Short News

ನನಗೆ ಇಷ್ಟವಾದ ಆ ವಸ್ತುವನ್ನು ಯಾವ ಬಾಯ್ ಫ್ರೆಂಡ್ ಕೊಟ್ಟಿಲ್ಲ: ಇಲಿಯಾನ

ನನಗೆ ಇಷ್ಟವಾದ ಆ ವಸ್ತುವನ್ನು ಯಾವ ಬಾಯ್ ಫ್ರೆಂಡ್ ಕೊಟ್ಟಿಲ್ಲ: ಇಲಿಯಾನ

''ನನಗೆ ಹೂವು ಅಂದ್ರೆ ತುಂಬಾ ಇಷ್ಟ. ನಾನು ಬಹಳ ಜನರ ಜೊತೆ ಡೇಟಿಂಗ್ ಮಾಡಿದ್ದೀನಿ. ಆದರೆ ಯಾರು ಕೂಡ ನನಗೆ ಉಡುಗೊರೆಯಾಗಿ ಹೂವು ನೀಡಿಲ್ಲ. ನನಗೆ ನೆನಪಿರುವಾಗೆ, ನನ್ನ ತಂದೆ ಮಾತ್ರ ಇಂತಹ ಗಿಫ್ಟ್ ಕೊಟ್ಟಿದ್ದಾರೆ. ಅದಕ್ಕೂ ಮಿಗಿಲಾಗಿ ಯಾವ ಉಡುಗೊರೆಯೂ ನನಗೆ ಸಿಕ್ಕಿಲ್ಲ'' ಎಂದು ಇಲಿಯಾನ ಹೇಳಿಕೊಂಡಿದ್ದಾರೆ. ಬಾಲಿವುಡ್ ನಲ್ಲಿ ಯಾರ ಜೊತೆ ನಟಿಸಲು ಇಷ್ಟ ಪಡುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಇಲಿಯಾನ, ''ನನಗೆ ನರ್ಗಿಸ್ ಫಕ್ರಿ ಅಂದ್ರೆ ಬಹಳ ಇಷ್ಟ. ಆಕೆಯ ಜೊತೆ ನನಗೆ ಉತ್ತಮ ಬಾಂಧವ್ಯ ಇದೆ. ನಾವಿಬ್ಬರು ಕ್ಲೋಸ್ ಫ್ರೆಂಡ್ಸ್.

ಮಂಗಳವಾರದ ದಿನ ಭವಿಷ್ಯ (12-11-2019)

ಮಂಗಳವಾರದ ದಿನ ಭವಿಷ್ಯ (12-11-2019)

ಮಂಗಳವಾರದ ದಿನ ಅಂದರೆ ನವಗ್ರಹಗಳಲ್ಲಿ ಒಬ್ಬರಾದ ಮಂಗಳನ ದಿನ. ಈತನನ್ನೇ ಕುಜ ಎಂದು ಕರೆಯಲಾಗುತ್ತದೆ. ಅಂಗಾರಕನೆಂದು ಈತನನ್ನೇ ಕರೆಯಲಾಗುವುದು.ಪುರಾಣಗಳ ಪ್ರಕಾರ ಕುಜ ಎಂದರೆ ವಿಪತ್ತುಗಳನ್ನು ಉಂಟು ಮಾಡುವನು. ಪುರಾಣಗಳಲ್ಲಿ ವಿಶೇಷವಾದ ಧಾರ್ಮಿಕವಾದ ಪ್ರಾಮುಖ್ಯತೆಯಿದೆ. ಮಂಗಳವಾರ ಸಾಮಾನ್ಯವಾಗಿ ಕಾಳಿ, ಗಣಪತಿ,ಆದಿಶಕ್ತಿಯನ್ಶು ಆರಾಧನೆಯನ್ನು ಮಾಡುತ್ತಾರೆ.ಮಂಗಳವಾರದ ದಿನವು ದೈವವನ್ನು ಆರಾಧಿಸುತ್ತಾ ಬೋಲ್ಡ್ ಸ್ಕೈ ನಿಮಗಾಗಿ ನೀಡಿರುವ ದಿನದ ಭವಿಷ್ಯವನ್ನು ತಿಳಿಯೋಣ. ಮೇಷ:
ಕೌಟುಂಬಿಕ ಜೀವನವು ಸಂತೋಷವಾಗಿರುತ್ತದೆ. ಇಂದು ಕುಟುಂಬ ಸದಸ್ಯರೊಂದಿಗೆ ಬಹಳ ಸಂತೋಷದಾಯಕ ದಿನವನ್ನು ಕಳೆಯುತ್ತೀರಿ.

