Short News

ಆಟೋ ಎಕ್ಸ್ ಪೋ 2018 : ಟಿವಿಎಸ್ ವಿನೂತನ ಝೆಪ್ಲಿನ್ ಕ್ರೂಸರ್ ಬೈಕ್‌ ಅನಾವರಣ

ಆಟೋ ಎಕ್ಸ್ ಪೋ 2018 : ಟಿವಿಎಸ್ ವಿನೂತನ ಝೆಪ್ಲಿನ್ ಕ್ರೂಸರ್ ಬೈಕ್‌ ಅನಾವರಣ

ದೇಶಿಯ ಮಾರುಕಟ್ಟೆಯ ಅತಿದೊಡ್ಡ ದ್ವಿಚಕ್ರ ವಾಹನಗಳ ಉತ್ಪಾದನಾ ಸಂಸ್ಥೆಯಾಗಿರುವ ಟಿವಿಎಸ್ ಮೋಟಾರ್ಸ್ ಮೊದಲ ಕ್ರೂಸರ್ ಬೈಕ್‌ನ್ನು 2018ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿದ್ದು, ಈ ಬೈಕಿನ ಭವಿಷ್ಯದ ಡಿಸೈನ್ ಮತ್ತು ಫೀಚರ್ಸ್ ಕ್ರೂಸರ್ ಬೈಕ್ ಪ್ರಿಯರಿಗೆ ಹೊಸ ಅನುಭವ ನೀಡಲಿದೆ. ಬೈಕ್‌ನ ಪರಿಕಲ್ಪನೆಯು ಮುಂದಿನ ತಲೆಮಾರಿನ ಕ್ರೂಸರ್ ಬೈಕಿನ ವಿನ್ಯಾಸವಾಗಿದ್ದು, ಕ್ಲಾಸಿಕ್ ವೈಶಿಷ್ಟ್ಯತೆಗಳೊಂದಿಗೆ ನಿರ್ಮಾಣವಾಗಿರುವ ಈ ಬೈಕ್‌ ಲೋ ಸ್ಲಂಗ್ ಸೀಟ್, ಎಲಾಂಗೇಟೆಡ್ ಫ್ಯುಯಲ್ ಟ್ಯಾಂಕ್, ಮುಂಭಾಗದ ಫುಟ್ ಪೆಗ್ ಸೆಟ್ ಮತ್ತು ಉದ್ದವಾದ ವೀಲ್ ಬೇಸನ್ನು ಹೊಂದಿದೆ. ಆದರೆ ಇದರ ಎಲ್ಲ ಅಂಶಗಳು ಮಾಡರ್ನ್ ಟಚ್ ಹೊಂದಿದೆ.
ಮಂಗಳ ಗ್ರಹದ ಶಿಲಾಪದರದಲ್ಲಿ ನೀರಿನ ಅಂಶ ಪತ್ತೆ?

ಮಂಗಳ ಗ್ರಹದ ಶಿಲಾಪದರದಲ್ಲಿ ನೀರಿನ ಅಂಶ ಪತ್ತೆ?

ನಾಸಾದ ಕ್ಯೂರಿಯಾಸಿಟಿ ರೋವರ್ ನೌಕೆಯು ಮಂಗಳ ಗ್ರಹದಲ್ಲಿ ಶಿಲಾಪದರವನ್ನು ಪತ್ತೆ ಮಾಡಿದ್ದು, ಇದು ಭೂಮಿಯ ಕೆಲವು ಪರ್ವತಗಳ ಇಳಿಜಾರಿನಲ್ಲಿ ಕಂಡುಬರುವ ಶಿಲಾಪದರವನ್ನೇ ಹೋಲುತ್ತಿದೆ. ತೇವದಿಂದ ಕೂಡಿದ ಮಣ್ಣು ನಿರಂತರವಾಗಿ ಘನೀಕರಣಕ್ಕೆ ಒಳಗಾದಾಗ ಶಿಲಾಪದರಗಳು ರೂಪುಗೊಂಡಿರಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜನವರಿ 2004ರಂದು ಕೆಂಪು ಗ್ರಹಕ್ಕೆ ಅಡಿಯಿಟ್ಟ ರೋವರ್ ನೌಕೆಯು 5 ಸಾವಿರ ‘ಮಂಗಳ ದಿನ'ಗಳನ್ನು ಪೂರೈಸಿದ್ದು, ಸದ್ಯ ‘ಪರ್ಸೀವರೆನ್ಸ್ ವ್ಯಾಲಿ' ಎಂಬ ಜಾಗದಲ್ಲಿ ಈಗ ಕಾರ್ಯಾಚರಣೆ ನಡೆಸುತ್ತಿದೆ. ಇದು ಸುತ್ತಾಡಿದ ಎಲ್ಲ ಜಾಗಗಳನ್ನು ಗಮನಿಸಿದಾಗ ಈ ಜಾಗ ಅತ್ಯಂತ ವಿಭಿನ್ನವಾಗಿ ಕಂಡುಬಂದಿದೆ.
ಟಿ20 : ಸೋಲಿನ ಕಹಿ ಜತೆಗೆ ದಕ್ಷಿಣ ಆಫ್ರಿಕಾಕ್ಕೆ ದೊಡ್ದ ಆಘಾತ

