Short News

ಬಿಡುಗಡೆಗೆ ರೆಡಿಯಾಗಿರುವ  'ಅಯೋಗ್ಯ' ನನ್ನು ಸುತ್ತಿಕೊಂಡಿದೆ ವಿವಾದ

ಬಿಡುಗಡೆಗೆ ರೆಡಿಯಾಗಿರುವ 'ಅಯೋಗ್ಯ' ನನ್ನು ಸುತ್ತಿಕೊಂಡಿದೆ ವಿವಾದ

ಮುಂದಿನ ತಿಂಗಳು ಬಿಡುಗಡೆಗೆ ರೆಡಿಯಾಗಿರುವ ನೀನಾಸಂ ಸತೀಶ್ ಹಾಗೂ ರಚಿತಾ ರಾಮ್ ಅಭಿನಯದ 'ಅಯೋಗ್ಯ' ಸಿನಿಮಾ ಬಿಡುಗಡೆಗೂ ಮುನ್ನವೇ ವಿವಾದದಲ್ಲಿ ಸಿಲುಕಿಕೊಂಡಿದೆ. 'ಅಯೋಗ್ಯ' ಎನ್ನು ಶೀರ್ಷಿಕೆ ಅಡಿಯಲ್ಲಿ ಉಪ ಶೀರ್ಷಿಕೆಯಾಗಿ ಗ್ರಾಮ ಪಂಚಾಯಿತಿ ಸದಸ್ಯ ಎಂದು ಬಳಸಿಕೊಳ್ಳಲಾಗಿದೆ. ಗ್ರಾಮ ಪಂಚಾಯಿತಿ ಸದಸ್ಯ ಎನ್ನು ಉಪ ಶೀರ್ಷಿಕೆಯನ್ನು ಕೈ ಬಿಡಬೇಕು ಎಂದು ಮೈಸೂರಿನ ಕನ್ನಡ ಕ್ರಾಂತಿ ದಳ ಸಂಘಟನೆ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದೆ. ಅದಷ್ಟೇ ಅಲ್ಲದೆ ಶೀರ್ಷಿಕೆ ನೀಡುವ ವಿಚಾರದಲ್ಲಿ ವಾಣಿಜ್ಯ ಮಂಡಳಿ ಸರಿಯಾದ ಕೆಲಸ ಮಾಡಿಲ್ಲ ಎಂದು ಆರೋಪವನ್ನು ಮಾಡಿದೆ.
ಅನುಷ್ಕಾ, ಕೊಹ್ಲಿಗೆ  ಲೀಗಲ್ ನೋಟಿಸ್ ಕಳುಹಿಸಿದ ಅರ್ಹಾನ್ ಸಿಂಗ್

ಅನುಷ್ಕಾ, ಕೊಹ್ಲಿಗೆ ಲೀಗಲ್ ನೋಟಿಸ್ ಕಳುಹಿಸಿದ ಅರ್ಹಾನ್ ಸಿಂಗ್

ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆದನೆಂದು ಸಾರ್ವಜನಿಕವಾಗಿ ನಿಂದಿಸಿ ಅವಮಾನಿಸಿದ್ದ ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿಗೆ ಪಾರ್ಟ್ ಟೈಮ್ ನಟ ಅರ್ಹಾನ್ ಸಿಂಗ್ ಅವರು ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಕೊಹ್ಲಿ-ಅನುಷ್ಕಾ ಜೋಡಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಮತ್ತೊಂದು ಕಾರಿನಲ್ಲಿದ್ದ ವ್ಯಕ್ತಿಯೊಬ್ಬರು ರಸ್ತೆಯ ಮೇಲೆ ಕಸ ಎಸೆಯುತ್ತಿರುವುದನ್ನು ಕಂಡಿದ್ದರು. ಕಂಡು ಸುಮ್ಮನಿರದ ಅನುಷ್ಕಾ ಕಸ ಎಸೆದ ವ್ಯಕ್ತಿ ಅರ್ಹಾನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಆ ಸಂದರ್ಭ ಅನುಷ್ಕಾ ಸ್ವಚ್ಛತೆಯ ಪಾಠ ಮಾಡಿದ್ದನ್ನು ಕೊಹ್ಲಿ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದರು.
ಇಂಗ್ಲೆಂಡ್  ತಲುಪಿದ ಕೊಹ್ಲಿ ಟೀಂ