'ಕಪಟ ನಾಟಕ ಪಾತ್ರಧಾರಿ' ಮೆಚ್ಚಿದ ರಕ್ಷಿತ್ ಶೆಟ್ಟಿ

'ಕಪಟ ನಾಟಕ ಪಾತ್ರಧಾರಿ' ಮೆಚ್ಚಿದ ರಕ್ಷಿತ್ ಶೆಟ್ಟಿ

ಕಳೆದ ವಾರ ಬಿಡುಗಡೆಯಾದ 'ಕಪಟ ನಾಟಕ ಪಾತ್ರಧಾರಿ' ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಪ್ರೇಕ್ಷಕ ಹಾಗೂ ವಿಮರ್ಶಕ ಇಬ್ಬರು ಸಿನಿಮಾವನ್ನು ಮೆಚ್ಚಿದ್ದಾರೆ.

ಸಿನಿಮಾದ ಬಗ್ಗೆ ನಟ ರಕ್ಷಿತ್ ಶೆಟ್ಟಿ ಮಾತಾನಾಡಿದ್ದು, ಚಿತ್ರದ ಕೆಲವು ಅಂಶಗಳ ಬಗ್ಗೆ ವಿಶೇಷ ಮಾತುಗಳನ್ನು ಆಡಿದ್ದಾರೆ. ಬಾಲು ನಾಗೇಂದ್ರ ನಟನೆಯನ್ನು ರಕ್ಷಿತ್ ಹೊಗಳಿದ್ದಾರೆ.

"ಬಾಲು ನಾಗೇಂದ್ರ ಮತ್ತು ನಾನು ಕಿರುಚಿತ್ರಗಳನ್ನು ಜೊತೆಗೆ ಮಾಡುತ್ತಿದ್ದೇವೆ. ಅಲ್ಲಿಂದ ಇವನು ಗೊತ್ತು. ಇವನು ಒಬ್ಬ ಅದ್ಭುತ ನಟ. ಈ ಅದ್ಭುತ ನಟನನ್ನು ಇನ್ನಷ್ಟು ಅದ್ಭುತವಾಗಿ ಇಂಡಸ್ಟ್ರಿ ಬಳಸಿಕೊಳ್ಳಬೇಕು." ಎಂದರು.

'ಕನ್ನಡದಲ್ಲಿ ಶ್ರೀಮನ್ನಾರಾಯಣ ಪ್ರಮೋಟ್ ಮಾಡುವ ಅಗತ್ಯವಿಲ್ಲ' ಎಂದವರಿಗೆ ರಕ್ಷಿತ್ ಹೇಳಿದ್ದೇನು?

'ಕನ್ನಡದಲ್ಲಿ ಶ್ರೀಮನ್ನಾರಾಯಣ ಪ್ರಮೋಟ್ ಮಾಡುವ ಅಗತ್ಯವಿಲ್ಲ' ಎಂದವರಿಗೆ ರಕ್ಷಿತ್ ಹೇಳಿದ್ದೇನು?

ರಕ್ಷಿತ್ ಈ ಪೋಸ್ಟ್ ಹಾಕುತ್ತಿದ್ದಂತೆ ಅಭಿಮಾನಿಗಳು ಸಾಕಷ್ಟು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಬೇಗ ರಿಲೀಸ್ ಮಾಡಿ, ಬಹು ದಿನಗಳಿಂದ ನಾವು ಕಾಯುತ್ತಿದ್ದೀವಿ ಹೀಗೆ ಅಭಿಮಾನಿಗಳಿಂದ ಸಾಕಷ್ಟು ಪ್ರಶ್ನೆಗಳು ಹರಿದುಬರುತ್ತಿವೆ. ಇದರ ಜೊತೆಗೆ ಮತ್ತೊಬ್ಬ ಅಭಿಮಾನಿ "ಮೊದಲು ಬೇಗ ಟ್ರೇಲರ್ ಬಿಡಿ ಮಾರ್ರೆ, ಅದ್ಯಾವಾಗ ಪ್ರಮೋಟ್ ಮಾಡ್ತಿರೊ ದೇವ್ರೆ ಬಲ್ಲ. ಬೇರೆ ರಾಜ್ಯಗಳಲ್ಲಿ ಪ್ರಮೋಟ್ ಮಾಡಿ, ಕನ್ನಡದಲ್ಲಿ ಪ್ರಮೋಟ್ ಮಾಡೊ ಅಗತ್ಯ ಇಲ್ಲ, ಯಾಕಂದ್ರೆ ಇದು ಕನ್ನಡದ ಹೆಮ್ಮೆಯ ಚಿತ್ರ, ನಾವೆಲ್ಲಾ ಇದಿವಿ ಪ್ರಮೋಟ್ ಮಾಡ್ಲಿಕ್ಕೆ ಇಲ್ಲಿ" ಎಂದು ಕಮೆಂಟ್ ಮಾಡಿದ್ದಾರೆ.