Short News

ಬೆಂಗಳೂರಿನ ಬೀದಿಗಳಲ್ಲಿ ಬುಲೆಟ್ ಮೇಲೆ ಪುನೀತ್-ಚಿಕ್ಕಣ್ಣ ಸವಾರಿ

ಬೆಂಗಳೂರಿನ ಬೀದಿಗಳಲ್ಲಿ ಬುಲೆಟ್ ಮೇಲೆ ಪುನೀತ್-ಚಿಕ್ಕಣ್ಣ ಸವಾರಿ

ಮೈಸೂರು ಹಾಗೂ ಬಳ್ಳಾರಿಯಲ್ಲಿ ಶೂಟಿಂಗ್ ಪ್ಯಾಕಪ್ ಮಾಡಿದ ಬಳಿಕ 'ನಟ ಸಾರ್ವಭೌಮ' ಚಿತ್ರತಂಡ ಸದ್ಯ ಬೆಂಗಳೂರಿನಲ್ಲಿ ಶೂಟಿಂಗ್ ನಡೆಸುತ್ತಿದೆ. ಬೆಂಗಳೂರಿನ ಕೆಲ ರಸ್ತೆಗಳಲ್ಲಿ ಅಪ್ಪು ಬೈಕ್ ರೈಡ್ ಮಾಡುತ್ತಿರುವ ದೃಶ್ಯಗಳನ್ನು ಇಂದು ಚಿತ್ರೀಕರಿಸಲಾಯಿತು. ಅಪ್ಪು ಬುಲೆಟ್ ರೈಡ್ ಮಾಡ್ತಿದ್ರೆ, ಅವರ ಹಿಂದೆ ಚಿಕ್ಕಣ್ಣ ಆಸೀನರಾಗಿದ್ದರು. ಬೆಂಗಳೂರಿನ ಕೆಲ ರಸ್ತೆಗಳಲ್ಲಿ ಹಸಿರು ಬಣ್ಣದ ರಾಯಲ್ ಎನ್ ಫೀಲ್ಡ್ ಬುಲೆಟ್ ನಲ್ಲಿ ರೌಂಡ್ ಹೊಡೆದರು.
ನಮಸ್ಕಾರ, ಹೇಗಿದ್ದೀರಿ? ನಿಮ್ಮ ಊರಿನಲ್ಲಿ ಕೃಷಿ ಹೇಗೆ ಮಾಡ್ತಿದ್ದೀರಿ? ಎಂದು ಪ್ರಶ್ನಿಸಿದ ಮೋದಿ

ನಮಸ್ಕಾರ, ಹೇಗಿದ್ದೀರಿ? ನಿಮ್ಮ ಊರಿನಲ್ಲಿ ಕೃಷಿ ಹೇಗೆ ಮಾಡ್ತಿದ್ದೀರಿ? ಎಂದು ಪ್ರಶ್ನಿಸಿದ ಮೋದಿ

ರಾಮನಗರ ಜಿಲ್ಲೆಯ ಆಯ್ದ ಫಲಾನುಭವಿ ರೈತರ ಜೊತೆ ವೀಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಮತ್ತು ಮಣ್ಣು ಆರೋಗ್ಯ ಅಭಿಯಾನದ ವಿಚಾರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಂವಾದ ನಡೆಸಿದರು. ಮಾಗಡಿ ತಾಲೂಕಿನ ಚಂದುರಾಯನಪಾಳ್ಯದಲ್ಲಿರುವ ಕೃಷಿ ಕ್ಷೇತ್ರದಲ್ಲಿ ವೀಡಿಯೋ ಕಾನ್ಪರೆನ್ಸ್ ನಡೆಸಲಾಯಿತು. ರೈತರ ಜೊತೆ ಕನ್ನಡದಲ್ಲಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಮಸ್ಕಾರ, ಹೇಗಿದ್ದೀರಿ? ನಿಮ್ಮ ಊರಿನಲ್ಲಿ ಎಲ್ಲರೂ ಚೆನ್ನಾಗಿದ್ದಾರಾ? ಕೃಷಿ ಹೇಗೆ ಮಾಡ್ತಿದ್ದೀರಿ? ಎಂದು ರೈತರ ಬಳಿ ಕನ್ನಡದಲ್ಲಿ ಮಾತನಾಡಿದರು.
ಫುಟ್ಬಾಲ್ ವಿಶ್ವಕಪ್ ಲೈವ್ ನೀಡುತ್ತಿದ್ದ ಪತ್ರಕರ್ತೆಗೆ ಮುತ್ತು ಕೊಟ್ಟು ಅಸಭ್ಯವಾಗಿ ವರ್ತಿಸಿದ ದುಷ್ಕರ್ಮಿ

