Short News

'ಅಪೂರ್ವ' ನಂತರ ಕಾಣೆಯಾಗಿದ್ದ ನಟಿಗೆ ಮತ್ತೊಂದು ದೊಡ್ಡ ಅವಕಾಶ.!

'ಅಪೂರ್ವ' ನಂತರ ಕಾಣೆಯಾಗಿದ್ದ ನಟಿಗೆ ಮತ್ತೊಂದು ದೊಡ್ಡ ಅವಕಾಶ.!

'ಅಪೂರ್ವ' ಚಿತ್ರದಲ್ಲಿ ರವಿಚಂದ್ರನ್ ಗೆ ನಾಯಕಿಯಾಗಿದ್ದ ನಟಿ ಈಗ ಮತ್ತೊಮ್ಮೆ ಕ್ರೇಜಿಸ್ಟಾರ್ ಚಿತ್ರದಲ್ಲಿ ನಟಿಸಲಿದ್ದಾರಂತೆ. ಸ್ವತಃ ರವಿಚಂದ್ರನ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಮುಖ ಪಾತ್ರಕ್ಕೆ ಅಪೂರ್ವ ಆಯ್ಕೆಯಾಗಿದ್ದಾರಂತೆ. 'ರಾಜೇಂದ್ರ ಪೊನ್ನಪ್ಪ' ಚಿತ್ರದಲ್ಲಿ ರವಿಚಂದ್ರನ್ ಲಾಯರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ, ಅಪೂರ್ವ ಕೂಡ ಈ ಚಿತ್ರದಲ್ಲಿ ಲಾಯರ್ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ ಎನ್ನಲಾಗಿದೆ. ಕಥೆ-ಚಿತ್ರಕಥೆ-ನಿರ್ದೇಶನದ ಜೊತೆಗೆ ಸಂಗೀತ ಹಾಗೂ ಈ ಚಿತ್ರವನ್ನ ನಿರ್ಮಾಣ ಮಾಡುತ್ತಿರುವುದು ಕೂಡ ರವಿಚಂದ್ರನ್. ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದೆ.

ಪವರ್‌ ಸ್ಟಾರ್‌ ಪವನ್‌ ಕಲ್ಯಾಣ್‌ ವಿರುದ್ಧ ಎಫ್ಐಆರ್ ದಾಖಲು !!

ಪವರ್‌ ಸ್ಟಾರ್‌ ಪವನ್‌ ಕಲ್ಯಾಣ್‌ ವಿರುದ್ಧ ಎಫ್ಐಆರ್ ದಾಖಲು !!

ಟಾಲಿವುಡ್‌ನ ಪವರ್‌ ಸ್ಟಾರ್‌, ಜನಸೇನಾ ನಾಯಕ ಪವನ್‌ ಕಲ್ಯಾಣ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಮಧ್ಯಮವನ್ನು ನಿಂದಿಸಿದ ಆರೋಪಡಿದ ಪವನ್‌ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ಫೋನ್‌ ಮಾಡಿ ನಿಂದಿಸಿದ ಆರೋಪವನ್ನು ಪವನ್‌ ಕಲ್ಯಾಣ್‌ ಎದುರಿಸುತ್ತಿದ್ದಾರೆ. ಈ ಬಗ್ಗೆ ಇದೇ 21ರಂದು ಪತ್ರಕರ್ತರ ಸಂಘವು ಪವನ್‌ ಕಲ್ಯಾಣ್‌ ವಿರುದ್ಧ ಹೈದರಾಬಾದ್‌ನ ಬಂಜಾರಾ ಹಿಲ್ಸ್‌ ಪೊಲೀಸ್‌ ಠಾಣೆ ದೂರು ನೀಡಿತ್ತು. ಪವನ್‌ ಕಲ್ಯಾಣ್‌ ಟ್ವಿಟರ್‌ನಲ್ಲಿ ಮಾಡಿದ್ದ ಕಾಮೆಂಟ್‌ಗಳು, ಟಿವಿ ಚಾನಲ್‌ನ ಸಿಇಒ, ಉದ್ಯೋಗಿಗಳನ್ನು ನಿಂದಿಸಿದ ಆಡಿಯೋ ಸಾಕ್ಷ್ಯಗಳನ್ನು ಪೊಲೀಸರಿಗೆ ಒದಗಿಸಲಾಗಿತ್ತು.
ರಾಹುಲ್ ರ್ಯಾಲಿಯಲ್ಲಿ ಮೋದಿ ಪರ ಘೋಷಣೆ

