೆ.ಜಿ. ವರೆಗೆ ಚಿನ್ನದ ಬಾಂಡ್ ನಲ್ಲಿ ಹೂಡಿಕೆ ಮಾಡಬಹುದು. ಟ್ರಸ್ಟ್ ಗಳಿಗೆ 20 ಕೆ.ಜಿ. ವರೆಗೆ ಹೂಡಿಕೆಗೆ ಅವಕಾಶವಿದೆ. 20,000 ರೂ.ವರೆಗೆ ನಗದು ರೂಪದಲ್ಲಿ ಬಾಂಡ್ ಮೌಲ್ಯ ಪಾವತಿಯನ್ನು ಪಡೆಯಬಹುದು.
ನೈಲ್ ಕಟರ್ ನುಂಗಿದ ಮಗು!

ನೈಲ್ ಕಟರ್ ನುಂಗಿದ ಮಗು!

ಚೈನಾದ ಚಂಗ್ ಚುನ್ ಎಂಬಲ್ಲಿ ಒಂದು ವರ್ಷದ ಮಗುವೊಂದು ನೈಲ್ ಕಟರ್ ನುಂಗಿದ ಘಟನೆ ನಡೆದಿದೆ. ತಾಯಿ ಉಪಯೋಗಿಸಿದ್ದ ನೈಲ್ ಕಟರ್ ಅನ್ನು ತೆಗೆದುಕೊಂಡು 16 ತಿಂಗಳ ಮಗು ಇದೊಂದು ಆಟವೆಂದು ಭಾವಿಸಿ ನೈಲ್ ಕಟರ್ ಅನ್ನು ನುಂಗಿಬಿಟ್ಟಿದೆ. ತಕ್ಷಣವೇ ಮಗುವನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಹೊಟ್ಟೆಯೊಳಗೆ ಸೇರಿದ್ದ 2.4 ಇಂಚಿನ ನೈಲ್ ಕಟರ್ ನ್ನು ವೈದ್ಯರು ಎಂಡೋಸ್ಕೋಪಿ ಮೂಲಕ ಹೊರ ತೆಗೆದಿದ್ದಾರೆ. ಸದ್ಯ ಮಗು ಆರೋಗ್ಯವಾಗಿದ್ದು, ಮನೆಗೆ ವಾಪಸ್ಸಾಗಿದೆ.
6 ತಿಂಗಳ ಮಗುವಿನ ಮೇಲೆ ಅತ್ಯಾಚಾರವೆಸಗಿ ಹತ್ಯೆಗೈದಿದ್ದಾತನಿಗೆ ಕೋರ್ಟ್ ಆವರಣದಲ್ಲೇ ಸಾರ್ವಜನಿಕರಿಂದ ಗೂಸಾ

6 ತಿಂಗಳ ಮಗುವಿನ ಮೇಲೆ ಅತ್ಯಾಚಾರವೆಸಗಿ ಹತ್ಯೆಗೈದಿದ್ದಾತನಿಗೆ ಕೋರ್ಟ್ ಆವರಣದಲ್ಲೇ ಸಾರ್ವಜನಿಕರಿಂದ ಗೂಸಾ

