Short News

ಐಂದ್ರಿತಾ ಬರ್ತಡೇಗೆ ರಿವಿಲ್ ಆಯ್ತು ಹೊಸ ಲುಕ್

ಐಂದ್ರಿತಾ ಬರ್ತಡೇಗೆ ರಿವಿಲ್ ಆಯ್ತು ಹೊಸ ಲುಕ್

ಸ್ಯಾಂಡಲ್ ವುಡ್ನ ಗೊಂಬೆ ನಟಿ ಐಂದ್ರತಾ ರೇ ಅವರಿಗೆ ಹುಟ್ಟುಹಬ್ಬದ ಸಂಭ್ರಮ. 2008 ರಲ್ಲಿ ಕನ್ನಡ ಸಿನಿಮಾರಂಗಕ್ಕೆ ಎಂಟ್ರಿಕೊಟ್ಟ ಐಂದ್ರಿತಾ ತಮ್ಮ ಅಭಿನಯದ ಮೂಲಕ ಸಾಕಷ್ಟು ಜನ ಅಭಿಮಾನಿಗಳನ್ನ ಪಡೆದುಕೊಂಡಿದ್ದು, ಸಿನಿಮಾ ಆಯ್ಕೆಯ ವಿಚಾರದಲ್ಲಿ ಇತ್ತೀಚಿಗೆ ಚ್ಯೂಸಿ ಆಗಿದ್ದಾರೆ. ಚೌಕಾ ಸಿನಿಮಾದ ನಂತರ ಯಾವುದೇ ಚಿತ್ರದಲ್ಲಿ ಕಾಣಿಸಿಕೊಳ್ಳದ ಐಂದ್ರಿತಾ ಸದ್ಯ ಗರುಡಾ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಅದಷ್ಟೇ ಅಲ್ಲದೆ ರಾಂಬೋ2 ಚಿತ್ರದಲ್ಲಿ ವಿಶೇಷ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ.ಹುಟ್ಟುಹಬ್ಬದ ವಿಶೇಷವಾಗಿ Rambo2 ಮತ್ತು ಗರುಡಾ ಚಿತ್ರದ ಐಂದ್ರಿತಾ ಫೋಸ್ಟರ್ ಬಿಡುಗಡೆ ಆಗಿದೆ.
ಹೊಸ ಭರವಸೆಯೊಂದಿಗೆ ಕೊನೆಗೊಂಡ ಮುಂಬೈ ಶೇರುಪೇಟೆ

ಹೊಸ ಭರವಸೆಯೊಂದಿಗೆ ಕೊನೆಗೊಂಡ ಮುಂಬೈ ಶೇರುಪೇಟೆ

ಇಂದಿನ ಮುಂಬೈ ಸೆನ್ಸೆಕ್ಸ್ ವಹಿವಾಟಿನಲ್ಲಿ 212 ಅಂಕ ಜಿಗಿತದೊಂದಿಗೆ 34,713.60ಅಂಕ ಎತ್ತರವನ್ನು ತಲುಪಿ ಹೊಸ ಭರವಸೆಯೊಂದಿಗೆ ಕೊನೆಗೊಳಿಸಿತು. ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 47.25 ಅಂಕ ಜಿಗಿತವನ್ನು ದಾಖಲಿಸಿ ದಿನದ ವಹಿವಾಟನ್ನು 10,617.80 ಅಂಕ ಮಟ್ಟಕ್ಕೇರಿತು. ಇಂದಿನ ವ್ಯವಹಾರದಲ್ಲಿ ಎಫ್ಎಂಸಿಜಿ, ಐಟಿ, ಬ್ಯಾಂಕಿಂಗ್‌ ಮತ್ತು ಕನ್ಸೂಮರ್‌ ಡ್ನೂರೇಬಲ್ಸ್‌ ಶೇರುಗಳು ಉತ್ತಮ ವಹಿವಾಟಿಗೊಳಪಟ್ಟವು.
ಮಾಜಿ ಸಿಎಂ ದಿ.ಜಯಲಲಿತಾರ ಯಾವುದೇ ಜೈವಿಕ ಮಾದರಿಯೂ ನಮ್ಮ ಬಳಿ ಇಲ್ಲ: ಅಪೋಲೋ ಆಸ್ಪತ್ರೆ

