Short News

ಪಂಜಾಬಿ ಹಾಡಿಗೆ ಲೆಹೆಂಗಾ ಬದಲು ಜೀನ್ಸ್ ಧರಿಸಿ ಡ್ಯಾನ್ಸ್ ಮಾಡಿದ ವಧು !

ಪಂಜಾಬಿ ಹಾಡಿಗೆ ಲೆಹೆಂಗಾ ಬದಲು ಜೀನ್ಸ್ ಧರಿಸಿ ಡ್ಯಾನ್ಸ್ ಮಾಡಿದ ವಧು !

ಸಾಮಾಜಿಕ ಜಾಲತಾಣದಲ್ಲಿ ಯುವತಿಯೊಬ್ಬಳು ತನ್ನ ಮದುವೆಯಲ್ಲಿ ಲೆಹೆಂಗಾ ಬದಲು ಜೀನ್ಸ್ ಧರಿಸಿ ಡ್ಯಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಈ ವೀಡಿಯೋದಲ್ಲಿ ಯುವತಿ ವಧುವಿನಂತೆ ತಯಾರಾಗಿದ್ದು ಲೆಹೆಂಗಾದ ಬ್ಲೌಸ್ ಧರಿಸಿದ್ದಾಳೆ. ಆದರೆ ಲೆಹೆಂಗಾ ಬದಲು ಜೀನ್ಸ್ ಧರಿಸಿ ಪಂಜಾಬಿ ಹಾಡಿಗೆ ಕುಣಿದಿದ್ದು, ಈ ವಿಡಿಯೋ ಭಾರೀ ವೈರಲ್ ಆಗಿದೆ. ರಶಿಕಾ ನೃತ್ಯ ಮಾಡಿದ ವಧುವಾಗಿದ್ದು, ‘ಕಾದರ್' ಪಂಜಾಬಿ ಹಾಡಿಗೆ ಸಖತ್ ಹೆಜ್ಜೆ ಹಾಕಿದ್ದಾರೆ.
ಗ್ಯಾಲಕ್ಸಿ ಎಸ್ 9+ VS ಐಫೋನ್ 10 'ಡ್ರಾಪ್ ಟೆಸ್ಟ್'!!(ವಿಡಿಯೊ)
<iframe width="600" height="450" src="https://www.youtube.com/embed/p7LWUVtrnOA" frameborder="0" allow="autoplay; encrypted-media" allowfullscreen></iframe>

ಗ್ಯಾಲಕ್ಸಿ ಎಸ್ 9+ VS ಐಫೋನ್ 10 'ಡ್ರಾಪ್ ಟೆಸ್ಟ್'!!(ವಿಡಿಯೊ)

ಪ್ರಸಿದ್ದ ಯೂಟ್ಯೂಬ್ ಚಾನಲ್ ಫೋನ್ ಬಫ್ ಯಾವಾಗಲೂ ವಿಶೇಷವಾಗಿಯೇ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಮಾಹಿತಿ ನೀಡುವುದರಿಂದ ಈ ಬಾರಿಯೂ ಅಂತಹುದೇ ವಿಶೇಷತೆಯನ್ನು ನಾವು ಎದುರುನೋಡಿದ್ದೇವೆ. ಇತ್ತೀಚಿಗೆ ಬಿಡುಗಡೆಯಾಗಿರುವ ವಿಶ್ವದ ಟಾಪ್ ಎರಡು ಸ್ಮಾರ್ಟ್‌ಫೋನ್‌ಗಳ ನಡುವೆ ಪೋನ್‌ ಬಫ್ 'ಡ್ರಾಪ್ ಟೆಸ್ಟ್' ನಡೆಸಿ ಗಮನಸೆಳೆದಿದೆ.!!

ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 9 + ಮತ್ತು ಐಫೋನ್ 10 ನಂತಹ ದುಬಾರಿ ಸ್ಮಾರ್ಟ್‌ಫೋನ್‌ಗಳು ವಿವಿಧ ರೀತಿಯಲ್ಲಿ ಕೆಡವಿ ಯಾವ ಫೋನ್ ಅತ್ಯುತ್ತಮ ಗುಣಮಟ್ಟದ್ದಾಗಿದೆ ಎಂದು ಫೋನ್ ಬಫ್ ತನ್ನ ಅಂಕಗಳನ್ನು ನೀಡಿದೆ.!

