Short News

ಆಪ್ ರೋಡ್ ಪ್ರಿಯರನ್ನು ಸೆಳೆದ ಮಹೀಂದ್ರಾ ಥಾರ್ ವಂಡರ್‌ಲಸ್ಟ್

ಆಪ್ ರೋಡ್ ಪ್ರಿಯರನ್ನು ಸೆಳೆದ ಮಹೀಂದ್ರಾ ಥಾರ್ ವಂಡರ್‌ಲಸ್ಟ್

ಆಪ್ ರೋಡ್ ಕಾರುಗಳಲ್ಲಿ ಅತಿಹೆಚ್ಚು ಜನಪ್ರಿಯಗೊಂಡಿರುವ ಮಹೀಂದ್ರಾ ಥಾರ್ ಸದ್ಯ ಹೊಸತನದೊಂದಿಗೆ ಮಾರುಕಟ್ಟೆ ಪ್ರವೇಶಿಸಲು ಸಜ್ಜುಗೊಳ್ಳುತ್ತಿದ್ದು, ಥಾರ್ ವಂಡರ್‌ಲಸ್ಟ್ ಎನ್ನುವ ಹೆಸರಿನೊಂದಿಗೆ ಕಾರು ಪ್ರಿಯರನ್ನು ಸೆಳೆಯುತ್ತಿದೆ. ಹೊಸ ಥಾರ್‌ನಲ್ಲಿ ಗುರುತರ ಬದಲಾವಣೆಗಳಾದ ಕಸ್ಟಮೈಜ್ಡ್ ಗುಲ್‌ವಿಂಗ್ ಸ್ಟೈಲ್ ಡೋರ್‌ಗಳು, ಸೆವೆನ್ ಸ್ಲಾಟ್ ಫ್ರಂಟ್ ಗ್ರಿಲ್, ಎಲ್ಇಡಿ ಹೆಡ್‌ಲೈಟ್ಸ್, ಎಲ್‌ಇಡಿ ಡಿಆರ್‌ಎಲ್ಎಸ್ ಮತ್ತು ಫಾಗ್ ಲ್ಯಾಂಪ್ ಅಳವಡಿಕೆ ಹೊಂದಿದೆ. 2.5-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಹೊಂದಿರುವ ಥಾರ್ ವಂಡರ್‌ಲಸ್ಟ್ ಕಾರುಗಳು 105 ಬಿಎಚ್‌ಪಿ ಮತ್ತು 247ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದೆ.
ಆಕ್ಸ್ ಫರ್ಡ್ ಯೂನಿವರ್ಸಿಟಿಯಲ್ಲಿ ಪ್ರೊಫೆಸರ್, ದೆಹಲಿಯಲ್ಲಿ ಬೀದಿಪಾಲಾಗಿದ್ದು ಹೇಗೆ..?

ಆಕ್ಸ್ ಫರ್ಡ್ ಯೂನಿವರ್ಸಿಟಿಯಲ್ಲಿ ಪ್ರೊಫೆಸರ್, ದೆಹಲಿಯಲ್ಲಿ ಬೀದಿಪಾಲಾಗಿದ್ದು ಹೇಗೆ..?

ಆಕ್ಸ್ ಫರ್ಡ್ ಯೂನಿವರ್ಸಿಟಿಯಲ್ಲಿ ಪ್ರೊಫೆಸರ್ ಆಗಿದ್ದವರು 76ವರ್ಷದ ರಾಜ್ ಸಿಂಗ್. ಆದರೀಗವರು ಬೀದಿ ಪಾಲಾಗಿದ್ದಾರೆ. ಅಗತ್ಯವಿರುವವರಿಗೆ ವೀಸಾ ಫಾರ್ಮ್ ಭರ್ತಿ ಮಾಡಿಕೊಟ್ಟು ನಾಲ್ಕು ಕಾಸು ಸಂಪಾದಿಸಿ, ಅದರಲ್ಲೇ ಜೀವನ ನಡೆಸ್ತಿದ್ದಾರೆ. ರಾಜಾ ಸಿಂಗ್ ಮತ್ತವರ ಸಹೋದರ ಜೊತೆಯಾಗಿ ಟ್ರಾವೆಲ್ ಉದ್ಯಮ ನಡೆಸುತ್ತಿದ್ದು, ಸಹೋದರನ ಸಾವಿನ ಬಳಿಕ ನಷ್ಟಕ್ಕೀಡಾಗಿದ್ದಾರೆ. ಆಗ ಮಕ್ಕಳು ಈತನನ್ನು ಮನೆಯಿಂದ ಹೊರದಬ್ಬಿದ್ದಾರೆ. ಅವಿನಾಶ್ ಸಿಂಗ್ ಎಂಬುವವರು ಇದನ್ನು ಫೇಸ್ಬುಕ್ ನಲ್ಲಿ ಪ್ರಕಟಿಸಿದ ಬಳಿಕ ಗುರುದ್ವಾರವೊಂದರಲ್ಲಿ ರಾಜಾ ಸಿಂಗ್ ಗೆ ಆಶ್ರಯ ಮತ್ತು ಕೆಲಸ ಸಿಕ್ಕಿದೆ. ಮಕ್ಕಳು ಬ್ರಿಟನ್ ಹಾಗೂ ಅಮೆರಿಕದಲ್ಲಿ ವಾಸವಿದ್ದಾರೆ.
ವನ್ಯಜೀವಿ ಅಪರಾಧ: ಕುಖ್ಯಾತರ ಪಟ್ಟಿಯಲ್ಲಿ ಸಲ್ಮಾನ್ ಖಾನ್ ಹೆಸರು!

