Short News

ಪಿಪಿಎಫ್ ಠೇವಣಿ ರಕ್ಷಣೆ ಹಿಂದಿನಂತೆಯೇ ಅಬಾಧಿತವಾಗಿರಲಿದೆ, ಆತಂಕ ಬೇಡ: ಸರ್ಕಾರ ಸ್ಪಷ್ಟನೆ

ಪಿಪಿಎಫ್ ಠೇವಣಿ ರಕ್ಷಣೆ ಹಿಂದಿನಂತೆಯೇ ಅಬಾಧಿತವಾಗಿರಲಿದೆ, ಆತಂಕ ಬೇಡ: ಸರ್ಕಾರ ಸ್ಪಷ್ಟನೆ

ಪಿಪಿಎಫ್ ಉಳಿತಾಯದ ಸುರಕ್ಷತೆ ಬಗ್ಗೆ ಸಾರ್ವಜನಿಕ ಪ್ರಾವಿಡೆಂಟ್ ನಿಧಿ ಕಾಯಿದೆ ರದ್ದುಗೊಳಿಸುವ ಕುರಿತು ಬಜೆಟ್ ಪ್ರಸ್ತಾವನೆಯಲ್ಲಿ ಹೇಳಿರುವುದು ಚಂದಾದಾರರಲ್ಲಿ ಭೀತಿಯನ್ನು ಹುಟ್ಟಿಸಿತು. ಪಿಪಿಎಫ್ ಕಾಯಿದೆ ರದ್ದುಪಡಿಸಿ 'ಉಳಿತಾಯ ಅಭಿವೃದ್ಧಿ ಕಾಯ್ದೆ' ವ್ಯಾಪ್ತಿಗೆ ಒಳಪಡಿಸಲು ಬಜೆಟ್ ನಲ್ಲಿ ಪ್ರಸ್ತಾಪಿಸಲಾಗಿತ್ತು. ಆದರೆ ಪಿಪಿಎಫ್ ಹೂಡಿಕೆದಾರರು ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ. ಉಳಿತಾಯ ಅಭಿವೃದ್ಧಿ ಕಾಯ್ದೆ ಅಡಿಯಲ್ಲಿ ಪಿಪಿಎಫ್ ಕಾಯಿದೆ ವಿಲೀನವಾಗುವ ಸಂದರ್ಭದಲ್ಲಿ ಮುಟ್ಟುಗೋಲಿನ ವಿರುದ್ಧ ಪಿಪಿಎಫ್ ಠೇವಣಿಗಳಿಗೆ ಇರುವ ರಕ್ಷಣೆ ಮುಂದುವರೆಯಲಿದೆ. ಹೀಗಾಗಿ ಪಿಪಿಎಫ್ ಠೇವಣಿದಾರರು ಆತಂಕಪಡಬೇಕಾಗಿಲ್ಲ.
ಬೆಂಗಳೂರಿಗರಿಗೆ 24 ಗಂಟೆಗಳ ವೀಸಾ ಸೌಲಭ್ಯ ಕೊಟ್ಟ ಯುಕೆ!

ಬೆಂಗಳೂರಿಗರಿಗೆ 24 ಗಂಟೆಗಳ ವೀಸಾ ಸೌಲಭ್ಯ ಕೊಟ್ಟ ಯುಕೆ!

ವಿಶೇಷ ಆದ್ಯತೆ ಮೇರೆಗೆ ನೀಡಲಾಗುವ (ಎಸ್ ಪಿ ವಿ) ವೀಸಾ ಸೌಲಭ್ಯವನ್ನು ಪುಣೆ ಹಾಗೂ ಬೆಂಗಳೂರಿಗೆ ವಿಸ್ತರಿಸಲಾಗಿದೆ ಎಂದು ಯುಕೆ ವೀಸಾ ಹಾಗೂ ಇಮಿಗ್ರೇಷನ್ (ಯುಕೆ VI) ಸರ್ವೀಸಸ್ ಗುರುವಾರದಂದು ಘೋಷಿಸಿದೆ.

ಈ ಸೌಲಭ್ಯದ ಮೂಲಕ ಆದ್ಯತೆ ಮೇರೆಗೆ ತ್ವರಿತಗತಿಯಲ್ಲಿ 24 ಗಂಟೆ ಅಥವಾ ಅದಕ್ಕಿಂತ ಕಡಿಮೆ ಸಮಯದಲ್ಲಿ ವೀಸಾ ಬಗ್ಗೆ ನಿರ್ಧಾರ ಕೈಗೊಳ್ಳಬಹುದಾಗಿದೆ.

ತುರ್ತಾಗಿ ಯುಕೆಗೆ ತೆರಳಬೇಕಾದ ಸಂದರ್ಭ ಬಂದರೆ, ಭಾರತೀಯ ನಾಗರಿಕರು ಈ ಸೌಲಭ್ಯವನ್ನು ಬಳಸಬಹುದಾಗಿದೆ. ಎಸ್ ಪಿವಿ ಸೌಲಭ್ಯ ಬಳಸುವವರ ನೆರವಿಗಾಗಿ ಪ್ರತ್ಯೇಕ ಸಾಲು ಹಾಗೂ ಸಿಬ್ಬಂದಿಗಳಿರುತ್ತಾರೆ.

