Short News

ಹೊಸ ಭರವಸೆ ಹುಟ್ಟುಹಾಕಿದ ಟಿವಿಎಸ್ ಎನ್‌ಟಾರ್ಕ್ 125

ಹೊಸ ಭರವಸೆ ಹುಟ್ಟುಹಾಕಿದ ಟಿವಿಎಸ್ ಎನ್‌ಟಾರ್ಕ್ 125

ಭಾರತೀಯ ಮಾರುಕಟ್ಟೆಯಲ್ಲಿ ಅತಿಹೆಚ್ಚು ನೀರಿಕ್ಷೆ ಹುಟ್ಟುಹಾಕಿದ್ದ ಟಿವಿಎಸ್ 125 ಸಿಸಿ ಹೊಸ ಸ್ಕೂಟರ್ ಭರ್ಜರಿಯಾಗಿ ಬಿಡುಗಡೆಯಾಗಿದೆ. 125ಸಿಸಿ ಸ್ಕೂಟರ್ ಮಾದರಿಗಳಲ್ಲೇ ವಿನೂತನ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿರುವ ಎನ್ ಟಾರ್ಕ್125 ಸ್ಕೂಟರ್‌ಗಳು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 58,750 ಬೆಲೆ ಪಡೆದುಕೊಂಡಿದ್ದು, ಹೊಸ ಸ್ಕೂಟರ್‌ನಲ್ಲಿ ಸ್ಮಾರ್ಟ್ ಕನೆಕ್ವಿಟಿಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಟಿವಿಎಸ್ ಎನ್‌ಟಾರ್ಕ್ 125 ಮಾದರಿಯು ಗ್ರಾಫೈಟ್ ಪರಿಕಲ್ಪನೆಯ ಉತ್ಪಾದನಾ ಆವೃತ್ತಿಯಾಗಿದ್ದು, 2014 ರ ಆಟೋ ಎಕ್ಸ್‌ಪೋದಲ್ಲಿ ಮೊದಲ ಬಾರಿಗೆ ಪ್ರದರ್ಶನ ಕಂಡಿತ್ತು.
ಬೆಂಗಳೂರಿಗರಿಗೆ 24 ಗಂಟೆಗಳ ವೀಸಾ ಸೌಲಭ್ಯ ಕೊಟ್ಟ ಯುಕೆ!

ಬೆಂಗಳೂರಿಗರಿಗೆ 24 ಗಂಟೆಗಳ ವೀಸಾ ಸೌಲಭ್ಯ ಕೊಟ್ಟ ಯುಕೆ!

ವಿಶೇಷ ಆದ್ಯತೆ ಮೇರೆಗೆ ನೀಡಲಾಗುವ (ಎಸ್ ಪಿ ವಿ) ವೀಸಾ ಸೌಲಭ್ಯವನ್ನು ಪುಣೆ ಹಾಗೂ ಬೆಂಗಳೂರಿಗೆ ವಿಸ್ತರಿಸಲಾಗಿದೆ ಎಂದು ಯುಕೆ ವೀಸಾ ಹಾಗೂ ಇಮಿಗ್ರೇಷನ್ (ಯುಕೆ VI) ಸರ್ವೀಸಸ್ ಗುರುವಾರದಂದು ಘೋಷಿಸಿದೆ.

ಈ ಸೌಲಭ್ಯದ ಮೂಲಕ ಆದ್ಯತೆ ಮೇರೆಗೆ ತ್ವರಿತಗತಿಯಲ್ಲಿ 24 ಗಂಟೆ ಅಥವಾ ಅದಕ್ಕಿಂತ ಕಡಿಮೆ ಸಮಯದಲ್ಲಿ ವೀಸಾ ಬಗ್ಗೆ ನಿರ್ಧಾರ ಕೈಗೊಳ್ಳಬಹುದಾಗಿದೆ.

ತುರ್ತಾಗಿ ಯುಕೆಗೆ ತೆರಳಬೇಕಾದ ಸಂದರ್ಭ ಬಂದರೆ, ಭಾರತೀಯ ನಾಗರಿಕರು ಈ ಸೌಲಭ್ಯವನ್ನು ಬಳಸಬಹುದಾಗಿದೆ. ಎಸ್ ಪಿವಿ ಸೌಲಭ್ಯ ಬಳಸುವವರ ನೆರವಿಗಾಗಿ ಪ್ರತ್ಯೇಕ ಸಾಲು ಹಾಗೂ ಸಿಬ್ಬಂದಿಗಳಿರುತ್ತಾರೆ.