ವನ್ಯಜೀವಿ ಅಪರಾಧ: ಕುಖ್ಯಾತರ ಪಟ್ಟಿಯಲ್ಲಿ ಸಲ್ಮಾನ್ ಖಾನ್ ಹೆಸರು!

ಬಾಲಿವುಡ್ ನಟ ಸಲ್ಮಾನ್ ಖಾನ್ ಅಪರಾಧ ಪ್ರಕರಣಗಳಲ್ಲಿ ಕುಖ್ಯಾತಿಯನ್ನು ಗಳಿಸಿದ್ದಾರೆ. ಜೋಧಪುರದಲ್ಲಿ ಕೃಷ್ಣಮೃಗ ಬೇಟೆಯಾಡಿದ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾದ ಬಳಿಕ ಸಲ್ಮಾನ್, ಈಗ ಸರ್ಕಾರದ ವಿಭಾಗವಾದ ವನ್ಯಜೀವಿ ಅಪರಾಧ ನಿಯಂತ್ರಣ ಬ್ಯೂರೊದ (ಡಬ್ಲ್ಯೂಸಿಸಿಬಿ) ಕುಖ್ಯಾತ ಅಪರಾಧಿಗಳ ಪಟ್ಟಿಯಲ್ಲಿಯೂ ಸೇರಿಕೊಂಡಿದ್ದಾರೆ. ಡಬ್ಲ್ಯೂಸಿಸಿಬಿ ತನ್ನ ವೆಬ್‌ಸೈಟ್‌ನಲ್ಲಿ ಹುಲಿ ಬೇಟೆ ಪ್ರಯತ್ನ, ಕಳ್ಳಸಾಗಣೆಯಂತಹ ಅಪರಾಧಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ಅನೇಕರ ಹೆಸರುಗಳನ್ನು ಚಿತ್ರ ಹಾಗೂ ಅವರ ವಿಳಾಸ ಸಹಿತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಅವರಲ್ಲಿ 39ನೆಯ ಹೆಸರಾಗಿ ಸಲ್ಮಾನ್ ಖಾನ್ ಅವರನ್ನು ಸೇರಿಸಲಾಗಿದೆ.
ಪತ್ರಿಕಾ ಸ್ವಾತಂತ್ರ್ಯ : 138ನೇ ಸ್ಥಾನಕ್ಕೆ ಕುಸಿದ ಭಾರತ ಆರ್‌ಎಸ್‌ಎಫ್‌ ವರದಿ

ಪತ್ರಿಕಾ ಸ್ವಾತಂತ್ರ್ಯ : 138ನೇ ಸ್ಥಾನಕ್ಕೆ ಕುಸಿದ ಭಾರತ ಆರ್‌ಎಸ್‌ಎಫ್‌ ವರದಿ

ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತ 138ನೇ ಸ್ಥಾನಕ್ಕೆ ಕುಸಿದಿದೆ ಎಂದು ರಿಪೋರ್ಟರ್ಸ್‌ ವಿತೌಟ್‌ ಬಾರ್ಡರ್ಸ್‌ (ಆರ್‌ಎಸ್‌ಎಫ್‌) ವರದಿಯಿಂದ ಬಹಿರಂಗವಾಗಿದೆ. ಪತ್ರಕರ್ತರ ಮೇಲಿನ ದೈಹಿಕ ಹಲ್ಲೆ, ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆಯಂತಹ ಹಲವಾರು ಪ್ರಕರಣಗಳಿಂದಾಗಿ ಭಾರತ ಎರಡು ಸ್ಥಾನ ಕುಸಿದಿದೆ ಎಂದು ವರದಿ ತಿಳಿಸಿದೆ. ಅಧ್ಯಯನದಲ್ಲಿ ಒಟ್ಟು 180 ದೇಶಗಳನ್ನು ಪರಿಗಣಿಸಲಾಗಿತ್ತು. 2014ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿ ಆದ ನಂತರ ಹಿಂದೂ ಮೂಲಭೂತವಾದಿಗಳು ಪತ್ರಕರ್ತರ ವಿರುದ್ಧ ಕಿಡಿ ಕಾರುವುದು ಹೆಚ್ಚಿದೆ ಎಂದು ಕೂಡ ವರದಿಯಲ್ಲಿ ತಿಳಿಸಲಾಗಿದೆ.