Short News

ಶೀಘ್ರದಲ್ಲಿ ಬಿಗ್ ಬಾಸ್ ನ ಮತ್ತೊಂದು ಸೀಸನ್ ಆರಂಭ , ನೀವೂ ಭಾಗವಹಿಸಬಹುದು

ಶೀಘ್ರದಲ್ಲಿ ಬಿಗ್ ಬಾಸ್ ನ ಮತ್ತೊಂದು ಸೀಸನ್ ಆರಂಭ , ನೀವೂ ಭಾಗವಹಿಸಬಹುದು

ಹಿಂದಿಯ ಬಿಗ್ ಬಾಸ್ ಆವೃತ್ತಿ 11 ಮುಗಿದು ಕೆಲವೇ ತಿಂಗಳಾಗಿದೆ. ಈಗ ಬಿಗ್ ಬಾಸ್ 12ನೇ ಆವೃತ್ತಿಗೆ ತಯಾರಿ ಆರಂಭವಾಗಿದೆ. ಕಲರ್ಸ್ ಚಾನೆಲ್ ಅಧಿಕೃತ ವೆಬ್ ಸೈಟ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಈ ಕಾರ್ಯಕ್ರಮದಲ್ಲಿ ಜನಸಾಮಾನ್ಯನಿಗೂ ಭಾಗವಹಿಸುವ ಅವಕಾಶವಿದೆ. ಬಿಗ್ ಬಾಸ್ 12 ಶೀಘ್ರದಲ್ಲಿಯೇ ಬರಲಿದೆ. ರಿಯಾಲಿಟಿ ಶೋ ಸಂಗಾತಿಗಳ ಹುಡುಕಾಟದಲ್ಲಿದೆ ಎಂದು ಕಲರ್ಸ್ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಿದೆ. ಈ ಬಾರಿ ಬಿಗ್ ಬಾಸ್ ಜೋಡಿಗಳ ಶೋ ಎನ್ನಲಾಗುತ್ತಿದೆ. ಈವರೆಗೆ ಶೋವನ್ನು ಬಾಲಿವುಡ್ ನಟ ಸಲ್ಮಾನ್ ಖಾನ್ ನಡೆಸಿಕೊಟ್ಟಿದ್ದಾರೆ. ಮುಂದಿನ ಸೀಜನ್ ನಿರೂಪಣೆ ಕೂಡ ಸಲ್ಮಾನ್ ಮಾಡಲಿದ್ದಾರೆ.
ಕಾಮುಕರಿಗೆ ಗಲ್ಲು: ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ

ಕಾಮುಕರಿಗೆ ಗಲ್ಲು: ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ

ಇಡಿ ದೇಶವೂ ತಲ್ಲಣಿಸುವಂತೆ ಮಾಡಿದ ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಮಹತ್ವದ ನಿರ್ಣಯವೊಂದನ್ನು ತೆಗೆದುಕೊಂಡಿದೆ.

12 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ನಡೆಯುವ ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾದ ವ್ಯಕ್ತಿಯನ್ನು ಗಲ್ಲಿಗೇರಿಸುವ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಅನುಮೋದನೆ ಸೂಚಿಸಿದೆ.

ಪೋಕ್ಸೋ(Protection of Children from Sexual Offences) ಕಾಯ್ದೆಯಲ್ಲಿ ತಿದ್ದುಪಡಿ ತರುವ ಮೂಲಕ ಈ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ.

ಅಚ್ಚರಿ ! ತೆಲಂಗಾಣದಲ್ಲಿ ಮೊಟ್ಟೆ ಇಟ್ಟಿದೆ ಹುಂಜ

ಅಚ್ಚರಿ ! ತೆಲಂಗಾಣದಲ್ಲಿ ಮೊಟ್ಟೆ ಇಟ್ಟಿದೆ ಹುಂಜ

ತೆಲಂಗಾಣ ರಾಜ್ಯದ ಖಮ್ಮಂ ಜಿಲ್ಲೆಯಲ್ಲಿ ಹುಂಜವೊಂದು ಮೊಟ್ಟೆ ಇಟ್ಟು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಶುಕ್ರವಾರ ಖಮ್ಮಂ ಜಿಲ್ಲೆಯ ರಘುನಾಥ್‌ಪಾಲೆಂ ತಾಲೂಕಿನ ವಿ.ವೆಂಕಟಾಯಪಾಲೆಂ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆಲಸ್ಯಂ ಶ್ರೀನಿವಾಸ್‌ ರಾವ್‌ರಿಗೆ ಸೇರಿದ ಈ ಹುಂಜ ಮೊಟ್ಟೆ ಇಟ್ಟಿದೆ. ಸಾಮಾನ್ಯವಾಗಿ ಕೋಳಿ (ಯಾಟೆ - ಹೆಣ್ಣು ಕೋಳಿ) ಮೊಟ್ಟೆ ಇಡುತ್ತದೆ. ಹುಂಜ ಗಂಡು ಕೋಳಿಯಾಗಿದ್ದು, ಇದು ಮೊಟ್ಟೆ ಇಟ್ಟಿರುವುದರಿಂದ ಗ್ರಾಮದ ಜನತೆಯ ಅಚ್ಚರಿಗೆ ಕಾರಣವಾಗಿದೆ. ಜೆನೆಟಿಕ್ ರೂಪಾಂತರಗಳಿಂದ ಈ ರೀತಿ ಆಗುತ್ತದೆ ಎಂದು ಪಶು ವೈದ್ಯರು ತಿಳಿಸಿದ್ದಾರೆ. ಈ ಕೋಳಿ ಇಟ್ಟ ಮೊಟ್ಟೆಯಲ್ಲಿ ಹಳದಿ ಭಾಗ ಇರುವುದಿಲ್ಲ ಎಂದು ಹೇಳಿದ್ದಾರೆ.
'IPL'ನಲ್ಲೂ ಕಮಾಲ್ ಮಾಡಿದ CCL ಸ್ಟಾರ್ ಕಮ್ ನಟ ಪ್ರದೀಪ್

'IPL'ನಲ್ಲೂ ಕಮಾಲ್ ಮಾಡಿದ CCL ಸ್ಟಾರ್ ಕಮ್ ನಟ ಪ್ರದೀಪ್

ಕನ್ನಡದ ಪ್ರತಿಭಾನ್ವಿತ ನಟ ಪ್ರದೀಪ್ ಅವರನ್ನ ಸಿನಿಮಾಗಳಿಗಿಂತ ಕ್ರಿಕೆಟ್ ಆಟದಲ್ಲೇ ಹೆಚ್ಚು ಇಷ್ಟ ಪಡುವ ಅಭಿಮಾನಿಗಳಿದ್ದಾರೆ. ಕರ್ನಾಟಕ ಬುಲ್ಡೋಜರ್ಸ್ ತಂಡದ ಪ್ರಮುಖ ಆಟಗಾರ ಎಂದೇ ಗುರುತಿಸಿಕೊಂಡಿರುವ ಪ್ರದೀಪ್ ಈಗ IPL ಅಖಾಡಕ್ಕೆ ಧುಮುಕಿದ್ದಾರೆ. ಹೌದು, ಐಪಿಎಲ್ ಕ್ರಿಕೆಟ್ ಪಂದ್ಯದ ಕಾಮೆಂಟರ್ ನಟ ಪ್ರದೀಪ್ ಕಾಣಿಸಿಕೊಂಡಿದ್ದಾರೆ. ಕನ್ನಡದ ಕಾಮೆಂಟರ್ ಆಗಿ ನಟ ಪ್ರದೀಪ್ ಗಮನ ಸೆಳೆದರು. ಕರ್ನಾಟಕದ ಹಿರಿಯ ಆಟಗಾರರಾದ ಗುಂಡಪ್ಪ ವಿಶ್ವನಾಥ್ ಮತ್ತು ವಿಜಯ ಭಾರಧ್ವಜ್ ಅವರ ಜೊತೆ ನಟ ಪ್ರದೀಪ್ ಕೂಡ ಕಾಮೆಂಟರ್ ಆಗಿ ಪಂದ್ಯವನ್ನ ವಿಶ್ಲೇಷಣೆ ಮಾಡಿದ್ದು ವಿಶೇಷವಾಗಿತ್ತು.