Short News

'ಯು ಟರ್ನ್' ತಂಡ ಸೇರಿಕೊಂಡ ಭೂಮಿಕಾ ಚಾವ್ಲಾ

'ಯು ಟರ್ನ್' ತಂಡ ಸೇರಿಕೊಂಡ ಭೂಮಿಕಾ ಚಾವ್ಲಾ

'ಯು-ಟರ್ನ್' ಚಿತ್ರ ಕನ್ನಡದಲ್ಲಿ ಬೇರೆಯದ್ದೇ ರೀತಿಯ ಫೀಲ್ ಕೊಟ್ಟಂತ ಸಿನಿಮಾ. ಈ ಚಿತ್ರವನ್ನು ನಿರ್ದೇಶಕ ಪವನ್ ಕುಮಾರ್ ಕಾಲಿವುಡ್ ಮತ್ತು ಟಾಲಿವುಡ್ ನಲ್ಲಿಯೂ ನಿರ್ದೇಶನ ಮಾಡುತ್ತಿದ್ದು, ಎರಡನೇ ಶೆಡ್ಯೂಲ್ಸ್ ನ ಚಿತ್ರೀಕರಣ ಆರಂಭ ಮಾಡಿದ್ದಾರೆ. ಕನ್ನಡದಲ್ಲಿ ಶ್ರದ್ಧಾ ಶ್ರೀನಾಥ್ ಮಾಡಿದ್ದ ಪಾತ್ರವನ್ನು ರಿಮೇಕ್​ನಲ್ಲಿ ಸಮಂತಾ ಅಕ್ಕಿನೇನಿ ನಿರ್ವಹಿಸುತ್ತಿದ್ದಾರೆ. ಆದರೆ ರಾಧಿಕಾ ಚೇತನ್ ಮಾಡಿದ್ದ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಬಹುದು ಎನ್ನುವ ವಿಚಾರಕ್ಕೆ ಪ್ರಶ್ನೆ ಶುರುವಾಗಿತ್ತು. ಅದಕ್ಕೆ ಈಗ ಉತ್ತರ ಸಿಕ್ಕಿದೆ. ಬಹುಬಾಷ ನಟಿ ಭೂಮಿಕಾ ಚಾವ್ಲಾ ಈ ಪಾತ್ರದಲ್ಲಿ ಇರಲಿದ್ದಾರೆ.
ಮೊಬೈಲ್‌ ಸಂಖ್ಯೆಗೆ ಆಧಾರ್‌ ನಂಬರ್‌ ಜೋಡಣೆ, ಛೀಮಾರಿ ಹಾಕಿದ ಸುಪ್ರೀಂ

ಮೊಬೈಲ್‌ ಸಂಖ್ಯೆಗೆ ಆಧಾರ್‌ ನಂಬರ್‌ ಜೋಡಣೆ, ಛೀಮಾರಿ ಹಾಕಿದ ಸುಪ್ರೀಂ

ಗ್ರಾಹಕರ ಮೊಬೈಲ್‌ ಸಂಖ್ಯೆಗೆ ಆಧಾರ್‌ ನಂಬರ್‌ ಅನ್ನು ಕಡ್ಡಾಯವಾಗಿ ಬೆಸೆಯುವ ಕೇಂದ್ರ ಸರಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ ಪ್ರಶ್ನೆ ಮಾಡಿದೆ. ಮೊಬೈಲ್‌ಗೆ ಆಧಾರ್‌ ಬೆಸೆಯುವ ವಿಚಾರದಲ್ಲಿ ಸುಪ್ರೀಂನಿಂದ ಯಾವುದೇ ನಿರ್ದೇಶನ ಹೊರಬಿದ್ದಿಲ್ಲ. ಆದಾಗ್ಯೂ ಏಕೆ ಇದಕ್ಕೆ ಮುಂದಾಗುತ್ತಿದ್ದೀರಿ ಎಂದು ಕೇಳಿದೆ. ಆಧಾರ್‌ ಸಂಖ್ಯೆಯ ದೃಢೀಕರಣವನ್ನು ಎಲ್ಲ ರೀತಿಯಲ್ಲಿ ಅಸ್ತ್ರದಂತೆ ಬಳಸಿಕೊಳ್ಳಲಾಗುತ್ತಿದೆ ಎಂದು ಸುಪ್ರೀಂ ಕಿಡಿಕಾರಿದ್ದು, ಮೊಬೈಲ್‌ಗೆ ಆಧಾರ್‌ ಬೆಸೆಯುವ ವಿಚಾರದಲ್ಲಿ ಸುಪ್ರೀಂನಿಂದ ಯಾವುದೇ ನಿರ್ದೇಶನ ಹೊರಬಿದ್ದಿಲ್ಲ ಎಂದು ಸ್ಪಷ್ಟಪಡಿಸಿದೆ.
ಬೇಸಿಗೆಯಲ್ಲಿ ತರಕಾರಿ ಬೆಲೆ ಸ್ಥಿರ: ಗ್ರಾಹಕರಿಗಿಲ್ಲ ಬೆಲೆ ಬಿಸಿ

