Short News

ಭಾರಿ ಮೊತ್ತಕ್ಕೆ 'ಅಯೋಗ್ಯ' ಸಿನಿಮಾ ಡಬ್ಬಿಂಗ್ ಹಕ್ಕು ಮಾರಾಟ

ಭಾರಿ ಮೊತ್ತಕ್ಕೆ 'ಅಯೋಗ್ಯ' ಸಿನಿಮಾ ಡಬ್ಬಿಂಗ್ ಹಕ್ಕು ಮಾರಾಟ

ಹಾಡುಗಳ ಮೂಲಕವೇ ಗಾಂಧಿನಗರದಲ್ಲಿ ಭಾರಿ ಸದ್ದು ಮಾಡುತ್ತಿರುವ ಸಿನಿಮಾ 'ಅಯೋಗ್ಯ'. ಬಿಡುಗಡೆ ಆದ ಪ್ರತಿ ಹಾಡುಗಳು ಸೂಪರ್ ಹಿಟ್ ಲೀಸ್ಟ್ ಸೇರಿಕೊಂಡಿದ್ದು ಸಿನಿಮಾ ಪ್ರೇಕ್ಷಕರಿಂದ ಚಿತ್ರದ ಬಗ್ಗೆ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಸತೀಶ್ ನೀನಾಸಂ ಅಭಿನಯದ 'ಅಯೋಗ್ಯ' ಚಿತ್ರದ ಡಬ್ಬಿಂಗ್ ರೈಟ್ಸ್ ಭಾರಿ ಮೊತ್ತಕ್ಕೆ ಮಾರಾಟವಾಗಿದೆ. ಹೌದು ಬಾಲಿವುಡ್ ಅಂಗಳಕ್ಕೆ 'ಅಯೋಗ್ಯ' ಕಾಲಿಡುತ್ತಿದ್ದಾನೆ. ಸಿನಿಮಾ ಬಿಡುಗಡೆ ಮುಂಚಿತವಾಗಿದೆ ಪ್ರೇಮ್ ವ್ಯಾಸ್ ಎನ್ನುವವರು ಹಿಂದಿ ಡಬ್ಬಿಂಗ್ ರೈಟ್ಸ್ ಅನ್ನು 81 ಲಕ್ಷಕ್ಕೆ ಖರೀದಿ ಮಾಡಿದ್ದಾರೆ.
ವಾಜಪೇಯಿಯವರ ಅಂತಿಮ ದರ್ಶನಕ್ಕೆ  ತೆರಳುತ್ತಿದ್ದ ಸ್ವಾಮಿ ಅಗ್ನಿವೇಶ್ ಮೇಲೆ ಹಲ್ಲೆ

ವಾಜಪೇಯಿಯವರ ಅಂತಿಮ ದರ್ಶನಕ್ಕೆ ತೆರಳುತ್ತಿದ್ದ ಸ್ವಾಮಿ ಅಗ್ನಿವೇಶ್ ಮೇಲೆ ಹಲ್ಲೆ

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರಿಗೆ ಅಂತಿಮ ನಮನ ಸಲ್ಲಿಸಲು ತೆರಳುತ್ತಿದ್ದ ವೇಳೆ ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ರ ಮೇಲೆ ದುಷ್ಕರ್ಮಿಗಳ ತಂಡವೊಂದು ದಾಳಿ ನಡೆಸಿರುವ ಘಟನೆ ಶುಕ್ರವಾರ ನಡೆದಿದೆ. 79 ವರ್ಷದ ಅಗ್ನಿವೇಶ್ ಮೇಲೆ ಈ ತಿಂಗಳಲ್ಲಿ ನಡೆಯುತ್ತಿರುವ ಎರಡನೆ ದಾಳಿ ಇದಾಗಿದೆ. "ವಾಜಪೇಯಿಯವರಿಗೆ ಅಂತಿಮ ನಮನ ಸಲ್ಲಿಸಲು ನಾನು ಹೋಗುತ್ತಿದ್ದೆ. ನಡೆದುಕೊಂಡು ಹೋಗುತ್ತಿದ್ದ ವೇಳೆ ಗುಂಪೊಂದು ನನ್ನ ಮೇಲೆ ದಾಳಿ ನಡೆಸಿತು. ನನ್ನ ಮೇಲೆ ದಾಳಿ ನಡೆಸಿ, ದೂಡಿ ಹಾಕಿದರು" ಎಂದು ಅಗ್ನಿವೇಶ್ ಹೇಳಿಕೊಂಡಿದ್ದಾರೆ.
ಭಾರೀ ಮಳೆಯಿಂದ ಗುಡ್ಡ ಕುಸಿತ, ರೈಲ್ವೆ ನಿಲ್ದಾಣದಿಂದ ಹೊರ ಬರಲಾಗದೆ ಅಪಾಯದಲ್ಲಿ ಸಿಲುಕಿರುವ 16 ಸಿಬ್ಬಂದಿ