ಮಾಜಿ ಸಿಎಂ ದಿ.ಜಯಲಲಿತಾರ ಯಾವುದೇ ಜೈವಿಕ ಮಾದರಿಯೂ ನಮ್ಮ ಬಳಿ ಇಲ್ಲ: ಅಪೋಲೋ ಆಸ್ಪತ್ರೆ

ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಅವರ ಯಾವುದೇ ರೀತಿಯ ಜೈವಿಕ ಮಾದರಿಗಳು ತಮ್ಮ ಬಳಿ ಇಲ್ಲವೆಂದು ಚೆನ್ನೈನ ಅಪೋಲೋ ಆಸ್ಪತ್ರೆ ತಿಳಿಸಿದೆ. ಬೆಂಗಳೂರಿನ 37ವರ್ಷದ ಅಮೃತಾ ಎಂಬುವವರು ತಾನು ಜಯಲಲಿತಾರ ಮಗಳಾಗಿದ್ದು, ಇದನ್ನು ಸಾಬೀತುಪಡಿಸಲು ಡಿಎನ್ಎ ಪರೀಕ್ಷೆ ಮಾಡಿಸುವಂತೆ ಕೋರಿ ಮದ್ರಾಸ್‌ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ಅಮೃತಾ ಅರ್ಜಿ ವಿಚಾರಣೆ ನಡೆಸಿದ್ದ ಮದ್ರಾಸ್‌ ಹೈಕೋರ್ಟ್‌, ಜಯಲಲಿತಾ ಅವರ ರಕ್ತದ ಮಾದರಿ ಒದಗಿಸುವಂತೆ ಅಪೋಲೋ ಆಸ್ಪತ್ರೆಗೆ ಸೂಚಿಸಿತ್ತು. ಇದಕ್ಕೆ ಉತ್ತರಿಸಿದ ಆಸ್ಪತ್ರೆ ಹೀಗೆ ಹೇಳಿದೆ.
ಶೀಘ್ರವಾಗಿ ತೂಕ ಇಳಿಸಿಕೊಳ್ಳಲು ಈ ಆಹಾರ ಕ್ರಮ ಅನುಸರಿಸಿ..

ಶೀಘ್ರವಾಗಿ ತೂಕ ಇಳಿಸಿಕೊಳ್ಳಲು ಈ ಆಹಾರ ಕ್ರಮ ಅನುಸರಿಸಿ..

ಹಸಿರು ಟೀಯಲ್ಲಿ ಹಲವಾರು ಆರೋಗ್ಯಕರ ಪೋಷಕಾಂಶಗಳಿದ್ದು ತೂಕ ಇಳಿಸಲೂ ನೆರವಾಗುತ್ತದೆ. ಕಾಫಿ ನಿಮ್ಮನ್ನು ಕೊಂಚ ಹೊತ್ತು ಎಚ್ಚರಿರಲು ಸಹಕರಿಸಿದರೂ ಉಳಿದಂತೆ ಕೊಬ್ಬನ್ನು ಹೆಚ್ಚಿಸಲು ನೆರವಾಗುತ್ತದೆ. ಬದಲಿಗೆ ಹಸಿರು ಚಹಾ ಸೇವಿಸುವ ಮೂಲಕ ನಿದ್ದೆಯನ್ನು ನಿಯಂತ್ರಿಸುವ ಜೊತೆಗೇ ತೂಕವನ್ನೂ ಕಳೆದುಕೊಳ್ಳಲು ಸಾಧ್ಯವಾಗುತ್ತದೆ. ಆದರೆ ಇದರಲ್ಲಿಯೂ ಸಕ್ಕರೆ ಅಲ್ಪಪ್ರಮಾಣದಲ್ಲಿ ಅಥವಾ ಇಲ್ಲದೇ ಇದ್ದರೂ ಉತ್ತಮ. ನಿಮ್ಮ ನಿತ್ಯದ ಪೇಯಗಳಾದ ಟೀ, ಕಾಫಿ ಅಥವಾ ಹಾಲಿನ ಮೇಲೆ ಒಂದು ಚಿಕ್ಕಚಮಚ ದಾಲ್ಚಿನ್ನಿ ಪುಡಿಯನ್ನು ಚಿಮುಕಿಸಿ ಕಲಕಿ ಕುಡಿಯಿರಿ. ಉಪ್ಪಿಟ್ಟು, ಬ್ರೆಡ್ ಟೋಸ್ಟ್ ಮೊದಲಾದವುಗಳಲ್ಲೂ ದಾಲ್ಚಿನ್ನಿ ಪುಡಿ ಸೇರಿಸಿ ತಿನ್ನಿರಿ.