Short News

ಅನಾವರಣಗೊಂಡ ಟಾಟಾ ಟಿಯಾಗೊ ಜೆಟಿಪಿ ಮತ್ತು ಟಿಗೋರ್ ಜೆಟಿಪಿ

ಅನಾವರಣಗೊಂಡ ಟಾಟಾ ಟಿಯಾಗೊ ಜೆಟಿಪಿ ಮತ್ತು ಟಿಗೋರ್ ಜೆಟಿಪಿ

ದೇಶಿಯ ಗ್ರಾಹಕರ ನೆಚ್ಚಿನ ಆಯ್ಕೆಯಾಗಿರುವ ಟಾಟಾ ಮೋಟಾರ್ಸ್ ಸಂಸ್ಥೆಯು ತನ್ನ ಹೊಸ ಟಾಟಾ ಟಿಯಗೊ ಜೆಟಿಪಿ ಮತ್ತು ಟಾಟಾ ಟಿಗೋರ್ ಜೆಟಿಪಿ ಕಾರುಗಳನ್ನು 2018ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿದೆ. ಟಾಟಾ ನಿರ್ಮಾಣದ ಈ ಎರಡು ಹೊಸ ಕಾರುಗಳು ಜಾಯೇಮ್ ಆಟೋ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಜಯೇಮ್ ಟಾಟಾ ಕಾರ್ಯಕ್ಷಮತೆಯನ್ನು ಸೂಚಿಸುವ 'ಜೆಟಿಪಿ' ಬ್ಯಾಡ್ಜ್ ಅನ್ನು ಪಡೆದುಕೊಂಡಿವೆ. ಇನ್ನು ಈ ಕಾರುಗಳು ನೆಕ್ಸಾನ್ ಎಸ್‌ಯುವಿ ಕಾರಿನ 1.2-ಲೀಟರ್ ಟರ್ಬೋಚಾರ್ಜ್ಡ್ 3 ಸಿಲೆಂಡರ್ ಎಂಜಿನ್‌ನ್ನು ಹೋಲುತ್ತಿದ್ದು, 109-ಬಿಹೆಚ್‌ಪಿ ಮತ್ತು 150-ಎನ್ಎಂ ಟಾರ್ಕ್‌ನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ.
ವಿದೇಶಿ ನೆಲದಲ್ಲಿ ಅತ್ಯಧಿಕ ರನ್, ಬ್ರಾಡ್ಮನ್ ದಾಖಲೆ ಮುರಿಯುವರೇ  ಕೊಹ್ಲಿ?

ವಿದೇಶಿ ನೆಲದಲ್ಲಿ ಅತ್ಯಧಿಕ ರನ್, ಬ್ರಾಡ್ಮನ್ ದಾಖಲೆ ಮುರಿಯುವರೇ ಕೊಹ್ಲಿ?

ಅಂತಾರಾಷ್ಟ್ರೀಯ ಕ್ರಿಕೆ‌ಟ್‌ ಪ್ರವಾಸವೊಂದರಲ್ಲಿ 974ರನ್‌ ಬಾರಿಸಿ ಯಾರೂ ಈ ತನಕ ಮುರಿಯದಿರುವ ಸರ್‌ ಡಾನ್‌ ಬ್ರಾಡ್ಮನ್‌ ಅವರ ದಾಖಲೆಯನ್ನು ಮುರಿಯುವ ಹಂತಕ್ಕೆ ಸಮೀಪದಲ್ಲಿದೆ. ದಕ್ಷಿಣ ಆಫ್ರಿಕ ಪ್ರವಾಸದಲ್ಲಿ ಇರುವ ಟೀಂ ಇಂಡಿಯಾದ ನಾಯಕ ವಿರಾಟ್‌ ಕೊಹ್ಲಿ ಈ ದಾಖಲೆಯನ್ನು ಮುರಿಯುವರೇ ಎಂದು ಕಾದು ನೋಡಬೇಕಿದೆ. ಬ್ರಾಡ್ಮನ್‌ ದಾಖಲೆ ಮುರಿಯಲು ಕೊಹ್ಲಿಗಿನ್ನು ಬೇಕಿರುವುದು ಕೇವಲ 104 ರನ್‌ ಮಾತ್ರ ಈಗಾಗಲೇ ಕೊಹ್ಲಿ 13ಇನ್ನಿಂಗ್ಸ್‌ಗಳಲ್ಲಿ ಒಟ್ಟು 870ರನ್‌ ಗಳಿಸಿದ್ದಾರೆ. ಸರ್‌ ಬ್ರಾಡ್ಮನ್‌ ಅವರು 1930ರಲ್ಲಿ ಇಂಗ್ಲಂಡ್‌ ವಿರುದ್ಧದ ಸರಣಿಯಲ್ಲಿ ಆಡಿದ ಐದು ಟೆಸ್ಟ್‌ ಪಂದ್ಯಗಳಲ್ಲಿ ಒಟ್ಟು 974ರನ್‌ ಗಳಿಸಿದ್ದರು.
ಸಿಟಿ ಬಿಟ್ಟು ಫ್ಯಾಮಿಲಿ  ಜೊತೆ ರೆಸಾರ್ಟ್  ಗೆ ಶಿಫ್ಟ್ ಆದ ಉಪೇಂದ್ರ

