Short News

ಕ್ರೇಜಿಸ್ಟಾರ್ ಪುತ್ರ ಮನೋರಂಜನ್ 2017ರ ಅತ್ಯುತ್ತಮ ಉದಯೋನ್ಮಖ ನಟ

ಕ್ರೇಜಿಸ್ಟಾರ್ ಪುತ್ರ ಮನೋರಂಜನ್ 2017ರ ಅತ್ಯುತ್ತಮ ಉದಯೋನ್ಮಖ ನಟ

ಪ್ರತಿವರ್ಷವೂ ಹೊಸ ಹೊಸ ಪ್ರತಿಭೆಗಳು ಕನ್ನಡ ಇಂಡಸ್ಟ್ರಿಗೆ ಬರ್ತಿದ್ದಾರೆ. ಇಂತಹ ನವ ಕಲಾವಿದರನ್ನ ಪ್ರೋತ್ಸಾಹಿಸುವ ಉದ್ದೇಶದಿಂದ ಫಿಲ್ಮಿಬೀಟ್ ಆಯೋಜಿಸಿದ್ದ 'ಬೆಸ್ಟ್ ಅಫ್ ಸ್ಯಾಂಡಲ್ ವುಡ್-2017' ಪೋಲ್ ನಲ್ಲಿ ಅತ್ಯುತ್ತಮ ಉದಯೋನ್ಮುಖ ನಟ ವಿಭಾಗದಲ್ಲಿ ಸ್ಪರ್ಧೆ ನಡೆಸಲಾಗಿತ್ತು.

ಈ ಸ್ಪರ್ಧೆಯ ಫಲಿತಾಂಶ ಈಗಾಗಲೇ ಪ್ರಕಟವಾಗುತ್ತಿದ್ದು, ಈಗ ಅತ್ಯುತ್ತಮ ನವನಟ ಯಾರೆಂದು ಬಹಿರಂಗವಾಗಿದೆ. 'ಸಾಹೇಬ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ ಮನೋರಂಜನ್ 2017ರ ಉದಯೋನ್ಮುಖ ನಟನಾಗಿ ಹೊರಹೊಮ್ಮಿದ್ದಾರೆ.

ದೇಶದಲ್ಲಿ ಪ್ರತೀ ನಾಲ್ಕು ಗಂಟೆಗೊಬ್ಬ ಬ್ಯಾಂಕ್ ಅಧಿಕಾರಿಯಿಂದ ವಂಚನೆ

ದೇಶದಲ್ಲಿ ಪ್ರತೀ ನಾಲ್ಕು ಗಂಟೆಗೊಬ್ಬ ಬ್ಯಾಂಕ್ ಅಧಿಕಾರಿಯಿಂದ ವಂಚನೆ

ಆರ್‌ಬಿಐ ಅಂಕಿಅಂಶಗಳ ಪ್ರಕಾರ ಪ್ರತಿ ನಾಲ್ಕು ಗಂಟೆಗೆ ಒಬ್ಬ ಬ್ಯಾಂಕ್‌ ಉದ್ಯೋಗಿ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದಾನೆ ಎನ್ನುವ ಹೊಸ ಆಘಾತಕಾರಿ ಅಂಶ ಬಯಲಿಗೆ ಬಂದಿದೆ. 2015ರಿಂದ 2017ರ ಮಾರ್ಚ್ ತಿಂಗಳವರೆಗಿನ ಸಮಯದಲ್ಲಿ ಬರೋಬ್ಬರಿ 5,200 ಬ್ಯಾಂಕಿಂಗ್ ಅಧಿಕಾರಿಗಳನ್ನು ವಂಚನೆ ಪ್ರಕರಣದಡಿ ಬಂಧಿಸಿದ್ದು, ಈ ಪ್ರಕರಣಗಳಲ್ಲಿ ಅವರಿಗೆ ದಂಡನೆ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ 1,538 ಅಧಿಕಾರಿಗಳು ಕಳೆದ ಮೂರು ವರ್ಷಗಳಲ್ಲಿ ವಂಚನೆಯಾರೋಪದಡಿ ಕಠಿಣ ಕ್ರಮ ಎದುರಿಸಿದ್ದಾರೆ.
ಗೂಂಡಾಗಿರಿ ಪ್ರಕರಣ: ಶಾಸಕ ಹ್ಯಾರಿಸ್ ಪುತ್ರ ಪೊಲೀಸರಿಗೆ ಶರಣು