ಇಂಗ್ಲೆಂಡ್ ತಲುಪಿದ ಕೊಹ್ಲಿ ಟೀಂ

ಭಾರತದ ಕ್ರಿಕೆಟ್ ತಂಡ 81 ದಿನಗಳ ಪ್ರವಾಸಕ್ಕಾಗಿ ಇಂಗ್ಲೆಂಡ್ ತಲುಪಿದೆ. ಇಂಗ್ಲೆಂಡ್ ಮತ್ತು ಐರ್ಲೆಂಡ್ ವಿರುದ್ಧ ಟೀಂ ಇಂಡಿಯಾ ಸೆಣೆಸಾಡಲಿದೆ. ಜುಲೈ 3ರಿಂದ ಶುರುವಾಗಲಿರುವ ಇಂಗ್ಲೆಂಡ್ ಪಂದ್ಯಾವಳಿಗಿಂತ ಮೊದಲು ಜೂನ್ 27 ಹಾಗೂ ಜೂನ್ 29ರಂದು ಐರ್ಲೆಂಡ್ ವಿರುದ್ಧ ಭಾರತ 2 ಟಿ-20 ಪಂದ್ಯಗಳನ್ನಾಡಲಿದೆ. ಇಂಗ್ಲೆಂಡ್ ತಲುಪಿರುವ ನಾಯಕ ವಿರಾಟ್ ಕೊಹ್ಲಿ, ರವಿ ಶಾಸ್ತ್ರಿ ಹಾಗೂ ತಂಡದ ಇತರ ಆಟಗಾರರು ಪ್ರಯಾಣದ ಸುಂದರ ಕ್ಷಣಗಳ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದ್ದಾರೆ.
ಅ. 2ರೊಳಗೆ ಉತ್ತರ ಕರ್ನಾಟಕದ ಜಿಲ್ಲೆಗಳು ಬಯಲು ಶೌಚ ಮುಕ್ತ

ಅ. 2ರೊಳಗೆ ಉತ್ತರ ಕರ್ನಾಟಕದ ಜಿಲ್ಲೆಗಳು ಬಯಲು ಶೌಚ ಮುಕ್ತ

ಅಕ್ಟೋಬರ್ 2, 2018ರೊಳಗೆ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳನ್ನು ಬಯಲು ಶೌಚ ಮುಕ್ತವಾಗಿ ಘೋಷಣೆ ಮಾಡಲಾಗುತ್ತದೆ. ಪ್ರತಿ ಮನೆಯಲ್ಲಿಯೂ ಶೌಚಾಲಯ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ. ನಿರ್ಮಲ ಭಾರತ ಅಭಿಯಾನದಡಿ ಲಭ್ಯವಿರುವ ಅನುದಾನ ಬಳಸಿಕೊಂಡು ಪ್ರತಿ ಮನೆಯಲ್ಲೂ ಶೌಚಾಲಯ ನಿರ್ಮಿಸಬೇಕು ಎಂದು ಜಿಲ್ಲಾಡಳಿತಕ್ಕೆ ಸೂಚನೆ ರವಾನಿಸಲಾಗಿದೆ. ಉತ್ತರ ಕರ್ನಾಟಕ ಭಾಗದ ಹಲವು ಜಿಲ್ಲೆಗಳು ಅನುದಾನವನ್ನು ಬಳಸಿಕೊಂಡಿಲ್ಲ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೃಷ್ಣ ಬೈರೇಗೌಡ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more