Short News

ಕಿರುತೆರೆಯಲ್ಲಿ 'ಚಮಕ್' ಕೊಡಲು ಬರ್ತಿದ್ದಾರೆ ಗೋಲ್ಡನ್ ಸ್ಟಾರ್

ಕಿರುತೆರೆಯಲ್ಲಿ 'ಚಮಕ್' ಕೊಡಲು ಬರ್ತಿದ್ದಾರೆ ಗೋಲ್ಡನ್ ಸ್ಟಾರ್

ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯಿಸಿದ್ದ ಸೂಪರ್ ಹಿಟ್ ಸಿನಿಮಾ 'ಚಮಕ್' ಮತ್ತೆ ಬರ್ತಿದೆ. ಮತ್ತೆ ಬರ್ತಿದೆ ಅಂದ್ರೆ ಬೆಳ್ಳಿತೆರೆಯಲ್ಲಲ್ಲ. ನಿಮ್ಮ ಮನೆಯ ಟಿವಿಯಲ್ಲಿ. ಹೌದು, ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿ, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದ 'ಚಮಕ್' ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರಸಾರವಾಗ್ತಿದೆ. ಸದ್ಯ ಪ್ರೋಮೋ ಮಾತ್ರ ಪ್ರಸಾರವಾಗ್ತಿದ್ದು, ಸದ್ಯದಲ್ಲೇ ಸಿನಿಮಾ ಮೂಡಿಬರಲಿದೆ. ಆದ್ರೆ, ದಿನಾಂಕ ಹಾಗೂ ಸಮಯ ಇನ್ನು ನಿಗದಿಯಾಗಿಲ್ಲ. ಡಿಸೆಂಬರ್ 29 ರಂದು ಬಿಡುಗಡೆಯಾಗಿದ್ದ 'ಚಮಕ್' ಶತದಿನೋತ್ಸವ ಆಚರಿಸಿಕೊಂಡಿತ್ತು.
ರಾಜಧಾನಿ ಬೆಂಗೂರಿನಲ್ಲಿ ಗಾಲ್ಫ್ ಜಿಟಿಡಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಫೋಕ್ಸ್‌ವ್ಯಾಗನ್

ರಾಜಧಾನಿ ಬೆಂಗೂರಿನಲ್ಲಿ ಗಾಲ್ಫ್ ಜಿಟಿಡಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಫೋಕ್ಸ್‌ವ್ಯಾಗನ್

ಫೋರ್ಕ್ಸ್‌ವ್ಯಾಗನ್ ಸಂಸ್ಥೆ ಭಾರತೀಯ ಮಾರುಕಟ್ಟೆಗೆ ಗಾಲ್ಫ್ ಜಿಟಿಡಿ ಹಾಟ್ ಹ್ಯಾಚ್‌ಬ್ಯಾಕ್ ಕಾರುಗಳನ್ನು ಪರಿಚಯಿಸುವ ಇರಾದೆಯಲ್ಲಿದ್ದು,ಬೆಂಗಳೂರಿನ  ರಸ್ತೆಗಳಲ್ಲಿ ಗಾಲ್ಫ್ ಜಿಟಿಡಿ ಕಾರುಗಳ ಸ್ಪಾಟ್ ಟೆಸ್ಟಿಂಗ್ ನಡೆಸಿರುವ ಫೋಕ್ಸ್‌ವ್ಯಾಗನ್ ಸಂಸ್ಥೆಯು ತನ್ನ ಎಂಜಿನ್ ಕಾರ್ಯಕ್ಷಮತೆ ಬಗೆಗೆ ಪರೀಕ್ಷೆ ನಡೆಸುತ್ತಿರುವುದು ಕಣ್ಣಿಗೆ ಬಿದ್ದಿದೆ.ಬಾಷ್ ನಿರ್ಮಾಣದ ಮಾಲಿನ್ಯ ನಿಯಂತ್ರಕ ಸಾಧನವನ್ನು ಅಳವಡಿಕೆ ಮಾಡಿಕೊಂಡು ಸ್ಪಾಟ್ ಟೆಸ್ಟಿಂಗ್ ನಡೆಸಿದ್ದು, ಪೊಲೊ ಜಿಟಿಐಗಿಂತಲೂ ಕಡಿಮೆ ಬೆಲೆಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.ಇನ್ನು ಹೊಸ ಕಾರಿನ ಬೆಲೆಯು ರೂ.25 ಲಕ್ಷದಿಂದ ರೂ.27 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.
65ನೇ ಫಿಲ್ಮ್ ಫೇರ್ ಪ್ರಶಸ್ತಿ: ಯಾವೆಲ್ಲ ಗಾನ ಕೋಗಿಲೆಗಳು ಪ್ರಶಸ್ತಿ ಪಡೆದಿದ್ದಾರೆ ಗೊತ್ತಾ?

