Short News

'ಆ ಕರಾಳ ರಾತ್ರಿ' ನಾಳೆ ತೆರೆಗೆ

'ಆ ಕರಾಳ ರಾತ್ರಿ' ನಾಳೆ ತೆರೆಗೆ

ದಯಾಳ್ ಪದ್ಮನಾಭನ್ ನಿರ್ದೇಶಿಸಿ, ನಿರ್ಮಿಸಿರುವ 'ಆ ಕರಾಳ ರಾತ್ರಿ' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕಾರ್ತಿಕ್ ಜಯರಾಂ(ಜೆ ಕೆ), ಅನುಪಮ ಗೌಡ, ನವೀನ್ ಕೃಷ್ಣ, ರಂಗಾಯಣ ರಘು, ವೀಣಾಸುಂದರ್, ಸಿಹಿಕಹಿ ಚಂದ್ರು, ಜಯ್ ಶ್ರೀನಿವಾಸ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಈಗಾಗಲೇ ಚಿತ್ರದ ಪ್ರೀಮಿಯರ್ ಶೋ ಆಗಿದ್ದು, ಒಳ್ಳೆ ಪ್ರತಿಕ್ರಿಯೆ ಸಿಕ್ಕಿದೆ. ಈ ಚಿತ್ರದಲ್ಲಿ ಜಯ್ ಶ್ರೀನಿವಾಸ್ ದುರಾಸೆ ಇರುವ ಲೇವಾದೇವಿಗಾರನ ಪಾತ್ರ ಮಾಡಿದ್ದಾರೆ.
ಸ್ಯಾನಿಟರಿ ನ್ಯಾಪ್‌ಕಿನ್ ತೆರಿಗೆಮುಕ್ತ

ಸ್ಯಾನಿಟರಿ ನ್ಯಾಪ್‌ಕಿನ್ ತೆರಿಗೆಮುಕ್ತ

ದೇಶದಾದ್ಯಂತ ತೀವ್ರ ವಿವಾದ ಸೃಷ್ಟಿಸಿದ್ದ ಸ್ಯಾನಿಟರಿ ನ್ಯಾಪ್‌ಕಿನ್ ಮೇಲಿನ ತೆರಿಗೆಯನ್ನು ಕೈಬಿಡಲಾಗಿದೆ. ಸರಕು ಮತ್ತು ಸೇವಾ ತೆರಿಗೆ ಸಮಿತಿಯ 28ನೇ ಸಭೆಯಲ್ಲಿ ಮಹಿಳೆಯರು ಬಳಸುವ ಸ್ಯಾನಿಟರಿ ನ್ಯಾಪ್‌ಕಿನ್ ಅನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಡಲು ನಿರ್ಧರಿಸಲಾಗಿದೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ತಿಳಿಸಿದ್ದಾರೆ. ಇದಕ್ಕೂ ಮೊದಲು ಸ್ಯಾನಿಟರಿ ಪ್ಯಾಡ್‌ಗಳ ಮೇಲೆ ಶೇ 12ರ ತೆರಿಗೆ ವಿಧಿಸಲಾಗುತ್ತಿತ್ತು. ಮಹಿಳೆಯರಿಗೆ ಅತಿ ಅಗತ್ಯವಾದ ಸ್ಯಾನಿಟರಿ ಪ್ಯಾಡ್‌ಗಳನ್ನು ಉಚಿತವಾಗಿ ಒದಗಿಸಬೇಕೆಂಬ ಒತ್ತಾಯ ಕೇಳಿಬಂದಿತ್ತು.
ವಿಮರ್ಶೆ: 'ನಕಲಿ ಮಾರ್ಕ್ಸ್ ಕಾರ್ಡ್' ವಿರುದ್ಧ ಹೋರಾಡುವ 'ಅತಿರಥ'

ವಿಮರ್ಶೆ: 'ನಕಲಿ ಮಾರ್ಕ್ಸ್ ಕಾರ್ಡ್' ವಿರುದ್ಧ ಹೋರಾಡುವ 'ಅತಿರಥ'