ಫುಟ್ಬಾಲ್ ವಿಶ್ವಕಪ್ ಲೈವ್ ನೀಡುತ್ತಿದ್ದ ಪತ್ರಕರ್ತೆಗೆ ಮುತ್ತು ಕೊಟ್ಟು ಅಸಭ್ಯವಾಗಿ ವರ್ತಿಸಿದ ದುಷ್ಕರ್ಮಿ

ರಷ್ಯಾದ ಮಾಸ್ಕೋದಲ್ಲಿ ನಡೆಯುತ್ತಿರುವ ವಿಶ್ವಕಪ್ ಫುಟ್ಬಾಲ್ ಟೂರ್ನಿಯ ವೇಳೆ ಸುದ್ದಿವಾಹಿನಿಗೆ ನೇರಪ್ರಸಾರದಲ್ಲಿ ಮಾಹಿತಿ ನೀಡುತ್ತಿದ್ದ ಕೊಲಂಬಿಯಾ ಮೂಲದ ಪತ್ರಕರ್ತೆಗೆ ದುಷ್ಕರ್ಮಿಯೋರ್ವ ಏಕಾಏಕಿ ಮುತ್ತಿಕ್ಕಿ ಅಸಭ್ಯವಾಗಿ ವರ್ತಿಸಿದ ಘಟನೆ ನಡೆದಿದೆ. ಜರ್ಮನ್‌ನ ಸುದ್ದಿ ಚಾನೆಲ್‌ಗೆ ವರದಿ ಮಾಡುತ್ತಿದ್ದ ಪತ್ರಕರ್ತೆ ಜುಲಿಯೆತ್‌ ಗೊಂಝಾಲೆಜ್‌ ಅವರು ಕರ್ತವ್ಯದಲ್ಲಿ ನಿರತರಾಗಿದ್ದಾಗ ಕ್ಯಾಮೆರಾಗೆ ಅಡ್ಡ ಬಂದ ವ್ಯಕ್ತಿ ಏಕಾಏಕಿ ಪತ್ರಕರ್ತೆಯ ಎದೆ ಭಾಗ ಮುಟ್ಟಿ ಮುತ್ತು ನೀಡಿದ್ದಾನೆ. ಬಳಿಕ ಆತ ಪರಾರಿಯಾಗಿದ್ದು, ಈ ಬಗ್ಗೆ ಪತ್ರಕರ್ತೆ ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಪರಿಸ್ಥಿತಿ ತೋಡಿಕೊಂಡಿದ್ದಾರೆ.
"ಅಕ್ರಮವೆಸಗುವ ಸ್ವಯಂ ಘೋಷಿತ ದೇವಮಾನವರು, ಬಾಬಾಗಳನ್ನು ಗಲ್ಲಿಗೇರಿಸಿ"

"ಅಕ್ರಮವೆಸಗುವ ಸ್ವಯಂ ಘೋಷಿತ ದೇವಮಾನವರು, ಬಾಬಾಗಳನ್ನು ಗಲ್ಲಿಗೇರಿಸಿ"

ಯೋಗ ಗುರು, ಪತಂಜಲಿ ಸಂಸ್ಥೆಗಳ ಸೂತ್ರಧಾರ ಬಾಬಾ ರಾಮ್ ದೇವ್ ಅವರು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಗಳಾಗಿರುವ ಸ್ವಯಂ ಘೋಷಿತ ದೇವಮಾನವರು, ಬಾಬಾಗಳನ್ನು ಗಲ್ಲಿಗೇರಿಸಬೇಕು ಎಂದಿದ್ದಾರೆ. ಮಿತಿ ಮೀರುವವರನ್ನು ಜೈಲಿಗಟ್ಟುವುದು ಮಾತ್ರವಲ್ಲ, ಮರಣದಂಡನೆ ಶಿಕ್ಷೆ ವಿಧಿಸಬೇಕು ಎಂದು ಕಿಡಿಕಾರಿದ್ದಾರೆ. ಕೇಸರಿ ಬಟ್ಟೆಯೊಂದೇ ಧಾರ್ಮಿಕ ನಾಯಕರ ಮಾನದಂಡವಾಗಬಾರದು, ಎಲ್ಲಾ ಕೆಲಸಗಳಿಗೆ ಒಂದು ಶಿಷ್ಟಾಚಾರವಿದೆ ಎಂದು ಹೇಳಿದ್ದಾರೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more