Short News

ಹಿರಿಯ ನಟ ಧರ್ಮೇಂದ್ರ ಗೆ ಪ್ರತಿಷ್ಠಿತ ರಾಜ್‌ ಕಪೂರ್ ಪ್ರಶಸ್ತಿ

ಹಿರಿಯ ನಟ ಧರ್ಮೇಂದ್ರ ಗೆ ಪ್ರತಿಷ್ಠಿತ ರಾಜ್‌ ಕಪೂರ್ ಪ್ರಶಸ್ತಿ

ಹಿರಿಯ ಬಾಲಿವುಡ್ ನಟ ಧರ್ಮೇಂದ್ರ ಪ್ರತಿಷ್ಠಿತ ರಾಜ್‌ ಕಪೂರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದರ ಜೊತೆಗೆ ನಿರ್ಮಾಪಕ ರಾಜ್‌‌ಕುಮಾರ್ ಹಿರಾನಿಗೆ ಅವರು ಸಿನೆಮಾ ರಂಗಕ್ಕೆ ನೀಡಿದ ವಿಶೇಷ ಕೊಡುಗೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗುವುದು ಎಂದು ಮಹಾರಾಷ್ಟ್ರ ಸಂಸ್ಕೃತಿ ಸಚಿವ ವಿನೋದ್ ತವ್ಡೆ ಹೇಳಿದ್ದಾರೆ. ಜೊತೆಗೆ ಹಿರಿಯ ಮರಾಠಿ ನಟ ವಿಜಯ್‌ ಚವ್ಹಾಣ್‌ ಅವರಿಗೆ ಜೀವಮಾನದ ಸಾಧನೆಗಾಗಿ ಶಾಂತಾರಾಮ್‌‌ ಪ್ರಶಸ್ತಿ, ನಟಿ-ನಿರ್ದೇಶಕಿ ಮೃಣಾಲ್‌ ಕುಲಕರ್ಣಿಗೆ ವಿ. ಶಾಂತಾರಾಮ್ ವಿಶೇಷ ಕೊಡುಗೆ ಪ್ರಶಸ್ತಿ ನೀಡಲಾಗುತ್ತಿದೆ ಎಂದಿದ್ದಾರೆ.
ಲಾಂಚ್ ಆಯ್ತು ಮೊಟೊ G6 ಸರಣಿ ಸ್ಮಾರ್ಟ್‌ಫೋನ್‌

ಲಾಂಚ್ ಆಯ್ತು ಮೊಟೊ G6 ಸರಣಿ ಸ್ಮಾರ್ಟ್‌ಫೋನ್‌

ಈ ಹಿಂದೆ ಒಂದು ಸರಣಿಯಲ್ಲಿ ಎರಡು ಸ್ಮಾರ್ಟ್‌ಪೋನ್ ಲಾಂಚ್ ಮಾಡುತ್ತಿದ್ದ ಮೊಟೊ, ಈ ಬಾರಿ ಮೂರು ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿದೆ. ಮೊಟೊ G6, ಮೊಟೊ G6 ಪ್ಲಸ್ ಮತ್ತು ಮೊಟೊ G6 ಪ್ಲೇ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಈ ಸರಣಿಯಲ್ಲಿ ಮೊಟೊ G6 ಪ್ಲಸ್ ಸ್ಮಾರ್ಟ್‌ಫೋನ್ ಟಾಪ್ ಎಂಡ್ ಆಗಿದೆ. ಮೊಟೊ G6, ಮೊಟೊ G6 ಪ್ಲಸ್ ಮತ್ತು ಮೊಟೊ G6 ಪ್ಲೇ ಸ್ಮಾರ್ಟ್‌ಫೋನ್‌ಗಳು ಇಂದು ಬ್ರೆಜಿಲ್ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದ್ದು, ಭಾರತೀಯ ರೂಪಾಯಿಗಳಲ್ಲಿ ಬೆಲೆಗಳನ್ನು ನೋಡುದಾದರೆ ಮೊಟೊ G6 ರೂ. 16,500ಕ್ಕೆ, ಮೊಟೊ G6 ಪ್ಲೇ ರೂ.13000ಕ್ಕೆ ಮತ್ತು ಮೊಟೊ G6 ಪ್ಲಸ್ ರೂ.24,350ಕ್ಕೆ ಲಭ್ಯವಿದೆ.
ಮತದಾನ ಕಾರ್ಮಿಕರ ಹಕ್ಕು, ತಪ್ಪದೇ ಮತ ಚಲಾಯಿಸಿ