ರಾಹುಲ್ ರ್ಯಾಲಿಯಲ್ಲಿ ಮೋದಿ ಪರ ಘೋಷಣೆ

ಇಂದು ಎ.ಐ.ಸಿ.ಸಿ. ಅಧ್ಯಕ್ಷ ರಾಹುಲ್ ಗಾಂಧಿ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಹೊನ್ನಾವರದಲ್ಲಿ ರೋಡ್ ಶೋ ನಡೆಸಿದ ರಾಹುಲ್, ಶರಾವತಿ ಸರ್ಕಲ್ ಬಳಿ ಭಾಷಣ ಮಾಡುವಾಗ, ಬಿ.ಜೆ.ಪಿ. ಕಾರ್ಯಕರ್ತರು ಪ್ರಧಾನಿ ಮೋದಿ ಪರವಾಗಿ ಘೋಷಣೆ ಕೂಗಿದ್ದಾರೆ. ‘ಮೋದಿ, ಮೋದಿ' ಘೋಷಣೆ ಮುಗಿಲು ಮುಟ್ಟಿದ್ದು, ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕಾರ್ಯಕರ್ತರು ‘ರಾಹುಲ್ ರಾಹುಲ್' ಎಂದು ಘೋಷಣೆ ಕೂಗಿದ್ದಾರೆ. ಭಾಷಣ ಮಾಡುವಾಗ ಮೋದಿ ಪರ ಘೋಷಣೆ ಕೇಳಿ ಬಂದ ಹಿನ್ನಲೆಯಲ್ಲಿ ಅರ್ಧಕ್ಕೆ ಭಾಷಣ ಮೊಟಕುಗೊಳಿಸಿದ ರಾಹುಲ್ ರೋಡ್ ಶೋ ಮುಂದುವರೆಸಿದ್ದಾರೆ.
ತೂಕ ಕಳೆದುಕೊಳ್ಳಲು ಸ್ಟ್ರೆಚಿಂಗ್ ನೆರವಾಗುವುದೇ?

ತೂಕ ಕಳೆದುಕೊಳ್ಳಲು ಸ್ಟ್ರೆಚಿಂಗ್ ನೆರವಾಗುವುದೇ?

ಯಾವುದೇ ವ್ಯಾಯಾಮದ ಮೊದಲು ಸ್ಟ್ರೆಚಿಂಗ್ ಮಾಡಲು ಸೂಚಿಸಲಾಗುತ್ತದೆ. ಇದು ಸ್ನಾಯುಗಳನ್ನು ಸಡಿಲಗೊಳಿಸುವುದು ಮಾತ್ರವಲ್ಲದೆ ಅದನ್ನು ವ್ಯಾಯಾಮಕ್ಕೆ ಸಜ್ಜುಗೊಳಿಸುವುದು. ಇದರಿಂದ ವ್ಯಾಯಾಮದ ವೇಳೆ ಸ್ನಾಯುಗಳ ಮೇಲೆ ಬಲ ಬೀಳುವ ಅಪಾಯವು ಕಡಿಮೆಯಾಗುವುದು. ಸ್ವಲ್ಪ ನಡೆದಾಡಿ, ಸೈಕಲ್ ಓಡಿಸಿ, ಅಥವಾ ಸ್ವಲ್ಪ ಸ್ಟ್ರೆಚಿಂಗ್ ವ್ಯಾಯಾಮ ಮಾಡಿದರೆ ಅದರಿಂದ ಭಾರ ಎತ್ತುವಾಗ ಗಾಯಾಳುವಾಗದಂತೆ ದೇಹಕ್ಕೆ ಸ್ಥಿತಿಸ್ಥಾಪಕತ್ವವು ಸುಧಾರಣೆಯಾಗುವುದು. ಇದು ಕ್ಯಾಲರಿ ದಹಿಸುವುದು ತುಂಬಾ ಕಡಿಮೆ. ತೂಕ ಕಳೆದುಕೊಳ್ಳಲು ಸ್ಟ್ರೆಚಿಂಗ್ ನೆರವಾಗುವುದಿಲ್ಲ. ಆದರೆ ದೇಹವನ್ನು ವ್ಯಾಯಾಮಕ್ಕೆ ಸಜ್ಜುಗೊಳಿಸಲು ಇದು ನೆರವಾಗುವುದು.