65ನೇ ಫಿಲ್ಮ್ ಫೇರ್ ಪ್ರಶಸ್ತಿ: ಯಾವೆಲ್ಲ ಗಾನ ಕೋಗಿಲೆಗಳು ಪ್ರಶಸ್ತಿ ಪಡೆದಿದ್ದಾರೆ ಗೊತ್ತಾ?

ಹೈದರಾಬಾದ್ ನಲ್ಲಿ ಶನಿವಾರ ಸಂಜೆ ದಕ್ಷಿಣ ಭಾರತದ 4ಚಿತ್ರರಂಗಗಳ ಅತ್ಯುತ್ತಮ ತಾರೆಯರಿಗೆ ಫಿಲ್ಮ್ ಫೇರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. 'ಚಕ್ರವರ್ತಿ' ಚಿತ್ರದ 'ಒಂದು ಮಳೆಬಿಲ್ಲು' ಹಾಡಿಗೆ ಅರ್ಮಾನ್ ಮಲ್ಲಿಕ್ ಅತ್ಯುತ್ತಮ ಗಾಯಕ ಪ್ರಶಸ್ತಿ', 'ಚೌಕ' ಚಿತ್ರದ 'ಅಪ್ಪ ಐ ಲವ್ ಯು' ಹಾಡಿಗೆ ಅನುರಾಧಾ ಭಟ್ ಗೆ 'ಅತ್ಯುತ್ತಮ ಗಾಯಕಿ ಪ್ರಶಸ್ತಿ' ಲಭಿಸಿದೆ. 'ಅಪ್ಪ ಐ ಲವ್ ಯು' ಹಾಡಿಗೆ ಸಾಹಿತ್ಯ ಬರೆದ ವಿ.ನಾಗೇಂದ್ರ ಪ್ರಸಾದ್ 'ಅತ್ಯುತ್ತಮ ಗೀತ ಸಾಹಿತಿ ಪ್ರಶಸ್ತಿ' ಪಡೆದಿದ್ದಾರೆ.  'ಬ್ಯೂಟಿಫುಲ್ ಮನಸ್ಸುಗಳು' ಚಿತ್ರದ ಸಂಗೀತ ಸಂಯೋಜನೆಗೆ ಬಿ.ಜೆ.ಭರತ್ 'ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ' ಪಡೆದಿದ್ದಾರೆ.
65ನೇ ಫಿಲ್ಮ್ ಫೇರ್ ಪ್ರಶಸ್ತಿ: ಕನ್ನಡದ ಅತ್ಯುತ್ತಮ ಚಿತ್ರ, ನಿರ್ದೇಶಕ, ಪೋಷಕ ನಟ-ನಟಿ ಯಾರು ಗೊತ್ತಾ?

65ನೇ ಫಿಲ್ಮ್ ಫೇರ್ ಪ್ರಶಸ್ತಿ: ಕನ್ನಡದ ಅತ್ಯುತ್ತಮ ಚಿತ್ರ, ನಿರ್ದೇಶಕ, ಪೋಷಕ ನಟ-ನಟಿ ಯಾರು ಗೊತ್ತಾ?

ದಕ್ಷಿಣ ಭಾರತದ 4ಚಿತ್ರರಂಗಗಳ ಅತ್ಯುತ್ತಮ ತಾರೆಯರಿಗೆ ಭೇಷ್ ಎನ್ನುವ ವೈಭವೋಪೇತ ಫಿಲ್ಮ್ ಫೇರ್ ಪ್ರಶಸ್ತಿ ಪ್ರದಾನ ಸಮಾರಂಭ ಜೂನ್ 16ರಂದು ಹೈದರಾಬಾದ್ ನಲ್ಲಿ ಜರುಗಿತು. ಕನ್ನಡದ 'ಚೌಕ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ ತರುಣ್ ಸುಧೀರ್ 'ಫಿಲ್ಮ್ ಫೇರ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ' ಪಡೆದರು.  ಸದಭಿರುಚಿಯ 'ಒಂದು ಮೊಟ್ಟೆಯ ಕಥೆ' ಚಿತ್ರಕ್ಕೆ 'ಫಿಲ್ಮ್ ಫೇರ್ ಅತ್ಯುತ್ತಮ ಚಿತ್ರ' ಪ್ರಶಸ್ತಿ ಲಭಿಸಿತು. ಇನ್ನು 'ಕಾಲೇಜ್ ಕುಮಾರ್' ಚಿತ್ರದಲ್ಲಿನ ನಟನೆಗಾಗಿ ಪಿ.ರವಿಶಂಕರ್ ರವರಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ' ಮತ್ತು 'ಊರ್ವಿ' ಚಿತ್ರಕ್ಕಾಗಿ ಭವಾನಿ ಪ್ರಕಾಶ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ' ಸಿಕ್ಕಿದೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more