Short News

ಪ್ರಿಯಾ ವಾರಿಯರ್ ಜೊತೆಗಿರುವ ಈ ಹುಡುಗ ಯಾರು ಗೊತ್ತಾ?

ಪ್ರಿಯಾ ವಾರಿಯರ್ ಜೊತೆಗಿರುವ ಈ ಹುಡುಗ ಯಾರು ಗೊತ್ತಾ?

ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಕೊಟ್ಟ ಒಂದೇ ಒಂದು ಎಕ್ಸ್‌ಪ್ರೆಶನ್ ಆಕೆಯನ್ನು ನ್ಯಾಷನಲ್ ಕ್ರಶ್ ಅಂತ ಕರೆಸಿಕೊಳ್ಳುವ ಹಾಗೆ ಮಾಡಿದೆ. ಆದರೆ ಅದೇ ಹಾಡಿನಲ್ಲಿ ಆಕೆಯ ಲವರ್ ಆಗಿ ನಟಿಸಿದ್ದ ಹುಡುಗ ಯಾರು ಎಂಬುದು ಅನೇಕರಿಗೆ ಗೊತ್ತಿಲ್ಲ. 'ಒರು ಅಡಾರ್ ಲವ್' (Ooru adaar love) ಚಿತ್ರದ ಹಾಡಿನಲ್ಲಿ ಪ್ರಿಯಾ  ಜೊತೆಗೆ ಕಾಣಿಸಿಕೊಂಡಿರುವ ಈ ಹುಡುಗನ ಹೆಸರು ರೋಷನ್ ಅಬ್ದುಲ್‌ ರಹೂಫ್. 19ವರ್ಷದ ಕೇರಳದ ಹುಡುಗ. ಡ್ಯಾನ್ಸ್, ನಟನೆ ಅಂದರೆ ಸಖತ್ ಇಷ್ಟ. ಪ್ರಿಯಾ ಮತ್ತು ರೋಷನ್ ಇಬ್ಬರಿಗೂ ಇದು ಮೊದಲ ಸಿನಿಮಾವಾಗಿದೆ.  ಸದ್ಯ ರೋಷನ್ ಗೆ ಇನ್ಟಾಗ್ರಾಮ್ ಖಾತೆಯಲ್ಲಿ 430 ಸಾವಿರ ಫಾಲೋವರ್ಸ್ ಇದ್ದಾರೆ.
ಪೈಲ್ವಾನ್ ನ್ ಗಾಗಿ ಥೈಲ್ಯಾಂಡ್ ಗೆ ಹೊರಟ ಕಿಚ್ಚ

ಪೈಲ್ವಾನ್ ನ್ ಗಾಗಿ ಥೈಲ್ಯಾಂಡ್ ಗೆ ಹೊರಟ ಕಿಚ್ಚ

ಕಿಚ್ಚ ಸುದೀಪ್ ತಮ್ಮ ಮುಂದಿನ ಚಿತ್ರದ ತಯಾರಿಗಾಗಿ ಥೈಲ್ಯಾಂಡ್ ಗೆ ಹಾರಲಿದ್ದಾರೆ. ತಮ್ಮ ಟ್ರೈನರ್ ಜೀತ್ ದೇವಯ್ಯ ಅವರ ಜೊತೆ ಥೈಲ್ಯಾಂಡ್ ನ ಹಳ್ಳಿಯಲ್ಲಿ ಬಾಕ್ಸಿಂಗ್ ಕಲಿಯಲಿದ್ದಾರೆ. ಈಗಾಗಲೇ ವರ್ಕ್ ಔಟ್ ಶುರು ಮಾಡಿದ ನಂತರ ವಿಭಿನ್ನವಾಗಿ ಕಾಣಿಸುತ್ತಿರುವ ಕಿಚ್ಚ ಬಾಕ್ಸರ್ ಲುಕ್ ನಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕ ಕೃಷ್ಣ ಹಾಗೂ ಸುದೀಪ್ ಕಾಂಬಿನೇಶನ್ ನಲ್ಲಿ ಈಗಾಗಲೇ ಹಿಟ್ ಚಿತ್ರ ಪ್ರೇಕ್ಷಕರಿಗೆ ಸಿಕ್ಕಿದ್ದು ಹೆಬ್ಬುಲಿ ಸಿನಿಮಾಗಾಗಿಯೂ ಸುದೀಪ್ ಸಾಕಷ್ಟು ತಯಾರಿ ಮಾಡಿಕೊಂಡಿದ್ದರು. ಅದೇ ರೀತಿಯಲ್ಲಿ ಈ ಬಾರಿಯೂ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.
ನಿಮ್ಮ ಜನಪ್ರತಿನಿಧಿ: ಉದ್ಯಮಿ ನಲಪಾಡ್ ಅಹ್ಮದ್ ಹ್ಯಾರೀಸ್

ನಿಮ್ಮ ಜನಪ್ರತಿನಿಧಿ: ಉದ್ಯಮಿ ನಲಪಾಡ್ ಅಹ್ಮದ್ ಹ್ಯಾರೀಸ್

ನಲಪಾಡ್ ಅಹ್ಮದ್ ಹ್ಯಾರೀಸ್ -ಶಾಂತಿನಗರ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ. ಸುಮಾರು ಎರಡೂವರೆ ಲಕ್ಷ ಜನರ ಪ್ರತಿನಿಧಿ. ತಮ್ಮ ಪುತ್ರ ಮೊಹಮ್ಮದ್ ಹ್ಯಾರೀಸ್ ನಲಪಾಡ್ ಅವರ ಮೇಲೆ ತುಂಬಾ ಭರವಸೆ ಇಟ್ಟುಕೊಂಡವರು. ಕಾಂಗ್ರೆಸ್ ಪಕ್ಷದ ಯುವ ನಾಯಕರಾಗುವ ಹೊತ್ತಲ್ಲೇ ಹಲ್ಲೆ ಪ್ರಕರಣದಲ್ಲಿ ಮೊಹಮ್ಮದ್ ಆರೋಪಿಯಾಗಿ ಬಂಧಿತರಾಗಿದ್ದಾರೆ.

ಮೊದಲ ಬಾರಿಗೆ ವಿಧಾನಸಭೆಗೆ ಪ್ರವೇಶ ಮಾಡಿದ ಎನ್.ಎ ಹ್ಯಾರೀಸ್ ಅವರು ಗಮನಾರ್ಹ ಸಾಧನೆ ಮಾಡಿದ್ದಾರೆ. ಸರಕಾರಿ ಶಾಲೆಗಳ ಕಟ್ಟಡ ನಿರ್ಮಾಣ, ವ್ಯಾಯಾಮ ಶಾಲೆ, ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಹೆಚ್ಚು ಆದ್ಯತೆ ನೀಡಿದ್ದಾರೆ.

ಶಿವಣ್ಣನ ಸಿನಿಮಾ ಪ್ರೀತಿಗೆ 32 ವರ್ಷದ ಸಂಭ್ರಮ

ಶಿವಣ್ಣನ ಸಿನಿಮಾ ಪ್ರೀತಿಗೆ 32 ವರ್ಷದ ಸಂಭ್ರಮ

ಕನ್ನಡ ಸಿನಿಮಾರಂಗದ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ಡಬಲ್ ಸಂಭ್ರಮ. ಇದೇ ಶುಕ್ರವಾರ ಶಿವರಾಜ್ ಕುಮಾರ್ ಅಭಿನಯದ ಭಾರಿ ನಿರೀಕ್ಷೆ ಮೂಡಿಸಿರುವ ಟಗರು ಚಿತ್ರ ಬಿಡುಗಡೆ ಆಗುತ್ತಿದೆ. ಇದೇ ಸಂದರ್ಭದಲ್ಲಿ ಶಿವರಾಜ್ ಕುಮಾರ್ ಕನ್ನಡ ಸಿನಿಮಾರಂಗಕ್ಕೆ ಬಂದು ಇಂದಿಗೆ 32 ವರ್ಷಗಳು ಪೂರೈಸುತ್ತಿದ್ದಾರೆ. ಇಂದಿಗೂ ಕೂಡ ಚಿರ ಯುವಕನಂತಿರುವ ಶಿವರಾಜ್ ಕುಮಾರ್ ಅಭಿನಯದ ಇಲ್ಲಿಯರೆಗೂ 118 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಆನಂದ್ ಸಿನಿಮಾ ಮಹೂರ್ತ ಫೆಬ್ರವರಿ 19-1986ನಲ್ಲಿ ನಡೆದಿತ್ತು. ಅಂದಿನಿಂದ ಇಂದಿನ ವರೆಗೂ ಶಿವರಾಜ್ ಕುಮಾರ್ ಅಭಿಮಾನಿಗಳನ್ನ ರಂಜಿಸುತ್ತಲೇ ಇದ್ದಾರೆ.