Short News

ಭಾರೀ ಇಳಿಕೆ ಕಂಡ ಈರುಳ್ಳಿ ದರ , ರೈತನ ಕಣ್ಣಲ್ಲಿ ನೀರು

ಭಾರೀ ಇಳಿಕೆ ಕಂಡ ಈರುಳ್ಳಿ ದರ , ರೈತನ ಕಣ್ಣಲ್ಲಿ ನೀರು

ಕಳೆದ ಕಲೆ ದಿನಗಳ ಹಿಂದೆ ಕೆ.ಜಿ. ಗೆ 45ರ ಆಸುಪಾಸಿನಲ್ಲಿದ್ದ ಈರುಳ್ಳಿ ಬೆಲೆ ಗಣನೀಯವಾಗಿ ಇಳಿಕೆ ಕಂಡಿದ್ದು, 15ರೂ ಇಳಿಕೆಯಾಗಿದೆ. ಮಹಾರಾಷ್ಟ್ರ ಹಾಗೂ ಚಿತ್ರದುರ್ಗ,ಧಾರವಾಡದಿಂದ ಅತಿ ಹೆಚ್ಚಿನ ಪ್ರಮಾಣದ ಈರುಳ್ಳಿ ಮಾರುಕಟ್ಟೆಗೆ ಬಂದಿದ್ದು,ಬೆಂಗಳೂರಿಗೆ ಸಾಮಾನ್ಯವಾಗಿ ಧಾರವಾಡ,ತಮಿಳುನಾಡುಗಳಿಂದ ಈರುಳ್ಳಿ ಬರುವುದರಿಂದ‌ ಬೆಲೆ ಇಳಿಕೆಗೆ ಕಾರಣ ಎನ್ನಲಾಗಿದೆ. ಇತ್ತ ತರಕಾರಿ ಬೆಲೆ ಇಳಿಕೆ ಕಂಡಿರುವುದು,ಜನ ಸಾಮಾನ್ಯರಲ್ಲಿ ಖುಷಿ ತಂದಿದೆ. ಹಾಪ್‌ಕಾಮ್ಸ್ ನಲ್ಲಿ ಮಧ್ಯಮ ಗಾತ್ರದ ಈರುಳ್ಳಿ ಬೆಲೆ ಕೆಜಿಗೆ 19ರೂಪಾಯಿ ಇದ್ದರೆ, ಕೆ.ಆರ್.ಮಾರುಕಟ್ಟೆಯಲ್ಲಿ 15ರೂ ಇದೆ. ಸಣ್ಣ ಗಾತ್ರದ ಈರುಳ್ಳಿ ಬೆಲೆ 10ರೂ ಇದೆ.
ನಿಮ್ಮ ಬಗ್ಗೆ ನಿಮಗಿಂತ ಹೆಚ್ಚಾಗಿ ಗೂಗಲ್‌ಗೆ ಗೊತ್ತು ಎಂದರೆ ಆಶ್ಚರ್ಯವೇ?!

ನಿಮ್ಮ ಬಗ್ಗೆ ನಿಮಗಿಂತ ಹೆಚ್ಚಾಗಿ ಗೂಗಲ್‌ಗೆ ಗೊತ್ತು ಎಂದರೆ ಆಶ್ಚರ್ಯವೇ?!

ನಮಗೆ ತಿಳಿಯದಂತೆ ನಮ್ಮ ಡೇಟಾವನ್ನು ಫೇಸ್‌ಬುಕ್ ಮೂಲಕ ಸಂಗ್ರಹಿಸಿ ದುರ್ಬಳಕೆ ಮಾಡಿಕೊಂಡ ಪ್ರಕರಣ ಬೆಳಕಿಗೆ ಬಂದ ನಂತರ ಇದೀಗ ಗೂಗಲ್ ಕಂಪೆನಿಯತ್ತ ಜನರ ದೃಷ್ಟಿ ಬಿದ್ದಿದೆ.! ನಮ್ಮ ಜೀವನವು ನೈಜ ಪ್ರಪಂಚಕ್ಕಿಂತ ಗೂಗಲ್ ಮೂಲಕ ಇತರರ ವ್ಯಾಪಾರದ ಪಾಲಾಗುತ್ತಿದೆಯೇ ಎಂಬ ಅನುಮಾನ ಎಲ್ಲಾ ಸ್ಮಾರ್ಟ್‌ಫೋನ್ ಬಳಕೆದಾರರನ್ನು ಕಾಡುತ್ತಿದೆ.!ಹೊಸದಾಗಿ ಏನಾದರೂ ಖರೀದಿಯಾಗಲು, ಟಿಕೆಟ್ ಬುಕ್ಕಿಂಗ್ ಆಗಲಿ, ನಮ್ಮ ವೈಯಕ್ತಿಕ ಭೇಟಿಗಳು, ವೃತ್ತಿಪರ ಭೇಟಿಗಳು ಮತ್ತು ಸಿನಿಮಾ ಸಮಯಗಳೆಲ್ಲವೂ ಸೇರಿದಂತೆ ಪ್ರತಿಯೋರ್ವನ ಇಂಟರ್‌ನೆಟ್ ಚಟುವಟಿಕೆಗಳೆಲ್ಲವೂ ಬೇಹುಗಾರಿಕೆಯ ಪಾಲಾಗುತ್ತಿದೆ.