ಮತದಾನ ಕಾರ್ಮಿಕರ ಹಕ್ಕು, ತಪ್ಪದೇ ಮತ ಚಲಾಯಿಸಿ

ಚುನಾವಣಾ ಪ್ರಕ್ರಿಯೆಯಲ್ಲಿ ಕಾರ್ಮಿಕರಿಗೆ ಸಂಪೂರ್ಣ ಅವಕಾಶಚುನಾವಣಾ ಪ್ರಕ್ರಿಯೆಯಲ್ಲಿ ಕೈಗಾರಿಕೆಗಳು ಪಾಲುದಾರರಾಗಿರುವುದರಿಂದ ಕಾರ್ಮಿಕರು ಚುನಾವಣೆಯಲ್ಲಿ ಭಾಗವಹಿಸಲು ಸಂಪೂರ್ಣ ಅವಕಾಶ ನೀಡಬೇಕೆಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಕರೆ ನೀಡಿದರು. ಮತದಾನ ಕಾರ್ಮಿಕರ ಹಕ್ಕು ಎಂದು ಅವರು ಪ್ರತಿಪಾದಿಸಿದರು.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆಯಲ್ಲಿ (ಎಫ್‍ಕೆಸಿಸಿಐ) ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು. ಮುಂಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಪ್ರಥಮವಾಗಿ ಬಳಕೆಯಾಗುತ್ತಿರುವ ವಿವಿಪ್ಯಾಟ್ ಯಂತ್ರಗಳು ಅತ್ಯಂತ ಸುರಕ್ಷಿತ ಎಂದು ತಿಳಿಸಿದರು.

ಇಂದಿನ (ಏಪ್ರಿಲ್ 21) ಪೆಟ್ರೋಲ್, ಡೀಸೆಲ್ ಬೆಲೆ

ಇಂದಿನ (ಏಪ್ರಿಲ್ 21) ಪೆಟ್ರೋಲ್, ಡೀಸೆಲ್ ಬೆಲೆ

ದೆಹಲಿ: ಪೆಟ್ರೋಲ್: 74.21 / ಲೀಟರ್, ಡೀಸೆಲ್: 65.46 / ಲೀಟರ್. ಕೊಲ್ಕತ್ತಾ: ಪೆಟ್ರೋಲ್: 76.91 / ಲೀಟರ್ , ಡೀಸೆಲ್: 68.16 / ಲೀಟರ್. ಮುಂಬೈ: ಪೆಟ್ರೋಲ್: 82.06/ ಲೀಟರ್ , ಡೀಸೆಲ್: 69.70 / ಲೀಟರ್. ಚೆನ್ನೈ: ಪೆಟ್ರೋಲ್: 76.99 / ಲೀಟರ್ , ಡೀಸೆಲ್: 69.06 / ಲೀಟರ್. ಬೆಂಗಳೂರು: ಪೆಟ್ರೋಲ್: 75.39 / ಲೀಟರ್, ಡೀಸೆಲ್: 66.57 / ಲೀಟರ್. ಹೈದರಾಬಾದ್: ಪೆಟ್ರೋಲ್: 78.59 / ಲೀಟರ್, ಡೀಸೆಲ್: 71.12 / ಲೀಟರ್.