ಸಿಟಿ ಬಿಟ್ಟು ಫ್ಯಾಮಿಲಿ ಜೊತೆ ರೆಸಾರ್ಟ್ ಗೆ ಶಿಫ್ಟ್ ಆದ ಉಪೇಂದ್ರ

ಸಿನಿಮಾ,ರಾಜಕೀಯದ ಮಧ್ಯೆ ಉಪ್ಪಿ ಸಿಟಿ ಬಿಟ್ಟು ರೆಸಾರ್ಟ್ ಸೇರಿಕೊಂಡಿದ್ದಾರೆ. ಬನಶಂಕರಿಯಿಂದ ದೊಡ್ಡ ಆಲದಮರ ಬಳಿ ಇರುವ ರುಪ್ಪಿಸ್ ರೆಸಾರ್ಟ್ ಗೆ ಶಿಫ್ಟ್ ಆಗಿದ್ದಾರೆ. ಉಪ್ಪಿ ಹೊಸ ಮನೆ ಪ್ರವೇಶ ಮಾಡಿದ್ದಾರೆ. ಸಿಟಿಯಿಂದ ದೂರವಿರುವ ಹಳ್ಳಿಗಳ ಮಧ್ಯೆ ಇರೋ ರೆಸಾರ್ಟ್ ಹಿಂಭಾಗದಲ್ಲಿ ಹೊಸ ಮನೆಯನ್ನ ಕಟ್ಟಿಕೊಂಡಿದ್ದಾರೆ. ತಾವರೆಕೆರೆಯ ಚುಂಚನಕುಪ್ಪೆ ಬಳಿ ಇರುವ ರುಪ್ಪಿಸ್ ರೆಸಾರ್ಟ್ ನಲ್ಲಿ ಉಪ್ಪಿ ಹೊಸ ಮನೆಯನ್ನ ಕಟ್ಟಿದ್ದಾರೆ. ಇತ್ತಿಚಿಗಷ್ಟೇ ಗೃಹಪ್ರವೇಶವನ್ನು ಮಾಡಿದ್ದಾರೆ. ಸಾಂಪ್ರದಾಯಿಕವಾಗಿ ಗೃಹಪ್ರವೇಶ ಸಮಾರಂಭ ಮಾಡಿ ಮುಗಿಸಿದ್ದು ಇನ್ನು ಕೆಲವೇ ದಿನಗಳಲ್ಲಿ ಉಪ್ಪಿ ಫ್ಯಾಮಿಲಿ ಹೊಸ ಮನೆಯಲ್ಲಿ ಜೀವನ ಕಳೆಯಲಿದೆ.
ಸಿಮ್‌ಕಾರ್ಡ್ ಹಾಕಿ ಈ ಲ್ಯಾಪ್‌ಟಾಪ್‌ನಲ್ಲಿ ಇಂಟರ್‌ನೆಟ್ ಬಳಸಿ!

ಸಿಮ್‌ಕಾರ್ಡ್ ಹಾಕಿ ಈ ಲ್ಯಾಪ್‌ಟಾಪ್‌ನಲ್ಲಿ ಇಂಟರ್‌ನೆಟ್ ಬಳಸಿ!

ಕಂಪ್ಯೂಟರ್ ಸಾಫ್ಟ್‌ವೇರ್ ದೈತ್ಯ ಮೈಕ್ರೋಸಾಫ್ಟ್ ಮತ್ತು ಮೊಬೈಲ್ ಪ್ರೊಸೆಸರ್ ನಿರ್ಮಾಣ ಕಂಪನಿ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ ಸಂಸ್ಥೆ ಜತೆಯಾಗಿ 'ಆಲ್ವೇಸ್ ಕನೆಕ್ಟಡ್' ಎಂಬ ನೂತನ ಮಾದರಿಯ ಲ್ಯಾಪ್‌ಟಾಪ್ ಮತ್ತೆ ಸೀಮಿತ ಆವೃತ್ತಿಯಲ್ಲಿ ಬಿಡುಗಡೆಯಾಗಿದೆ. ಈ ಹಿಂದೆ ಲ್ಯಾಪ್‌ಟಾಪ್‌ನಲ್ಲಿ ಇಂಟರ್‌ನೆಟ್ ಬಳಕೆ ಮಾಡಲು ಹೆಚ್ಚುವರಿಯಾಗಿ ಇಂಟರ್‌ನೆಟ್ ಡಾಂಗಲ್, ವೈಫೈ ಸಂಪರ್ಕ ಅವಶ್ಯವಿತ್ತು. ಆದರೆ, ನೂತನ ಆಲ್ವೇಸ್ ಕನೆಕ್ಟಡ್ ಲ್ಯಾಪ್‌ಟಾಪ್‌ನಲ್ಲಿ ಮೊಬೈಲ್ ಡೇಟಾ ಮಾದರಿಯಲ್ಲಿ ಸಿಮ್ ಕಾರ್ಡ್ ಅಳವಡಿಸಿಕೊಂಡು ಎಲ್‍ಟಿಇ ಮಾದರಿಯ ಇಂಟರ್‌ನೆಟ್ ಪಡೆಯಬಹುದಾಗಿದೆ.