ಭಾರೀ ಮಳೆಯಿಂದ ಗುಡ್ಡ ಕುಸಿತ, ರೈಲ್ವೆ ನಿಲ್ದಾಣದಿಂದ ಹೊರ ಬರಲಾಗದೆ ಅಪಾಯದಲ್ಲಿ ಸಿಲುಕಿರುವ 16 ಸಿಬ್ಬಂದಿ

ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಎಡಕುಮೇರಿ ಬಳಿ ನಿರಂತರ ಮಳೆಯಿಂದ ಗುಡ್ಡಗಳು ಕುಸಿಯುತ್ತಿವೆ. ಇದೇ ವೇಳೆ ಅಲ್ಲಿಯ 16 ಜನ ರೈಲ್ವೇ ಸಿಬ್ಬಂದಿ ರೈಲ್ವೇ ನಿಲ್ದಾಣದಿಂದ ಹೊರ ಬರಲಾಗದೆ ಅಪಾಯದಲ್ಲಿದ್ದಾರೆ. ಹೆಲಿಕಾಪ್ಟರ್ ಕಾರ್ಯಾಚರಣೆ ದುಸ್ತರ ಹಿನ್ನೆಲೆ ಅಪಾಯದಲ್ಲಿ ಸಿಲುಕಿರುವ ರೈಲ್ವೇ ಸಿಬ್ಬಂದಿ ರಕ್ಷಿಸಲು ಸಕಲೇಶಪುರ ಎ ಸಿ ನೇತೃತ್ವದ ತಂಡದಿಂದ ಕಾರ್ಯಾಚರಣೆ ಆರಂಭವಾಗಿದೆ. ಆದರೆ ಭಾರೀ ಮಳೆಯಾಗುತ್ತಿರುವುದರಿಂದ ಹೆಲಿಕಾಪ್ಟರ್ ಬಳಕೆ ಅಸಾಧ್ಯವಾಗಿದ್ದು, ಪಶ್ಚಿಮ ಘಟ್ಟದ ಟ್ರೆಕ್ಕಿಂಗ್ ಮಾರ್ಗದ ಮೂಲಕ ಕರೆತರಲು ಕಾರ್ಯಾಚರಣೆ ನಡೆಸಲಾಗುತ್ತಿದೆ.
ದೇಶದ ಮೊದಲ ಟೆಸ್ಲಾ ಐಷಾರಾಮಿ ಮಾಡೆಲ್ ಎಕ್ಸ್ 100ಡಿ ಕಾರು ಒಡೆಯನಾದ ಮುಂಬೈ ಉದ್ಯಮಿ..!

ದೇಶದ ಮೊದಲ ಟೆಸ್ಲಾ ಐಷಾರಾಮಿ ಮಾಡೆಲ್ ಎಕ್ಸ್ 100ಡಿ ಕಾರು ಒಡೆಯನಾದ ಮುಂಬೈ ಉದ್ಯಮಿ..!

ಯುಎಸ್ಎ ಮಾರುಕಟ್ಟೆಗಳಲ್ಲಿ ಟೆಸ್ಲಾ ಕಾರುಗಳ ಹೊಸ ಯುಗ ಆರಂಭವಾಗಿದ್ದು,ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಸಂಸ್ಥೆಯು ಹೊಸ ಆಯಾಮ ನೀಡಿದೆ. ಸದ್ಯ ಅಮೆರಿಕ ಮಾರುಕಟ್ಟೆಗಳಲ್ಲಿ ಮಾತ್ರವೇ ಖರೀದಿ ಲಭ್ಯವಿರುವ ಟೆಸ್ಲಾ ಕಾರುಗಳು ಐಷಾರಾಮಿ ಮತ್ತು ಅಧಿಕ ಮೈಲೇಜ್ ವಿಚಾರವಾಗಿ ಗ್ರಾಹಕರ ಆಕರ್ಷಣೆ ಕಾರಣವಾಗಿದ್ದು, ಮುಂಬೈ ಮೂಲದ ಉದ್ಯಮಿ ಪ್ರಶಾಂತ್ ರೂಯಿಯಾ ಎಂಬುವರು ಟೆಸ್ಲಾ ಸಂಸ್ಥೆಯ ಮಾಡೆಲ್ ಎಕ್ಸ್ 100ಡಿ ಕ್ರಾಸ್ ಓವರ್ ಎಸ್‌ಯುವಿ ಕಾರುನ್ನ ಖರೀದಿ ಮಾಡಿದ್ದಾರೆ. ಉದ್ಯಮಿ ಪ್ರಶಾಂತ್ ರೂಯಿಯಾ ಅವರು ಹೊಸದಾಗಿ ಖರೀದಿಸಿರುವ ಮಾಡೆಲ್ ಎಕ್ಸ್ 100ಡಿ ಕಾರುಗಳು ಭಾರತೀಯ ಬೆಲೆಗಳಲ್ಲಿ ರೂ.70 ಲಕ್ಷ ಬೆಲೆ ಹೊಂದಿವೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more