Short News

ಬಕಾಸುರ ನಟರನ್ನು ಪರಿಚಯಿಸಲು ಬಂದ್ರು ಹ್ಯಾಟ್ರಿಕ್ ಹೀರೋ

ಬಕಾಸುರ ನಟರನ್ನು ಪರಿಚಯಿಸಲು ಬಂದ್ರು ಹ್ಯಾಟ್ರಿಕ್ ಹೀರೋ

ಇದೇ ತಿಂಗಳು ಬಿಡುಗಡೆ ಆಗುತ್ತಿರುವ ಬಕಾಸುರ ಸಿನಿಮಾದ ಎರಡನೇ ಟ್ರೇಲರ್ ಬಿಡುಗಡೆ ಆಗಿದೆ. ಶಿವಣ್ಣ ಟ್ರೇಲರ್ ನಲ್ಲಿ ಚಿತ್ರದ ಮುಖ್ಯಪಾತ್ರಗಳನ್ನ ಪರಿಚಯಿಸಿದ್ದಾರೆ. ಈ ಮೂಲಕ ಬಕಾಸುರ ಸಿನಿಮಾ ಟ್ರೇಲರ್ ಸಖತ್ ಸುದ್ದಿ ಮಾಡುತ್ತಿದೆ. ಬಕಾಸುರ ಕ್ರೇಜಿ ಸ್ಟಾರ್ ರವಿಚಂದ್ರನ್ ಹಾಗೂ ಆರ್ ಜೆ ರೋಹಿತ್ ಮುಖ್ಯಭೂಮಿಕೆಯಲ್ಲಿರುವ ಸಿನಿಮಾ. ಕಾವ್ಯ ಗೌಡ ಮತ್ತು ಸಿತಾರ ಚಿತ್ರದಲ್ಲಿ ನಾಯಕಿಯರಾಗಿ ಅಭಿನಯಿಸಿದ್ದಾರೆ. ನವನೀತ್ ಚಿತ್ರವನ್ನ ನಿರ್ದೇಶನ ಮಾಡಿದ್ದು ನಟ ರೋಹಿತ್ ಅವರೇ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.
ಡಕ್ವರ್ತ್ ಲೂಯಿಸ್ ನಿಯಮವನ್ನು ಪ್ರಶ್ನಿಸಿದ ದಿನೇಶ್ ಕಾರ್ತಿಕ್, ವಿಜೆಡಿ ಪದ್ಧತಿ ಅಳವಡಿಸಲು ಸಲಹೆ

ಡಕ್ವರ್ತ್ ಲೂಯಿಸ್ ನಿಯಮವನ್ನು ಪ್ರಶ್ನಿಸಿದ ದಿನೇಶ್ ಕಾರ್ತಿಕ್, ವಿಜೆಡಿ ಪದ್ಧತಿ ಅಳವಡಿಸಲು ಸಲಹೆ

ಐಪಿಎಲ್ ನಲ್ಲಿ ಕೋಲ್ಕತ್ತಾ ಟೀಂ ನ ನಾಯಕರಾಗಿರುವ ದಿನೇಶ್ ಕಾರ್ತಿಕ್ ಡಕ್ವರ್ತ್ ಲೂಯಿಸ್ ನಿಯಮವನ್ನು ಪ್ರಶ್ನಿಸಿದ್ದಾರೆ. ನಿನ್ನೆ ಕೋಲ್ಕತ್ತಾ ಮತ್ತು ಪಂಜಾಬ್ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಯಾಗಿತ್ತು. ಹೀಗಾಗಿ ಡಕ್ವರ್ತ್ ಲೂಯಿಸ್ ನಿಯಮದನ್ವಯ ಕೋಲ್ಕತ್ತಾ 9 ವಿಕೆಟ್ ಗಳಿಂದ ಸೋತಿತ್ತು. ಇದಕ್ಕೆ ದಿನೇಶ್ ಕಾರ್ತಿಕ್ ಡಕ್ವರ್ತ್ ಲೂಯಿಸ್ ನಿಯಮ ಗೊಂದಲಕಾರಿ ಎನಿಸಿದೆ. ಇದರ ಬದಲು ಭಾರತೀಯರೇ ಕಂಡು ಹಿಡಿದಿರುವ ಸುಲಭ ಹಾಗೂ ನ್ಯಾಯ ಸಮ್ಮತವಾಗಿರುವ ಜಯದೇವನ್(ವಿಜೆಡಿ) ಪದ್ಧತಿಯನ್ನೇಕೆ ಅಳವಡಿಸಬಾರದು ಎಂದಿದ್ದಾರೆ. ಈ ನಿಯಮ ಯಾವ ಆಧಾರದಿಂದ ಕೂಡಿದೆ ಎನ್ನುವುದೇ ಅರ್ಥವಾಗುವುದಿಲ್ಲ ಎಂದುಕಾರ್ತಿಕ್ ಹೇಳಿದ್ದಾರೆ.
12ವರ್ಷದೊಳಗಿನ ಮಕ್ಕಳ ಅತ್ಯಾಚಾರಿಗೆ ಗಲ್ಲು: ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಒಪ್ಪಿಗೆ

12ವರ್ಷದೊಳಗಿನ ಮಕ್ಕಳ ಅತ್ಯಾಚಾರಿಗೆ ಗಲ್ಲು: ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಒಪ್ಪಿಗೆ

ಕಾಶ್ಮೀರದ ಕತುವಾ,ಉತ್ತರಪ್ರದೇಶದ ಉನ್ನಾವೋ,ಸೂರತ್ ಅತ್ಯಾಚಾರ ಪ್ರಕರಣಗಳು ದೇಶದಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾದ ಬೆನ್ನಲ್ಲೇ 12ವರ್ಷದೊಳಗಿನ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರವೆಸಗವವರಿಗೆ ಗಲ್ಲು ಶಿಕ್ಷೆ ವಿಧಿಸುವ ಕೇಂದ್ರದ ನಿರ್ಧಾರಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಭಾನುವಾರ ಒಪ್ಪಿಗೆ ಸೂಚಿಸಿದ್ದಾರೆ. ಶನಿವಾರ ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅತ್ಯಾಚಾರಿಗಳ ಕುರಿತು ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಕೇಂದ್ರ ಕೈಗೊಂಡಿದ್ದ ಈ ಅಧ್ಯಾದೇಶವನ್ನು ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಿದ್ದರು. ಇದೀಗ ಈ ಆದೇಶಕ್ಕೆ ರಾಷ್ಟ್ರಪತಿಗಳು ಒಪ್ಪಿಗೆ ನೀಡಿದ್ದಾರೆ.
ಈಜು ಬೇಸಿಗೆ ಶಿಬಿರ, ಆಸಕ್ತರು ಈಗಲೇ ಸಂಪರ್ಕಿಸಿ

ಈಜು ಬೇಸಿಗೆ ಶಿಬಿರ, ಆಸಕ್ತರು ಈಗಲೇ ಸಂಪರ್ಕಿಸಿ

ಬೆಂಗಳೂರಿನ ಬಸವನಗುಡಿ ಈಜು ಕೇಂದ್ರ (ಬಿಎಸಿ), ಮೇ 1ರಿಂದ 28 ರವರೆಗೆ ಬೇಸಿಗೆ ಈಜು ತರಬೇತಿ ಶಿಬಿರ ಹಮ್ಮಿಕೊಂಡಿದೆ. ಮಹಿಳೆಯರು, ಪುರುಷರು ಮತ್ತು ಮಕ್ಕಳು ಈ ಶಿಬಿರದಲ್ಲಿ ಪಾಲ್ಗೊಳ್ಳಬಹುದಾಗಿದ್ದು, ಆಸಕ್ತರು ಪಂಪ ಮಹಾಕವಿ ರಸ್ತೆಯಲ್ಲಿರುವ ಬಿಎಸಿ ಕಚೇರಿಯಲ್ಲಿ ಮುಂಚಿತವಾಗಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಆಯೋಜಕರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 98444 62077 ಈ ನಂಬರ್ ಗೆ ಸಂಪರ್ಕಿಸಬಹುದು.