ಕೋಬ್ರಾ ಕಿಸ್ಸರ್ ಖ್ಯಾತಿಯ ಹುಸೈನ್ ದುರಂತ ಅಂತ್ಯ

ಕೋಬ್ರಾ ಕಿಸ್ಸರ್ ಖ್ಯಾತಿಯ ಹುಸೈನ್ ದುರಂತ ಅಂತ್ಯ

ಕೋಬ್ರಾ ಕಿಸ್ಸರ್ ಎಂದೇ ಖ್ಯಾತಿ ಪಡೆದಿದ್ದ ಮಲೇಷ್ಯಾದ ಅಬು ಝರೀನ್ ಹುಸೈನ್ (33ವರ್ಷ) ವಿಷಪೂರಿತ ಹಾವು ಕಡಿದು ದುರಂತ ಸಾವನ್ನಪ್ಪಿರುವ ಘಟನೆ ನಡೆದಿದೆ. ಹಾವುಗಳೊಂದಿಗೆ ತೀವ್ರ ಒಡನಾಟ ಇಟ್ಟುಕೊಂಡಿದ್ದ ಹುಸೈನ್, ಹಾವುಗಳನ್ನು ಪಳಗಿಸೋದರಲ್ಲಿ ನಿಸ್ಸೀಮನಾಗಿದ್ದ. ಮಲೇಷ್ಯಾದ ಸ್ಥಳೀಯ ಅಗ್ನಿಶಾಮಕ ದಳದಲ್ಲಿ ಕಿಂಗ್ ಕೋಬ್ರಾ ಸ್ಕ್ವಾಡ್ ನ ಮುಖ್ಯಸ್ಥರಾಗಿ ಹುಸೈನ್ ಕಾರ್ಯನಿರ್ವಹಿಸುತ್ತಿದ್ದ. ವಿಪರ್ಯಾಸವೆಂದರೆ ಬೆನ್ ಟೋಂಗ್ ನಲ್ಲಿ ಹಾವು ಹಿಡಿಯುವ ಕಾರ್ಯಾಚರಣೆ ವೇಳೆಯೇ ವಿಷಪೂರಿತ ಹಾವೊಂದು ಹುಸೈನ್ ಗೆ ಕಚ್ಚಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ.
"ರಾಮ ಜನ್ಮ ಭೂಮಿಯಲ್ಲಿ ಮಸೀದಿಯೇ ಇರಲಿಲ್ಲ" : ಶಂಕರಾಚಾರ್ಯ

"ರಾಮ ಜನ್ಮ ಭೂಮಿಯಲ್ಲಿ ಮಸೀದಿಯೇ ಇರಲಿಲ್ಲ" : ಶಂಕರಾಚಾರ್ಯ

ದ್ವಾರಕ ಪೀಠ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರು ಅಯೋಧ್ಯೆಯಲ್ಲಿ ಮಸೀದಿಯೇ ಇರಲಿಲ್ಲ. ಅಯೋಧ್ಯೆ ರಾಮನ ಜನ್ಮಸ್ಥಳ ಹಾಗೂ 1992 ರಲ್ಲಿ ಬಲಪಂಥೀಯ ಕಾರ್ಯಕರ್ತರು ಕೆಡವಿದ್ದ ಕಟ್ಟಡವೇ ಆ ದೇವಾಲಯ ಎಂದು ಹೇಳಿಕೆ ನೀಡಿದ್ದಾರೆ. ರಾಮನ ಜನ್ಮಸ್ಥಳ ಅಯೋಧ್ಯೆಯಲ್ಲಿ ಮಸೀದಿ ಅಸ್ತಿತ್ವದಲ್ಲಿಯೇ ಇರಲಿಲ್ಲ. ಕರ ಸೇವಕರು ದೇಗುಲವನ್ನು ಕೆಡವಿದ್ದರೇ ಹೊರತು, ಮಸೀದಿಯನ್ನಲ್ಲ ಎಂದಿದ್ದಾರೆ. ವಿವಾದಿತ ಸ್ಥಳದಲ್ಲಿ ರಾಮನ  ಮಂದಿರ ನಿರ್ಮಿಸಿದಂತೆ ಕೋರ್ಟ್ ನೀಡಿರುವ ತಡೆಯಾಜ್ಞೆಯನ್ನು ಹಿಂದಕ್ಕೆ ಪಡೆದುಕೊಂಡ ಬಳಿಕ ರಾಮ ಮಂದಿರ ಮರು ನಿರ್ಮಾಣ ಮಾಡಲಾಗುತ್ತದೆ ಎಂದಿದ್ದಾರೆ.