ಬೇಸಿಗೆಯಲ್ಲಿ ತರಕಾರಿ ಬೆಲೆ ಸ್ಥಿರ: ಗ್ರಾಹಕರಿಗಿಲ್ಲ ಬೆಲೆ ಬಿಸಿ

ಈ ಬಾರಿ ಬೇಸಿಗೆಯಲ್ಲೂ ಗ್ರಾಹಕರಿಗೆ ತರಕಾರಿ ಬೆಲೆ ಏರಿಕೆಯ ಬಿಸಿ ತಟ್ಟುವುದಿಲ್ಲ. ಈ ಬಾರಿ ಉತ್ತಮ ಮಳೆಯಿಂದಾಗಿ ತರಕಾರಿ ಬೆಳೆ ಸಮೃದ್ಧವಾಗಿದೆ ಹಾಗಾಗಿ ಗ್ರಾಹಕರಿಗೆ ತೊಂದರೆಯಿಲ್ಲ. ಬೇಸಿಗೆಯಲ್ಲಿ ನೀರಿನ ಅಭಾವದಿಂದ ಸಾಮಾನ್ಯವಾಗಿ ತರಕಾರಿಗಳ ದರ ಏರಿಕೆಯಾಗುತ್ತದೆ. ಆದರೆ ಈ ಬೇಸಿಗೆಯಲ್ಲಿ ಆಗಾಗ ಜೋರು ಮಳೆ ಬೀಳುತ್ತಿರುವುದರಿಂದ ಈ ಬಾರಿಯ ಬೇಸಿಗೆಯಲ್ಲಿ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿಯಿಲ್ಲ. ಬೀನ್ಸ್,ಸೊಪ್ಪು ಸೇರಿದಂತೆ ಕೆಲವು ತರಕಾರಿಗಳ ದರದಲ್ಲಿ ಏರಿಕೆಯಾಗಿರುವುದು ಬಿಟ್ಟರೆ ಉಳಿದಂತೆ ಹಲವು ತರಕಾರಿಗಳು ಸಹಜ ದರದಲ್ಲೇ ಇದೆ.
ಹೃದಯದ ಕಾಯಿಲೆ ದೂರವಿಡಲು, ಇಂತಹ ಆಹಾರಗಳನ್ನು ಸೇವಿಸಿ...

ಹೃದಯದ ಕಾಯಿಲೆ ದೂರವಿಡಲು, ಇಂತಹ ಆಹಾರಗಳನ್ನು ಸೇವಿಸಿ...

ಇಂದಿನ ದಿನಗಳಲ್ಲಿ ಹದಿನಂಟರಿಂದ ಇಪ್ಪತ್ತನಾಲ್ಕು ವಯಸ್ಸಿನ ಯುವಕರ ಪೈಕಿ ಅರ್ಧದಷ್ಟು ಯುವಕರಲ್ಲಿ ಕನಿಷ್ಟ ಒಂದಾದರೂ ಹೃದಯಸಂಬಂಧಿ ತೊಂದರೆ ಇದ್ದೇ ಇರುತ್ತದೆ. ಉದಾಹರಣೆಗೆ ಅಧಿಕ ರಕ್ತದೊತ್ತಡ, ಮಾನಸಿಕ ಒತ್ತಡ ಅಥವಾ ಅನಾರೋಗ್ಯಕರ ಆಹಾರ ಸೇವನೆ. ಇಪ್ಪತ್ತರ ಹರೆಯದಲ್ಲಿ ಹೃದಯದ ಒತ್ತಡ ಸಾಮಾನ್ಯಕ್ಕಿಂತ ಕೊಂಚವೇ ಹೆಚ್ಚಿದ್ದರೂ ಮುಂದಿನ ವರ್ಷಗಳಲ್ಲಿ ಹೃದಯನಾಳಗಳು ಒಳಗಿನಿಂದ ಕಟ್ಟಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.ಆದ್ದರಿಂದ ಚಿಕ್ಕವಯಸ್ಸಿನಲ್ಲಿಯೇ ಉತ್ತಮ ಆಹಾರ ಅಭ್ಯಾಸಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಹೃದಯದ ಮೇಲೆ ಒತ್ತಡವನ್ನು ಹೇರದೇ ಉತ್ತಮ ಆರೋಗ್ಯ ಹಾಗೂ ದೀರ್ಘಾಯಸ್ಸನ್ನು ಪಡೆಯಬಹುದು.