ಗೂಂಡಾಗಿರಿ ಪ್ರಕರಣ: ಶಾಸಕ ಹ್ಯಾರಿಸ್ ಪುತ್ರ ಪೊಲೀಸರಿಗೆ ಶರಣು

ಶಾಂತಿನಗರ ಶಾಸಕ ಎನ್.ಎ.ಹ್ಯಾರಿಸ್ ಮಗ ಮೊಹಮ್ಮದ್ ನಲಪಾಡ್ ಗೂಂಡಾಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಲಪಾಡ್ ಕಬ್ಬನ್ ಪಾರ್ಕ್ ಪೊಲೀಸರಿಗೆ ಶರಣಾಗಿದ್ದಾನೆ. ಸತತ 37ಗಂಟೆ ನಲಪಾಡ್ ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಫೆ.17ರಂದು ವಿದ್ವತ್ ಎಂಬಾತನ ಮೇಲೆ ಹಲ್ಲೆ ನಡೆಸಿ ನಾಪತ್ತೆಯಾಗಿದ್ದ ನಲಪಾಡ್ ಸೋಮವಾರ ಖುದ್ದು ಪೊಲೀಸರಿಗೆ ಶರಣಾಗಿದ್ದಾನೆ. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಈ ರೀತಿ ಮಾಡಲು ಅವನಿಗೆ ಅವಕಾಶ ನೀಡಿರಲಿಲ್ಲ. ನನ್ನ ಮಗನ ಕೃತ್ಯದಿಂದಾಗಿ ನನಗೂ ನೋವಿದೆ. ಇದರಲ್ಲಿ ನನ್ನ ಪಾತ್ರವಿಲ್ಲ. ಇದಕ್ಕೂ ನನಗೂ ಸಂಬಂಧವಿಲ್ಲ. ನಾನು ತಪ್ಪು ಮಾಡಿಲ್ಲ, ಎಂದು ಶಾಸಕ ಹ್ಯಾರಿಸ್ ಹೇಳಿದ್ದರು.
BSNL ನಿಂದ ಗ್ರಾಹಕರಿಗೆ ಹೊಸ ರೂ.99 ಪ್ಲಾನ್

BSNL ನಿಂದ ಗ್ರಾಹಕರಿಗೆ ಹೊಸ ರೂ.99 ಪ್ಲಾನ್

ಇಡೀ ದೇಶದಲ್ಲಿ ಇರುವ ಎಲ್ಲಾ BSNL ಬಳಕೆದಾರರಿಗೆ ಈ ಆಫರ್ ಅನ್ನು ಲಾಂಚ್ ಮಾಡಿರುವ ರೂ.99 ಆಫರ್ ನಲ್ಲಿ 26 ದಿನಗಳ ವ್ಯಾಲಿಡಿಟಿಯನ್ನು ನೀಡಿದ್ದು, ಸಂಪೂರ್ಣವಾಗಿ ಉಚಿತವಾಗಿ ಕರೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ. ಇದಲ್ಲದೇ BSNL ಬಳಕೆದಾರರಿಗೆ ಮತ್ತೊಂದು ಆಫರ್ ಅನ್ನು ನೀಡಿದ್ದು, ರೂ.319ಕ್ಕೆ ರಿಚಾರ್ಜ್ ಮಾಡಿಸಿದರೆ 90 ದಿನಗಳ ಅವಧಿಗೆ ಸಂಪೂರ್ಣವಾಗಿ ಉಚಿತವಾಗಿ ಕರೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ.