Short News

'ಕುರುಕ್ಷೇತ್ರ' ಚಿತ್ರದ ಮೇಕಿಂಗ್ ರಿಲೀಸ್

'ಕುರುಕ್ಷೇತ್ರ' ಚಿತ್ರದ ಮೇಕಿಂಗ್ ರಿಲೀಸ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸುತ್ತಿರುವ 50ನೇ ಸಿನಿಮಾ 'ಕುರುಕ್ಷೇತ್ರ' ಆಡಿಯೋ ಬಿಡುಗಡೆಗೆ ವೇದಿಕೆ ಸಜ್ಜಾಗುತ್ತಿದೆ. ಹೀಗಿರುವಾಗ, ಕುರುಕ್ಷೇತ್ರದ ಮೇಕಿಂಗ್ ವಿಡಿಯೋ ರಿಲೀಸ್ ಆಗಿದೆ. ಹೈದ್ರಾಬಾದ್ ನ ರಾಮೋಜಿ ಫಿಲ್ಮಿ ಸಿಟಿಯಲ್ಲಿ ಇಡೀ ಸಿನಿಮಾ ಚಿತ್ರೀಕರಣ ಮಾಡಿದ್ದು, ಶೂಟಿಂಗ್ ಅನುಭವ ಹೇಗಿತ್ತು, ಕಲಾವಿದರು ಸೆಟ್ ನಲ್ಲಿ ಹೇಗಿದ್ದರು, ಮೇಕಪ್ ಗೆ ಎಷ್ಟು ಸಮಯ ಬೇಕಾಗುತ್ತಿತ್ತು ಎಂಬ ತುಣುಕುಗಳನ್ನ ಈಗ ಚಿತ್ರತಂಡ ಎಕ್ಸ್ ಕ್ಲೂಸಿವ್ ಆಗಿ ಬಿಡುಗಡೆ ಮಾಡಿದೆ. ದರ್ಶನ್, ಅಂಬರೀಷ್, ಅರ್ಜುನ್ ಸರ್ಜಾ, ರವಿಚಂದ್ರನ್ ಸೇರಿದಂತೆ ಇತರೆ ಕಲಾವಿದರ ಮೇಕಿಂಗ್ ಹೇಗಿತ್ತು ಎಂಬುದು ವಿಡಿಯೋದಲ್ಲಿದೆ.
ಯಡಿಯೂರಪ್ಪ ಪುತ್ರನಿಗೆ ಶಾಕ್, ವರುಣಾದಿಂದ ಸ್ಪರ್ಧೆ ಇಲ್ಲ!

ಯಡಿಯೂರಪ್ಪ ಪುತ್ರನಿಗೆ ಶಾಕ್, ವರುಣಾದಿಂದ ಸ್ಪರ್ಧೆ ಇಲ್ಲ!

ಮೈಸೂರಿನ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರರ ವಿರುದ್ದ ಕಣಕ್ಕಿಳಿಯಲು ಮುಂದಾಗಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ಬಿ.ವೈ.ವಿಜಯೇಂದ್ರರಿಗೆ ಬಿಜೆಪಿ ವರಿಷ್ಟರು ಕೊನೆ ಗಳಿಗೆಯಲ್ಲಿ ಶಾಕ್ ಕೊಟ್ಟಿದ್ದಾರೆ. ನಂಜನಗೂಡಿನ ಸಮಾವೇಶದಲ್ಲಿ ಯಡಿಯೂರಪ್ಪ ಅವರೇ ಏಕಾಏಕಿ ವರುಣಾ ಕ್ಷೇತ್ರದಿಂದ ನನ್ನ ಪುತ್ರ ವಿಜಯೇಂದ್ರ ಕಣಕ್ಕಿಳಿಯುವುದಿಲ್ಲ. ಆತನ ಬದಲು ಸಾಮಾನ್ಯ ಕಾರ್ಯಕರ್ತನೊಬ್ಬನನ್ನು ಕಣಕ್ಕಿಳಿಸುವುದಾಗಿ ಘೋಷಿಸಿದ್ದಾರೆ. ಆದರೆ ಈ ಹೇಳಿಕೆ ಬೆನ್ನಲ್ಲೇ ಗೊಂದಲಕ್ಕೊಳಗಾದ ಕಾರ್ಯಕರ್ತರು ವಿಜಯೇಂದ್ರರೇ ವರುಣಾ ಕ್ಷೇತ್ರದ ಅಭ್ಯರ್ಥಿಯಾಗಬೇಕೆಂದು ಪಟ್ಟು ಹಿಡಿದಿದ್ದಾರೆ.
ನಗದು ಕೊರತೆ :  3 ಲಕ್ಷ ಕೋಟಿಗೂ ಅಧಿಕ ಹಣದ ಚಲಾವಣೆ ಸ್ಥಗಿತ!