ನ್ಯಾಯಾಲಯದ ಆವರಣದಲ್ಲಿಯೇ ಸಾರ್ವಜನಿಕರು 6 ತಿಂಗಳ ಹಸುಗೂಸನ್ನು ಅಪಹರಿಸಿ ಅತ್ಯಾಚಾರವೆಸಗಿ, ಬರ್ಬರವಾಗಿ ಹತ್ಯೆ ಮಾಡಿದ್ದ ಶಿಶುಕಾಮಿಗೆ ತಕ್ಕ ಪಾಠ ಕಲಿಸಿದ್ದಾರೆ. ರಾಜ್ಕೋಟ್ ಸಮೀಪದ ಕಟ್ಟವೊಂದರ ನೆಲಮಹಡಿಯಲ್ಲಿ ಮಗುವಿನ ರಕ್ತಸಿಕ್ತ ಮೃತದೇಹ ಪತ್ತೆಯಾಗಿದ್ದು, ಮಧ್ಯರಾತ್ರಿಯಿಂದ ಕಾಣೆಯಾಗಿದ್ದ 6 ತಿಂಗಳ ಕಂದಮ್ಮ ಮಧ್ಯಾಹ್ನದ ವೇಳೆಗೆ ಶವವಾಗಿ ಪತ್ತೆಯಾಗಿತ್ತು. ಆರೋಪಿಯನ್ನು ಬಂಧನಕ್ಕೊಳಪಡಿಸಿದ್ದ ಪೊಲೀಸರು, ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆತಂದಿದ್ದರು. ಈ ವೇಳೆ ಆಕ್ರೋಶಗೊಂಡಿದ್ದ ಜನರು ಆರೋಪಿಯನ್ನು ಪೊಲೀಸರ ಕೈಯಿಂದ ಎಳೆದು ತಂದು ಹಿಗ್ಗಾ-ಮುಗ್ಗಾ ಥಳಿಸಿದ್ದಾರೆ.
ಅಮೆರಿಕಾಕ್ಕೆ ಮೋಸ ಮಾಡಿದ್ದಕ್ಕೆ ZTE ಸ್ಮಾರ್ಟ್‌ಫೋನ್‌ಗಳಿಗೆ ಸಿಗುವುದಿಲ್ಲ ಆಂಡ್ರಾಯ್ಡ್?!

ಅಮೆರಿಕಾಕ್ಕೆ ಮೋಸ ಮಾಡಿದ್ದಕ್ಕೆ ZTE ಸ್ಮಾರ್ಟ್‌ಫೋನ್‌ಗಳಿಗೆ ಸಿಗುವುದಿಲ್ಲ ಆಂಡ್ರಾಯ್ಡ್?!

ಅಮೆರಿಕಾಕ್ಕೆ ಮೋಸ ಮಾಡಿರುವ ಆರೋಪ ಹೊತ್ತಿರುವ ಚೀನಾದ ಮೊಬೈಲ್ ತಯಾರಿಕಾ ಕಂಪೆನಿ ಝಡ್‌ಟಿಇ ಕಾರ್ಪೊರೇಷನ್ ಇದೀಗ ಸಂಕಷ್ಟ ಎದುರಿಸುತ್ತಿದೆ. ಝಡ್‌ಟಿಇ ಕಂಪೆನಿ ತಯಾರಿಸಿರುವ ಸ್ಮಾರ್ಟ್‌ಫೋನ್‌ಗಳು ಇನ್ನು ಮುಂದೆ ಗೂಗಲ್‌ ಆಂಡ್ರಾಯ್ಡ್‌ನ ಆಪರೇಟಿಂಗ್‌ ಸಾಫ್ಟ್‌ವೇರ್‌ ಬಳಸುವಂತಿಲ್ಲ ಎಂದು ಹೇಳಲಾಗುತ್ತಿದೆ. ಝಡ್‌ಇಟಿ ಕಂಪೆನಿ ಅಮೆರಿಕದ ವಾಣಿಜ್ಯ ಇಲಾಖೆ ಒಪ್ಪಂದಗಳನ್ನು ಉಲ್ಲಂಘಿಸಿ ಅಮೆರಿಕದ ವಸ್ತುಗಳನ್ನು ರಹಸ್ಯವಾಗಿ ಇರಾನ್‌ಗೆ ಮಾರಾಟ ಮಾಡುವಾಗ ಸಿಕ್ಕಿ ಬಿದ್ದಿದೆ. ಇದರ ಪರಿಣಾಮವಾಗಿ ಅಮೆರಿಕ ಝಡ್‌ಟಿಇಗೆ ನಿಷೇಧ ಹೇರಿದೆ.