ತಮಿಳಿನ 'ಕನಿದನ್' ಚಿತ್ರದ ರಿಮೇಕ್ ಇಲ್ಲಿ 'ಅತಿರಥ' ಆಗಿದೆ. 'ಅತಿರಥ' ಮನರಂಜನೆ ಜೊತೆಗೆ ಒಂದು ಸಂದೇಶ ಹೇಳಿರುವ ಸಿನಿಮಾ. ಇಡೀ ಸಿನಿಮಾ 'ಫೇಕ್ ಸರ್ಟಿಫಿಕೇಟ್' ಎನ್ನುವ ಅಂಶದ ಸುತ್ತ ಸುತ್ತುತ್ತದೆ.

'ಅತಿರಥ' ಸಿನಿಮಾದ ದೊಡ್ಡ ಪ್ಲಸ್ ಪಾಯಿಂಟ್ ಚೇತನ್. ಅವರ ಅಭಿನಯ, ಆಕ್ಷನ್, ಡ್ಯಾನ್ಸ್ ಎಲ್ಲವೂ ಚಿತ್ರ ನೋಡುಗರ ಮೆಚ್ಚುಗೆ ಗಳಿಸುತ್ತದೆ. ಇನ್ನು ಸಿನಿಮಾದ ಮೈನಸ್ ಪಾಯಿಂಟ್ ಅಂದರೆ ಚಿತ್ರಕಥೆಯಲ್ಲಿ ಗಟ್ಟಿತನ ಇಲ್ಲ.

'ಅತಿರಥ' ಸಿನಿಮಾವನ್ನು ಒಮ್ಮೆ ನೋಡಬಹುದು. ಟಿಕೆಟ್ ಕೊಟ್ಟು ಹೋದವರು ಮನರಂಜನೆಯ ಜೊತೆಗೆ ಒಂದು ಸಂದೇಶವನ್ನು ಚಿತ್ರಮಂದಿರದಿಂದ ತರಬಹುದು.

ತಮ್ಮ ಅಭಿಮಾನಿಯ ನೃತ್ಯ ನೋಡಲಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ !

ತಮ್ಮ ಅಭಿಮಾನಿಯ ನೃತ್ಯ ನೋಡಲಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ !

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಿರುತೆರೆ ಹಾಗೂ ಬೆಳ್ಳಿತೆರೆಯ ನಾಯಕ ನಟಿ ಅನುಷಾ ರಂಗನಾಥ್ ಅಭಿಮಾನಿ. ಅವರ 'ಗೋಕುಲದಲ್ಲಿ ಸೀತೆ' ಧಾರಾವಾಹಿ ನೋಡಿ ಇಂಪ್ರೆಸ್ ಆಗಿರುವುದಾಗಿ ಖುದ್ದು ದರ್ಶನ್ ಅವರೇ ತಿಳಿಸಿದ್ದರು. ವಾಸು ನಾನ್ ಪಕ್ಕಾ ಕಮರ್ಷಿಯಲ್' ಅನಿಶ್ ಅಭಿನಯದ ಸಿನಿಮಾ. ಮುಂದಿನ ತಿಂಗಳು ಬಿಡುಗಡೆ ಆಗುತ್ತಿರುವ ಈ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ಇಂದು ನಡೆಯುತ್ತಿದೆ. ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ದರ್ಶನ್ ಆಗಮಿಸುತ್ತಿದ್ದಾರೆ. ದರ್ಶನ್ ಆಗಮಿಸುತ್ತಿರುವ ಕಾರ್ಯಕ್ರಮದಲ್ಲಿ ಅನುಷಾ, ಅನಿಶ್ ಅಭಿನಯದ ಚಿತ್ರದ ಹಾಡುಗಳಿಗೆ ಹೆಜ್ಜೆ ಹಾಕಲಿದ್ದಾರೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more