Short News

ನಕಲಿ ಸುದ್ದಿಯಿಂದ ಕಲ್ಯಾಣ್ ಜ್ಯುವೆಲ್ಲರ್ಸ್ ಗೆ ಕೋಟ್ಯಂತರ ರು ನಷ್ಟ!

ನಕಲಿ ಸುದ್ದಿಯಿಂದ ಕಲ್ಯಾಣ್ ಜ್ಯುವೆಲ್ಲರ್ಸ್ ಗೆ ಕೋಟ್ಯಂತರ ರು ನಷ್ಟ!

ಜನಪ್ರಿಯ ವಿಡಿಯೋ ಸಾಮಾಜಿಕ ಜಾಲ ತಾಣ ಯೂಟ್ಯೂಬಿನಲ್ಲಿ ಆದ ಎಡವಟ್ಟಿನಿಂದ ಸುಮಾರು 500 ಕೋಟಿ ರು ಗಳಿಗೂ ಅಧಿಕ ಮೊತ್ತವನ್ನು ಕಳೆದುಕೊಂಡಿರುವುದಾಗಿ ಕಲ್ಯಾಣ್ ಜ್ಯುವೆಲ್ಲರ್ಸ್ ಹೇಳಿದೆ. ನಕಲಿ ಸುದ್ದಿ ಹರಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ, ಕೇರಳ ಹೈಕೋರ್ಟ್ ಮೆಟ್ಟಿಲೇರಿದೆ. ಈ ಕುರಿತು ಕಲ್ಯಾಣ್ ಜುವೆಲ್ಲರ್ಸ್ ಕೇರಳ ಹೈಕೋರ್ಟ್ ನಲ್ಲಿ ಅರ್ಜಿಯೊಂದನ್ನು ಸಲ್ಲಿಸಿದ್ದು, ಕುವೈತ್ ನಲ್ಲಿ ಇರುವ ನಮ್ಮ ಚಿನ್ನಾಭರಣ ಮಳಿಗೆಯಲ್ಲಿ ಅಧಿಕಾರಿಗಳು ಪರಿಶೀಲನೆಗಾಗಿ ಬಂದಿದ್ದರು. ಇದನ್ನು ಐಟಿ ದಾಳಿ ಎಂಬಂತೆ ಬಿಂಬಿಸಿ ಈ ವಿಡಿಯೋ ಮಾಡಿ, ಸುದ್ದಿ ಪ್ರಸಾರ ಮಾಡಲಾಗಿದೆ.  
ಸೈಕಲ್ ರವಿ ಯಾರೆಂಬುದೇ ಗೊತ್ತಿಲ್ಲ: ಎಂ.ಬಿ.ಪಾಟೀಲ್ ಸ್ಪಷ್ಟನೆ

ಸೈಕಲ್ ರವಿ ಯಾರೆಂಬುದೇ ಗೊತ್ತಿಲ್ಲ: ಎಂ.ಬಿ.ಪಾಟೀಲ್ ಸ್ಪಷ್ಟನೆ

ಭೂಗತ ಪಾತಕಿ ಸೈಕಲ್ ರವಿಗೂ ಮಾಜಿ ಸಚಿವ ಎಂ.ಬಿ.ಪಾಟೀಲ್‌ಗೂ ನಂಟಿದೆ ಎಂಬ ಸುದ್ದಿ ಹರಿದಾಡಿದ ಬೆನ್ನಲ್ಲೇ ಈ ಬಗ್ಗೆ ಸ್ಪಷ್ಟನೆ ನೀಡಿರುವ ಎಂ.ಬಿ.ಪಾಟೀಲ್ ಅವರು ಸೈಕಲ್ ರವಿ ಯಾರು ಎಂಬುದೇ ಗೊತ್ತಿಲ್ಲ ಎಂದಿದ್ದಾರೆ. ಸೈಕಲ್ ರವಿ ಮೊಬೈಲ್ ಸಂಖ್ಯೆಯಿಂದ ಮಾಜಿ ಸಚಿವ ಎಂ.ಬಿ.ಪಾಟೀಲ್ ಅವರ ಮೊಬೈಲ್‌ಗೆ ಹಲವು ಬಾರಿ ಕರೆಗಳು ಹೋಗಿದ್ದವು ಎಂದು ಖಾಸಗಿ ಚಾನೆಲ್‌ಗಳಲ್ಲಿ ವರದಿಯಾಗಿತ್ತು ಆ ನಂತರ ಅದು ಸೈಕಲ್ ರವಿ ಮೊಬೈಲ್ ಸಂಖ್ಯೆ ಅಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದರು. ಈ ಕುರಿತು ಎಂ.ಬಿ.ಪಾಟೀಲ್ 'ಮಾಧ್ಯಮಗಳಲ್ಲಿ ಹೇಳಲಾಗುತ್ತಿರುವ ಮೊಬೈಲ್ ಸಂಖ್ಯೆ ಕಾಂಗ್ರೆಸ್ ಮುಖಂಡರೊಬ್ಬರದ್ದು' ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ರಿಸರ್ವ್ ಬ್ಯಾಂಕ್ ನಿಂದ ಶೀಘ್ರದಲ್ಲೇ ಹೊಸ 100 ರೂ. ಬಿಡುಗಡೆ

