Short News

'ದಿವಂಗತ ಮಂಜುನಾಥನ ಗೆಳೆಯರು' ಚಿತ್ರದ ಟ್ರೇಲರ್ ನೋಡಿದ್ರಾ ?

'ದಿವಂಗತ ಮಂಜುನಾಥನ ಗೆಳೆಯರು' ಚಿತ್ರದ ಟ್ರೇಲರ್ ನೋಡಿದ್ರಾ ?

'ದಿವಂಗತ ಮಂಜುನಾಥನ ಗೆಳೆಯರು' ಸಿನಿಮಾ ಟ್ರೇಲರ್ ಬಿಡುಗಡೆಯಾಗಿದೆ. 807 ಪ್ರೊಡಕ್ಷನ್ಸ್ ಬ್ಯಾನರ್ ಅಡಿ ಅರುಣ್ ಎನ್​.ಡಿ. ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದ ಪೋಸ್ಟ್ ಪ್ರೊಡಕ್ಷನ್ ಎಲ್ಲಾ ಮುಗಿದು ಸಿನಿಮಾ ಬಿಡುಗಡೆಗೆ ಸಿದ್ಧವಿದೆ. ಕಳೆದ ವಾರ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ನಡೆಯಿತು. ಸಿನಿಮಾ ಕಥೆಗೆ ಇದೇ ಹೆಸರು ಸೂಕ್ತವಾಗಿದ್ದರಿಂದ 'ದಿ ಮಂಜುನಾಥನ ಗೆಳೆಯರು' ಎಂಬ ಹೆಸರು ಇಡಲಾಗಿದೆ ಎಂದು ನಿರ್ದೇಶಕ ತಿಳಿಸಿದ್ದಾರೆ.
ಎನ್ ಡಿಎ ಸರ್ಕಾರ ರಚನೆಯಾಗಿ 4 ವರ್ಷಗಳೇ ಕಳೆದರೂ  ಕೊಟ್ಟ ಭರವಸೆ ಈಡೇರಿಸದ ಮೋದಿ-ಶಾ: ಟಿಡಿಪಿ ಆರೋಪ

ಎನ್ ಡಿಎ ಸರ್ಕಾರ ರಚನೆಯಾಗಿ 4 ವರ್ಷಗಳೇ ಕಳೆದರೂ ಕೊಟ್ಟ ಭರವಸೆ ಈಡೇರಿಸದ ಮೋದಿ-ಶಾ: ಟಿಡಿಪಿ ಆರೋಪ

ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಸುಳ್ಳು ಭರವಸೆಗಳನ್ನು ನೀಡಿ ಆಂಧ್ರ ಪ್ರದೇಶಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಟಿಡಿಪಿ ಗಂಭೀರ ಆರೋಪ ಮಾಡಿದೆ. ಸಂಸತ್ ಕಲಾಪದಲ್ಲಿ ಅವಿಶ್ವಾಸ ನಿರ್ಣಯದ ಕುರಿತು ನಡೆದ ಚರ್ಚೆಯಲ್ಲಿ ಮಾತನಾಡಿದ ಟಿಡಿಪಿ ಸಂಸದ ಗಲ್ಲಾ ಜಯದೇವ್ ಅವರು, ಕೇಂದ್ರ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ. ಆಂಧ್ರ ಹಳೆಯ ಹೆಸರಾದರೂ ಅದು ಹೊಸ ರಾಜ್ಯ, ತೆಲಂಗಾಣ ಹೊಸ ಹೆಸರಾದರೂ ಅದು ಹಳೆಯ ರಾಜ್ಯ. ಇದು ಕೇಂದ್ರಕ್ಕೆ ಸ್ಪಷ್ಟವಾಗಿ ತಿಳಿದಿದೆ. ಆದರೂ ಆರ್ಥಿಕವಾಗಿ ತೆಲಂಗಾಣವನ್ನು ಬೆಂಬಲಿಸಿದೆ. ಎನ್ ಡಿಎ ಸರ್ಕಾರ ರಚನೆಯಾಗಿ 4ವರ್ಷ ಕಳೆದರೂ ಕೊಟ್ಟ ಭರವಸೆ ಈಡೇರಿಸಿಲ್ಲ ಎಂದರು.
ಬೆಂಗಳೂರು ರೈಲು ವೀಲ್ ಫ್ಯಾಕ್ಟರಿಯಲ್ಲಿ 10 ನೇ ತರಗತಿ ಆದವರಿಂದ ಅರ್ಜಿ ಆಹ್ವಾನ!