ನಗದು ಕೊರತೆ : 3 ಲಕ್ಷ ಕೋಟಿಗೂ ಅಧಿಕ ಹಣದ ಚಲಾವಣೆ ಸ್ಥಗಿತ!

ನೋಟು ನಿಷೇಧ ಬಳಿಕ ದೇಶದಲ್ಲಿ ಎರಡನೇ ಬಾರಿಗೆ ನಗದು ಕೊರತೆ ಉಂಟಾಗಿದ್ದು, ಸುಮಾರು 3 ಲಕ್ಷ ಕೋಟಿಗೂ ಅಧಿಕ ಹಣ ಚಲಾವಣೆಯಾಗದೇ ಸ್ಥಗಿತವಾಗಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಮೂಲಗಳ ಪ್ರಕಾರ ತೆರಿಗೆ ಸಂಬಂಧಿತ ವಿವಿಧ ಪ್ರಕರಣಗಳಲ್ಲಿ ದೊರೆತ ಸುಮಾರು 3.2ಲಕ್ಷ ಕೋಟಿ ಹಣ ಚಲಾವಣೆಯಾಗದೇ ಉಳಿದಿದೆ. ತೆರಿಗೆ ಸಂಬಂಧಿತ ಪ್ರಕರಣಗಳ ವಿಚಾರಣೆಗಳು ನ್ಯಾಯಾಲಯದಲ್ಲಿದ್ದು, ಈ ಪ್ರಕರಣಗಳು ಇತ್ಯರ್ಥವಾಗುವವರೆಗೂ ಈ ಅಪಾರ ಪ್ರಮಾಣದ ನಗದು ಬಳಕೆಗೆ ಕಾನೂನು ತೊಡಕು ಉಂಟಾಗುತ್ತಿದೆ. ಈ ಪೈಕಿ ಸುಮಾರು 2.40 ಲಕ್ಷ ಕೋಟಿ ನೇರ ತೆರಿಗೆ ಹಣ ಮತ್ತು 1.18 ಲಕ್ಷ ಕೋಟಿ ಹಣ ಪರೋಕ್ಷ ತೆರಿಗೆ ಹಣವಾಗಿದೆ
ರೈಲಿನಲ್ಲಿ 9 ವರ್ಷದ ಬಾಲಕಿ ಮೇಲೆ ವಕೀಲನಿಂದ ಲೈಂಗಿಕ ಕಿರುಕುಳ

ರೈಲಿನಲ್ಲಿ 9 ವರ್ಷದ ಬಾಲಕಿ ಮೇಲೆ ವಕೀಲನಿಂದ ಲೈಂಗಿಕ ಕಿರುಕುಳ

ಮದ್ರಾಸ್ ಹೈಕೋರ್ಟ್ ವಕೀಲ ಕೆ.ಪಿ.ಪ್ರೇಮ್‌ ಅನಂತ್ ಎಂಬುವವನನ್ನು ತಿರುವನಂತಪುರದಿಂದ ಚೆನ್ನೈಗೆ ತೆರಳುತ್ತಿದ್ದ ರೈಲಿನಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬಂಧಿಸಲಾಗಿದೆ. ಹಾಗೇ ಈತ 2006ರಲ್ಲಿ ತಮಿಳುನಾಡಿನ ಆರ್‌.ಕೆ.ನಗರ ಕ್ಷೇತ್ರದಿಂದ BJPಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಂದು ತಿಳಿದು ಬಂದಿದೆ. ಸಾಮಾನ್ಯ ಟಿಕೆಟ್‌ ಪಡೆದಿದ್ದ ಆರೋಪಿ ರಿಸರ್ವೇಷನ್ ಕಂಪಾರ್ಟ್‌ಮೆಂಟ್‌ ಪ್ರವೇಶಿಸಿದ್ದ. ‘ನಾನು ವಕೀಲ, ನನಗೆ ಬಿಜೆಪಿ ಜತೆ ಸಂಪರ್ಕ ಇದೆ' ಎಂದು ಆರೋಪಿಯು ಸಹ ಪ್ರಯಾಣಿಕರಿಗೆ ಧಮಕಿ ಹಾಕಿದ್ದರು. ನಂತರ ಆರೋಪಿಯನ್ನು ರೈಲ್ವೆ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.