ಪಬ್ಲಿಕ್ ಟಿವಿ, ಬಿಟಿವಿ ಸಮೀಕ್ಷೆ, ಕಾಂಗ್ರೆಸ್ ಅತೀ ದೊಡ್ಡ ಪಕ್ಷ

ಪಬ್ಲಿಕ್ ಟಿವಿ, ಬಿಟಿವಿ ಸಮೀಕ್ಷೆ, ಕಾಂಗ್ರೆಸ್ ಅತೀ ದೊಡ್ಡ ಪಕ್ಷ

ಕರ್ನಾಟಕದ ಪ್ರಮುಖ ವಾಹಿನಿಗಳಾದ ಬಿಟಿವಿ ಮತ್ತು ಪಬ್ಲಿಕ್ ಟಿವಿ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಸಮೀಕ್ಷೆಗಳನ್ನು ನಡೆಸಿವೆ. ಎರಡೂ ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಅತೀ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಎರಡೂ ವಾಹಿನಿಗಳು ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿದೆ ಎಂಬುದನ್ನು ಸ್ಪಷ್ಟವಾಗಿ ತಮ್ಮ ಸಮೀಕ್ಷೆಯಲ್ಲಿ ಹೇಳಿವೆ.

ಬಿಟಿವಿ ಸಮೀಕ್ಷೆ

ಒಟ್ಟು 224 ಕ್ಷೇತ್ರಗಳಲ್ಲಿ ಕಾಂಗ್ರೆಸ್ 94-99 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಬಿಟಿವಿ ಸಮೀಕ್ಷೆ ಹೇಳಿದೆ. ಬಿಜೆಪಿ 82-87 ಸ್ಥಾನಗಳನ್ನು ಚುನಾವಣೆಯಲ್ಲಿ ಪಡೆದುಕೊಳ್ಳಲಿದೆ.

ಭೀಮ್ ಆಪ್ ಬಳಕೆದಾರರಿಗೆ ಸಿಹಿ ಸುದ್ಧಿ 750 ರೂಪಾಯಿಗಳ ಮೌಲ್ಯದ ಕ್ಯಾಶ್ ಬ್ಯಾಕ್ ಆಫರ್!!

ಭೀಮ್ ಆಪ್ ಬಳಕೆದಾರರಿಗೆ ಸಿಹಿ ಸುದ್ಧಿ 750 ರೂಪಾಯಿಗಳ ಮೌಲ್ಯದ ಕ್ಯಾಶ್ ಬ್ಯಾಕ್ ಆಫರ್!!

2016ರಲ್ಲಿ ಪ್ರಧಾನಿಮೋದಿಯವರು ಈ ಆಪ್ ಅನ್ನು ಬಿಡುಗಡೆಗೊಳಿಸಿದರು. ಕ್ಯಾಶ್ ಬ್ಯಾಕ್ ಯೋಜನೆಯು ಗ್ರಾಹಕರಿಗೆ ಹಾಗೂ ವ್ಯಾಪಾರಸ್ಥರಿಗೆ ಇದು ಅನ್ವಯವಾಗುತ್ತದೆ. ಗ್ರಾಹಕರು ತಿಂಗಳೊಂದಕ್ಕೆ 750ರೂಪಾಯಿಗಳಷ್ಟು ಕ್ಯಾಶ್ ಬ್ಯಾಕ್ ಅನ್ನು ಪಡೆದುಕೊಳ್ಳಲು ಸಾಧ್ಯವಾದರೆ,ವರ್ತಕರು ತಿಂಗಳೊಂದಕ್ಕೆ 1,000ರೂಪಾಯಿಗಳವರೆಗೂ ಕ್ಯಾಶ್ ಬ್ಯಾಕ್ ಅನ್ನು ಪಡೆದುಕೊಳ್ಳಬಲ್ಲವರಾಗಿರುತ್ತಾರೆ. ನೂತನ ಬಳಕೆದಾರರು,ತಮ್ಮ ಪ್ರಪ್ರಥಮ ವ್ಯವಹಾರಕ್ಕೆ 51ರೂಪಾಯಿಗಳಷ್ಟು ಕ್ಯಾಶ್ ಬ್ಯಾಕ್ ಅನ್ನು ಪಡೆದುಕೊಳ್ಳಬಲ್ಲವರಾಗಿರುತ್ತಾರೆ. ವಿಶಿಷ್ಟ ವ್ಯವಹಾರಗಳ ಗರಿಷ್ಟ ಕ್ಯಾಶ್ ಬ್ಯಾಕ್ ನ ಮೊತ್ತವು ತಿಂಗಳೊಂದಕ್ಕೆ 500 ರೂಪಾಯಿಗಳಾಗಿರುತ್ತದೆ.