Short News

'ಅಪೂರ್ವ' ನಂತರ ಕಾಣೆಯಾಗಿದ್ದ ನಟಿ ಅಪೂರ್ವ ಮತ್ತೆ ಬಂದ್ರು!

'ಅಪೂರ್ವ' ನಂತರ ಕಾಣೆಯಾಗಿದ್ದ ನಟಿ ಅಪೂರ್ವ ಮತ್ತೆ ಬಂದ್ರು!

ಈ ನಟಿಯ ಹೆಸರು ಕೂಡ 'ಅಪೂರ್ವ'. 'ಅಪೂರ್ವ' ಚಿತ್ರದಲ್ಲಿ ರವಿಚಂದ್ರನ್ ಗೆ ನಾಯಕಿಯಾಗಿದ್ದ ಈ ನಟಿ ಈಗ ಮತ್ತೊಮ್ಮೆ ಕ್ರೇಜಿಸ್ಟಾರ್ ಚಿತ್ರದಲ್ಲಿ ನಟಿಸಲಿದ್ದಾರಂತೆ.  ರವಿಚಂದ್ರನ್ ಸ್ವತಃ ನಿರ್ದೇಶನ ಮಾಡುತ್ತಿರುವ ಹೊಸ ಚಿತ್ರದಲ್ಲಿ ಪ್ರಮುಖ ಪಾತ್ರಕ್ಕೆ ಅಪೂರ್ವ ಆಯ್ಕೆಯಾಗಿದ್ದಾರಂತೆ. ಕ್ರೇಜಿಸ್ಟಾರ್ ನಟಿಸಿ-ನಿರ್ದೇಶನ ಮಾಡುತ್ತಿರುವ 'ರಾಜೇಂದ್ರ ಪೊನ್ನಪ್ಪ' ಚಿತ್ರದಲ್ಲಿ ಅಪೂರ್ವ ಅಭಿನಯಿಸಲಿದ್ದಾರೆ. ಅಂದ್ಹಾಗೆ, ಈಗಾಗಲೇ ರಾಧಿಕಾ ಕುಮಾರಸ್ವಾಮಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಆದ್ರೆ, ಇನ್ನೊಂದು ಮುಖ್ಯ ಪಾತ್ರಕ್ಕೆ ಅಪೂರ್ವ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ.
ಹೃದಯದ ಕಾಯಿಲೆ ದೂರವಿಡಲು, ಇಂತಹ ಆಹಾರಗಳನ್ನು ಸೇವಿಸಿ...

ಹೃದಯದ ಕಾಯಿಲೆ ದೂರವಿಡಲು, ಇಂತಹ ಆಹಾರಗಳನ್ನು ಸೇವಿಸಿ...

ಇಂದಿನ ದಿನಗಳಲ್ಲಿ ಹದಿನಂಟರಿಂದ ಇಪ್ಪತ್ತನಾಲ್ಕು ವಯಸ್ಸಿನ ಯುವಕರ ಪೈಕಿ ಅರ್ಧದಷ್ಟು ಯುವಕರಲ್ಲಿ ಕನಿಷ್ಟ ಒಂದಾದರೂ ಹೃದಯಸಂಬಂಧಿ ತೊಂದರೆ ಇದ್ದೇ ಇರುತ್ತದೆ. ಉದಾಹರಣೆಗೆ ಅಧಿಕ ರಕ್ತದೊತ್ತಡ, ಮಾನಸಿಕ ಒತ್ತಡ ಅಥವಾ ಅನಾರೋಗ್ಯಕರ ಆಹಾರ ಸೇವನೆ. ಇಪ್ಪತ್ತರ ಹರೆಯದಲ್ಲಿ ಹೃದಯದ ಒತ್ತಡ ಸಾಮಾನ್ಯಕ್ಕಿಂತ ಕೊಂಚವೇ ಹೆಚ್ಚಿದ್ದರೂ ಮುಂದಿನ ವರ್ಷಗಳಲ್ಲಿ ಹೃದಯನಾಳಗಳು ಒಳಗಿನಿಂದ ಕಟ್ಟಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.ಆದ್ದರಿಂದ ಚಿಕ್ಕವಯಸ್ಸಿನಲ್ಲಿಯೇ ಉತ್ತಮ ಆಹಾರ ಅಭ್ಯಾಸಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಹೃದಯದ ಮೇಲೆ ಒತ್ತಡವನ್ನು ಹೇರದೇ ಉತ್ತಮ ಆರೋಗ್ಯ ಹಾಗೂ ದೀರ್ಘಾಯಸ್ಸನ್ನು ಪಡೆಯಬಹುದು.