ಜಿಯೋ ಬಗ್ಗೆ ಐಡಿಯಾ ಕೊಟ್ಟಿದ್ದು ಯಾರು ಗೊತ್ತಾ? ಇಲ್ಲಿದೆ ಇಂಟರೆಸ್ಟಿಂಗ್ ಸ್ಟೋರಿ!

ಜಿಯೋ ಬಗ್ಗೆ ಐಡಿಯಾ ಕೊಟ್ಟಿದ್ದು ಯಾರು ಗೊತ್ತಾ? ಇಲ್ಲಿದೆ ಇಂಟರೆಸ್ಟಿಂಗ್ ಸ್ಟೋರಿ!

2011ರಲ್ಲಿ ನನ್ನ ಮಗಳು ಇಶಾ ಮೊದಲ ಬಾರಿ ಜಿಯೋ ಕಲ್ಪನೆಯನ್ನು ನೀಡಿದಳು ಎಂದು ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಹೇಳಿದ್ದಾರೆ. ರಜೆಗಾಗಿ ಮನೆಗೆ ಬಂದ ಇಶಾ ಕೋರ್ಸ್ ವರ್ಕ್ ಸಬ್ಮಿಟ್ ಮಾಡಬೇಕಾಗಿತ್ತು. ಮನೆಯಲ್ಲಿ ನೆಟ್ವರ್ಕ್ ತುಂಬಾ ನಿಧಾನಗತಿಯಾಗಿದೆ ಎಂದು ಬೇಸತ್ತ ಇಶಾ ತಂದೆಗೆ ದೂರನ್ನು ನೀಡಿದಳು. ದೇಶದಲ್ಲಿ ಅಂತರ್ಜಾಲ ವೇಗ ತುಂಬಾ ನಿಧಾನಗತಿಯಲ್ಲಿದೆ ಎಂಬುದನ್ನರಿತೆ. ಮಗ ಆಕಾಶ್ "ಡಿಜಿಟಲ್ ಜಗತ್ತನ್ನು" ಕುರಿತು ತಿಳಿಸಿದರು. ಅಂಬಾನಿ ತನ್ನ ಮಗನೊಂದಿಗಿನ ಚಾಟ್ ಮಾಡುವಾಗಿನ ಘಟನೆಯನ್ನು ನೆನಪಿಸಿಕೊಂಡು, "ಡ್ಯಾಡ್, ನಿಮ್ಮ ಪೀಳಿಗೆಯು ಅದನ್ನು ಪಡೆಯುವುದಿಲ್ಲ" ಎಂದು ಆಕಾಶ್ ಹೇಳಿರುವುದನ್ನು ಉಲ್ಲೇಖಿಸಿದ್ದಾರೆ.
ಟೈಮ್ಸ್ ನೌ ಸಮೀಕ್ಷೆ: ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ

ಟೈಮ್ಸ್ ನೌ ಸಮೀಕ್ಷೆ: ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ

ಕರ್ನಾಟಕ ವಿಧಾನಸಭೆ ಚುನಾವಣೆ 2018ರಲ್ಲಿ ರಾಜ್ಯದಲ್ಲಿ ಅತಿ ದೊಡ್ಡ ಪಕ್ಷ ಕಾಂಗ್ರೆಸ್ ಆಗಲಿದೆಯಾದರೂ ಅತಂತ್ರ ಸರ್ಕಾರ ನಿರ್ಮಾಣವಾಗುತ್ತದೆ ಎಂದು ಟೌಮ್ಸ್ ನೌ ವಾಹಿನಿಯ ನಡೆಸಿರುವ ಸಮೀಕ್ಷೆ ಹೇಳುತ್ತಿದೆ. ಟೈಮ್ಸ್ ನೌ ಸುದ್ದಿ ವಾಹಿನಿಯು ಕರ್ನಾಟಕ ಚುನಾವಣೆಯ ಕುರಿತು ಮಾಡಿರುವ ಸಮೀಕ್ಷೆಯ ಪ್ರಕಾರ ಕಾಂಗ್ರೆಸ್‌ಗೆ 91ಸೀಟುಗಳು ದೊರಕುತ್ತಿದ್ದರೆ, ಬಿಜೆಪಿ 89ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಹಾಗೂ 4ಕ್ಷೇತ್ರಗಳಲ್ಲಿ ಪಕ್ಷೇತರ ಅಭ್ಯರ್ಥಿ ಗೆಲವು ಸಾಧಿಸಲಿದ್ದಾರೆ. ಇಂದೇ ಎಬಿಪಿ ನ್ಯೂಸ್ ಸಿಎಸ್‌ಡಿಎಸ್ ಸಮೀಕ್ಷೆ ಸಹ ಹೊರಬಿದ್ದಿದ್ದು ಆ ಸಮೀಕ್ಷೆಯ ಪ್ರಕಾರವೂ  ಅತಂತ್ರ ವಿಧಾನಸಭೆ ನಿರ್ಮಾಣವಾಗುವ ಸಾಧ್ಯತೆ ಹೆಚ್ಚಿದೆ.