ಬೆಂಗಳೂರು ರೈಲು ವೀಲ್ ಫ್ಯಾಕ್ಟರಿಯಲ್ಲಿ 10 ನೇ ತರಗತಿ ಆದವರಿಂದ ಅರ್ಜಿ ಆಹ್ವಾನ!

ರೈಲು ವೀಲ್ ಫ್ಯಾಕ್ಟರಿ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಟ್ರೇಡ್ ಅಪ್ರೆಂಟೀಸ್ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಆಗಸ್ಟ್ 13, 2018 ಕೊನೆಯ ದಿನಾಂಕ. ಅರ್ಜಿ ಸಲ್ಲಿಕೆಗೆ ಜುಲೈ 8, 2018 ಆರಂಭ ದಿನಾಂಕ. ಐಟಿಐ ಜತೆ 10ನೇ ಕ್ಲಾಸ್ ತೇರ್ಗಡೆಯಾಗಿರುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಹಾಗೇ ಯಾವುದೇ ಅನುಭವ ಇರದ ಫ್ರೆಶರ್ಸ್ ಕೂಡಾ ಅಪ್ಲೈ ಮಾಡಬಹುದು. ಹುದ್ದೆ ಬಗೆಗಿನ ಹೆಚ್ಚಿನ ಮಾಹಿತಿಗೆ http://rwf.indianrailways.gov.in/ ಗೆ ಭೇಟಿ ನೀಡಿ.
ನರೇಂದ್ರ ಮೋದಿ ಸರ್ಕಾರದ 19 ಸಚಿವಾಲಯಗಳಲ್ಲಿ 1,179 ಕೋಟಿ ಅವ್ಯವಹಾರ!

ನರೇಂದ್ರ ಮೋದಿ ಸರ್ಕಾರದ 19 ಸಚಿವಾಲಯಗಳಲ್ಲಿ 1,179 ಕೋಟಿ ಅವ್ಯವಹಾರ!

ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ 19ಸಚಿವಾಲಯಗಳಲ್ಲಿ 1,179ಕೋಟಿ ರೂಪಾಯಿ ಅವ್ಯವಹಾರ ನಡೆದಿರುವುದನ್ನು ಕಂಟ್ರೋಲರ್ ಮತ್ತು ಆಡಿಟರ್ ಜನರಲ್(ಸಿಎಜಿ) ವರದಿಯಿಂದ ಜಗಜ್ಜಾಹೀರು ಆಗಿದೆ. ನವೆಂಬರ್ 4ರಂದು ಬಿಡುಗಡೆ ಮಾಡಿರುವ ಸಿಎಜಿ ವರದಿಯಲ್ಲಿ ಈ ಅವ್ಯವಹಾರದ ಬಗ್ಗೆ ಉಲ್ಲೇಖವಿದ್ದು, "ಜನಸತ್ತಾ" ಎಂಬ ಹಿಂದಿ ಸುದ್ದಿ ಜಾಲತಾಣ ವರದಿ ಪ್ರಕಟಿಸಿದೆ. ವರದಿಯಲ್ಲಿ 78 ಪ್ರಕರಣಗಳ ಬಗ್ಗೆ ವಿವರಣೆ ಇದ್ದು, 19 ಸಚಿವಾಲಯಗಳು ಮತ್ತು ಅವುಗಳ ಆಡಳಿತ ನಿಯಂತ್ರಣದಲ್ಲಿರುವ ಸ್ವಾಯತ್ತ ಸಂಸ್ಥೆಗಳ ಬಗ್ಗೆ ಉಲ್ಲೇಖವಿದೆ. ಬಹಳಷ್ಟು ಲೋಪಗಳು ಸಂಭವಿಸಿರುವುದು ಮಾನವ ಸಂಪಪನ್ಮೂಲ ಮತ್ತು ಅಭಿವೃದ್ಧಿ ಸಚಿವಾಲಯದಲ್ಲಿ ಎಂದೂ ಉಲ್ಲೇಖವಿದೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more