ಪೆಟ್ರೋಲ್, ಡೀಸೆಲ್ ಬೆಲೆ

ಪೆಟ್ರೋಲ್, ಡೀಸೆಲ್ ಬೆಲೆ

  • ಕನ್ನಡಗುಡ್ ರಿಟರ್ನ್ಸ್.ಇನ್ (kannadagoodreturns.in) ಮೂಲಕ ರಾಜ್ಯದ ಮತ್ತು ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್, ಡೀಸೆಲ್ ದರಗಳ ಮಾಹಿತಿಯನ್ನು ಪ್ರತಿದಿನ ನೀಡಲಾಗುತ್ತದೆ.
  • ಪ್ರಾರಂಭದಲ್ಲಿ ಪ್ರತಿನಿತ್ಯ ಪೆಟ್ರೋಲ್, ಡೀಸೆಲ್ ಬೆಲೆ ಪರಿಷ್ಕರಣೆ ಮಾಡುವ ಬಗ್ಗೆ ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದವು. ಜಾಗತಿಕ ಮಾರುಕಟ್ಟೆಯಲ್ಲಿನ ಪ್ರಭಾವದಿಂದ ತೈಲ ಬೆಲೆಗಳು ಏರುಗತಿಯಲ್ಲಿ ಸಾಗುತ್ತಿದ್ದು, ಜನರು ತತ್ತರಿಸಿ ಹೋಗುವಂತಾಗಿದೆ.
  • ಇವತ್ತೂ ಯಾವ ಯಾವ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ(petrol, diesel price) ಎಷ್ಟೆಷ್ಟು ಏರಿಳಿತಯಾಗಿದೆ ಎಂಬುದನ್ನು ನೋಡೋಣ..

ಟಿ-20 ಟೂರ್ನಿ: ಇಂದು ಮತ್ತೊಮ್ಮೆ ಮುಖಾಮುಖಿಯಾಗುತ್ತಿದೆ ಹೈದರಾಬಾದ್-ಪಂಜಾಬ್‌, ಗೆಲ್ಲೋರ್ಯಾರು?

ಟಿ-20 ಟೂರ್ನಿ: ಇಂದು ಮತ್ತೊಮ್ಮೆ ಮುಖಾಮುಖಿಯಾಗುತ್ತಿದೆ ಹೈದರಾಬಾದ್-ಪಂಜಾಬ್‌, ಗೆಲ್ಲೋರ್ಯಾರು?

ಟಿ-20 ಟೂರ್ನಿಯ ಗುರುವಾರದ ಪಂದ್ಯದಲ್ಲಿ ಹೈದರಾಬಾದ್ ಮತ್ತು ಪಂಜಾಬ್‌ ಸೆಣೆಸಲಿವೆ. ನಾಯಕ ಕೇನ್ ವಿಲಿಯಮ್ಸನ್‌ ನೇತೃತ್ವದ ಹೈದರಾಬಾದ್ ನಿರಂತರ ಸೋಲಿನ ಬಳಿಕ ಈ ಹಿಂದಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮುಂಬೈ ತಂಡವನ್ನು ಸೋಲಿಸಿತ್ತು. ಇನ್ನು ಇದೇ ಟೂರ್ನಿಯಲ್ಲಿ ಏಪ್ರಿಲ್ 19ರಂದು ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಹೈದರಾಬಾದ್ ತಂಡವನ್ನು 15 ರನ್‌ಗಳಿಂದ ಪಂಜಾಬ್ ಸೋಲಿಸಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲಿ ಮೊಹಾಲಿಯಲ್ಲಿನ ಸೋಲಿನ ಸೇಡನ್ನು ತೀರಿಸಿಕೊಳ್ಳುವ ತವಕದಲ್ಲಿದೆ ಹೈದರಾಬಾದ್. ರಾತ್ರಿ 8 ಗಂಟೆಗೆ ರಾಜೀವ್ ಗಾಂಧಿ ಸ್ಟೇಡಿಯಂ ನಲ್ಲಿ ಪಂದ್ಯ ಆರಂಭವಾಗಲಿದೆ.