Short News

ದ್ವಾರಕೀಶ್ ಬ್ಯಾನರ್ ನಲ್ಲಿ ಇದೇ ಮೊದಲ ಬಾರಿಗೆ ಶಿವಣ್ಣ ನಟನೆ!

ದ್ವಾರಕೀಶ್ ಬ್ಯಾನರ್ ನಲ್ಲಿ ಇದೇ ಮೊದಲ ಬಾರಿಗೆ ಶಿವಣ್ಣ ನಟನೆ!

'ಚೌಕ' ಸಿನಿಮಾ ದ್ವಾರಕೀಶ್ ಬ್ಯಾನರ್ ನಲ್ಲಿ ಬಂದ 50ನೇ ಸಿನಿಮಾವಾಗಿತ್ತು. 'ಅಮ್ಮ ಐ ಲವ್ ಯೂ' 51ನೇ ಚಿತ್ರವಾಗಿತ್ತು. ಈಗ ಈ ಎರಡು ಹಿಟ್ ಸಿನಿಮಾಗಳ ಬಳಿಕ 52ನೇ ಸಿನಿಮಾ ಶುರುವಾಗುತ್ತಿದೆ. ಈ ಚಿತ್ರದ ಮೂಲಕ ಮೊದಲ ಬಾರಿಗೆ ದ್ವಾರಕೀಶ್ ಬ್ಯಾನರ್ ನಲ್ಲಿ ಶಿವಣ್ಣ ನಟಿಸುತ್ತಿದ್ದಾರೆ. ದ್ವಾರಕೀಶ್ ಹಾಗೂ ಶಿವರಾಜ್ ಕುಮಾರ್ ಜೋಡಿಯ ಈ ಸಿನಿಮಾವನ್ನು ಪಿ.ವಾಸು ನಿರ್ದೇಶನ ಮಾಡುತ್ತಾರೆ. ಈ ಹಿಂದೆ ಶಿವರಾಜ್ ಕುಮಾರ್ ಅವರಿಗೆ 'ಶಿವಲಿಂಗ' ಸಿನಿಮಾ ಮಾಡಿದ್ದ ಪಿ.ವಾಸು ಆ ಹಿಟ್ ಚಿತ್ರದ ನಂತರ ಮತ್ತೆ ಶಿವಣ್ಣನಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸಿನಿಮಾದ ಹೆಸರು, ಕಲಾವಿದರ ಪಟ್ಟಿ ಸೇರಿದಂತೆ ಹೆಚ್ಚಿನ ವಿವರಗಳು ಹೊರ ಬಂದಿಲ್ಲ.
ನನ್ನ ಲೀಡ್ ಕಂಡು ಪ್ರಧಾನಿಯೇ ನಡುಗಿದ್ದರು: ಸಚಿವ ಜಿಟಿ ದೇವೇಗೌಡ

ನನ್ನ ಲೀಡ್ ಕಂಡು ಪ್ರಧಾನಿಯೇ ನಡುಗಿದ್ದರು: ಸಚಿವ ಜಿಟಿ ದೇವೇಗೌಡ

ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಾನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ 36,042ಅಂತರದ ಲೀಡ್ ಪಡೆದಿದ್ದು ಇದನ್ನು ಕಂಡು ಪ್ರಧಾನಿ ಮೋದಿಯೇ ನಡುಗಿ ಹೋಗಿದ್ದರು ಎಂದು ಉನ್ನತ ಶಿಕ್ಷಣ ಸಚಿವ ಜಿಟಿ ದೇವೇಗೌಡ ಹೇಳಿಕೆ ನೀಡಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ ಲಿಂಗದೇವರ ಕೊಪ್ಪಲಿನಲ್ಲಿ ಜೆಡಿಎಸ್ ಕಾರ್ಯಕರ್ತರಿಗೆ ಕೃತಜ್ಞತಾ ಸಭೆಯಲ್ಲಿ ಮಾತನಾಡಿ ಹೊಲದಲ್ಲಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಸೊಸೈಟಿಯಲ್ಲಿ ಅಕ್ಕಿ ತೂಕ ಮಾಡಿಕೊಂಡಿದ್ದ ನನ್ನನ್ನು ಈ ಸ್ಥಾನದಲ್ಲಿ ನಿಲ್ಲಿಸಿದ್ದೀರಿ ನಿಮ್ಮ ಪಾದ ಪೂಜೆ ಮಾಡಿ ನಾನು ಋಣ ತೀರಿಸಬೇಕಾಗಿದೆ ಎಂದು ಮತದಾರರಿಗೆ,ಕಾರ್ಯಕರ್ತರಿಗೆ ಸ್ವಕ್ಷೇತ್ರದಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ.
ಕಾಂಗ್ರೆಸ್‌ ಕೇವಲ ಮೊಸಳೆ ಕಣ್ಣೀರು ಸುರಿಸುತ್ತದೆ: ಮೋದಿ