ಟಿ20 : ಸೋಲಿನ ಕಹಿ ಜತೆಗೆ ದಕ್ಷಿಣ ಆಫ್ರಿಕಾಕ್ಕೆ ದೊಡ್ದ ಆಘಾತ

ಟಿ20ಐ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ವಿರುದ್ಧ ಸೋಲು ಕಂಡಿರುವ ಅತಿಥೇಯ ದಕ್ಷಿಣ ಆಫ್ರಿಕಾ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ತಂಡದ ಸ್ಟಾರ್ ಆಟಗಾರ ಎಬಿ ಡಿ ವಿಲಿಯರ್ಸ್ ಅವರು ಗಾಯಾಳುವಾಗಿದ್ದು, ಸರಣಿಯಿಂದ ಹೊರ ನಡೆದಿದ್ದಾರೆ. ಮೂರು ಪಂದ್ಯಗಳ ಟಿ20ಐ ಸರಣಿಯ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 28 ರನ್ ಅಂತರದಿಂದ ಸೋಲು ಕಂಡಿತು. ಸೆಂಚೂರಿಯನ್ ನಲ್ಲಿ ನಡೆದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಡಿ'ವಿಲಿಯರ್ಸ್ ಅವರು ಎಡ ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದರು.
ನಷ್ಟದಲ್ಲಿದ್ದರೂ ಬಳಕೆದಾರರಿಗೆ ಇಷ್ಟವಾಗುವ ಆಫರ್ ಕೊಟ್ಟ ಐಡಿಯಾ..!

ನಷ್ಟದಲ್ಲಿದ್ದರೂ ಬಳಕೆದಾರರಿಗೆ ಇಷ್ಟವಾಗುವ ಆಫರ್ ಕೊಟ್ಟ ಐಡಿಯಾ..!

ಐಡಿಯಾ ರೂ.109 ಪ್ಲಾನ್ ಜಾರಿಗೆ ತಂದಿದ್ದು, ಇದರಲ್ಲಿ ಬಳಕೆದಾರರಿಗೆ ವಾಯ್ಸ್, ಮೇಸೆಜ್ ಮತ್ತು ಡೇಟಾ ಆಫರ್ ಅನ್ನು ನೀಡುತ್ತಿದೆ ಎನ್ನಲಾಗಿದೆ. ಈ ಪ್ಲಾನ್ ನಲ್ಲಿ ಬಳಕೆದಾರರು 1 GB ಡೇಟಾವನ್ನು ಬಳಕೆಗೆ ಪಡೆದುಕೊಳ್ಳಲಿದ್ದಾರೆ. ಇದರೊಂದಿಗೆ ಅನ್‌ಲಿಮಿಟೆಡ್ ಕರೆ ಮಾಡುವ ಅವಕಾಶವು ದೊರೆಯಲಿದೆ. ಇದರೊಂದಿಗೆ ರೋಮಿಂಗ್ ಸಹ ಉಚಿತವಾಗಲಿದ್ದು, ಉಚಿತವಾಗಿ ಮೇಸೆಜ್ ಮಾಡುವ ಅವಕಾಶವು ದೊರೆಯಲಿದೆ. ಆದರೆ ಈ ಆಫರ್ ಕೇವಲ 14 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.