Short News

ಪೇಟಿಎಂನಿಂದ ಮತ್ತೊಂದು ಹೊಸ ಸೇವೆ: ಪೇಮೆಂಟ್ ಇನ್ನು ಸುಲಭ!

ಪೇಟಿಎಂನಿಂದ ಮತ್ತೊಂದು ಹೊಸ ಸೇವೆ: ಪೇಮೆಂಟ್ ಇನ್ನು ಸುಲಭ!

ಭಾರತೀಯ ಮಾರುಕಟ್ಟೆಯಲ್ಲಿ ಇ ಕಾರ್ಮಸ್ ಸೇವೆ, ಡಿಜಿಟಲ್ ಪೇಮೆಂಟ್ ಮತ್ತು ಡಿಜಿಟಲ್ ವ್ಯಾಲೆಟ್, ಪೇಮೆಂಟ್ ಬ್ಯಾಂಕ್ ಸೇವೆಯನ್ನು ನೀಡುತ್ತಿರುವ ಪೇಟಿಎಂ, ತನ್ನ ಬಳಕೆದಾರರಿಗೆ ಮತ್ತೊಂದು ಹೊಸ ಸೇವೆಯನ್ನು ನೀಡಲು ಮುಂದಾಗಿದೆ. ಹೆಚ್ಚು ಮೌಲ್ಯದ ಪೇಮೆಂಟ್ ಗಳನ್ನು ಮಾಡಲು ಅವಕಾಶ ಮಾಡಿಕೊಡಲಿದೆ. ಇದಕ್ಕಾಗಿಯೇ 'ಮೈ ಪೇಮೆಂಟ್ಸ್' ಎನ್ನುವ ಆಯ್ಕೆಯೊಂದನ್ನು ನೀಡುತ್ತಿದೆ. ಪೇಟಿಎಂ ನಲ್ಲಿ ಲಭ್ಯವಿರುವ ಪೇಟಿಎಂ ವ್ಯಾಲೆಟ್, UPI ಇಲ್ಲವೇ ಬೇರೆ ಯಾವುದೇ ಪೇಮೆಂಟ್ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ. ಇದು ಪಾಯಿಂಟ್ ಟು ಪಾಯಿಂಟ್ ಸೇವೆಯಾಗಿದ್ದು, ಬಳಕೆದಾರರಿಗೆ ಸಾಕಷ್ಟು ಸಹಾಯವಾಗಲಿದೆ
ಎಸ್ಬಿಐ ತ್ರೈಮಾಸಿಕ ಫಲಿತಾಂಶ, ರೂ. 7,720 ಕೋಟಿ ನಷ್ಟ

ಎಸ್ಬಿಐ ತ್ರೈಮಾಸಿಕ ಫಲಿತಾಂಶ, ರೂ. 7,720 ಕೋಟಿ ನಷ್ಟ

  • ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಗಿರುವ ಎಸ್ಬಿಐ 2018 ಮಾರ್ಚ್ ತಿಂಗಳಲ್ಲಿ ಕೊನೆಗೊಂಡ ತ್ರೈಮಾಸಿಕದಲ್ಲಿ ರೂ. 7,720 ಕೋಟಿ ನಷ್ಟ ಅನುಭವಿಸಿದೆ. ಇದು ಸತತ ಎರಡನೇ ತ್ರೈಮಾಸಿಕ ನಷ್ಟವಾಗಿದೆ.
  • ಡಿಸೆಂಬರ್ ಕೊನೆಗೊಂಡ ತ್ರೈಮಾಸಿಕದಲ್ಲಿ ಬ್ಯಾಂಕ್ ರೂ. 2416.37 ಕೋಟಿ ನಿವ್ವಳ ನಷ್ಟ ಅನುಭವಿಸಿದೆ.
  • ಕಳೆದ ವರ್ಷಕ್ಕೆ ಹೋಲಿಸಿದರೆ ಎರಡುಪಟ್ಟು ಸಾಲ ಹೆಚ್ಚಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ರೂ. 11,740 ಕೋಟಿ ಇತ್ತು. ಮಾರ್ಚ್ ಅಂತ್ಯದ ತ್ರೈಮಾಸಿಕದಲ್ಲಿ ಹಿಂದಿನ ತ್ರೈಮಾಸಿಕದಲ್ಲಿ 10.35% ರಿಂದ 10.9% ಕ್ಕೆ ಏರಿದೆ.
ಹೆಚ್ ಡಿಕೆ ಪ್ರಮಾಣವಚನಕ್ಕೆ ಭರ್ಜರಿ ಸಿದ್ಧತೆ, 1 ಲಕ್ಷ ಆಸನದ ವ್ಯವಸ್ಥೆ