ಕಾಂಗ್ರೆಸ್‌ ಕೇವಲ ಮೊಸಳೆ ಕಣ್ಣೀರು ಸುರಿಸುತ್ತದೆ: ಮೋದಿ

ಕಾಂಗ್ರೆಸ್ ಮೇಲೆ ಟೀಕೆಗಳ ಮಳೆ ಸುರಿಸಿದ ಪ್ರಧಾನಿ ಮೋದಿ 'ಕಾಂಗ್ರೆಸ್ ಪಕ್ಷ 50ವರ್ಷದಲ್ಲಿ ಮಾಡಲಾಗದ್ದನ್ನು ನಾವು ಕೇವಲ 5ವರ್ಷದಲ್ಲಿ ಮಾಡಿದ್ದೇವೆ' ಎಂದು ಬೆನ್ನುತಟ್ಟಿಕೊಂಡರು. ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಬನ್‌ಸಾಗರ್ ಕಾಲುವೆ ಯೋಜನೆ ಉದ್ಘಾಟಿಸಿ, ಮಾತನಾಡಿದ ಅವರು, ಇಂದು ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿರುವ ಕಾಂಗ್ರೆಸ್‌ ಇಷ್ಟು ವರ್ಷ ಏಕೆ ಅವರ ಬಗ್ಗೆ ಗಮನ ಹರಿಸಲಿಲ್ಲ ಎಂದು ಪ್ರಶ್ನಿಸಿದರು. ರೈತರ ಮೇಲೆ ಕಾಳಜಿ ಇದ್ದಿದ್ದರೆ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುತ್ತಿದ್ದಿರಿ, ಅಭಿವೃದ್ಧಿ ಕಾರ್ಯಗಳನ್ನು ಮಾಡಲು ನಿಧಾನ ಮಾಡುತ್ತಿರಲಿಲ್ಲ ಎಂದು ಕಾಂಗ್ರೆಸ್ ಮೇಲೆ ಹರಿಹಾಯ್ದರು.
ಮುಟ್ಟಿನ ದಿನಗಳಲ್ಲಿ ಎಷ್ಟು ಬಾರಿ ಸ್ಯಾನಿಟರಿ ಪ್ಯಾಡ್ ಬದಲಿಸಬೇಕು?

ಮುಟ್ಟಿನ ದಿನಗಳಲ್ಲಿ ಎಷ್ಟು ಬಾರಿ ಸ್ಯಾನಿಟರಿ ಪ್ಯಾಡ್ ಬದಲಿಸಬೇಕು?

ಅತಿ ಹೆಚ್ಚು ಸ್ರಾವವನ್ನು ಎದುರಿಸುವ ಮಹಿಳೆಯರು ಪ್ರತಿ 2ಗಂಟೆಗಳಿಗೊಮ್ಮೆ ತಮ್ಮ ಮೆತ್ತೆಗಳನ್ನು ಬದಲಿಸಿಕೊಳ್ಳಬೇಕು. ಹೀಗೆ ಮಾಡುವ ಮೂಲಕ ಮಾತ್ರವೇ ಸೂಕ್ಷ್ಮವಾದ ಈ ಪ್ರದೇಶವನ್ನು ಕೀಟಾಣುರಹಿತವಾಗಿಸಿ ನೈರ್ಮಲ್ಯವನ್ನು ಕಾಪಾಡಿಕೊಳ್ಳಬಹುದು. ಅಲ್ಲದೇ, ಮೆತ್ತೆಯಲ್ಲಿ ಸಂಗ್ರಹವಾದ ರಕ್ತ ಕೊಂಚ ಹೊತ್ತಿಗೇ ವಾಸನೆ ಹೊಡೆಯಲು ಪ್ರಾರಂಭಿಸುತ್ತದೆ, ಇದು ಸ್ವಾಭಾವಿಕ.  ಈ ವಾಸನೆಯಿಂದ ಪ್ಯಾಡ್ ಗಳ ಒಳಗೆ ಅತಿ ಸೂಕ್ಷ್ಮಜೀವಿಗಳು ಅತಿ ಹೆಚ್ಚಾಗಿ ವೃದ್ಧಿಗೊಂಡಿರುತ್ತವೆ. ಮೆತ್ತೆಯಲ್ಲಿರುವ ತೇವಾಂಶ ಹಾಗೂ ಬೆಚ್ಚಗಿನ ತಾಪಮಾನ ಬ್ಯಾಕ್ಟೀರಿಯಾಗಳು ಬೆಳೆಯಲು ಸೂಕ್ತವಾಗಿವೆ. ಹಾಗಾಗಿ ಮೆತ್ತೆಯನ್ನು ಅವಧಿ ಮುಗಿದಾಕ್ಷಣ ಬದಲಿಸಿಕೊಳ್ಳಬೇಕು.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more