ರಿಸರ್ವ್ ಬ್ಯಾಂಕ್ ನಿಂದ ಶೀಘ್ರದಲ್ಲೇ ಹೊಸ 100 ರೂ. ಬಿಡುಗಡೆ

ಭಾರತೀಯ ರಿಸರ್ವ್ ಬ್ಯಾಂಕ್ ಈ ಹಿಂದೆ ಹಳೆಯ 500 ರೂ. ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಿ ಹೊಸ 500 ರೂ. ಮತ್ತು 2000 ರೂ. ನೋಟಗಳನ್ನು ಬಿಡುಗಡೆ ಮಾಡಿತ್ತು. ನಂತರ 50, 10, 20, ನೋಟುಗಳನ್ನು ಹೊಸ ರೂಪದಲ್ಲಿ ಬಿಡುಗಡೆ ಮಾಡಿತ್ತು. ಈಗ ಅದರಂತೆ ಭಾರತೀಯ ರಿಸರ್ವ್ ಬ್ಯಾಂಕ್ 100 ರೂಪಾಯಿಯ ಹೊಸ ನೋಟುಗಳ ಮುದ್ರಣ ಶುರು ಮಾಡಿದೆ. ಆಗಸ್ಟ್ ಕೊನೆಯೊಳಗೆ ಹೊಸ ನೋಟು ಮಾರುಕಟ್ಟೆಗೆ ಲಗ್ಗೆಯಿಡಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕಾನೂನು ಹೊರಾಟಕ್ಕೆ ಮುಂದಾದ ಶಿರೂರು ಮಠದ ಶ್ರೀ ಲಕ್ಷ್ಮೀವರತೀರ್ಥ ಶ್ರೀಗಳು

ಕಾನೂನು ಹೊರಾಟಕ್ಕೆ ಮುಂದಾದ ಶಿರೂರು ಮಠದ ಶ್ರೀ ಲಕ್ಷ್ಮೀವರತೀರ್ಥ ಶ್ರೀಗಳು

ಶಿರೂರು ಮಠದ ಪಟ್ಟದ ದೇವರಾದ ಅನ್ನ ವಿಠ್ಠಲನ ವಿಗ್ರಹವನ್ನು ನನಗೆ ಹಿಂತಿರುಗಿಸದೆ ಹೋದಲ್ಲಿ ನ್ಯಾಯಾಲಯದಲ್ಲಿ ಕ್ರಿಮಿನಲ್‌ ಮೊಕದ್ದಮೆ ಹೂಡುತ್ತೇನೆ ಎಂದು ಉಡುಪಿ ಶಿರೂರು ಮಠದ ಶ್ರೀ ಲಕ್ಷ್ಮೀವರತೀರ್ಥ ಶ್ರೀಗಳು ಎಚ್ಚರಿಕೆ ನೀಡಿದ್ದಾರೆ. ಸುದ್ದಿಗಾರರೊಡನೆ ಮಾತನಾಡಿದ ಸ್ವಾಮೀಜಿ ಅನ್ನ ವಿಠ್ಠಲ ನನ್ನ ದೇವರು. ಅವನು ನನ್ನ ಸ್ವತ್ತು. ಕೃಷ್ಣ ಮಠದ ಕೃಷ್ಣನಾಗಲಿ, ಪಲಿಮಾರು ಮಠದ ರಾಮನಾಗಲಿ ನನ್ನ ಸ್ವತ್ತಲ್ಲ ಹೀಗಾಗಿ ನನ್ನ ಸ್ವಂತದ್ದಾದ ವಿಠ್ಠಲನನ್ನು ನಾನು ಹೇಗೆ ಪಡೆಯಬೇಕೆಂದು ನನಗೆ ತಿಳಿದಿದೆ ಎಂದಿದ್ದಾರೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more