ಹೆಚ್ ಡಿಕೆ ಪ್ರಮಾಣವಚನಕ್ಕೆ ಭರ್ಜರಿ ಸಿದ್ಧತೆ, 1 ಲಕ್ಷ ಆಸನದ ವ್ಯವಸ್ಥೆ

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ  ಹೆಚ್.ಡಿ.ಕುಮಾರಸ್ವಾಮಿ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭವು ಬುಧವಾರ ಸಂಜೆ 4.30ಕ್ಕೆ ನಡೆಯಲಿದೆ. ಪ್ರಮಾಣ ಸ್ವೀಕಾರ ಸಮಾರಂಭಕ್ಕೆ ಸೋಮವಾರದಿಂದಲೇ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಸುಮಾರು 80*40 ಅಡಿ ಗಾತ್ರದ ಬೃಹತ್ ವೇದಿಕೆ ಸಜ್ಜುಗೊಳ್ಳುತ್ತಿದ್ದು, ಗಣ್ಯರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಸೇರಿದಂತೆ ಸುಮಾರು ಸುಮಾರು 1 ಲಕ್ಷ ಮಂದಿಗೆ ಆಸನಗಳ ಏರ್ಪಾಡು ಮಾಡಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲರಿಗೂ ಪ್ರಮಾಣ ವಚನ ಸ್ವೀಕಾರ ವೀಕ್ಷಿಸಲು ಬೃಹತ್ ಗಾತ್ರದ ಸುಮಾರು 15ಕ್ಕೂ ಹೆಚ್ಚು ಎಲ್ಇಡಿ ಪರದೆಗಳನ್ನು ಹಾಕಲಾಗುತ್ತಿದೆ.
ವಿಶ್ವಕಪ್ 2018: ಮೊರಾಟಾ, ಫ್ಯಾಬ್ರಿಗೇಸ್ ಇಲ್ಲದ ಸ್ಪೇನ್ ತಂಡ

ವಿಶ್ವಕಪ್ 2018: ಮೊರಾಟಾ, ಫ್ಯಾಬ್ರಿಗೇಸ್ ಇಲ್ಲದ ಸ್ಪೇನ್ ತಂಡ

ಚೆಲ್ಸಿ ಪರ ಆಡುವ ಆಲ್ವಾರೋ ಮೊರಾಟ, ಸೆಸ್ಕ್ ಫ್ಯಾಬ್ರಿಗೇಸ್ ಅವರು ಈ ಬಾರಿಯ ವಿಶ್ವಕಪ್ ಆಡಲಿರುವ ಸ್ಪೇನ್ ತಂಡಕ್ಕೆ ಆಯ್ಕೆಯಾಗಿಲ್ಲ. ಮೊರಾಟಾ ಬದಲಿಗೆ ಅಟ್ಲೆಟಿಕೋ ಮ್ಯಾಡ್ರಿಡ್ ನ ಡಿಯಾಗೋ ಕೋಸ್ಟಾ, ವೆಲೆನ್ಸಿಯಾದ ರೊಡ್ರಿಗೋ ಮೊರೆನೋ ಹಾಗೂ ಸೆಲ್ಟಾ ವಿಗೋ ತಂಡದ ಲಗೋ ಆಸ್ಪಾಸ್ ಆಯ್ಕೆಯಾಗಿದ್ದಾರೆ. ರಷ್ಯಾದಲ್ಲಿ ನಡೆಯಲಿರುವ ಫೀಫಾ ವಿಶ್ವಕಪ್ 2018ರ ಜಾಗತಿಕ ಸಮರದಲ್ಲಿ ಸ್ಪೇನ್ ಪ್ರಶಸ್ತಿ ಗೆಲ್ಲಬಹುದಾದ ನೆಚ್ಚಿನ ತಂಡಗಳ ಪೈಕಿ ಒಂದೆನಿಸಿದೆ. ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಉತ್ತಮವಾಗಿ ಆಡಿದರೂ ಮೊರಾಟಾ ಆಯ್ಕೆಯಾಗಿಲ್ಲ. ಎರಡು ವರ್ಷಗಳ ಕಾಲ ತಂಡದಿಂದ ಹೊರಗುಳಿದಿದ್ದ ಫ್ಯಾಬ್ರಿಗೇಸ್ ಗೆ ಮತ್ತೆ ಅದೃಷ್ಟ ಕೈಗೂಡಿಲ್ಲ.