ಪಬ್ಲಿಕ್ ಟಿವಿ, ಬಿಟಿವಿ ಸಮೀಕ್ಷೆ, ಕಾಂಗ್ರೆಸ್ ಅತೀ ದೊಡ್ಡ ಪಕ್ಷ

ಪಬ್ಲಿಕ್ ಟಿವಿ, ಬಿಟಿವಿ ಸಮೀಕ್ಷೆ, ಕಾಂಗ್ರೆಸ್ ಅತೀ ದೊಡ್ಡ ಪಕ್ಷ

ಕರ್ನಾಟಕದ ಪ್ರಮುಖ ವಾಹಿನಿಗಳಾದ ಬಿಟಿವಿ ಮತ್ತು ಪಬ್ಲಿಕ್ ಟಿವಿ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಸಮೀಕ್ಷೆಗಳನ್ನು ನಡೆಸಿವೆ. ಎರಡೂ ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಅತೀ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಎರಡೂ ವಾಹಿನಿಗಳು ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿದೆ ಎಂಬುದನ್ನು ಸ್ಪಷ್ಟವಾಗಿ ತಮ್ಮ ಸಮೀಕ್ಷೆಯಲ್ಲಿ ಹೇಳಿವೆ.

ಬಿಟಿವಿ ಸಮೀಕ್ಷೆ

ಒಟ್ಟು 224 ಕ್ಷೇತ್ರಗಳಲ್ಲಿ ಕಾಂಗ್ರೆಸ್ 94-99 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಬಿಟಿವಿ ಸಮೀಕ್ಷೆ ಹೇಳಿದೆ. ಬಿಜೆಪಿ 82-87 ಸ್ಥಾನಗಳನ್ನು ಚುನಾವಣೆಯಲ್ಲಿ ಪಡೆದುಕೊಳ್ಳಲಿದೆ.

ಭೀಮ್ ಆಪ್ ಬಳಕೆದಾರರಿಗೆ ಸಿಹಿ ಸುದ್ಧಿ 750 ರೂಪಾಯಿಗಳ ಮೌಲ್ಯದ ಕ್ಯಾಶ್ ಬ್ಯಾಕ್ ಆಫರ್!!

ಭೀಮ್ ಆಪ್ ಬಳಕೆದಾರರಿಗೆ ಸಿಹಿ ಸುದ್ಧಿ 750 ರೂಪಾಯಿಗಳ ಮೌಲ್ಯದ ಕ್ಯಾಶ್ ಬ್ಯಾಕ್ ಆಫರ್!!

2016ರಲ್ಲಿ ಪ್ರಧಾನಿಮೋದಿಯವರು ಈ ಆಪ್ ಅನ್ನು ಬಿಡುಗಡೆಗೊಳಿಸಿದರು. ಕ್ಯಾಶ್ ಬ್ಯಾಕ್ ಯೋಜನೆಯು ಗ್ರಾಹಕರಿಗೆ ಹಾಗೂ ವ್ಯಾಪಾರಸ್ಥರಿಗೆ ಇದು ಅನ್ವಯವಾಗುತ್ತದೆ. ಗ್ರಾಹಕರು ತಿಂಗಳೊಂದಕ್ಕೆ 750ರೂಪಾಯಿಗಳಷ್ಟು ಕ್ಯಾಶ್ ಬ್ಯಾಕ್ ಅನ್ನು ಪಡೆದುಕೊಳ್ಳಲು ಸಾಧ್ಯವಾದರೆ,ವರ್ತಕರು ತಿಂಗಳೊಂದಕ್ಕೆ 1,000ರೂಪಾಯಿಗಳವರೆಗೂ ಕ್ಯಾಶ್ ಬ್ಯಾಕ್ ಅನ್ನು ಪಡೆದುಕೊಳ್ಳಬಲ್ಲವರಾಗಿರುತ್ತಾರೆ. ನೂತನ ಬಳಕೆದಾರರು,ತಮ್ಮ ಪ್ರಪ್ರಥಮ ವ್ಯವಹಾರಕ್ಕೆ 51ರೂಪಾಯಿಗಳಷ್ಟು ಕ್ಯಾಶ್ ಬ್ಯಾಕ್ ಅನ್ನು ಪಡೆದುಕೊಳ್ಳಬಲ್ಲವರಾಗಿರುತ್ತಾರೆ. ವಿಶಿಷ್ಟ ವ್ಯವಹಾರಗಳ ಗರಿಷ್ಟ ಕ್ಯಾಶ್ ಬ್ಯಾಕ್ ನ ಮೊತ್ತವು ತಿಂಗಳೊಂದಕ್ಕೆ 500 ರೂಪಾಯಿಗಳಾಗಿರುತ್ತದೆ.