Short News

ಅಭಿಮಾನಿಗಳ ಜೊತೆ ಅಭಿಮಾನಿಯಾದ ದರ್ಶನ್

ಅಭಿಮಾನಿಗಳ ಜೊತೆ ಅಭಿಮಾನಿಯಾದ ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ಚಿತ್ರರಂಗದಲ್ಲಿ ಭಾರಿ ಬೇಡಿಕೆ ಹಾಗೂ ಬ್ಯುಸಿ ಇರುವ ನಟ. ಕುರುಕ್ಷೇತ್ರ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಹಾಗೂ ಯಜಮಾನ ಚಿತ್ರ ಶೂಟಿಂಗ್ ಎರಡರಲ್ಲೂ ತೊಡಗಿಸಿಕೊಂಡಿರುವ ಚಾಲೆಂಜಿಂಗ್ ಸ್ಟಾರ್ ಇತ್ತೀಚಿಗಷ್ಟೆ ಬಿಡುವು ಮಾಡಿಕೊಂಡು ಅಭಿಮಾನಿಗಳ ಆಸೆ ಪೂರೈಸಲು ಮುಂದಾಗಿದ್ದರು. ದರ್ಶನ್ ಹಾಗೂ ಸಹೋದರ ದಿನಕರ್ ಹೆಸರಿನಲ್ಲಿ ಅಭಿಮಾನಿಗಳೆಲ್ಲರೂ ಸೇರಿ ಪ್ರತಿವರ್ಷ ಕ್ರಿಕೆಟ್ ಮ್ಯಾಚ್ ನಡೆಸುತ್ತಾ ಬಂದಿದ್ದಾರೆ. ಈ ವರ್ಷವೂ ಎರಡು ದಿನಗಳ ಕ್ರಿಕೆಟ್ ಮ್ಯಾಚ್ ಆಡಿಸಲಾಯ್ತು. ರಾಜ್ಯದ ಆಯ್ದ ಜಿಲ್ಲೆಗಳಿಂದ ದರ್ಶನ್ ಅಭಿಮಾನಿಗಳು ಮೈದಾನಕ್ಕೆ ಇಳಿದು ಕ್ರಿಕೆಟ್ ಆಡಿ ಸಂಭ್ರಮ ಪಟ್ಟರು.
ಹೊಸ ಭರವಸೆಯೊಂದಿಗೆ ಕೊನೆಗೊಂಡ ಮುಂಬೈ ಶೇರುಪೇಟೆ

ಹೊಸ ಭರವಸೆಯೊಂದಿಗೆ ಕೊನೆಗೊಂಡ ಮುಂಬೈ ಶೇರುಪೇಟೆ

ಇಂದಿನ ಮುಂಬೈ ಸೆನ್ಸೆಕ್ಸ್ ವಹಿವಾಟಿನಲ್ಲಿ 212 ಅಂಕ ಜಿಗಿತದೊಂದಿಗೆ 34,713.60ಅಂಕ ಎತ್ತರವನ್ನು ತಲುಪಿ ಹೊಸ ಭರವಸೆಯೊಂದಿಗೆ ಕೊನೆಗೊಳಿಸಿತು. ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 47.25 ಅಂಕ ಜಿಗಿತವನ್ನು ದಾಖಲಿಸಿ ದಿನದ ವಹಿವಾಟನ್ನು 10,617.80 ಅಂಕ ಮಟ್ಟಕ್ಕೇರಿತು. ಇಂದಿನ ವ್ಯವಹಾರದಲ್ಲಿ ಎಫ್ಎಂಸಿಜಿ, ಐಟಿ, ಬ್ಯಾಂಕಿಂಗ್‌ ಮತ್ತು ಕನ್ಸೂಮರ್‌ ಡ್ನೂರೇಬಲ್ಸ್‌ ಶೇರುಗಳು ಉತ್ತಮ ವಹಿವಾಟಿಗೊಳಪಟ್ಟವು.
ಮಾಜಿ ಸಿಎಂ ದಿ.ಜಯಲಲಿತಾರ ಯಾವುದೇ ಜೈವಿಕ ಮಾದರಿಯೂ ನಮ್ಮ ಬಳಿ ಇಲ್ಲ: ಅಪೋಲೋ ಆಸ್ಪತ್ರೆ

ಮಾಜಿ ಸಿಎಂ ದಿ.ಜಯಲಲಿತಾರ ಯಾವುದೇ ಜೈವಿಕ ಮಾದರಿಯೂ ನಮ್ಮ ಬಳಿ ಇಲ್ಲ: ಅಪೋಲೋ ಆಸ್ಪತ್ರೆ

ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಅವರ ಯಾವುದೇ ರೀತಿಯ ಜೈವಿಕ ಮಾದರಿಗಳು ತಮ್ಮ ಬಳಿ ಇಲ್ಲವೆಂದು ಚೆನ್ನೈನ ಅಪೋಲೋ ಆಸ್ಪತ್ರೆ ತಿಳಿಸಿದೆ. ಬೆಂಗಳೂರಿನ 37ವರ್ಷದ ಅಮೃತಾ ಎಂಬುವವರು ತಾನು ಜಯಲಲಿತಾರ ಮಗಳಾಗಿದ್ದು, ಇದನ್ನು ಸಾಬೀತುಪಡಿಸಲು ಡಿಎನ್ಎ ಪರೀಕ್ಷೆ ಮಾಡಿಸುವಂತೆ ಕೋರಿ ಮದ್ರಾಸ್‌ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ಅಮೃತಾ ಅರ್ಜಿ ವಿಚಾರಣೆ ನಡೆಸಿದ್ದ ಮದ್ರಾಸ್‌ ಹೈಕೋರ್ಟ್‌, ಜಯಲಲಿತಾ ಅವರ ರಕ್ತದ ಮಾದರಿ ಒದಗಿಸುವಂತೆ ಅಪೋಲೋ ಆಸ್ಪತ್ರೆಗೆ ಸೂಚಿಸಿತ್ತು. ಇದಕ್ಕೆ ಉತ್ತರಿಸಿದ ಆಸ್ಪತ್ರೆ ಹೀಗೆ ಹೇಳಿದೆ.
ಶೀಘ್ರವಾಗಿ ತೂಕ ಇಳಿಸಿಕೊಳ್ಳಲು ಈ ಆಹಾರ ಕ್ರಮ ಅನುಸರಿಸಿ..

ಶೀಘ್ರವಾಗಿ ತೂಕ ಇಳಿಸಿಕೊಳ್ಳಲು ಈ ಆಹಾರ ಕ್ರಮ ಅನುಸರಿಸಿ..

ಹಸಿರು ಟೀಯಲ್ಲಿ ಹಲವಾರು ಆರೋಗ್ಯಕರ ಪೋಷಕಾಂಶಗಳಿದ್ದು ತೂಕ ಇಳಿಸಲೂ ನೆರವಾಗುತ್ತದೆ. ಕಾಫಿ ನಿಮ್ಮನ್ನು ಕೊಂಚ ಹೊತ್ತು ಎಚ್ಚರಿರಲು ಸಹಕರಿಸಿದರೂ ಉಳಿದಂತೆ ಕೊಬ್ಬನ್ನು ಹೆಚ್ಚಿಸಲು ನೆರವಾಗುತ್ತದೆ. ಬದಲಿಗೆ ಹಸಿರು ಚಹಾ ಸೇವಿಸುವ ಮೂಲಕ ನಿದ್ದೆಯನ್ನು ನಿಯಂತ್ರಿಸುವ ಜೊತೆಗೇ ತೂಕವನ್ನೂ ಕಳೆದುಕೊಳ್ಳಲು ಸಾಧ್ಯವಾಗುತ್ತದೆ. ಆದರೆ ಇದರಲ್ಲಿಯೂ ಸಕ್ಕರೆ ಅಲ್ಪಪ್ರಮಾಣದಲ್ಲಿ ಅಥವಾ ಇಲ್ಲದೇ ಇದ್ದರೂ ಉತ್ತಮ. ನಿಮ್ಮ ನಿತ್ಯದ ಪೇಯಗಳಾದ ಟೀ, ಕಾಫಿ ಅಥವಾ ಹಾಲಿನ ಮೇಲೆ ಒಂದು ಚಿಕ್ಕಚಮಚ ದಾಲ್ಚಿನ್ನಿ ಪುಡಿಯನ್ನು ಚಿಮುಕಿಸಿ ಕಲಕಿ ಕುಡಿಯಿರಿ. ಉಪ್ಪಿಟ್ಟು, ಬ್ರೆಡ್ ಟೋಸ್ಟ್ ಮೊದಲಾದವುಗಳಲ್ಲೂ ದಾಲ್ಚಿನ್ನಿ ಪುಡಿ ಸೇರಿಸಿ ತಿನ್ನಿರಿ.